ಭವಿಷ್ಯನಿಧಿ ಹಣ ಸಾರಿಗೆ ಸಂಸ್ಥೆ ನ್ಯಾಸ ಮಂಡಳಿಗೆ ವರ್ಗಾಯಿಸಲು ಒತ್ತಾಯ
ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಇಲಾಖೆಯಿಂದ ತರಬೇತಿ ನೀಡಲಾಗುವುದು
Team Udayavani, Feb 17, 2022, 5:25 PM IST
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 1998ರ ಏಪ್ರಿಲ್ 1ರ ನಂತರ ನೇಮಕವಾದ ಸಿಬ್ಬಂದಿ ಭವಿಷ್ಯ ನಿಧಿ ಹಣವನ್ನು ಸಾರಿಗೆ ಸಂಸ್ಥೆಯ ನ್ಯಾಸ ಮಂಡಳಿಗೆ ವರ್ಗಾಯಿಸಬೇಕು, ಕುಟುಂಬ ಪಿಂಚಣಿ ಮಂಜೂರಾತಿ ಮಾಡಬೇಕು ಸೇರಿದಂತೆ ಇತರೆ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಕೆಎಸ್ ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ನವನಗರದ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿ ಎದುರು ಬುಧವಾರ ಒಕ್ಕೂಟದ ಉಪಾಧ್ಯಕ್ಷ ಆರ್.ಎಫ್. ಕವಳಿಕಾಯಿ, ಭವಿಷ್ಯ ನಿಧಿ ಧರ್ಮದರ್ಶಿ ಎಂ.ವಿ. ಭಗವತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು, 2010ರ ಜನವರಿ 1ರಿಂದ ಸಂಸ್ಥೆಯ ಸಿಬ್ಬಂದಿ ತಮ್ಮ ಭವಿಷ್ಯ ನಿಧಿ ಹಣವನ್ನು ನ್ಯಾಸ ಮಂಡಳಿಗೆ ಜಮಾ ಮಾಡುತ್ತ ಬಂದಿದ್ದಾರೆ. ಆದರೆ 2009ರ ಡಿಸೆಂಬರ್ 31ರ ವರೆಗೆ ಈ ಸಿಬ್ಬಂದಿಗಳ ಜಮಾವಿದ್ದ ಭವಿಷ್ಯ ನಿಧಿ ಹಣ ನ್ಯಾಸ ಮಂಡಳಿಗೆ ಜಮಾ ಮಾಡುವಂತೆ ಫೆಡರೇಶನ್ ಮತ್ತು ಆಡಳಿತ ವರ್ಗ ಆಗ್ರಹಿಸಿದರೂ ಇದುವರೆಗೆ ಯಾವ ಪ್ರಯೋಜನವಾಗಿಲ್ಲ.
ಇದರಿಂದ 13 ಸಾವಿರ ಸಿಬ್ಬಂದಿ ಪಾಡು ಹೇಳತೀರದಾಗಿದೆ. ಈ ಸಿಬ್ಬಂದಿ ಭವಿಷ್ಯ ನಿಧಿ ಹಣ 2010ರ ಜನವರಿ 1ರಿಂದ ಸಂಸ್ಥೆಯ ನ್ಯಾಸ ಮಂಡಳಿಗೆ ಜಮಾ ಆಗುತ್ತಿದೆ. ಆದರೆ ಪಿಎಫ್ ಕಚೇರಿಯ ಸಿಬ್ಬಂದಿ ಸದಸ್ಯರಿಗೆ ಎಷ್ಟೆಷ್ಟು ಹಣವಿದೆ ಎಂಬ ವಿವರ ಕೊಡುತ್ತಿಲ್ಲ. ಸಿಬ್ಬಂದಿ ವೈಯಕ್ತಿಕ ಕಾರಣಕ್ಕೆ ಹಣ ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸಿದರೆ ಮಂಜೂರು ಮಾಡುತ್ತಿಲ್ಲ.
ಅರ್ಜಿ ತಿರಸ್ಕರಿಸಿ ಮರಳಿ ಕಳುಹಿಸುವುದು ವಾಡಿಕೆಯಾಗಿದೆ. ಹೀಗಾಗಿ ಸದಸ್ಯರು ಪಿಎಫ್ ಕಚೇರಿಗೆ ಅಲೆದಾಡುವುದು ಸಾಮಾನ್ಯವಾಗಿದೆ. ಜತೆಗೆ 1998ರ ಏಪ್ರಿಲ್ 1ರ ನಂತರ ನೇಮಕವಾದ ಸಿಬ್ಬಂದಿಗಳು ಮರಣ ಹೊಂದಿದ ಅವಲಂಬಿತರಿಗೆ ಹಾಗೂ ವಜಾ/ನಿವೃತ್ತಿ ಆದವರಿಗೂ ಕೂಡ ಭವಿಷ್ಯ ನಿಧಿ ಹಣ ಮಂಜೂರು ಮಾಡುವುದು, ಕುಟುಂಬ ಪಿಂಚಣಿ ಮಂಜೂರು ಮಾಡುವುದು, 13-ಎ ಮತ್ತು ಇಡಿಎಲ್‌ಐ ಇತ್ಯರ್ಥ ಪಡಿಸುವುದು ಕೂಡ ವಿಳಂಬ ಮಾಡಲಾಗುತ್ತಿದೆ. ಇದರಿಂದ ಸದಸ್ಯರಿಗೆ ತುಂಬಾ ಸಮಸ್ಯೆ ಆಗುತ್ತಿದೆ.
ಕಾರಣ 1998ರ ಏಪ್ರಿಲ್ 1ರ ನಂತರ ನೇಮಕವಾದ ಸಿಬ್ಬಂದಿ ಭವಿಷ್ಯ ನಿಧಿ ಹಣವನ್ನು ಕೂಡಲೇ ಸಾರಿಗೆ ಸಂಸ್ಥೆಯ ನ್ಯಾಸ ಮಂಡಳಿಗೆ ವರ್ಗಾಯಿಸಬೇಕು. ವಿಭಾಗೀಯ ಕಚೇರಿಯಿಂದ ಕಳುಹಿಸಿದ ಮರಣ ಹೊಂದಿದ ಸದಸ್ಯರು ಹಾಗೂ 58ವರ್ಷ ಮುಗಿದ ಸಿಬ್ಬಂದಿಗಳ ಕುಟುಂಬ ಪಿಂಚಣಿ ವಿಳಂವಿಲ್ಲದೆ ಇತ್ಯರ್ಥ ಪಡಿಸಬೇಕು.
ವಾಯವ್ಯ ನಿಗಮದಲ್ಲಿ ಕೆಲಸ ಮಾಡಿ ಬೇರೆ ವಿಭಾಗಕ್ಕೆ ವರ್ಗಾವಣೆಯಾದ 13ಎ ಇತ್ಯರ್ಥ ಮಾಡಿ ಅನುಬಂಧ-ಕೆ ತಕ್ಷಣ ಆಯಾ ವಿಭಾಗಕ್ಕೆ ಕಳುಹಿಸಬೇಕು. 2016ರ ಮಾರ್ಚ್ 1ರಿಂದ ಜಾರಿಗೆ ಬಂದ ಮರಣ ಹೊಂದಿದ ಅವಲಂಬಿತರಿಗೆ ಇಡಿಎಲ್‌ಐ ಕ್ಲೇಮ್ ಅನ್ನು ಕೂಡಲೇ ಇತ್ಯರ್ಥ ಪಡಿಸಬೇಕು. ಮಂಜೂರಾದ ಬಗೆಗಿನ ಪ್ರತಿ ಹಾಗೂ ಕುಟುಂಬ ಪಿಂಚಣಿ ಮಂಜೂರಾದ ಪಿಪಿಒ ಪ್ರತಿ ಹಾಗೂ 13ಎ ಇತ್ಯರ್ಥ ಮಾಡಿದ ನಂತರ ಅನುಬಂಧ-ಕೆ ಅನ್ನು ಸದಸ್ಯರ ಮನೆ ವಿಳಾಸಕ್ಕೆ ನೇರವಾಗಿ ಕಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತ-2ರ ವೀರೇಶ ಟಿ.ಆರ್. ಅವರು, ಸಂಸ್ಥೆಯ ಫೆಡರೇಶನ್ ದವರ ಆಗ್ರಹ ಮೇರೆಗೆ ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಇಲಾಖೆಯಿಂದ ತರಬೇತಿ ನೀಡಲಾಗುವುದು. ತಿಂಗಳಿಗೊಮ್ಮೆ ಸಂಸ್ಥೆಯ ವಿಭಾಗವಾರು ಸಭೆ ನಡೆಸಿ ಸಿಬ್ಬಂದಿಗಳ ಸಮಸ್ಯೆ ಆದಷ್ಟು ಬೇಗ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದರು. ಎಲ್ಲರೂ ಕಡ್ಡಾಯವಾಗಿ ಇ-ನಾಮಿನೇಷನ್ ಮಾಡಿಸಿ ಎಂದರು.
ಪ್ರತಿಭಟನೆಯಲ್ಲಿ ಶಾಂತಣ್ಣ ಮುಳವಾಡ, ಸಿ.ಎಸ್. ಬಿಡನಾಳ, ಮಂಜುನಾಥ ನಾಯ್ಕರ, ರಾಜಶೇಖರ ಜಟ್ಟಿ, ಎಂ.ಎನ್. ಹೂಗಾರ, ಸಿ.ಎನ್. ಹಿರೇಮಠ, ಡಿ.ಎಂ. ಮರಿಸಿದ್ದಣ್ಣವರ, ಎಂ.ಐ.ದಳವಾಯಿ, ಗೋಪಾಲ ರಾಯದ, ಬಸವರಾಜ ಕಟ್ಟಿ, ಜಗದೀಶ ರಿತ್ತಿ, ಶಿದಪ್ಪ ಗದಗಿನ, ಸುಭಾಷ ಅಳಗುಂಡಗಿ, ಪ್ರತಿಭಾ ಚರಂತಿಮಠ ಸೇರಿದಂತೆ ಒಕ್ಕೂಟದ ಚಿಕ್ಕೋಡಿ, ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಶಿರಸಿ, ಬಾಗಲಕೋಟೆ ವಿಭಾಗಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸಿಬ್ಬಂದಿ, ನಿವೃತ್ತ ಸಿಬ್ಬಂದಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.