ಹುಬ್ಬಳ್ಳಿ: ಹಾಸ್ಟೆಲ್ ಸೌಲಭ್ಯವಿಲ್ಲದೆ 14 ವಿದ್ಯಾರ್ಥಿನಿಯರು ಅತಂತ್ರ
ಇಲ್ಲಿಯೇ ಉಳಿಯಬೇಕಾದರೆ ತಿಂಗಳಿಗೆ 2500 ಹಾಸ್ಟೆಲ್ ಶುಲ್ಕ ಪಾವತಿ ಮಾಡಬೇಕು
Team Udayavani, Jul 7, 2023, 2:15 PM IST
ಹುಬ್ಬಳ್ಳಿ: ಉಚಿತ ಹಾಸ್ಟೆಲ್ ದೊರೆಯುವ ಭರವಸೆ ಮೇಲೆ ಶಾಲೆಗೆ ಪ್ರವೇಶ ಪಡೆದ 14 ಬಡ ವಿದ್ಯಾರ್ಥಿನಿಯರು ಅತಂತ್ರವಾಗಿದ್ದು, ಪ್ರತಿ ತಿಂಗಳು ಹಾಸ್ಟೆಲ್ ಶುಲ್ಕ ಪಾವತಿಸಿ ಕಲಿಸುವ ಶಕ್ತಿಯಿಲ್ಲದೆ ಪಾಲಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುವಂತಾಗಿದೆ.
ವಿದ್ಯಾನಗರದ ಮಹಿಳಾ ವಿದ್ಯಾ ಪೀಠದಲ್ಲಿರುವ ಕಸ್ತೂರಬಾ ಆಶ್ರಮದ ಬಾಲಕಿಯರ ವಸತಿ ನಿಲಯದ ಹಾವೇರಿಯ ಜಿಲ್ಲೆಯ ವಿವಿಧ ಭಾಗದ ಪರಿಶಿಷ್ಟ ಪಂಗಡಕ್ಕೆ ಸೇರಿದ 14 ವಿದ್ಯಾರ್ಥಿನಿಯರು ಶಾಲೆಗೆ ಪ್ರವೇಶ ಪಡೆದಿದ್ದಾರೆ. ಶಾಲೆಗೆ ಸೇರುವ ಮುನ್ನ ಉಚಿತವಾಗಿ ಹಾಸ್ಟೆಲ್ ಸೌಲಭ್ಯ ದೊರೆಯಲಿದೆ ಎನ್ನುವ ಭರವಸೆ ಹೊಂದಿದ್ದರು. ಆದರೆ ಇದೀಗ ಅವರಿಗೆ ಉಚಿತ ಹಾಸ್ಟೆಲ್ ದೊರೆಯದ ಕಾರಣ ಪ್ರತಿ ತಿಂಗಳು ಶುಲ್ಕ ಪಾವತಿಸಿ ಶಾಲೆ ಕಲಿಯಬೇಕು, ಇಲ್ಲದಿದ್ದರೆ ಹಾಸ್ಟೆಲ್‌ನಿಂದ ಹೊರ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿವೆ. ಇದೀಗ ಒಂದು ತಿಂಗಳಿನಿಂದ ಉಚಿತ ಹಾಸ್ಟೆಲ್ ದೊರೆಯುವ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ದಿಕ್ಕು ತೋಚದಂತಾಗಿದೆ.
ಆಗಿರುವುದು ಏನು: ಈ ಹಾಸ್ಟೆಲ್ ಸಮಾಜ ಕಲ್ಯಾಣ ಇಲಾಖೆಯ ಅನುದಾನದಡಿ ನಡೆಯುತ್ತಿದ್ದು, ನಿರ್ವಹಣೆ ಮಹಿಳಾ
ವಿದ್ಯಾಪೀಠ ಮಾಡುತ್ತಿದೆ. 50 ಸಾಮರ್ಥ್ಯದ ಹಾಸ್ಟೆಲ್‌ನಲ್ಲಿ 36 ಎಸ್ಸಿ, 12 ಎಸ್ಟಿ ಹಾಗೂ 2 ಒಬಿಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಪ್ರತಿ ವರ್ಷ ಖಾಲಿಯಾಗುವ ಸೀಟುಗಳ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಆದರೆ ಈ ಬಾರಿ
ಎಸ್ಟಿ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ ಕಾರಣ 14 ವಿದ್ಯಾರ್ಥಿಗಳು ಹೆಚ್ಚುವರಿಯಾಗಿದ್ದಾರೆ.
ಎಸ್ಟಿ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಹಾಸ್ಟೆಲ್ ಖಾಲಿ ಮಾಡದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಕಳೆದ ಒಂದು ತಿಂಗಳಿನಿಂದ ಉಚಿತ ಸೌಲಭ್ಯ ದೊರೆಯುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದೆ.
ನಮಗೆ ಮೊದಲು ಹೇಳಲಿಲ್ಲ: ಹೆಚ್ಚುವರಿ ಯಾಗಿರುವ ವಿದ್ಯಾರ್ಥಿಗಳು- ಪಾಲಕರು ಮಹಿಳಾ ವಿದ್ಯಾಪೀಠದ ಆಡಳಿತ ಮಂಡಳಿ ವಿರುದ್ಧ ತಿರುಗಿಬಿದ್ದಿದ್ದು, ಶಾಲೆಗೆ ಪ್ರವೇಶಾತಿ ನೀಡುವ ಸಂದರ್ಭದಲ್ಲಿ ಉಚಿತ ಸೀಟು ಆಗದಿದ್ದರೆ ತಿಂಗಳಿಗೆ ಇಂತಿಷ್ಟು ಶುಲ್ಕ ಕಟ್ಟಬೇಕು ಎಂದು ಹೇಳಿದ್ದರೆ ಮಕ್ಕಳನ್ನು ಸೇರಿಸುತ್ತಿರಲಿಲ್ಲ. ಒಂದು ತಿಂಗಳು ಇಟ್ಟುಕೊಂಡು ಇದೀಗ ಆಗುವುದಿಲ್ಲ.
ಇಲ್ಲಿಯೇ ಉಳಿಯಬೇಕಾದರೆ ತಿಂಗಳಿಗೆ 2500 ಹಾಸ್ಟೆಲ್ ಶುಲ್ಕ ಪಾವತಿ ಮಾಡಬೇಕು ಎಂದು ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿ ವರ್ಷ ಬರುವ ಪಾಲಕರಿಗೆ ಹಾಸ್ಟೆಲ್ ಈ ಬಗ್ಗೆ ವಿವರಿಸಲಾಗುತ್ತಿದೆ. ಉಚಿತ ಆಗದವರು ಶುಲ್ಕ ಪಾವತಿ ಮಾಡಿ ಉಳಿಯುತ್ತಾರೆ. ಈಗಲಾದರೂ ಅವರನ್ನು ಹೊರಹಾಕಿಲ್ಲ. ಪರಿಸ್ಥಿತಿಯನ್ನು ಅವರ ಪಾಲಕರಿಗೆ ತಿಳಿಸಿದ್ದೇವೆ ಎನ್ನುತ್ತಾರೆ ವಸತಿ
ನಿಯಲದ ಮೇಲ್ವಿಚಾರಕಿ.
ಬದಲಾಯಿಸಿದರೆ ಅವಕಾಶ
36 ಎಸ್ಸಿ ವಿದ್ಯಾರ್ಥಿಗಳಲ್ಲಿ ಇನ್ನೂ 8 ಸೀಟುಗಳು ಖಾಲಿಯಿವೆ. ಇದೀಗ ಹಾಸ್ಟೆಲ್ ಗಳಿಗೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ತಾಲೂಕು ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಮನಸ್ಸು ಮಾಡಿದರೆ ಎಸ್ಸಿ ವಿದ್ಯಾರ್ಥಿಗಳ ಸೀಟುಗಳು ಹೆಚ್ಚುವರಿಯಾಗಿರುವ ಎಸ್ಟಿ ವಿದ್ಯಾರ್ಥಿಗಳಿಗೆ ಬದಲಾಯಿಸಿ ನೀಡಿದರೆ ಅತಂತ್ರವಾಗಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇನ್ನೂ ಉಳಿಯುವ 6 ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಹೆಚ್ಚುವರಿ ಎಂದು ಅನುಮತಿ ನೀಡಿದರೆ ಅವರಿಗೂ
ಕೂಡ ಅವಕಾಶ ನೀಡಿದಂತಾಗಲಿದೆ. ಆದರೆ ಕಳೆದ ವರ್ಷ ಎಂಟು ವಿದ್ಯಾರ್ಥಿಗಳು ಹೆಚ್ಚುವರಿಯಾಗಿದ್ದರು. ಇದಕ್ಕೆ ಇಲಾಖೆ ಅನುಮತಿ ನೀಡಿದರೂ ಅನುದಾನ ನೀಡಲಿಲ್ಲ ಎನ್ನುವುದು ಆಡಳಿತ ಮಂಡಳಿ ವಾದವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.