ಗ್ರಾಹಕರ ಜೇಬಿಗೆ ಕತ್ತರಿ; ದಿನದಿಂದ ದಿನಕ್ಕೆ ತರಕಾರಿ ಬೆಲೆ ಗಗನಮುಖಿ
ಎಲ್ಲ ಸೊಪ್ಪುಗಳ ದರವೂ ಒಂದು ಪಟ್ಟು, ಎರಡು ಪಟ್ಟು ಏರಿಕೆಯಾಗಿರುವುದು ಕಂಡು ಬಂದಿದೆ.
Team Udayavani, Jun 21, 2023, 1:20 PM IST
ಹುಬ್ಬಳ್ಳಿ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತರಕಾರಿಗಳ ಬೆಲೆಗಳ ಗಗನಮುಖೀಯಾಗಿದೆ. ಕಳೆದ 10 ದಿನಗಳಿಂದ ಏರಿಕೆ ಕಂಡ ತರಕಾರಿ ದರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮಳೆ ಇಲ್ಲದೇ ತರಕಾರಿ ಬೆಳೆಗಳ ಇಳುವರಿ ಕುಸಿತ ಕಂಡಿದ್ದು, ಮಾರುಕಟ್ಟೆಗೆ ಪೂರೈಕೆಯಾಗುವ ತರಕಾರಿ ಪ್ರಮಾಣ ಗಣನೀಯವಾಗಿ ತಗ್ಗಿದೆ. ಹೀಗಾಗಿ ದರ ದುಬಾರಿಯಾಗಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ.
ಉತ್ತಮ ಗುಣಮಟ್ಟದ ಕ್ಯಾರೆಟ್ ದರ ಕೆಜಿಗೆ 40 ರೂ.ಇದ್ದದ್ದು ಇಂದು 60- 80 ರೂ.ಗಳಾಗಿದೆ. ಬದನೆಕಾಯಿ 50 ರೂ.ಇದ್ದದ್ದು 70-80 ರೂ. ಗಳಾಗಿವೆ. ಸೌತೆಕಾಯಿ 60 ರೂ.ಗಳಿದ್ದು, ಇದೀಗ 80-100 ರೂ.ಗಳಾಗಿವೆ. ಡೊಣ್ಣ ಮೆಣಸಿನಕಾಯಿ 60 ರೂ.ಗಳಿದ್ದದ್ದು 80 ರೂ.ಗಳಾಗಿದೆ. ಹಸಿ ಮೆಣಸಿನಕಾಯಿ 60 ರೂ.ಗಳಿದ್ದದ್ದು, 80-100 ಗಡಿ ತಲುಪಿದೆ. ಟೊಮಾಟೊ 20 ರೂ.ಗಳಿರುವುದು ಇದೀಗ 50 ರೂ.ಗಳಿಗೆ ತಲುಪಿದೆ. ಇನ್ನು ಪಲ್ಯಗಳು ದರವೂ ಏರಿಕೆಯಾಗಿದ್ದು, ಕೋತಂಬರಿ 10 ರೂ.ಗಳಿಗೆ ಎರಡು ಸಿವುಡು ಎನ್ನುತ್ತಿದ್ದವರು ಇಂದು 25 ರೂ.ಗಳಿಗೆ ಒಂದು ಎನ್ನುತ್ತಿದ್ದಾರೆ. ಅದೇ ರೀತಿ ಕಿರಕಸಾಲಿ 10 ರೂ.ಗಳಿಗೆ ಎರಡು ಇರುವುದು, ಇದೀಗ ಒಂದು ಆಗಿದೆ. ರಾಜಗಿರಿ, ಪಾಲಕ, ಪುದಿನಾ ಸೇರಿದಂತೆ ಎಲ್ಲ ಸೊಪ್ಪುಗಳ ದರವೂ ಒಂದು ಪಟ್ಟು, ಎರಡು ಪಟ್ಟು ಏರಿಕೆಯಾಗಿರುವುದು ಕಂಡು ಬಂದಿದೆ.
ಆವಕ ಕಡಿಮೆ: ಎಂದಿನಂತೆ ಮಾರುಕಟ್ಟೆಗೆ ಬರುತ್ತಿದ್ದ ತರಕಾರಿಗಳಲ್ಲಿ ಇಳಿಕೆ ಕಂಡಿರುವುದರಿಂದ ದರದಲ್ಲಿ ಏರಿಕೆ ಕಂಡಿದೆ. ಆವಕ ಹೆಚ್ಚಾದಲ್ಲಿ ದರದಲ್ಲಿ ಕೊಂಚು ಇಳಿಕೆ ಕಂಡು ಬರಬಹುದು. ಆದರೆ ಸದ್ಯ ಮಳೆಯ ಕೊರತೆ ಹಾಗೂ ನೀರಿನ ಮಿತವ್ಯಯದಿಂದ ತರಕಾರಿ ಸೇರಿದಂತೆ ಸೊಪ್ಪುಗಳಲ್ಲಿ ದರ ಏರಿಕೆ ಕಂಡು ಬಂದಿದೆ.
ಕಳೆದ 10-15 ದಿನಗಳಿಂದ ದಿನದಿಂದ ದಿನಕ್ಕೆ ತರಕಾರಿ ದರಗಳು ಏರಿಕೆ ಕಾಣುತ್ತಿದ್ದು, ಕಳೆದ 10 ದಿನಗಳ ಹಿಂದೆ ಕೋತಂಬರಿ 10 ರೂ.ಗೆ ಒಂದು ಅಥವಾ ಎರಡು ಇರುವುದು ಇಂದು 25 ರೂ.ಗಳಿಗೆ ಒಂದಾಗಿದೆ. ಬದನೆಕಾಯಿ, ಸೌತೆಕಾಯಿ, ಕ್ಯಾರೆಟ್, ಹಿರೇಹಾಕಿ, ಬಿನ್ಸ್, ಪಡವಲಕಾಯಿ, ಚವಳಿಕಾಯಿ, ಬೆಂಡೆಕಾಯಿ ಸೇರಿದಂತೆ ಎಲ್ಲದರ ದರವೂ 30 ರಿಂದ 40 ರೂ.ಗಳಷ್ಟು ಏರಿಕೆಯಾಗಿದೆ.
ಗಂಗವ್ವ ಧಾರವಾಡ, ಸಾರ್ವಜನಿಕರು
ಎಂದಿನಂತೆ ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ನೀರಸೌತೆ, ಅವರೆಕಾಯಿ ದರ ದುಪ್ಪಟ್ಟಾಗಿದೆ. ಕೊತ್ತಂಬರಿ, ಟೊಮೆಟೊ, ಬೀ®Õ… ಸೇರಿದಂತೆ ಎಲ್ಲ ತರಕಾರಿ, ಸೊಪ್ಪುಗಳ ದರ ತುಂಬಾ ಏರಿಕೆಯಾಗಿವೆ. ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿರುವ ಕಾರಣ ಸಹಜವಾಗಿಯೇ ದರ ಏರಿಕೆಯಾಗಿದೆ. ಮಳೆಯಾದಲ್ಲಿ ಕೊಂಚು ದರ ಇಳಿಕೆ ಕಾಣಬಹುದು.
ವಿಜಯಲಕ್ಷ್ಮಿಹಿರೇಮಠ ಹಾಗೂ ಸಿದ್ದಮ್ಮ, ತರಕಾರಿ ವ್ಯಾಪಾರಿಗಳು
ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.