ಡಾ| ಕಲಬುರ್ಗಿ ಚಿಂತನೆ ಮುಂದುವರಿಸಿ

ನಾವು ಕಂಡಂತೆ: ಡಾ|ಎಂ.ಎಂ. ಕಲಬುರ್ಗಿ ಗ್ರಂಥ ಲೋಕಾರ್ಪಣೆ

Team Udayavani, Nov 29, 2020, 12:41 PM IST

ಡಾ| ಕಲಬುರ್ಗಿ ಚಿಂತನೆ ಮುಂದುವರಿಸಿ

ಧಾರವಾಡ: ಹುಬ್ಬಳ್ಳಿ-ಧಾರವಾಡ ನಾಗರಿಕಪರಿಸರ ಸಮಿತಿ ಸಹಯೋಗದಲ್ಲಿ ಡಾ| ಎಂ.ಎಂ. ಕಲಬುರ್ಗಿ 82ನೇ ಜನ್ಮದಿನ ಪ್ರಯುಕ್ತ “ನಾವು ಕಂಡಂತೆ: ಡಾ|ಎಂ. ಎಂ.ಕಲಬುರ್ಗಿ’ ಗ್ರಂಥ ಬಿಡುಗಡೆ ಸಮಾರಂಭ ನಗರದ ಪರಿಸರ ಭವನದಲ್ಲಿ ಶನಿವಾರ ಜರುಗಿತು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ| ಗುರುಲಿಂಗ ಕಾಪಸೆ ಮಾತನಾಡಿ, ನಾವು ಲಿಂಗ ಆಗಬಾರದು. ಬದಲಾಗಿ ಜಂಗಮ ಆಗಬೇಕು. ಅದಕ್ಕಾಗಿ ಕಲಬುರ್ಗಿಯವರ ಆಲೋಚನೆಗಳನ್ನು ನಾವೆಲ್ಲ ಮುಂದುವರಿಸಬೇಕಿದೆ. ಹೀಗಾಗಿ ಎಂ.ಎಂ. ಕಲಬುರ್ಗಿ ಟ್ರಸ್ಟ್‌ ನಿರ್ಮಿಸಲು ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ. ಸರ್ಕಾರ ಸೂಕ್ತ ರೀತಿ ಸ್ಪಂದಿಸಿದಲ್ಲಿ ಟ್ರಸ್ಟ್‌ ವತಿಯಿಂದ ಉತ್ತಮ ಕಾರ್ಯಗಳು ನಡೆಯಲಿವೆ ಎಂದರು.

ಪುಸ್ತಕ ಬಿಡುಗಡೆ ಮಾಡಿದ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಮಲ್ಲೇಪುರಂ ವೆಂಕಟೇಶ ಮಾತನಾಡಿ,ಸಂಶೋಧನೆ ಎನ್ನುವುದು ಕೆಂಡದ ಮೇಲಿನ ನಡಿಗೆ ಇದ್ದಂತೆ. ಆದರೆ ಎಂ.ಎಂ. ಕಲಬುರ್ಗಿ ಅವರು ಅತ್ಯಂತ ಶಿಸ್ತಿನಿಂದ ನಡೆಸುವ ಮೂಲಕ ಸಮಗ್ರ ಸಂಪುಟಗಳ ನೇತಾರನಂತೆ ಕಂಡಿದ್ದರು. ಸತ್ಯ ನಿಷ್ಠುರತೆ, ಶೋಧನೆ ಜತೆಗೆ ಹಲವು ಸಮಸ್ಯೆಗಳನ್ನು ಎದುರಿಸಿದರೂ ವೃತ್ತಿನಿಷ್ಠೆಗೆ ಭಂಗ ಬರದಂತೆ ದುಡಿದವರು ಕಲಬುರ್ಗಿ. ಕನ್ನಡದ ಪ್ರಜ್ಞೆಯೊಂದಿಗೆ ಅದನ್ನು ವಿಸ್ತರಿಸಿದ ಮತ್ತೂಬ್ಬ ಕುಲಪತಿ ಈವರೆಗೂ ಕಂಡಿಲ್ಲ ಎಂದರು.

ಸಂಶೋಧನಾ ಜಗತ್ತಿನಲ್ಲಿ ಶಂ.ಭಾ. ಜೋಶಿ, ಬೆಟಗೇರಿ ಕೃಷ್ಣ ಶರ್ಮರಂತೆ ಡಾ|ಎಂ.ಎಂ. ಕಲಬುರ್ಗಿ ಮುಖ್ಯರಾಗಿದ್ದರು. ಹೊಸ ಹಾಗೂ ಹಳೆಗನ್ನಡದ ಅಂತರಶಿಸ್ತೀಯ ಅಧ್ಯಯನ, ಶಾಸನ, ಕಾವ್ಯ, ಚರಿತ್ರೆ, ಗದ್ಯ ಹೀಗೆ ಸಾಹಿತ್ಯ ಪ್ರಕಾರದ ಎಲ್ಲವನ್ನೂ ಆವಾಹಿಸಿಕೊಂಡು ಸಂಶೋಧನೆ ಕೈಗೊಂಡಿದ್ದರು.

ತಮಿಳು, ತೆಲುಗು ಹಾಗೂ ಮರಾಠಿ ಆಕ್ರಮಣ ಕುರಿತು ಡಾ| ಕಲಬುರ್ಗಿ ಹಾಕಿಕೊಟ್ಟ ದಿಕ್ಸೂಚಿ ಮತ್ತು ನೇಪಾಳದಲ್ಲಿ ಕನ್ನಡದ ಕುರುಹು ಕುರಿತು ಶಂ.ಭಾ. ಜೋಶಿ ಅವರ ಸಂಶೋಧನೆ ಮುಂದುವರಿಸಬೇಕಿದೆ ಎಂದು ಹೇಳಿದರು.

ಡಾ| ಗುರುಪಾದ ಮರಿಗುದ್ದಿ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ| ಕಲಬುರ್ಗಿ ಇಲ್ಲದ ನಂತರ ಸಂಶೋಧನಾ ಕ್ಷೇತ್ರ ಬರಿದಾಗಿದೆ. ಕಲಬುರ್ಗಿ ಅವರಿಗೆ ಎಲ್ಲ ರಂಗಗಳ ಜನರೊಂದಿಗೆ ಸಂಬಂಧಗಳಿತ್ತು. ಬೇರೆ ವಿದ್ವಾಂಸರ ಜೊತೆಯಲ್ಲಿ ಹೊಂದಿದ ಒಡನಾಟದ ವಿವರಣೆಗಳು ಈ ಕೃತಿಯಲ್ಲಿವೆ. ಆಪ್ತ ಸಂಬಂಧಗಳ ವಿವರಣೆಗಳಿವೆ ಎಂದರು.

ಹಿರಿಯ ಸಾಹಿತಿಗಳಾದ ಡಾ| ಬಾಳಣ್ಣ ಶೀಗಿಹಳ್ಳಿ, ಡಾ| ಜಿ.ಎಂ. ಹೆಗಡೆ, ವೆಂಕಟೇಶ ಮಾಚಕನೂರ, ಉಮಾದೇವಿ ಕಲಬುರ್ಗಿ, ವಿಜಯ ಕಲಬುರ್ಗಿ, ಎಸ್‌.ಎ. ಪಾಟೀಲ, ಸವಿತಾ ಕನವಳ್ಳಿ, ವಿ.ಸಿ. ಸವಡಿ, ರಾಜಶೇಖರ ಉಪ್ಪಿನ, ಅಶೋಕ ನಿಡವಣಿ, ಕಲಬುರ್ಗಿ ಕುಟುಂಬಸ್ಥರು ಇದ್ದರು. ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು. ಶಶಿಧರ ತೋಡಕರ ವಂದಿಸಿದರು.

ಟಾಪ್ ನ್ಯೂಸ್

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ

10

Mangalore: ಅಡ್ಯಾರ್‌ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ

2-dandeli

Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ

1-thirthahalli

Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

11

Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ

10

Mangalore: ಅಡ್ಯಾರ್‌ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ

2-dandeli

Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ

1-thirthahalli

Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.