ವ್ಯಾಪಾರ-ವಹಿವಾಟು ಚುರುಕು

ಜಿಲ್ಲಾಡಳಿತದಿಂದ ಲಾಕ್‌ಡೌನ್‌ ಮತ್ತಷ್ಟು ಸಡಿಲಿಕೆ; ಕ್ವಾರಂಟೈನ್‌ದಲ್ಲಿದ್ದ ಬಹುತೇಕರ ವರದಿ ನೆಗೆಟಿವ್‌

Team Udayavani, May 12, 2020, 7:25 AM IST

Hubli-Business

ಹುಬ್ಬಳ್ಳಿ: ಕೋವಿಡ್ ಹಾವಳಿಯಿಂದ ನಲುಗಿದ್ದ ಮಹಾ ನಗರದಲ್ಲಿ ಸೋಮವಾರ ವ್ಯಾಪಾರ ವಹಿವಾಟು ಕೊಂಚ ಚುರುಕು ಪಡೆದಿದ್ದು, ಸಾಮಾಜಿಕ ಅಂತರದಂತ ನಿಯಮ ಪಾಲಿಸುವ ಮೂಲಕ ಅಂಗಡಿ- ಮುಂಗಟ್ಟುಗಳು ಕಾರ್ಯರಂಭಗೊಂಡಿವೆ. ನೆರೆಹೊರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ. ಇತ್ತೀಚೆಗೆ ಪತ್ತೆಯಾದ ಮೂವರು
ಸೋಂಕಿತರ ಟ್ರಾವೆಲ್‌ ಹಿಸ್ಟರಿ ಮಹಾ ನಗರದಲ್ಲಿ ದೊಡ್ಡ ಆತಂಕವನ್ನೇ ಸೃಷ್ಟಿಸಿತ್ತು. ಸೋಂಕಿತರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್‌ಗೆ ಒಳಪಡಿಸಿ, ಪರೀಕ್ಷಿಸಲಾಗಿದೆ. ಬಹುತೇಕರ ವರದಿ ನೆಗೆಟಿವ್‌ ಬಂದಿದೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಆತಂಕವಿಲ್ಲ ಎನ್ನುವ ಕಾರಣದಿಂದ ಜಿಲ್ಲಾಡಳಿತ
ಲಾಕ್‌ಡೌನ್‌ ಮತ್ತಷ್ಟು ಸಡಿಲಿಕೆ ಮಾಡಿದ್ದು, ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕೆ ಮುಂದಾಗಿದೆ.

ಬೆಳಗ್ಗೆ 7ರಿಂದ ಸಂಜೆ 7 ಗಂಟೆ ವರೆಗೆ ಅಗತ್ಯ ವಸ್ತುಗಳನ್ನು ಪೂರೈಸುವ ನೋಂದಣಿ ಮಾಡಿಕೊಂಡಿರುವ ಅಂಗಡಿ- ಮುಂಗಟ್ಟು ತೆರೆಯಲು ಅನುಮತಿ ನೀಡಲಾಗಿದೆ. ಹೀಗಾಗಿ ಇಲ್ಲಿನ ಆಜಾದ್‌ ಕಾಲೋನಿ, ಮುಲ್ಲಾ ಓಣಿ, ಶಾಂತಿ ನಗರದ ಸೀಲ್‌ ಡೌನ್‌ ಪ್ರದೇಶ ಹೊರತುಪಡಿಸಿ ಇನ್ನಿತರ ಪ್ರದೇಶಗಳ ಅಂಗಡಿ-ಮುಂಗಟ್ಟುಗಳು ಕಾರ್ಯರಂಭ ಮಾಡಿವೆ. ಮೂರನೇ ಹಂತದ ಲಾಕ್‌ಡೌನ್‌ ಆರಂಭದಲ್ಲಿ ಆರ್ಥಿಕ ಚಟುವಟಿಕೆ ಆರಂಭಕ್ಕೆ ಕೇಂದ್ರ ಸರಕಾರ ಮಾರ್ಗಸೂಚಿ ನೀಡಿತ್ತು. ಹೀಗಾಗಿ ಜಿಲ್ಲಾಡಳಿತ ಮೇ 4ರಿಂದ ಲಾಕ್‌ಡೌನ್‌ನಲ್ಲಿ ಒಂದಿಷ್ಟು ಸಡಿಲಿಕೆ
ಮಾಡಿದ್ದರಿಂದ ಕೆಲ ವ್ಯಾಪಾರ-ವಹಿವಾಟು ಆರಂಭವಾಗಿದ್ದವು. ಕಳೆದ ಒಂದು ವಾರದಿಂದ ಕ್ರಮೇಣ ಒಂದೊಂದಾಗಿ ವ್ಯಾಪಾರ ಶುರುವಾಗುತ್ತಿದ್ದವು. ಆದರೆ ಕಂಟೈನ್ಮೆಂಟ್‌ ಪ್ರದೇಶ
ವ್ಯಾಪ್ತಿಯಲ್ಲಿ ವ್ಯಾಪಾರಕ್ಕೆ ಕಡಿವಾಣ ಹಾಕಲಾಗಿತ್ತು. ಇದೀಗ ಮತ್ತಷ್ಟು ಚಟುವಟಿಕೆಗಳಿಗೆ ಜಿಲ್ಲಾಡಳಿತ ವಿನಾಯಿತಿ ನೀಡಿ, ಸೀಲ್‌ಡೌನ್‌ ಪ್ರದೇಶ ವ್ಯಾಪ್ತಿ ಕಡಿಮೆ ಮಾಡಿದ ಹಿನ್ನೆಲೆಯಲ್ಲಿ 45-50 ದಿನಗಳಿಂದ ಸ್ಥಗಿತವಾಗಿದ್ದ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆಯಲು ಆರಂಭಿಸಿವೆ.

ನಿಯಮ ಪಾಲನೆ: ಸೋಂಕಿನ ಪರಿಣಾಮ ಅರಿತಿರುವ ಜನರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದಂತಿದೆ. ಮಾಸ್ಕ್ ಇಲ್ಲದೇ ಬರುವ ಗ್ರಾಹಕರನ್ನು ಅಂಗಡಿ
ಮಾಲೀಕರು ತರಾಟೆ ತೆಗೆದುಕೊಂಡು ವಾಪಸ್ಸು ಕಳುಹಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಂಗಡಿಗಳ ಎದುರು ಗುರುತು ಹಾಕಲಾಗಿದೆ. ಇನ್ನು ಕೆಲ ಅಂಗಡಿಗಳ ಎದುರು ಅಂತರ ಕಾಪಾಡಿಕೊಂಡು ವ್ಯಾಪಾರ ನಡೆಸಲಾಗುತ್ತಿದೆ.

ಹೆಚ್ಚಿದ ಜನರ ಓಡಾಟ: ಒಂದಿಷ್ಟು ಅಂಗಡಿ- ಮುಂಗಟ್ಟುಗಳಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಜನರ ಓಡಾಟ ಎಂದಿಗಿಂತ ಕೊಂಚ ಹೆಚ್ಚಾಗಿತ್ತು. ಪ್ರಮುಖ ರಸ್ತೆ ಸೇರಿದಂತೆ ಮಾರುಕಟ್ಟೆ ಪ್ರದೇಶಗಳಲ್ಲಿ ವಾಹನಗಳ ಸಂಚಾರವಿತ್ತು. ಕಟ್ಟಡ ನಿರ್ಮಾಣ ಕಾಮಗಾರಿ, ಅಂಗಡಿ-ಮುಂಗಟ್ಟುಗಳು ಆರಂಭವಾದ ಹಿನ್ನೆಲೆ ಯಲ್ಲಿ ಅಲ್ಲಲ್ಲಿ ಜನರ ಓಡಾಟ ಹೆಚ್ಚಾಗಿದೆ.

ಅಂಗಡಿಕಾರರಲ್ಲಿ ಗೊಂದಲ
ಜಿಲ್ಲಾಡಳಿತ ಅಗತ್ಯ ವಸ್ತುಗಳ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎನ್ನುವ ಸೂಚನೆ ನೀಡಿದ್ದು, ಕೆಲವು ವ್ಯಾಪಾರಿಗಳಿಗೆ ಗೊಂದಲವಾಗಿ ಕಾಡುತ್ತಿದೆ. ಹೀಗಾಗಿಯೇ ಚಿನ್ನಾಭರಣ, ಬಟ್ಟೆ ಮಾರುವವರು ತಮ್ಮ ಅಂಗಡಿಗಳ ಬಾಗಿಲನ್ನು ಅರ್ಧಂಬರ್ಧ ತೆಗೆದಿದ್ದರು. ಕೆಲವೆಡೆ ಬಟ್ಟೆ ಅಂಗಡಿಗಳು ಪೂರ್ಣ ಪ್ರಮಾಣದಲ್ಲಿ ವ್ಯಾಪಾರಕ್ಕೆ ಮುಂದಾಗಿದ್ದವು. ಆದರೂ ಪೊಲೀಸರು ಬರಬಹುದೇ ಎಂದು ನೋಡಲು ಅಂಗಡಿ ಹೊರಗೆ ಒಬ್ಬರನ್ನು ಕೂಡಿಸಲಾಗಿತ್ತು. ದೊಡ್ಡ ಬಟ್ಟೆ ಅಂಗಡಿಗಳು ಎಂದಿನಂತೆ ಮುಚ್ಚಿದ್ದವು. ಮೊದಲ ದಿನ ಆರಂಭವಾದ ಬಟ್ಟೆ ಅಂಗಡಿಗಳಲ್ಲಿ
ಗ್ರಾಹಕರು ಕಂಡುಬರಲಿಲ್ಲ.

ಮಾರುಕಟ್ಟೆಗೆ ಕಡಿವಾಣ
ಸದಾ ಜನರಿಂದ ಕಿಕ್ಕಿರಿದು ತುಂಬಿರುತ್ತಿದ್ದ ದುರ್ಗದಬೈಲ್‌ನಲ್ಲಿ ಒಂದಿಷ್ಟು ಜನರ ಓಡಾಟವಿತ್ತು. ಅಲ್ಲೊಂದು, ಇಲ್ಲೊಂದು ಅಂಗಡಿಗಳು ಕಾರ್ಯ ನಿರ್ವಹಿಸಿದವು. ಆದರೆ ದುರ್ಗದ ಬೈಲ್‌ನಲ್ಲಿ ತರಕಾರಿ, ಹಣ್ಣು, ಹೂವಿನ ಮಾರುಕಟ್ಟೆ ಆರಂಭಿಸಲು ಪಾಲಿಕೆ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಬೇಕಾಗುವ ಮುಂಜಾಗ್ರತೆ ಕೈಗೊಳ್ಳಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಪಾಲಿಕೆ ಅಧಿಕಾರಿಗಳು ಅವಕಾಶ ನೀಡಿಲ್ಲ. ಅಂಗಡಿ ತೆರೆಯಲು ಬಂದಿದ್ದ ವರ್ತಕರನ್ನು ವಾಪಸ್ಸು ಕಳುಹಿಸಿದ್ದಾರೆ. ಅಲ್ಲದೇ ಜನ ದಟ್ಟಣೆ ಆಗುವಂತಹ ವಾಣಿಜ್ಯ ಸಂಕೀರ್ಣದಲ್ಲಿರುವ ಮಳಿಗೆಗಳನ್ನು ತೆಗೆಯಲು ಅವಕಾಶ ನೀಡಲಿಲ್ಲ.

ಇಂದು ಏನೇನಿದ್ದವು?
ಸೀಲ್‌ಡೌನ್‌ ಪ್ರದೇಶ ಹೊರತುಪಡಿಸಿ ಬಹುತೇಕ ಆಟೋ ಮೊಬೈಲ್ಸ್‌, ಝೆರಾಕ್ಸ್‌, ಸಣ್ಣಪುಟ್ಟ ಬಟ್ಟೆ ಅಂಗಡಿ, ಎಲೆಕ್ಟ್ರಿಕಲ್‌, ತಂಪು ಪಾನೀಯ, ದುರಸ್ತಿ ಅಂಗಡಿ, ಜನರಲ್‌ ಸ್ಟೋರ್, ಪುಸ್ತಕ ಮಳಿಗೆ, ಕೆಲ ಖಾಸಗಿ ಕ್ಲಿನಿಕ್‌, ಫೋಟೋ ಲ್ಯಾಬ್‌ ಸೇರಿದಂತೆ ಇನ್ನಿತರ ಅಂಗಡಿಗಳು ಕಾರ್ಯಾರಂಭ ಮಾಡಿವೆ. ಇನ್ನು ಪಾರ್ಸಲ್‌ ನೀಡುವ ನಿಬಂಧನೆಗೆ ಒಳಪಟ್ಟು ಅಲ್ಲಲ್ಲಿ ಹೋಟೆಲ್‌ಗ‌ಳು ಆರಂಭವಾಗಿವೆ. ಅಲ್ಲದೇ ಕಾರು, ಬೈಕ್‌ ಗ್ಯಾರೇಜ್‌, ಮೆಡಿಕಲ್‌ ಶಾಪ್‌ ಹಾಗೂ ಕೆಲ ದಿನಸಿ ಅಂಗಡಿಗಳು ಮಾತ್ರ ಇಲ್ಲಿಯ ವರೆಗೆ ಕಾರ್ಯನಿರ್ವಹಿಸುತ್ತಿದ್ದವು.

ಯಾವ್ಯಾವುದಕ್ಕೆ ನಿಷೇಧ?
ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸ್ಥಳಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಶಾಲೆ-ಕಾಲೇಜು, ಕೋಚಿಂಗ್‌ ಕ್ಲಾಸ್‌, ಚಿತ್ರ ಮಂದಿರ, ಮಾಲ್‌, ಶಾಪಿಂಗ್‌ ಸೆಂಟರ್‌, ಮನರಂಜನಾ ಉದ್ಯಮ, ಧಾರ್ಮಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ, ಸಾರ್ವಜನಿಕ ಪೂಜೆ, ಪ್ರಾರ್ಥನೆ ಇತ್ಯಾದಿ.

ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

KLE Technological University: Awarded Honorary Doctorate to Murugesh Nirani

KLE Technological University: ಮುರುಗೇಶ್‌ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.