9 ಸೋಂಕಿತರಿಗೆ ಗುಜರಾತ್ ಲಿಂಕ್: ಟ್ರಾವಲ್ ಹಿಸ್ಟರಿ ಬಿಡುಗಡೆ ಮಾಡಿದ ಜಿಲ್ಲಾಡಳಿತ
3 ದಿವಸ ಚೆಕ್‌ಪೋಸ್ಟ್‌ನಲ್ಲೇ ವಾಸ್ತವ್ಯ ; ಪರೀಕ್ಷೆಗೊಳಪಡಲು ಮನವಿ
Team Udayavani, May 14, 2020, 12:54 PM IST
ಸಾಂದರ್ಭಿಕ ಚಿತ್ರ
ಧಾರವಾಡ: ಗುಜರಾತ್ ಅಹಮದಾಬಾದಿನಿಂದ ಜಿಲ್ಲೆಗೆ ಆಗಮಿಸಿರುವ 9 ಜನ ಕೋವಿಡ್ ಸೋಂಕಿತರ ಪೈಕಿ ಹುಬ್ಬಳ್ಳಿ ನಗರದ 06 ಜನ, ಕುಂದಗೋಳದ 02, ಕಲಘಟಗಿಯ ಒಬ್ಬರಿದ್ದು, ಇವರ ಪ್ರಯಾಣದ ಮಾಹಿತಿಯನ್ನು ಜಿಲ್ಲಾಡಳಿತ ಇದೀಗ ಪ್ರಕಟಿಸಿದೆ. ಪಿ-879, ಪಿ-880, ಪಿ-881, ಪಿ-882, ಪಿ-883, ಪಿ-884, ಪಿ-885, ಪಿ-886,ಪಿ-887 ಅವರು ಕೋವಿಡ್ ಸೋಂಕಿತರಾಗಿದ್ದು, ಹುಬ್ಬಳ್ಳಿ ನಗರದ- 06, ಕುಂದಗೋಳ-2, ಕಲಘಟಗಿಯ ಒಬ್ಬರು ಸೇರಿ ಜಿಲ್ಲೆಯ ಒಟ್ಟು 9 ಜನ, ಗದಗ ಜಿಲ್ಲೆಯ ನರಗುಂದ ತಾಲೂಕಿನ 2 ಜನ ಸೇರಿ ಅಹ್ಮದಾಬಾದಿನ ಸರಕೆಜ್ ಹಾಲಿ ಮಹಮದ್ ಮಸೀದಿಯಿಂದ ಪ್ರಯಾಣ ಬೆಳೆಸಿದ್ದರು. ಮೇ 5ರಂದು ಬೆಳಿಗ್ಗೆ 7:00 ಗಂಟೆಗೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯವರು ವ್ಯವಸ್ಥೆ ಮಾಡಿದ ವಾಹನ ಸಂಖ್ಯೆ: ಜಿಜೆ-01-ಬಿಯು 9986 ಮೂಲಕ ಹೊರಟು ಮುಂಬೈ ಮೂಲಕ ಮೇ 5ರಂದು ಸಂಜೆ 7:00 ಗಂಟೆಗೆ ನಿಪ್ಪಾಣಿ ತಲುಪಿದ್ದಾರೆ.
ಚೆಕ್‌ಪೋಸ್ಟ್‌ನಲ್ಲೇ ವಾಸ್ತವ್ಯ: ಕರ್ನಾಟಕ ರಾಜ್ಯ ಪ್ರವೇಶಿಸಲು ಕರ್ನಾಟಕ ಸರ್ಕಾರದಿಂದ ಅನುಮತಿ ಸಿಗುವವರೆಗೂ 3 ದಿವಸಗಳ ಕಾಲ ಚೆಕ್‌ಪೋಸ್ಟ್‌ದಲ್ಲಿ ವಾಸ್ತವ್ಯ ಮಾಡಿದ್ದಾರೆ. ಬಳಿಕ ಮೇ 8ರಂದು ಸಂಜೆ 5:00 ಗಂಟೆಗೆ ಸ್ಥಳೀಯರು ವ್ಯವಸ್ಥೆ ಮಾಡಿದ ವಾಹನ ಸಂಖ್ಯೆ:ಕೆಎ-09-ಸಿ-2579 ಟಾಟಾ 407 ಮ್ಯಾಕ್ಸಿ ಕ್ಯಾಬ್ ಮೂಲಕ ನಿಪ್ಪಾಣಿಯಿಂದ ಧಾರವಾಡ ಕೃಷಿ
ವಿವಿ ಆವರಣಕ್ಕೆ ರಾತ್ರಿ 8:30 ಗಂಟೆಗೆ ತಲುಪಿದ್ದಾರೆ. ಆ ದಿನವೇ ಅವರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿತ್ತು. ಮೇ 12ರಂದು 9 ಜನರಿಗೆ ಕೋವಿಡ್-19 ಪಾಸಿಟಿವ್ ವರದಿ ಬಂದ ಕಾರಣ ಈ ಎಲ್ಲಾ ಜನರನ್ನು ಹುಬ್ಬಳ್ಳಿ ಕಿಮ್ಸ್ ಕೋವಿಡ್ ಹಾಸ್ಪಿಟಲ್‌ಗೆ ಸ್ಥಳಾಂತರಿಸಲಾಗಿದೆ. ಸದ್ಯ ಚೆಕ್‌ಪೋಸ್ಟ್‌ನಲ್ಲಿ 3 ದಿನ ವಾಸ್ತವ್ಯದ ಸೋಂಕಿತರ ಪ್ರಯಾಣದ ವಿವರ ಬಹಿರಂಗಗೊಳ್ಳುತ್ತಿದ್ದಂತೆಯೇ ಆತಂಕ ಹೆಚ್ಚಿದ್ದು, ಸೋಂಕಿತರ ಸಂಪರ್ಕಕ್ಕೊಳಗಾದವರು ಸ್ವಯಂ ಪ್ರೇರಣೆಯಿಂದ ಮಾಹಿತಿ ನೀಡುವುದರ ಜತೆಗೆ ಪರೀಕ್ಷೆಗೊಳಪಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಸೋಂಕಿತರ ಪ್ರಯಾಣದ ವಿವರದ ಆಧಾರದಡಿ ಸೋಂಕಿತರನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕೋವಿಡ್ ಸೋಂಕು ತಗಲುವ ಸಾಧ್ಯತೆ ಇದೆ. ಕಾರಣ ಆ ಎಲ್ಲ ವ್ಯಕ್ತಿಗಳು ಕೂಡಲೇ
ಕೋವಿಡ್ ಸಹಾಯವಾಣಿ 1077ಗೆ ಕರೆ ಮಾಡಿ ತಮ್ಮ ವಿವರ ನೀಡಬೇಕು. ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೊಳಪಡಬೇಕು ಎಂದು ಡಿಸಿ ದೀಪಾ ಚೋಳನ್ ಮನವಿ ಮಾಡಿದ್ದಾರೆ.
ಮೇ 7-14, ಮೇ 8-27, ಮೇ 9-155, ಮೇ 10-50, ಮೇ 11-167, ಮೇ 12-162 ಮತ್ತು ಮೇ 13 ರಂದು 90 ಜನ ಸೇರಿದಂತೆ ಮೇ 7ರಿಂದ ಮೇ 13ರವರೆಗೆ ಒಟ್ಟು 665 ಜನರು ದೇಶದ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ್ದಾರೆ. ಈ ಪೈಕಿ ಆಂಧ್ರಪ್ರದೇಶ-38, ಗೋವಾ-168, ಗುಜರಾತ-46, ಕೇರಳ-2, ಮಹಾರಾಷ್ಟ್ರ-296, ರಾಜಸ್ಥಾನ-14, ತಮಿಳುನಾಡು-51, ತೆಲಂಗಾಣ-41, ಮಧ್ಯಪ್ರದೇಶ-2, ಉತ್ತರ ಪ್ರದೇಶ ರಾಜ್ಯದಿಂದ 7 ಜನರು ಜಿಲ್ಲೆಗೆ ಬಂದಿಳಿದ್ದಾರೆ. ಇದರಲ್ಲಿ 223 ಜನರನ್ನು ಹೊಟೇಲ್ ಕಾರಂಟೈನ್‌ಗೊಳಪಡಿಸಿದ್ದರೆ 442 ಜನರನ್ನು ಸಾಂಸ್ಥಿಕ ಕಾರಂಟೈನ್‌ಗೊಳಪಡಿಸಿದ್ದು, ಈ ಪೈಕಿ 103 ಜನರನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.