ಹಳ್ಳಿಗಳ ಮೇಲೂ ಕೊರೊನಾ ವಕ್ರದೃಷ್ಟಿ


Team Udayavani, May 15, 2021, 3:32 PM IST

covid effect at village

ಹುಬ್ಬಳ್ಳಿ: ಕೋವಿಡ್ ಮಹಾಮಾರಿಪ್ರಶಾಂತವಾಗಿದ್ದ ಹಳ್ಳಿಗಳ ಮೇಲೂ ದಾಳಿಮಾಡತೊಡಗಿದೆ. ನಗರಗಳಿಗೆ ಹೋಲಿಸಿದರೆಹಳ್ಳಿಗಳಲ್ಲಿ ಈ ವ್ಯಾಧಿ ಅತ್ಯಂತ ವೇಗವಾಗಿ ಹರಡುತ್ತಿದೆ.ಸದ್ಯದ ಸ್ಥಿತಿಯಲ್ಲಿ ಸರಕಾರ ಕೊರೊನಾವಿಚಾರವಾಗಿ ಪಟ್ಟಣ-ನಗರಗಳನ್ನು ಹೆಚ್ಚಾಗಿಕೇಂದ್ರೀಕರಿಸಿ ಪ್ರಯತ್ನ ನಿರತವಾಗಿದೆ.

ಹೀಗಾಗಿ ಹಳ್ಳಿಗಳಲ್ಲಿ ಜಾಗೃತಿ, ರೋಗ ತಡೆಮತ್ತು ಸೋಂಕು ಕಾಣಿಸಿಕೊಂಡರೆಪ್ರಾಥಮಿಕ ಹಂತದಲ್ಲೇ ಅದನ್ನುನಿವಾರಿಸಬಹುದಾದ ಕ್ರಮಗಳಿಗೆಹೆಚ್ಚು ಆದ್ಯತೆ ದೊರೆಯುತ್ತಿಲ್ಲ.ಈಗಾಗಲೇ ಹಲವು ಹಳ್ಳಿಗಳಲ್ಲಿಸೋಂಕು ವ್ಯಾಪಿಸಿದೆ. ಈ ಪೈಕಿ ಕೆಲಗ್ರಾಮಗಳಲ್ಲಿ ಸರಣಿ ಸಾವುಗಳು, ಸೋಂಕುಬಂದಿದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಹಾಗೂಶರವೇಗದಲ್ಲಿ ಗ್ರಾಮದ ಅನೇಕರಿಗೆ ಸೋಂಕುಹರಡಿದ ಪ್ರಕರಣಗಳೂ ವರದಿಯಾಗಿವೆ.

ಹೆಚ್ಚು ಅಪಾಯ ಯಾಕೆ?: ಕೊರೊನಾಸೇರಿ ಯಾವುದೇ ಸಾಂಕ್ರಾಮಿಕ ರೋಗವಿದ್ದರೂ ಅದರ ಹರಡುವಿಕೆ ವೇಗ ನಗರಗಳಿಗೆ ಹೋಲಿಸಿದರೆ, ಹಳ್ಳಿಗಳಲ್ಲಿ ಹೆಚ್ಚಿನಪ್ರಮಾಣದ್ದಾಗಿರುತ್ತದೆ. ಪ್ರಮುಖವಾಗಿಹಳ್ಳಿಗಳಲ್ಲಿ ಜನರ ನೇರ ಸಂಪರ್ಕ, ಒಂದಕ್ಕೊಂದು ಅಂಟಿಕೊಂಡಂತಿರುವ ಮನೆಗಳು,ಚಿಕ್ಕದಾದ ಓಣಿಗಳು, ಮನೆಗಳಲ್ಲಿ ಪ್ರತ್ಯೇಕಕೋಣೆಗಳ ಕೊರತೆ, ವ್ಯಾದಿ ಬಗ್ಗೆ ಆರಂಭದಲ್ಲಿ ಹೆಚ್ಚು ಉದಾಸೀನತೆ, ರೋಗಪತ್ತೆಪರೀಕ್ಷೆ, ತಜ್ಞ ವೈದ್ಯರ ಬಳಿ ತಪಾಸಣೆಬದಲು, ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಇಲ್ಲವೆಸ್ವಯಂ ವೈದ್ಯ ರೂಪದಲ್ಲಿ ಹಳ್ಳಿಗಳ ಕಿರಾಣಿಅಂಗಡಿಗಳಲ್ಲಿ ದೊರೆಯುವ ಕೆಲ ಮಾತ್ರೆಪಡೆದು ಸೇವನೆ, ರೋಗ ಉಲ್ಬಣ ಸ್ಥಿತಿಗೆಬರುವವರೆಗೂ ಹೆಚ್ಚಿನ ಕಾಳಜಿತೋರದಿರುವುದು ಕೂಡ ಪ್ರಮುಖವಾಗಿದೆ.

ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆಕೊರೊನಾದಂತಹ ರೋಗ ಲಕ್ಷಣ ಕಂಡುಬಂದರೆ ಅವರನ್ನು ಪ್ರತ್ಯೇಕವಾಗಿ ಇರಿಸಲುಪ್ರತ್ಯೇಕ ಕೋಣೆ ಸೌಲಭ್ಯ ಕಡಿಮೆಯಾಗಿರುತ್ತದೆ. ರೋಗ ಲಕ್ಷಣ ವ್ಯಕ್ತಿಯ ಮನೆಯಅಕ್ಕಪಕ್ಕದ ಮನೆಗಳು ಒಂದಕ್ಕೊಂದುಹೊಂದಿಕೊಂಡಿರುವುದರಿಂದ ಇತರೆಮನೆಗಳವರಿಗೂ ಸೋಂಕು ವ್ಯಾಪಿಸುವಅಪಾಯ ಅ ಧಿಕವಾಗಿರುತ್ತದೆ.ವಾಸ್ತವದಲ್ಲಿ ಅನೇಕ ಕಡೆ ಶೌಚಾಲಯಗಳನಿರ್ಮಾಣವೇ ಆಗಿಲ್ಲ.

ನಿರ್ಮಾಣವಾಗಿದ್ದರೂ, ಅವುಗಳ ಬಳಕೆ ಅತ್ಯಂತ ಕಡಿಮೆಇಲ್ಲವೆ ನಗಣ್ಯ ಎಂದೇ ಹೇಳಬಹುದು.ಇಂದಿಗೂ ಹಳ್ಳಿಗಳಲ್ಲಿ ಬಹುತೇಕರುಬಯಲು ಬಹಿರ್ದೆಸೆಯನ್ನೇ ಮುಂದುವರಿಸಿದ್ದಾರೆ. ಸೋಂಕಿತ ವ್ಯಕ್ತಿ ಬಯಲುಬಹಿರ್ದೆಸೆ, ಮೂತ್ರ ವಿಸರ್ಜನೆ ಇನ್ನಿತರೆಕಾರಣಗಳಿಗೆ ಗ್ರಾಮದಲ್ಲಿ ಸುತ್ತಾಡುವುದು,ಹೊರ ಹೋಗುವುದು ಸೋಂಕು ಹಬ್ಬಲುಕಾರಣವಾಗಿದೆ.

ಇನ್ನು ಉಪಚುನಾವಣೆ, ಇತರೆಕಡೆಯಿಂದ ಮರುವಲಸೆ ಬಂದವರು,ಗ್ರಾಮದವರು ನಗರ ಸಂಪರ್ಕಕ್ಕೆ ಬಂದುಇಲ್ಲವೆ ಇನ್ನಾವುದೋ ರೂಪದಲ್ಲಿ ಸೋಂಕುಹೊತ್ತು ತಂದವರಿಂದ ಹಳ್ಳಿಗಳಲ್ಲಿ ಸೋಂಕುಹೆಚ್ಚಳವಾಗಿ ಆಂತಕ ತಂದಿಟ್ಟಿದೆ. ಕೆಲವುಹಳ್ಳಿಗಳಲ್ಲಿ ಒಬ್ಬರು-ಇಬ್ಬರಲ್ಲಿ ಕಾಣಿಸಿಕೊಂಡಿದ್ದ ಸೋಂಕು, ಬೆರಳೆಣಿಕೆಯದಿನಗಳಲ್ಲಿಯೇ 20-30 ಜನರಿಗೆ ವ್ಯಾಪಿಸಿದೆ.ಇನ್ನು ಕೆಲವೆಡೆ ಇಡೀ ಗ್ರಾಮವೇ ಜ್ವರದಿಂದಬಳಲುವ, ಜ್ವರದಿಂದ ಮೃತಪಟ್ಟ ಘಟನೆಗಳುಕೇಳಿ ಬರುತ್ತಿವೆ.

ರೋಗ ಲಕ್ಷಣ ಕಂಡು ಬಂದವರನ್ನುಪ್ರತ್ಯೇಕಿಸಿ ಒಂದೇ ಕಡೆ ಇರಿಸಲು ಗ್ರಾಮಪಂಚಾಯತ್‌ ಸಮುದಾಯ ಭವನ, ಶಾಲೆ,ಗೋದಾಮುಗಳಲ್ಲಿ ಇರುವ ಸೌಲಭ್ಯಗಳಲ್ಲೇಕ್ವಾರಂಟೈನ್‌ ಆರಂಭಿಸಬೇಕು. ಭೋಜನಇನ್ನಿತರೆ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು.ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು,ಗ್ರಾಮದಲ್ಲಿರುವ ನರ್ಸ್‌ಗಳ ನೆರವುಪಡೆಯಬೇಕು.

ಅಗತ್ಯ ಬಿದ್ದರೆ ಆರೋಗ್ಯಇಲಾಖೆಗೆ ಮನವಿ ಮಾಡಿ ಹೆಚ್ಚಿನ ವೈದ್ಯರವ್ಯವಸ್ಥೆಗೆ ಮುಂದಾಗಬೇಕು. ಸೋಂಕುತೀವ್ರವಿರುವ, ಉಸಿರಾಟ ತೊಂದರೆ ಇದ್ದವರನ್ನಷ್ಟೇ ಆಸ್ಪತ್ರೆಗಳಿಗೆ ಕಳುಹಿಸಿಕೊಡುವ,ಉಳಿದವರಿಗೆ ಗ್ರಾಮದ ಕ್ವಾರಂಟೈನ್‌ಕೇಂದ್ರದಲ್ಲೇ ಚಿಕಿತ್ಸೆ, ಆರೈಕೆ ಕಾರ್ಯಕೈಗೊಳ್ಳಬೇಕಿದೆ. ಇದು ಭವಿಷ್ಯದ ಭಯಾನಕಅಪಾಯ ತಪ್ಪಿಸಲು ಇದು ಉತ್ತಮಕ್ರಮವಾಗಿದೆ.

 

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.