ಸರಕಾರಿ ತರಬೇತಿ ಕೇಂದ್ರದಿಂದ ಮುಖ ಕವಚ
Team Udayavani, Apr 14, 2020, 3:40 PM IST
ಹುಬ್ಬಳ್ಳಿ: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಕರ್ತವ್ಯ ನಿರತ ಸಿಬ್ಬಂದಿಗಳಿಗಾಗಿ ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ವಿಶೇಷ ಮುಖ ಕವಚ (ಫೇಸ್ ಶೀಲ್ಡ್ ಮಾಸ್ಕ್)ನ್ನು ಸಿದ್ಧಪಡಿಸಿದೆ.
ಪ್ರತಿದಿನ 200 ಮುಖ ಕವಚಗಳನ್ನು ತಯಾರಿಸುವ ನಿರೀಕ್ಷೆಯಿದೆ. ಜಿಟಿಟಿಸಿಯು ಮೊದಲ ಹಂತದಲ್ಲಿ ಧಾರವಾಡ ಜಿಲ್ಲಾಡಳಿತಕ್ಕೆ 500 ಮುಖ ಕವಚಗಳನ್ನು
ಉಚಿತವಾಗಿ ನೀಡಲಿದೆ. ಯಾವುದೇ ತಂತ್ರಜ್ಞಾನದ ಅವಶ್ಯಕತೆಯಿಲ್ಲದೇ ಅತ್ಯಂತ ಸರಳವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಕೋವಿಡ್-19 ಸ್ವಯಂ ರಕ್ಷಣಾ ಸಾಧನ ಉತ್ಪಾದಿಸಲು ಅನುವಾಗುವಂತೆ ವಿನ್ಯಾಸ ಮಾಡಲಾಗಿದೆ. ಸ್ಥಳೀಯವಾಗಿ ಲಭ್ಯವಿರುವ ಸಾಮಗ್ರಿ ಬಳಸಿಕೊಂಡು, ನೈರ್ಮಲ್ಯ ಸೂತ್ರಗಳನ್ನು ಪಾಲಿಸಿ ಅತ್ಯಂತ ಸರಳವಾಗಿ ಗರಿಷ್ಠ 25ರೂ.ಗಳ ವೆಚ್ಚದೊಳಗೆ ಜಿಟಿಟಿಸಿ ವಿನ್ಯಾಸದ ಫೇಸ್‌ಶೀಲ್ಡ್ ತಯಾರಿಸಬಹುದಾಗಿದೆ. ತಲೆಯ ಆಕಾರಕ್ಕೆ ಅನುಗುಣವಾಗಿ ಹೊಂದಿಕೊಳ್ಳಬಲ್ಲ ಮತ್ತು ಪಾರದರ್ಶಕ ಶೀಲ್ಡ್ ಹೊಂದಿರುವ ಈ ಮುಖ ಕವಚವನ್ನು ತಲೆಯ ಮೇಲಿನಿಂದ ಮುಖಕ್ಕೆ ಹಾಕಿಕೊಳ್ಳಬಹುದಾಗಿದೆ.
ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಹ.ರಾಘವೇಂದ್ರ ಇವರು ಸೂಚಿಸಿದ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಜಿಟಿಟಿಸಿ ಹುಬ್ಬಳ್ಳಿಯ ಸಂಯೋಜಕ ಮಾರುತಿ ಭಜಂತ್ರಿ, ಹಳೇ ವಿದ್ಯಾರ್ಥಿ ಪ್ರಮೋದ ಇಟಗಿ, ತರಬೇತಿ ಅಧಿಕಾರಿ ಲೀಲಾಧರ ಚಳಗೇರಿ, ರಮೇಶ ಸಾಂಗಲಿ, ಪ್ರಶಾಂತ ಸುತಾರ, ಶರಣಯ್ಯ ಹಿರೇಮಠ, ಗುರುಬಸಯ್ಯ ಇನ್ನಿತರರು ಈ ಮುಖ ಕವಚವನ್ನು ಸಿದ್ಧಪಡಿಸಿದ್ದಾರೆ. ಜಿಟಿಟಿಸಿಯ ಬೆಂಗಳೂರು ಕೇಂದ್ರವು ಡಿಆರ್ ಡಿಒ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ
ವೆಂಟಿಲೇಟರಿನ ಪ್ರಾಯೋಗಿಕ ಮಾದರಿಯನ್ನು ಈಗಾಗಲೇ ತಯಾರಿಸಿ ಪೊರೈಸಿ ಉತ್ಪಾದನೆಗೆ ಅನುಮೋದನೆ ಪಡೆದಿರುತ್ತದೆ. ಮಾಹಿತಿಗೆ ಮೊ:
9902101010, 9886915904 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.