ಸ್ಟಾರ್ಟಪ್‌ಗೆ ದೇಶಪಾಂಡೆ ಫೌಂಡೇಶನ್‌ ಗಾಡ್‌ಫಾದರ್‌

ತರಬೇತಿ-ತಾಂತ್ರಿಕ ಶಿಕ್ಷಣದಲ್ಲಿ ಸಂಸ್ಥೆ ಉತ್ತಮ ಕೆಲಸ ; ಉದ್ಯೋಗಿ ಮಾನಸಿಕತೆ ತೊರೆದು ಉದ್ಯಮಿಯಾಗಿ: ಶೆಟ್ಟರ

Team Udayavani, Oct 15, 2022, 2:42 PM IST

13

ಹುಬ್ಬಳ್ಳಿ: ಸಣ್ಣ ಉದ್ಯಮ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವವರಿಗೆ ದೇಶಪಾಂಡೆ ಫೌಂಡೇಷನ್‌ ಗಾಡ್‌ಫಾದರ್‌ ಇದ್ದಂತೆ ಎಂದು ಶಾಸಕ, ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.

ದೇಶಪಾಂಡೆ ಪ್ರತಿಷ್ಠಾನದ ಸ್ಟಾರ್ಟ್‌ಅಪ್ಸ್‌ನ ಸಣ್ಣ ಉದ್ದಿಮೆದಾರರ ಅಭಿವೃದ್ಧಿ ಕಾರ್ಯಕ್ರಮ (ಎಂಇಡಿಪಿ) ಸಂಘಟನೆಯು ಜೆಎಸ್‌ಡಬ್ಲ್ಯೂ ಫೌಂಡೇಶನ್‌ ಸಹಯೋಗದಲ್ಲಿ ದೇಶಪಾಂಡೆ ನಗರದ ಸವಾಯಿ ಗಂಧರ್ವ ಭವನದಲ್ಲಿ ಮೂರು ದಿನಗಳ ವರೆಗೆ ಆಯೋಜಿಸಿರುವ ಮೆಗಾ ಉದ್ಯಮಿ ಸಂತೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ನವ ಉದ್ಯಮಿಗಳಿಗೆ ತರಬೇತಿ, ತಾಂತ್ರಿಕ ಶಿಕ್ಷಣ ನೀಡುವಲ್ಲಿ ದೇಶಪಾಂಡೆ ಫೌಂಡೇಷನ್‌ ಉತ್ತಮ ಕೆಲಸ ಮಾಡುತ್ತಿದೆ. ಸ್ವಾವಲಂಬನೆಗೆ ಹೆಚ್ಚು ಪ್ರೋತ್ಸಾಹ ಹಾಗೂ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಮತ್ತು ಆರ್ಥಿಕವಾಗಿ ಸಬಲರಾಗಲು ಸಹಕಾರಿ ಆಗಿದೆ. ಆ ಮೂಲಕ ಪ್ರತಿಷ್ಠಾನವು ನವೋದ್ಯಮಿಗಳಿಗೆ ಗಾಡ್‌ ಫಾದರ್‌ ಆಗಿದೆ ಎಂದರು.

ನಮ್ಮಲ್ಲಿರುವ ಕೌಶಲ ಹೇಗೆಲ್ಲ ಸದ್ಬಳಕೆ ಮಾಡಿಕೊಂಡು ಉದ್ಯಮಿಯಾಗಬಹುದು ಎನ್ನುವುದಕ್ಕೆ ದೇಶಪಾಂಡೆ ಫೌಂಡೇಶನ್‌ ನಡೆಸುತ್ತಿರುವ ಮೆಗಾ ಉದ್ಯಮಿ ಮೇಳ ನಿದರ್ಶನವಾಗಿದೆ. ಇಂದಿನ ಯುವ ಜನಾಂಗವು ಸರಕಾರಿ ಹಾಗೂ ದೊಡ್ಡ ಖಾಸಗಿ ಕಂಪನಿಗಳ ಉದ್ಯೋಗಿ ಆಗಬೇಕೆನ್ನುವ ಮಾನಸಿಕತೆಯಿಂದ ಹೊರಬಂದು, ತಾವೇ ಉದ್ಯಮ ಸ್ಥಾಪಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗಲು ಮುಂದಾಗಬೇಕು. ಇದಕ್ಕೆ ದೇಶಪಾಂಡೆ ಫೌಂಡೇಷನ್‌ ಸೂಕ್ತ ಮಾರ್ಗದರ್ಶನ ನೀಡಲಿದೆ. ನೌಕರಿ ಬಗ್ಗೆ ಯುವಕರು ಮತ್ತು ಅವರ ಪಾಲಕರಲ್ಲಿರುವ ಮಾನಸಿಕತೆ ಹೋಗಲಾಡಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗಲು ಮೆಗಾ ಉದ್ಯಮ ಸಂತೆ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.

ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ ಕಾಂಬಳೆ ಮಾತನಾಡಿ, ದೇಶಪಾಂಡೆ ಫೌಂಡೇಶನ್‌ ಮತ್ತು ನಬಾರ್ಡ್‌ನ ಸಹಯೋಗದಲ್ಲಿ 90 ಮಹಿಳೆಯರಿಗೆ ಆರಿ ಎಂಬ್ರಾಯಡರಿ ತರಬೇತಿ ನೀಡಲಾಗುತ್ತಿದೆ. ಮುಂದೆ ಇವರು ಸ್ವಾವಲಂಬಿ ಸಖೀ ಉತ್ಪಾದಕರ ಕಂಪನಿಯಲ್ಲಿ ಸೇರ್ಪಡೆಯಾಗಲಿದ್ದಾರೆ. ಹೆಚ್ಚಿನ ಆದಾಯ ತರುವಂತಹ ಉದ್ಯಮಗಳನ್ನು ಗಮನದಲ್ಲಿಟ್ಟುಕೊಂಡು ಕೌಶಲ ಮತ್ತು ವ್ಯಾಪಾರದ ಅವಶ್ಯಕತೆಯಿದೆ. ಆ ಮೂಲಕ ಇನ್ನಷ್ಟು ಜನರಿಗೆ ನೌಕರಿ ಕೊಡಬಹುದಾಗಿದೆ. ಸಂಸ್ಥೆಯ ಕೃಷಿ ಹೊಂಡ ಪ್ರೊಜೆಕ್ಟ್‌ನಲ್ಲಿ ರೈತರ ಆದಾಯ ವೃದ್ಧಿಯಾಗಿದೆ. ಇದು ಭಾರತದ ಟಾಪ್‌ 3 ಪ್ರೊಜೆಕ್ಟ್‌ನಲ್ಲಿ ಒಂದಾಗಿದೆ. ಸಂಸ್ಥೆಯಿಂದ ನಗರದ ವಿಮಾನ ನಿಲ್ದಾಣದಲ್ಲಿ ಮಳಿಗೆ ನಿರ್ಮಿಸಲಾಗಿದ್ದು, ಇದು ರಾಜ್ಯದಲ್ಲೇ ಮೊದಲನೆಯದ್ದಾಗಿದೆ. ಮಹಿಳೆಯರು ಮತ್ತು ಸಣ್ಣ ಉದ್ದಿಮೆದಾರರಿಗೆ ಉತ್ತಮ ಪ್ಲಾಟ್‌ಫಾರ್ಮ್ ಸಿಗಬೇಕೆಂಬುವುದೆ ನಮ್ಮ ಉದ್ದೇಶವಾಗಿದೆ ಎಂದರು.

ಮಹಿಳಾ ನವೋದ್ಯಮಿಗಳು ಮತ್ತು ಸ್ಟಾರ್ಟ್ ಅಪ್‌ ಉದ್ಯಮಿಗಳಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಲಾಯಿತು. ಸ್ವಯಂ ಶಿಕ್ಷಣ ಪ್ರಯೋಗದ ಕಾರ್ಯಕ್ರಮ ನಿರ್ದೇಶಕ ಉಪಮನ್ಯು ಪಾಟೀಲ, ದೇಶಪಾಂಡೆ ಸ್ಟಾರ್ಟ್‌ಅಪ್ಸ್‌ನ ಹಿರಿಯ ನಿರ್ದೇಶಕ ವಿಜಯ ಪುರೋಹಿತ ಮೊದಲಾದವರಿದ್ದರು. ಸುರೇಖಾ ಪ್ರಾರ್ಥಿಸಿದರು. ಮಂಜುಳಾ ಕರಡಿ ನಿರೂಪಿಸಿದರು. ಶಿವಾನಂದ ಸೋಮಣ್ಣವರ ವಂದಿಸಿದರು. ‌

ಸಣ್ಣ ಉದ್ಯಮಿಗಳೇ ಹೀರೋಗಳು

ದೇಶಪಾಂಡೆ ಸ್ಟಾರ್ಟ್‌ಅಪ್ಸ್‌ ಸಿಇಒ ಅರವಿಂದ ಚಿಂಚೋರೆ ಮಾತನಾಡಿ, ಸಂಸ್ಥೆಯು 12 ವರ್ಷದ ಹಿಂದೆ 100ರಷ್ಟು ಸಣ್ಣ ಉದ್ಯಮಿಗಳಿಗೆ ಕೌಶಲ ತರಬೇತಿ ನೀಡುತ್ತಿತ್ತು. ಇದೀಗ 10 ಸಾವಿರಕ್ಕೂ ಹೆಚ್ಚು ಉದ್ಯಮಿಗಳು ತರಬೇತಿ ಪಡೆದು ಸಣ್ಣ ಉದ್ಯಮಿಗಳಾಗಿದ್ದಾರೆ. ನಮ್ಮ ಸಂಸ್ಥೆಗೆ ಸಣ್ಣ ಉದ್ಯಮಿಗಳೇ ನಿಜವಾದ ಹೀರೋಗಳು. ಅವರೇ ನಮಗೆ ಪ್ರೇರಣೆ. ಇನ್ನಷ್ಟು ಪ್ರಗತಿ ಸಾಧಿಸಲು ಮುಂದಾಗಬೇಕು. ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಸಣ್ಣ ಉದ್ಯಮಿಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಮೌಲ್ಯ ಕೊಂಡಿ ಮಾದರಿಯಲ್ಲಿ ಫುಡ್‌ ಕ್ಲಸ್ಟರ್‌ ಮಾಡಲು ಸಂಸ್ಥೆ ಸಿದ್ಧವಿದೆ. ಮಾವು ಹಾಗೂ ಇತರೆ ಹಣ್ಣುಗಳನ್ನು ಶೂನ್ಯತ್ಯಾಜ್ಯದೊಂದಿಗೆ ಉತ್ಪಾದಿಸಲು ಯೋಜಿಸಲಾಗಿದೆ. ಆ ಮೂಲಕ ಬ್ರಾಂಡ್‌ ನೇಮ್‌ ಕ್ರಿಯೇಟ್‌ ಮಾಡಿ ವ್ಯಾಪಾರ ವಹಿವಾಟು ಹೆಚ್ಚಿಸಿಕೊಳ್ಳಬಹುದು ಎಂದರು.

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.