ವಾರ್ಡ್‌ಗಳ ಸ್ವಚ್ಛತೆಗೆ ಒತ್ತು ನೀಡಿ: ಶಾಸಕ ಅಬ್ಬಯ್ಯ
ಪಾಲಿಕೆಯಲ್ಲಿ ಪ್ರಸ್ತುತ 5 ಡಿ-ಶಿಲ್ಟಿಂಗ್ ಮಶೀನ್‌ಗಳು ಕಾರ್ಯ ನಿರ್ವಹಿಸುತ್ತಿವೆ.
Team Udayavani, Jan 25, 2022, 5:41 PM IST
ಹುಬ್ಬಳ್ಳಿ: ನಗರದ ವಾರ್ಡ್‌ಗಳಲ್ಲಿ ಸ್ವಚ್ಛತಾ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ನಗರದ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಬೇಕೆಂದು ಶಾಸಕ ಪ್ರಸಾದ ಅಬ್ಬಯ್ಯ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಇಲ್ಲಿನ ಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸೋಮವಾರ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ವಾರ್ಡ್‌ಗಳ ಪುನರ್ವಿಂಗಡನೆಯಿಂದ ವಾರ್ಡ್‌ಗಳ ಸಂಖ್ಯೆ ಹೆಚ್ಚಾದರೂ ಹಳೆಯ ವಾರ್ಡ್‌ಗಳ ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಪ್ರತಿ ವಾರ್ಡ್ ಗಳಲ್ಲಿ ಸ್ವಚ್ಛತಾ ಕೆಲಸ ನಿರೀಕ್ಷೆಯಂತೆ ಸಾಗುತ್ತಿಲ್ಲ. ಹಳೇ ಹುಬ್ಬಳ್ಳಿ ಭಾಗದ ಕೆಲ ವಾರ್ಡ್‌ಗಳಲ್ಲಿ ಕಸದ ಟಿಪ್ಪರ್ ವಾಹನಗಳು ಜನರ ಮನೆ ಬಾಗಿಲ ಬಳಿ ತಲುಪಲಾಗುತ್ತಿಲ್ಲ. ಹೀಗಾಗಿ ಜನರು ತಮ್ಮ ಮನೆ ಕಸವನ್ನು ವಾಹನಕ್ಕೆ ಹಾಕಲಾಗದೇ ರಸ್ತೆ ಸೇರಿದಂತೆ
ಎಲ್ಲೆಂದರಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಸ್ವಚ್ಛತಾ ನಿರ್ವಹಣೆ ಕಷ್ಟಕರವಾಗುತ್ತಿದೆ. ಕಸದ ಟಿಪ್ಪರ್ ವಾಹನಗಳು ಹೋಗಲಾಗದಂಥ ಪ್ರದೇಶಗಳಲ್ಲಿ (ಪುಶ್ ಕಾರ್ಟ್ಸ್) ತಳ್ಳುಗಾಡಿ ಒದಗಿಸುವಂತೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಡಾ|ಬಿ. ಗೋಪಾಲಕೃಷ್ಣ, ಸರಕಾರದ ನಿಯಮಾವಳಿಯಂತೆ ಪ್ರಸ್ತುತ 700 ಜನರಿಗೆ ಒಬ್ಬರಂತೆ ಪೌರ ಕಾರ್ಮಿಕರು
ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಹೆಚ್ಚಿನ ಪೌರ ಕಾರ್ಮಿಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಧಾರವಾಡದ ಕೆಲವೆಡೆ ಪುಶ್ ಕಾರ್ಟ್ಸ್ ಒದಗಿಸಿದ್ದು, ಶೀಘ್ರವೇ ವಲಯ ಆಯುಕ್ತರೊಂದಿಗೆ ಸಭೆ ನಡೆಸಿ ಎಲ್ಲೆಲ್ಲಿ ತಳ್ಳುಗಾಡಿಗಳ ಅವಶ್ಯಕತೆಯಿದೆ ಎಂಬುದನ್ನು ಪರಿಶೀಲಿಸಿ ಆದ್ಯತೆ ಮೇರೆಗೆ ಒದಗಿಸಲಾಗುವುದು ಎಂದರು.
ಯುಜಿಡಿಯಲ್ಲಿನ ಕಸ-ಕಡ್ಡಿ ತೆಗೆಯಲು ಬಳಸುವ ಡಿ-ಶಿಲ್ಟಿಂಗ್ ವಾಹನವು ಇಡೀ ಕ್ಷೇತ್ರಕ್ಕೆ ಕೇವಲ ಒಂದು ಮಾತ್ರವಿದ್ದು, ಇದರಿಂದ ಯುಜಿಡಿ ಸಮಸ್ಯೆ ನಿವಾರಿಸಲಾಗುತ್ತಿಲ್ಲ. ಆದ್ದರಿಂದ ಪ್ರತಿ ವಲಯಕ್ಕೆ ಕನಿಷ್ಟ ಒಂದಾದರೂ ಒದಗಿಸುವಂತೆ ಶಾಸಕರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಪಾಲಿಕೆಯಲ್ಲಿ ಪ್ರಸ್ತುತ 5 ಡಿ-ಶಿಲ್ಟಿಂಗ್ ಮಶೀನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಹೊಸದಾಗಿ ಏಳು ಮಶೀನ್ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅವು ಮಂಜೂರಾದ ನಂತರ ಪ್ರತಿ ವಲಯಕ್ಕೆ ಒಂದರಂತೆ ಮಶೀನ್‌ಗಳು ಕಾರ್ಯ ನಿರ್ವಹಿಸಲಿವೆ ಎಂದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸ ಯೋಜನೆಗಳನ್ನು ಜಾರಿಗೊಳಿಸಲು ಸರಕಾರಿ ಜಾಗೆಗಳು ಲಭ್ಯವಿಲ್ಲದ್ದರಿಂದ ಅನೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ಆದರೆ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಪಾಲಿಕೆ ಒಡೆತನದ ಖುಲ್ಲಾ ಜಾಗೆಗಳನ್ನು ಖಾಸಗಿಯವರು ಅತಿಕ್ರಮಿಸಿಕೊಂಡು ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ. ಅವನ್ನು ಕೂಡಲೇ ತೆರವುಗೊಳಿಸಿ ಖುಲ್ಲಾ ಜಾಗೆಗಳು ಅತಿಕ್ರಮಣವಾಗದಂತೆ ಫೆನ್ಸಿಂಗ್ ಅಳವಡಿಸಬೇಕು. ಅಲ್ಲದೇ ಗಾರ್ಡನಪೇಟೆ, ಗಣೇಶಪೇಟೆಯಲ್ಲಿನ ಶಿಥಿಲಾವಸ್ಥೆಯಲ್ಲಿರುವ ಪಾಲಿಕೆ ಒಡೆತನದ ಕಟ್ಟಡಗಳನ್ನು ಕೂಡಲೇ ತೆರವು ಮಾಡಬೇಕೆಂದು ಶಾಸಕರು ಆಯುಕ್ತರಿಗೆ ಸೂಚಿಸಿದರು.
ಕುಡಿಯುವ ನೀರಿನ ಪೈಪ್‌ಲೈನ್‌ದಲ್ಲಿ ಕೆಲವೆಡೆ ಯುಜಿಡಿ ನೀರು ಮಿಶ್ರಣವಾಗುತ್ತಿದ್ದು, ಅದನ್ನು ಸರಿಪಡಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ವಾರ್ಡ್‌ಗಳ ನಡುವೆ ಗಡಿರೇಖೆ ಗುರುತಿಸಬೇಕು. ಬೀದಿದೀಪಗಳ ಅಳವಡಿಸಬೇಕು. ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. ಅಧಿಕಾರಿಗಳು ಅನಗತ್ಯ ವಿಳಂಬ ಮಾಡದೇ ಕಾಲಮಿತಿಯೊಳಗೆ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಬೇಕೆಂದು ಶಾಸಕರು ಸೂಚಿಸಿದರು. ಜೊತೆಗೆ ಇನ್ನಿತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಪಾಲಿಕೆ ಜಂಟಿ ಆಯುಕ್ತ ಆನಂದ ಕಲ್ಲೋಳಿಕರ, ಅಧೀಕ್ಷಕ ಅಭಿಯಂತರ ಟಿ. ತಿಮ್ಮಪ್ಪ, ಇಇ ವಿಜಯಕುಮಾರ ಹಾಗೂ ಪಾಲಿಕೆಯ ವಲಯಾಧಿಕಾರಿಗಳು, ಘನತ್ಯಾಜ್ಯ ನಿರ್ವಹಣೆ, ಜಲಮಂಡಳಿ, ವಿದ್ಯುತ್ ವಿಭಾಗದ ಅಧಿಕಾರಿಗಳು ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು
Bantwal: ಸಾಹಿತ್ಯವನ್ನು ಮಕ್ಕಳ ಮನ ಮುಟ್ಟುವಂತೆ ಬೋಧಿಸುವ ಶಿಕ್ಷಕರು ಬೇಕು
Shimoga: ರಿಪ್ಪನ್ ಪೇಟೆ ಸಮೀಪ ಹಿಟ್ ಅಂಡ್ ರನ್; ಬೈಕ್ ಸವಾರ ಸಾವು
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್ ಸ್ಟಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.