Holalkere MLA M. Chandrappa… ಹೈಟೆಕ್‌ ಹೊಳಲ್ಕೆರೆಯ ನಿರ್ಮಾತೃ ಡಾ|ಎಂ.ಚಂದ್ರಪ್ಪ

ನಿರಂತರ ಕಾಯಕ ದಣಿವರಿಯದ ನಾಯಕ ಜನಾನುರಾಗಿ ಶಾಸಕ

Team Udayavani, Aug 15, 2023, 12:44 PM IST

Holalkere MLA M. Chandrappa… ಹೈಟೆಕ್‌ ಹೊಳಲ್ಕೆರೆಯ ನಿರ್ಮಾತೃ ಡಾ|ಎಂ.ಚಂದ್ರಪ್ಪ

ಬದುಕಿನ ಗತಿ ಬದಲಾಗಲು ಸಂಪರ್ಕಗಳು ಮುಖ್ಯ. ಅದೇ ರೀತಿ ಒಂದು ಊರು, ಪಟ್ಟಣದ ಅಭಿವೃದ್ಧಿಗೆ ಆ ಊರಿನ ಸಂಪರ್ಕ ಕೊಂಡಿಗಳು ಮುಖ್ಯವಾಗುತ್ತವೆ. ಸಂಪರ್ಕ ಕೊಂಡಿಗಳಲ್ಲಿ ಪ್ರಮುಖವಾದದ್ದು ರಸ್ತೆ. ಇದನ್ನು ಅರಿತು ಜನಪ್ರತಿನಿಧಿಯಾದವ ಕಾರ್ಯ ಕೈಗೊಂಡಾಗ ಜನ ಮತಹಾಕಿದ್ದಕ್ಕೂ ಸಾರ್ಥಕವಾಗಲಿದೆ.

ಇಂತಹ ಓರ್ವ ಜನಪ್ರತಿನಿಧಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರು. ಇವರನ್ನು ಹೊಳಲ್ಕೆರೆ ಕ್ಷೇತ್ರ ಹಾಗೂ ಚಿತ್ರದುರ್ಗ ಜಿಲ್ಲೆಯ ಜನ ಗುರುತಿಸುವುದು “ರಸ್ತೆ ರಾಜ’ ಎಂಬ ಹೆಸರಿನಿಂದ. ಹಳ್ಳಿಯ ಜನ ನಗರಗಳಿಗೆ ಬರಲು, ಮಾರುಕಟ್ಟೆಗೆ ಹೋಗಲು ರಸ್ತೆಗಳ ಅನಿವಾರ್ಯತೆ ಎಷ್ಟಿದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಂಡವರಲ್ಲಿ ಚಂದ್ರಪ್ಪ ಮೊದಲಿಗರು. ಈ ಕಾರಣಕ್ಕೆ ಅವರು ಪ್ರತಿನಿಧಿಸಿದ ಭರಮಸಾಗರ ಹಾಗೂ ಹೊಳಲ್ಕೆರೆ ಕ್ಷೇತ್ರದ ಸಣ್ಣ ಸಣ್ಣ ಕುಗ್ರಾಮಗಳನ್ನು ಹುಡುಕಿ ರಸ್ತೆಗಳನ್ನು ಮಾಡಿಸಿದ್ದಾರೆ. ಇತ್ತೀಚಿಗೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯ ಇವರ ಸೇವೆ ಗುರುತಿಸಿ ಗೌರವ ಡಾಕ್ಟರೇಟ್‌ ನೀಡಿದ್ದು ಇದಕ್ಕೆ ಗ್ರಾಮೀಣಾಭಿವೃದ್ಧಿಗೆ ಚಂದ್ರಪ್ಪ ಅವರು ನೀಡಿರುವ ಕೊಡುಗೆಯೂ ಕಾರಣವಾಗಿದೆ. ಅಭಿವೃದ್ಧಿ ವಿಚಾರ ಬಂದಾಗ ಎಂ.ಚಂದ್ರಪ್ಪ ಎಲ್ಲರಿಗಿಂತ ಹತ್ತು ಹೆಜ್ಜೆ ಮುಂದಿರುತ್ತಾರೆ. ಕ್ಷೇತ್ರಕ್ಕೆ ಬೇಕಾದ ಯಾವುದೇ ಕೆಲಸ, ಯಾವುದೇ ಯೋಜನೆಗಳಿಗೆ ಕೈ ಹಾಕಿದರೂ ಅದು ಮುಗಿಯುವವರೆಗೆ ಯಾರನ್ನೂ ಸುಮ್ಮನಿರಲು ಬಿಡುವುದಿಲ್ಲ ಎನ್ನುವುದು ಅವರ ಬಳಿ ಕೆಲಸ ಮಾಡಿದ ಅಧಿಕಾರಿಗಳಿಂದ ಬರುವ ಸಾಮಾನ್ಯ ಅಭಿಪ್ರಾಯ.

ಒಂದು ಸಾಮಾನ್ಯ ಪಟ್ಟಣವಾಗಿದ್ದ ಹೊಳಲ್ಕೆರೆಗೆ ಇಂದು ಅಭಿವೃದ್ಧಿಯ ಹೊಸ ಸ್ಪರ್ಶ ನೀಡುವಲ್ಲಿ ಚಂದ್ರಪ್ಪ ಅವರ ದೂರದೃಷ್ಟಿಯಿದೆ. ಇಡೀ ಹೊಳಲ್ಕೆರೆ ಪಟ್ಟಣ ಹೈಟೆಕ್‌ ಆಗಿ ಕಾಣುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಅಜಗಜಾಂತರ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. ಹೊಳಲ್ಕೆರೆ ಇತಿಹಾಸದಲ್ಲಿ ಒಬ್ಬರೇ ನಿರಂತರವಾಗಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಉದಾಹರಣೆಗಳಿಲ್ಲ. ಆದರೆ, ಸತತ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಚಂದ್ರಪ್ಪ ಅವರು ಹೊಸ ದಾಖಲೆಯನ್ನೂ ಸೃಷ್ಟಿಸಿದ್ದು, ಈ ಗೆಲುವು ಅಭಿವೃದ್ಧಿಯ ಕಾರಣಕ್ಕೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅಂದಾಜು 3500 ಕೋಟಿ ರೂ. ವೆಚ್ಚದ ಕಾಮಗಾರಿಗಳು: ಹೊಳಲ್ಕೆರೆಗೆ ಎಂ.ಚಂದ್ರಪ್ಪ ಹೊಸ ರೂಪ ಕೊಡುವ ಪ್ರಯತ್ನ ಮಾಡಿದ್ದಾರೆ. ಇದರ ಭಾಗವಾಗಿಯೇ ಕಳೆದ ಐದು ವರ್ಷದಲ್ಲೇ ಸುಮಾರು 3500 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಯಾವುದೇ ಕೆಲಸವನ್ನು ಜನ ಕೇಳುವ ಮೊದಲೇ, ಅರ್ಜಿ ಹಾಕುವ ಮೊದಲೇ ಅವರ ಊರು, ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುವುದು ಅವರ ವಿಶೇಷತೆ.

ಭದ್ರಾ ಮೇಲ್ದಂಡೆಯಿಂದ ಕೆರೆಗಳಿಗೆ ನೀರಿನ ಸೌಲಭ್ಯ: ಹೊಳಲ್ಕೆರೆ ತಾಲೂಕು ಭದ್ರಾ ಮೇಲ್ದಂಡೆ ಯೋಜನೆಯಿಂದ ವಂಚಿತವಾಗದಂತೆ ತಡೆಯುವ ನಿಟ್ಟಿನಲ್ಲಿ ಭಗೀರಥ ಪ್ರಯತ್ನ ಮಾಡಿ ತಾಲೂಕಿನ ಎಲ್ಲಾ ಕೆರೆಗಳಿಗೆ ಭದ್ರಾ ನೀರು ಹರಿಸಲು ಪೈಪ್‌ಲೈನ್‌ ಮಾಡಿರುವುದು ಹೆಗ್ಗಳಿಕೆ. ಇಲ್ಲಿನ ತಾಳ್ಯ ಹೋಬಳಿ ಭೌಗೋಳಿಕವಾಗಿ ಎತ್ತರದ ಪ್ರದೇಶದಲ್ಲಿದೆ. ಗುರುತ್ವಾಕರ್ಷಣ ಬಲದಿಂದ ನೀರು ಹರಿಸುವುದು ಕಷ್ಟ. ಆದ್ದರಿಂದ ಈ ಭಾಗದ ಕೆರೆಗಳನ್ನು ನೀರು ತುಂಬಿಸುವ ಯೋಜನೆಯಿಂದ ಕೈಬಿಡಲಾಗಿತ್ತು. ಆದರೆ, ಈ ಭಾಗದ ರೈತರಿಗೆ ಅನ್ಯಾಯ ಆಗಬಾರದು ಎಂಬ ಉದ್ದೇಶದಿಂದ ಏತ ನೀರಾವರಿ (ಲಿಫ್ಟ್‌ ಇರಿಗೇಷನ್‌) ಮೂಲಕ ತಾಳ್ಯ ಹೋಬಳಿಯ ಶಿವಗಂಗಾ, ಹಳೇಹಳ್ಳಿ, ಎಮ್ಮಿಗನೂರು, ನಂದನಹೊಸೂರು, ಎಚ್‌.ಡಿ.ಪುರ, ಉಪ್ಪರಿಗೇನಹಳ್ಳಿ, ಕೆರೆಯಾಗಳಹಳ್ಳಿ ಕೆರೆಗಳಿಗೆ ನೀರು ಹರಿಸುವ 100 ಕೋಟಿ ವೆಚ್ಚದ ಯೋಜನೆ ಮಂಜೂರು ಮಾಡಿಸಿದ್ದಾರೆ.

ವಿದ್ಯುತ್‌ ಕೊರತೆ ನೀಗಿಸಿದ ಸಂತೃಪ್ತಿ: ಹೊಳಲ್ಕೆರೆ ತಾಲೂಕಿನ ಬಹುತೇಕ ರೈತರು ತೋಟಗಾರಿಕೆ ಬೆಳೆಗಳನ್ನು ಅವಲಂಬಿಸಿದ್ದಾರೆ. ಪ್ರತಿ ರೈತರು ಕೊಳವೆ ಬಾವಿಗಳನ್ನು ಆಶ್ರಯಿಸಿದ್ದು, ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ಹೈರಾಣಾಗಿದ್ದರು.

ಹಳೆಯ ಕಾಲದ ಕಂಬ, ವಿದ್ಯುತ್‌ ತಂತಿಗಳು ಹೆಚ್ಚು ವಿದ್ಯುತ್‌ ತಡೆಯುವ ಸಾಮರ್ಥ್ಯವನ್ನೂ ಹೊಂದಿರಲಿಲ್ಲ. ಈ ಎಲ್ಲಾ ಸಮಸ್ಯೆಗಳಿಂದ ರೈತರು ಪದೇ ಪದೇ ಶಾಸಕ ಎಂ.ಚಂದ್ರಪ್ಪ ಅವರಿಗೆ ವಿದ್ಯುತ್‌ ಸಮಸ್ಯೆಗಳ ಬಗ್ಗೆ ಹೇಳುತ್ತಿದ್ದರು. ಎಲ್ಲವನ್ನೂ ಗಮನಿಸಿ ಹೊಳಲ್ಕೆರೆ ತಾಲೂಕಿನ ಮೂರು ದಿಕ್ಕುಗಳಿಂದಲೂ ಹೊಸ ಮಾರ್ಗಗಳನ್ನು ನಿರ್ಮಿಸಿ ತಾಲೂಕಿಗೆ ಸಮರ್ಪಕ ವಿದ್ಯುತ್‌ ಪೂರೈಸುವಲ್ಲಿ ಶಾಸಕರ ಪಾತ್ರ ಶ್ಲಾಘನೀಯವಾಗಿದೆ. ಭರಮಸಾಗರ ಹಾಗೂ ಹೊಳಲ್ಕೆರೆಗೆ 500 ಕೋಟಿ ವೆಚ್ಚದ ಬೃಹತ್‌ ವಿದ್ಯುತ್‌ ಯೋಜನೆ ಮಂಜೂರು ಮಾಡಿಸಿದ್ದಾರೆ. ಚಿಕ್ಕಜಾಜೂರು ಸಮೀಪದ ಕೋಟೆಹಾಳ್‌ ಸಮೀಪ 220 ಕೆವಿ ವಿದ್ಯುತ್‌ ಸ್ವೀಕರಣಾ ಕೇಂದ್ರ ನಿರ್ಮಿಸಲು ಮುಂದಾಗಿದ್ದಾರೆ. ಇಲ್ಲಿಗೆ ಜೋಗದಿಂದ ನೇರವಾಗಿ ವಿದ್ಯುತ್‌ ಸರಬರಾಜು ಆಗಲಿದ್ದು, ಇಲ್ಲಿಂದ ತೇಕಲವಟ್ಟಿ, ಮಲ್ಲಾಡಿಹಳ್ಳಿ, ಅರಸನ ಘಟ್ಟ, ಎನ್‌.ಜಿ.ಹಳ್ಳಿ ಸೇರಿ 8 ವಿದ್ಯುತ್‌ ಕೇಂದ್ರಗಳಿಗೆ ವಿದ್ಯುತ್‌ ಸರಬರಾಜು ಆಗಲಿದೆ. ಈ ಯೋಜನೆ ಪೂರ್ಣಗೊಂಡರೆ ಮುಂದಿನ ಹಲವು ವರ್ಷ ವಿದ್ಯುತ್‌ ಸಮಸ್ಯೆಯೇ ಇರುವುದಿಲ್ಲ.

ಹೈಟೆಕ್‌ ಸರ್ಕಾರಿ ಆಸ್ಪತ್ರೆ: ಹೊಳಲ್ಕೆರೆಯ ತಾಲೂಕು ಸರ್ಕಾರಿ ಆಸ್ಪತ್ರೆ ಬೆಂಗಳೂರಿನ ಯಾವುದೋ ಖಾಸಗಿ ಆಸ್ಪತ್ರೆಯಂತೆ ಭಾಸವಾಗುತ್ತದೆ. ಸಾಫ್ಟ್‌ವೇರ್‌ ಕಂಪನಿ ಕಟ್ಟಡದಂತಿರುವ ಈ ಆಸ್ಪತ್ರೆ ಡಯಾಲಿಸಿಸ್‌, ಎಕ್ಸ್‌ರೇ, ಸ್ಕ್ಯಾನಿಂಗ್, ರಕ್ತ, ಮೂತ್ರ ಪರೀಕ್ಷೆಯ ಪ್ರಯೋಗಾಲಯ ಹೊಂದಿದೆ. ಎಲ್ಲ ವಿಭಾಗಗಳಿಗೆ ತಜ್ಞವೈದ್ಯರು ಸೇರಿದಂತೆ ಸಕಲ ಸೌಲಭ್ಯಗಳನ್ನು ಒಳಗೊಂಡಿದೆ.ಇದರೊಂದಿಗೆ ಎಚ್‌.ಡಿ.ಪುರ, ಚಿಕ್ಕಜಾಜೂರಿನಲ್ಲಿ ತಲಾ 12 ಕೋಟಿ ವೆಚ್ಚದ ಮಲ್ಟಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದೆ.

300 ಕೆರೆ, ಚೆಕ್‌ ಡ್ಯಾಂ ನಿರ್ಮಾಣ: ತಾಲೂಕಿನಲ್ಲಿ ಅಂತರ್ಜಲ ವೃದ್ಧಿಸಲು 300ಕ್ಕೂ ಹೆಚ್ಚು ಹೊಸ ಕೆರೆ, ಚೆಕ್‌ ಡ್ಯಾಂ, ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಿಸಲಾಗಿದೆ. ಹಳ್ಳಗಳ ನೀರು ವ್ಯರ್ಥವಾಗಿ ಹರಿದು ಹೋಗಬಾರದು ಎಂದು ಎಲ್ಲಾ ಕಡೆ ದೊಡ್ಡ ದೊಡ್ಡ ಚೆಕ್‌ ಡ್ಯಾಂ ನಿರ್ಮಿಸಿದ್ದು, ಕಳೆದ ವರ್ಷ ಸುರಿದ ಯಥೇತ್ಛ ಮಳೆಯಿಂದ ಎಲ್ಲವೂ ಭರ್ತಿಯಾಗಿ ತಾಲೂಕಿನ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಹನುಮಂತ ದೇವರ ಕಣಿವೆಯಲ್ಲಿ ನವನಗರ: ಪಟ್ಟಣದಿಂದ 5 ಕಿ.ಮೀ.ದೂರವಿರುವ ಹನುಮಂತದೇವರ ಕಣಿವೆ ಸುಂದರವಾಗಿದೆ. ಆದರೆ, ಇದು ಕಳ್ಳಕಾಕರ ತಾಣವಾಗಿತ್ತು. ಆದರೆ, ಈಗ ಕಣಿವೆಯ ಪ್ರಶಾಂತ ವಾತಾವರಣದಲ್ಲಿ ಚೆನ್ನಮ್ಮ ವಸತಿ ಶಾಲೆ, ಮೊರಾರ್ಜಿ ದೇಸಾಯಿ ಶಾಲೆ, ಕಸ್ತೂರ ಬಾ ಶಾಲೆ ನಿರ್ಮಿಸಲಾಗಿದೆ. ಜತೆಗೆ ಎಪಿಎಂಸಿ, ವಿಐಪಿ ಗೆಸ್ಟ್‌ ಹೌಸ್‌, ನ್ಯಾಯಾಧೀಶರ ವಸತಿಗೃಹ, ಶಿಕ್ಷಕರ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಆಶ್ರಮ ಶಾಲೆ, ಪಾಲಿಟೆಕ್ನಿಕ್‌ ಕಾಲೇಜು, ಅರಣ್ಯ ವಸತಿಗೃಹ ನಿರ್ಮಿಸಲಾಗಿದೆ. ಇದಲ್ಲದೆ ಇಲ್ಲಿ ನವನಗರ ನಿರ್ಮಿಸುವ ಯೋಜನೆ ರೂಪಿಸಲಾಗಿದೆ.

ತಾಲೂಕಿಗೆ ವಿ.ವಿ.ಸಾಗರ ನೀರು
ಹೊಳಲ್ಕೆರೆ, ಬಿ.ದುರ್ಗ, ಚಿಕ್ಕಜಾಜೂರು ಭಾಗದ ಹಳ್ಳಿಗಳಿಗೆ ಸೂಳೆಕೆರೆ ನೀರು ಸರಬರಾಜಾಗುತ್ತಿತ್ತು. ಆದರೆ, ಪದೇ ಪದೇ ಪೈಪ್‌ಲೈನ್‌ ಹಾಳಾಗಿ 15 ದಿನಕ್ಕೊಮ್ಮೆ ನೀರು ಬಿಡುವ ಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾದ ಶಾಸಕರು, ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯದಿಂದ ತಾಲೂಕಿನ ಪ್ರತಿ ಹಳ್ಳಿಗೆ ಕುಡಿಯುವ ನೀರು ಒದಗಿಸುವ 375 ಕೋಟಿ ರೂ. ಮೊತ್ತದ ಬೃಹತ್‌ ಯೋಜನೆ ಮಂಜೂರು ಮಾಡಿಸಿ ಕಾಮಗಾರಿ ಭರದಿಂದ ನಡೆಯುವಂತೆ ನೋಡಿಕೊಂಡಿದ್ದಾರೆ. ಇದಕ್ಕೆ ಹೆಚ್ಚುವರಿಯಾಗಿ 100 ಕೋಟಿ ರೂ. ಬಿಡುಗಡೆ ಮಾಡಿಸಿದ್ದಾರೆ. ಹಾಲೇನಹಳ್ಳಿ ಸಮೀಪದ ಬೆಟ್ಟದಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ದೊಡ್ಡ ಫಿಲ್ಟರ್‌ ನಿರ್ಮಿಸಿ ನೀರು ಶುದೀœಕರಿಸಿ ಎಲ್ಲಾ ಮನೆಗಳಿಗೆ ಹರಿಸಲಾಗುತ್ತದೆ.

ಸಂವಿಧಾನ ಸದನ
ಪಟ್ಟಣದ ಮುಖ್ಯ ವೃತ್ತದಲ್ಲಿದ್ದ ಡಾ|ಬಿ.ಆರ್‌. ಅಂಬೇಡ್ಕರ್‌ ಬಯಲು ರಂಗಮಂದಿರ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಇದು ಸಂವಿಧಾನ ಶಿಲ್ಪಿಗೆ ಮಾಡುವ ಅಪಮಾನ ಎಂದು ಚಿಂತಿಸಿದ ಎಂ.ಚಂದ್ರಪ್ಪ, ಬಯಲು ರಂಗಮಂದಿರವನ್ನು ಸುಸಜ್ಜಿತ ಆಡಿಟೋರಿಯಂ ಮಾಡಿ, ಸಂವಿಧಾನ ಸದನ ಎಂದು ಹೆಸರಿಟ್ಟು ಸೈ ಅನ್ನಿಸಿಕೊಂಡಿದ್ದಾರೆ. ಒಂದು ಸಾವಿರ ಆಸನವಿರುವ ಈ ರಂಗಮಂದಿರ ಅದ್ಭುತ ವಿನ್ಯಾಸದಿಂದ ಕೂಡಿದೆ. ಝಗಮಗಿಸುವ ವಿದ್ಯುತ್‌ ದೀಪಗಳು, ಹವಾನಿಯಂತ್ರಣ ವ್ಯವಸ್ಥೆ (ಎ.ಸಿ), ಅತ್ಯಾಧುನಿಕ ಧ್ವನಿ ವ್ಯವಸ್ಥೆ, 5 ಪ್ರೊಜೆಕ್ಟರ್‌ ಅಳವಡಿಸಲಾಗಿದೆ.

ಕೈ ಬೀಸಿ ಕರೆಯುವ ವಿಗ್ರಹ
ಹೊಳಲ್ಕೆರೆ ಪಟ್ಟಣದ ಹೊಸದುರ್ಗ ಮಾರ್ಗದಲ್ಲಿ ಕೆಸರು ಗದ್ದೆಯಂತೆ ಕಾಣುವ, ಕೊಳಚೆ ನೀರಿನಿಂದ ಆವೃತ್ತವಾಗಿದ್ದ “ಕೆಸರುಗಟ್ಟೆ ಕೆರೆ’ ಈಗ ಸುಂದರ ಪ್ರವಾಸಿ ತಾಣವಾಗಿ ರಾರಾಜಿಸುತ್ತಿದೆ. ಹತ್ತಾರು ವರ್ಷದ ಹಿಂದೆ ಈ ಕೆರೆ ಕೊಳಚೆಯಿಂದ ತುಂಬಿ ಹೋಗಿತ್ತು. ಅಲ್ಲದೆ ಕೆರೆ ಏರಿಯ ಮೇಲೆ ಕಿರಿದಾದ ರಸ್ತೆ ಇತ್ತು. ರಸ್ತೆಯ ಎರಡೂ ಬದಿಯಲ್ಲಿದ್ದ ಪೈಪ್‌ಲೈನ್‌ ಒಡೆದು ನೀರು ಸೋರುತ್ತಿದ್ದುದರಿಂದ ಸದಾ ಕೆಸರು ತುಂಬಿರುತ್ತಿತ್ತು. ಕೆರೆಯ ಮಧ್ಯದಲ್ಲಿ 20 ಅಡಿ ಎತ್ತರದ ಬೃಹತ್‌ ಶಿವನ ವಿಗ್ರಹ ಪ್ರತಿಷ್ಠಾಪಿಸುವ ಮೂಲಕ ಶಿವನ ಕೆರೆಯಾಗಿ ಅಭಿವೃದ್ಧಿ ಮಾಡಿದ್ದಾರೆ. ಈ ಕೆರೆಯ ಮೇಲಿನ ಕಿರಿದಾದ ಹೊಸದುರ್ಗ ರಸ್ತೆಯನ್ನು ಅಭಿವೃದ್ಧಿ ಮಾಡಲಾಗಿದೆ. ಒಂದು ವಾಹನ ಮಾತ್ರ ಹೋಗುವ ಸ್ಥಿತಿಯಲ್ಲಿದ್ದ ರಸ್ತೆಯನ್ನು ಎಂ.ಚಂದ್ರಪ್ಪ 2008 ರಲ್ಲಿ ಶಾಸಕರಾದಾಗಲೇ ನಾಲ್ಕು ಪಥದ ರಸ್ತೆಯನ್ನಾಗಿ ವಿಸ್ತರಿಸಿದರು. ಇದೇ ದುಸ್ಥಿತಿಯಲ್ಲಿದ್ದ ಬೊಮ್ಮನ ಕಟ್ಟೆ, ಪಟ್ಟಣದ ಹಿರೆಕೆರೆ, ಅಂದನೂರು ಕೆರೆ ಏರಿಗಳನ್ನು ವಿಸ್ತರಿಸಿ ಸುಸಜ್ಜಿತ ರಸ್ತೆ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಅತ್ಯಾಧುನಿಕ ಪುರಸಭೆ ಕಟ್ಟಡ
ಪುಟ್ಟ ನಗರವಾಗಿದ್ದ ಹೊಳಲ್ಕೆರೆಯನ್ನು ಪುರಸಭೆ ಮಾಡಿದ್ದೂ ಅಲ್ಲದೇ, ಅದಕ್ಕೊಂದು ಸುಸಜ್ಜಿತ ಹಾಗೂ ಹೈಟೆಕ್‌ ಕಚೇರಿ ನಿರ್ಮಿಸುವ ಮೂಲಕ ಊರಿನ ಘನತೆಯನ್ನು ಹೆಚ್ಚಿಸುವ ಕೆಲಸ ಶಾಸಕರಿಂದ ಆಗಿದೆ. ಹೊಸ ಕಟ್ಟಡದಲ್ಲಿ ವಾಹನ ನಿಲುಗಡೆಗೆ ಸೆಲ್ಲರ್‌, ಎರಡನೇ ಮಹಡಿಯಲ್ಲಿ ಬ್ಯಾಂಕ್‌, ವಾಣಿಜ್ಯ ಕಚೇರಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.

ಎಪಿಎಂಸಿಗೆ ಕಾಯಕಲ್ಪ
ತಾಲೂಕು ಕೇಂದ್ರವಾದರೂ ಇಲ್ಲಿಗೆ ಒಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಇರಲಿಲ್ಲ. ಇದರಿಂದ ಇಲ್ಲಿನ ರೈತರು ಹತ್ತಿ, ಮೆಕ್ಕೆಜೋಳ, ಶೇಂಗಾ ಮಾರಾಟ ಮಾಡಲು ಚಿತ್ರದುರ್ಗದ ಮಾರುಕಟ್ಟೆಗೆ ಹೋಗುತ್ತಿದ್ದರು. ಅಡಿಕೆ ಮಾರಾಟಕ್ಕೆ ಭೀಮಸಮುದ್ರಕ್ಕೆ ಹೋಗಬೇಕಿತ್ತು. ತಾಲೂಕನ್ನು ಹೊಸದುರ್ಗ ಎಪಿಎಂಸಿಗೆ ಸೇರ್ಪಡೆ ಮಾಡಲಾಗಿತ್ತು. 2008 ರಲ್ಲಿ ಶಾಸಕರಾಗಿ ಬಂದ ಚಂದ್ರಪ್ಪ ಎಪಿಎಂಸಿಯನ್ನು ಹೊಸದುರ್ಗದಿಂದ ಬೇರ್ಪಡಿಸಿ ತಾಲೂಕಿಗೆ ಪ್ರತ್ಯೇಕ ಎಪಿಎಂಸಿ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾದರು. ಹನುಮಂತ ದೇವರ ಕಣಿವೆಯಲ್ಲಿನ ಗುಡ್ಡವನ್ನು ಸಮಗೊಳಿಸಿ ಎಪಿಎಂಸಿ ನಿರ್ಮಿಸಿದರು. ಈಗ ಎಪಿಎಂಸಿಗೆ ಸುಸಜ್ಜಿತ ಕಚೇರಿ, ಪ್ರಾಂಗಣ, ದಾಸ್ತಾನು ಮಳಿಗೆಗಳನ್ನು ನಿರ್ಮಿಸಲಾಗಿದೆ. ಶೀಘ್ರವೇ ಕೃಷಿ ಮಾರುಕಟ್ಟೆ ಕಾರ್ಯಾರಂಭ ಮಾಡಲಿದ್ದು, ಸ್ಥಳೀಯ ರೈತರಿಗೆ ಅನುಕೂಲ ಆಗಲಿದೆ.

20 ಕೋಟಿಯ ಆಡಳಿತ ಸೌಧ
ಪಟ್ಟಣದಲ್ಲಿರುವ ಆಡಳಿತ ಸೌಧ ಹಳೆಯದಾಗಿತ್ತು. ಇದನ್ನು ಗಮನಿಸಿ ಶಿವಮೊಗ್ಗ ರಸ್ತೆಯ ತಾಲೂಕು ಪಂಚಾಯಿತಿ ಹಿಂಭಾಗದಲ್ಲಿ 20 ಕೋಟಿ ವೆಚ್ಚದಲ್ಲಿ ಬೃಹತ್‌ ಆಡಳಿತ ಸೌಧ ನಿರ್ಮಿಸಲಾಗಿದೆ. ವಿಧಾನಸೌಧದ ಮಾದರಿಯ ಮೆಟ್ಟಿಲುಗಳನ್ನು ಹೊಂದಿರುವ ಈ ಕಟ್ಟಡದಲ್ಲಿ ಅನೇಕ ಇಲಾಖೆಗಳು ಕಾರ್ಯನಿರ್ವಹಿಸಲು ಸ್ಥಳಾವಕಾಶ ಒದಗಿಸಲಾಗಿದೆ. ನಾಲ್ಕು ಅಂತಸ್ತುಗಳ ಬೃಹತ್‌ ಕಟ್ಟಡ ಆಕರ್ಷಕವಾಗಿದ್ದು, ಪಟ್ಟಣದ ಸೌಂದರ್ಯ ಹೆಚ್ಚಿಸಿದೆ.

ಪಟ್ಟಣದಲ್ಲಿ 100 ಅಡಿ ರಸ್ತೆ
2008 ರಲ್ಲಿ ಶಾಸಕರಾದಾಗಲೇ ಚಂದ್ರಪ್ಪ ಅವರು ಇಲ್ಲಿನ ರಸ್ತೆಗಳಿಗೆ ಹೊಸ ರೂಪ ಕೊಡಲು ತೀರ್ಮಾನಿಸಿದ್ದರು. ಅದರಂತೆ 100 ಅಡಿ ವಿಸ್ತಾರವಾದ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುವ ಮೂಲಕ ರನ್‌ವೇ ಮಾದರಿಯಲ್ಲಿ 100 ಅಡಿ ಅಗಲದ ರಸ್ತೆ ಮಾಡಿಸಿದ್ದಾರೆ. ದಾವಣಗೆರೆ ಕ್ರಾಸ್‌ನಲ್ಲಿದ್ದ ಕಿರಿದಾದ ಸೇತುವೆ ತೆಗೆಸಿ ಸುಮಾರು 120 ಅಡಿ ಅಗಲ ಮಾಡಲಾಗಿದೆ.

ಟಾಪ್ ನ್ಯೂಸ್

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.