ರೈತ ರಮಾನಂದನ ಕೈಹಿಡಿದ “ಕದರಿ ಲೇಪಾಕ್ಷಿ”

ತಿಮ್ಮಾಪೂರದ ಪದವೀಧರ ರೈತ ಕಮ್ಮಾರನ ಸಾಧನೆ

Team Udayavani, Apr 26, 2022, 4:37 PM IST

22

ಶಿಗ್ಗಾವಿ: ಹವಾಮಾನ ಆಧಾರಿತ ಕೃಷಿ ಕ್ಷೇತ್ರದಲ್ಲಿ ಬರೀ ನಷ್ಟವನ್ನೇ ಅನುಭವಿಸುತ್ತಿದ್ದ ತಾಲೂಕಿನ ತಿಮ್ಮಾಪೂರದ ರೈತರೊಬ್ಬರು ಪ್ರಸಕ್ತ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ನೀಡುವ ಕದರಿ ಲೇಪಾಕ್ಷಿ ಹೊಸ ತಳಿಯ ಶೇಂಗಾ ಬೆಳೆದು ಮೊದಲ ಪ್ರಯೋಗದಲ್ಲೇ ಉತ್ತಮ ಇಳುವರಿ ಪಡೆದು ಖುಷಿಯಲ್ಲಿದ್ದಾರೆ.

ತಾಲೂಕಿನ ತಿಮ್ಮಾಪೂರ ಗ್ರಾಮದ ಪದವೀಧರ ರೈತ ರಮಾನಂದ ಕಮ್ಮಾರ ಅವರು ಪ್ರತಿ ವರ್ಷ ಅಕಾಲಿಕ ಮಳೆ ಕಾರಣ ಕೃಷಿಯಲ್ಲಿ ನಷ್ಟವನ್ನೇ ಅನುಭವಿಸಿದ್ದರು. ಕೇವಲ ಮನೆಯ ಅವಶ್ಯಕತೆಗೆ ಬೇಕಾದಷ್ಟು ಆಹಾರ ಧಾನ್ಯಗಳನ್ನು ಮಾತ್ರ ಬೆಳೆಯುತ್ತಿದ್ದ ಅವರಿಗೆ ಹೊಲದಲ್ಲಿ ಲಾಭವೂ ಅಷ್ಟಕ್ಕಷ್ಟೇ ಸಿಗುವಂತಾಗಿತ್ತು. ತಮ್ಮ ಹೊಸ ಕೃಷಿ ಚಿಂತನೆಯಡಿ ಬಹು ಬೇಗ ಆರ್ಥಿಕ ಚೇತರಿಕೆ ಪಡೆಯಲು ಮುಂದಾದ ಇವರು ಕೇವಲ ಮುಂಗಾರಿನಲ್ಲಿ ಮಾತ್ರ ಬೆಳೆಯಬೇಕಾದ ಆಂಧ್ರಪ್ರದೇಶದ ಉತ್ತಮ ಎಣ್ಣೆ ಅಂಶವಿರುವ ಲೇಪಾಕ್ಷಿ ತಳಿಯ ಶೇಂಗಾ ಬೆಳೆದು ಉತ್ತಮ ಫಸಲು ಕಂಡುಕೊಂಡಿದ್ದಾರೆ.

ಪ್ರಸಕ್ತ ನೆರೆಯ ಆಂಧ್ರಪ್ರದೇಶದ ವಿಶ್ವವಿದ್ಯಾಲಯ ವ್ಯಾಪ್ತಿಯ ಅನಂತಪೂರ ಜಿಲ್ಲೆಯ ಕದಡಿ ಗ್ರೌಂಡ್‌ನ‌ಟ್‌ ರಿಸರ್ಚ್‌ ಇನ್‌ ಸ್ಟಿಟ್ಯೂಟ್‌ನ ಕೃಷಿ ವಿಜ್ಞಾನಿ ಡಾ|ಶಿವಶಂಕರ ನಾಯಕ್‌ ಅವರು 2018ರಲ್ಲಿಯೇ ಸಂಶೋಧಿಸಿದ ಈ ತಳಿಯನ್ನು ಇಳುವರಿ ಪ್ರಯೋಗಕ್ಕಾಗಿ ನೀಡಿದ್ದರು. ಇದು ಕಡಿಮೆ ಖರ್ಚಿನಲ್ಲಿ ಬೆಳೆಯುವ, ರೋಗ ನಿರೋಧಕ ಶಕ್ತಿ ಹೆಚ್ಚಿರುವ, ಕಡಿಮೆ ಮಳೆ ಬೀಳುವ ಹವಾಮಾನದ ಪ್ರದೇಶದಲ್ಲಿ ಬೆಳೆಯುವ ಶಕ್ತಿ ಹೊಂದಿದ ತಳಿ. ಅಲ್ಲದೇ ಉತ್ತಮ ಕಾಯಿ ಕಟ್ಟುವ ಅಂಶಗಳನ್ನೊಳಗೊಂಡ ಬೀಜ ಪ್ರಯೋಗ ಹಂತದಲ್ಲಿ ರೈತರಿಗೆ ನೀಡಿದ್ದರು.

ನಂತರ 2020ರ ನವಂಬರ್‌ನಲ್ಲಿ ಬೆಳೆ ಕುರಿತು ಕೇಂದ್ರ ಅನುಮೋದನೆ ನೀಡಿತ್ತು. ಈಗ ಈ ತಳಿ ರಾಜ್ಯಕ್ಕೂ ಕಾಲಿಟ್ಟಿದೆ. ಕದರಿ ಲೇಪಾಕ್ಷಿ ತಳಿ ಪ್ರತಿ ಎಕರೆಗೆ 25 ರಿಂದ 30 ಕ್ವಿಂಟಲ್‌ಗ‌ೂ ಹೆಚ್ಚು ಇಳುವರಿ ಕೊಡುವ ಶೇ.52 ಎಣ್ಣೆ ಅಂಶ ಹೊಂದಿದ ತಳಿಯಾಗಿದೆ. ಅಲ್ಲದೇ ರೋಗಬಾಧೆ ಇಲ್ಲದೇ ನಿರೋಧಕ ತಳಿಯಾಗಿದೆ. ಇದಕ್ಕೆ ಕೆಂಪು ಮರಳು ಮಿಶ್ರಿತ ಮಣ್ಣು ಅತ್ಯುತ್ತಮ ಎನ್ನುತ್ತಾರೆ ಕೃಷಿಕರು. ಮೂರು ತಿಂಗಳು ಹತ್ತು ದಿನಗಳಲ್ಲಿ ಕಟಾವಿಗೆ ಬರುವ ಈ ತಳಿಯಿಂದ ಮಳೆಗಾಲ, ನೀರಾವರಿಯಲ್ಲೂ ಉತ್ತಮ ಫಸಲು ಕಾಣಬಹುದಾಗಿದೆ. ಸಾವಯವ, ರಾಸಾಯನಿಕ ಎರಡೂ ಪದ್ಧತಿಗಳಲ್ಲೂ ನಿರೀಕ್ಷಿತ ಲಾಭ ತರುವ ಬೆಳೆ ಇದಾಗಿದೆ.

ಸದ್ಯ ಮುಂಗಾರಿನ ಜತೆಗೆ ನೀರಾವರಿ ಕ್ಷೇತ್ರದಲ್ಲೂ ಉತ್ತಮ ಫಸಲು ಕಂಡು ಬಂದಿದೆ. ಕೇವಲ ಇಳುವರಿ ಪ್ರಯೋಗಕ್ಕಾಗಿಯೇ ರೈತರಿಗೆ ನೀಡಿದ್ದ ಸ್ಯಾಂಪಲ್‌ ಬೀಜದಲ್ಲಿಯೇ ಒಬ್ಬರಿಗೊಬ್ಬರು ಹಂಚಿಕೊಂಡು ಬೀಜ ಮಾರಾಟ ಮಾಡಿ ನೂರಾರು ಎಕರೆ ಕ್ಷೇತ್ರ ಹೆಚ್ಚಿಸಿಕೊಂಡಿದ್ದಾರೆ. ನಮ್ಮ ರಾಜ್ಯದಲ್ಲಿ ಬಿತ್ತನೆ ಬೀಜ ಲಭ್ಯತೆ ಇಲ್ಲ. ಶೇಂಗಾ ಬೀಜ ಈಗ ಕಾಳಸಂತೆಯಲ್ಲಿಯೇ ಕ್ವಿಂಟಲ್‌ಗೆ 35ರಿಂದ 40 ಸಾವಿರ ರೂ. ಏರಿಕೆ ದರದಲ್ಲಿ ಮಾರಾಟವಾಗುತ್ತಿದೆ. –ರಮಾನಂದ ಕಮ್ಮಾರ, ತಿಮ್ಮಾಪೂರ ರೈತ.

ಕೃಷಿ ಅಧಿಕಾರಿಗಳ ಭೇಟಿ- ಶ್ಲಾಘನೆ: ತಿಮ್ಮಾಪೂರ ರೈತ ರಮಾನಂದ ಕಮ್ಮಾರ ಅವರು ಬೆಳೆಗೆ ಕ್ರಿಮಿನಾಶಕ, ರಸಗೊಬ್ಬರ ಬಳಸಿಲ್ಲ. ಬದಲಾಗಿ ತಿಪ್ಪೆ ಗೊಬ್ಬರ, ಸ್ವಯಂ ಜೀವಾಮೃತ ತಯಾರಿಸಿ ಬಳಕೆ ಮಾಡಿದ್ದಾರೆ. 100 ರಿಂದ 150 ಕಾಯಿಗಳನ್ನು ಕಟ್ಟಿದ್ದು, ಜಮೀನಿಗೆ ಸಹಾಯಕ ಕೃಷಿ ನಿರ್ದೇಶಕ ಸುರೇಶ ದೀಕ್ಷಿತ, ಕೃಷಿ ಅ ಧಿಕಾರಿ ಅರುಣಕುಮಾರ ಇತರರು ಭೇಟಿ ನೀಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕೃಷಿಕರಿಂದ ಮೆಚ್ಚುಗೆ: ರೈತ ರಮಾನಂದ ಕಮ್ಮಾರ ಅವರು ಬಳಸಿದ ಕದರಿ ಲೇಪಾಕ್ಷಿ 1812 ತಳಿಯ ಬಗ್ಗೆ ಸುತ್ತಲಿನ ಕೃಷಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರೈತರಷ್ಟೇ ಅಲ್ಲ ಜಮೀನು ನೋಡಲು ಕೃಷಿ ಇಲಾಖೆ ಜತೆಗೆ ವಿವಿಧ ಇಲಾಖೆ ಅಧಿಕಾರಿಗಳೂ ಭೇಟಿ ನೀಡಿ ಶ್ಲಾಘಿಸಿದ್ದಾರೆ. ಕದರಿ ಲೇಪಾಕ್ಷಿ ತಳಿಯ ಶೇಂಗಾ ಬೆಳೆಯನ್ನು ಹೊಸ ತಳಿಯಾಗಿದ್ದು ಉತ್ತಮ ಫಸಲು ಬರುವ ನಿರೀಕ್ಷೆ ಇದೆ.

ಟಾಪ್ ನ್ಯೂಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

Basavaraj-horatti

CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ

ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್

ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.