ಹುಬ್ಬಳ್ಳಿ -ದೆಹಲಿ ವಿಮಾನಯಾನಕ್ಕೆ ಇಂಡಿಗೋ ಸಜ್ಜು
ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ
Team Udayavani, Apr 28, 2022, 10:06 AM IST
ಹುಬ್ಬಳ್ಳಿ: ಇಂಡಿಗೋ ವಾಯುಯಾನ ಕಂಪನಿಯು ವಾಣಿಜ್ಯ ನಗರಿಯಿಂದ ದೇಶದ ರಾಜಧಾನಿಗೆ ವಿಮಾನಯಾನ ಸೇವೆ ಕಲ್ಪಿಸಲು ಮುಂದಾಗಿದ್ದು, ಅದಕ್ಕಾಗಿ ಈಗಾಗಲೇ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿದೆ.
ಇಂಡಿಗೋ ಕಂಪನಿಯು ಹುಬ್ಬಳ್ಳಿಯಿಂದ ನವದೆಹಲಿಗೆ ಒನ್ ಸ್ಟಾಪ್ ಕೊಟ್ಟು ವಿಮಾನಯಾನ ಸೇವೆಯನ್ನು ಮೇ ತಿಂಗಳಿನಿಂದ ಆರಂಭಿಸಲು ಯೋಜಿಸಿದ್ದು, ಅದಕ್ಕಾಗಿ ಪ್ರಸ್ತಾವನೆ ಸಹ ಸಲ್ಲಿಸಿದೆ. ಆದರೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ದಿಂದ ಅನುಮೋದನೆ ಸಿಗಬೇಕಿದೆ. ಅದು ದೊರೆತ ಕೂಡಲೇ ಬುಕ್ಕಿಂಗ್ ಆರಂಭಿಸಲು ಹಾಗೂ ವಿಮಾನಯಾನದ ದಿನಾಂಕ, ವೇಳಾಪಟ್ಟಿ ನಿಗದಿಗೊಳಿಸುವ ಬಗ್ಗೆ ಕೂಡ ಚಿಂತನೆ ನಡೆಸಿದೆ. ಕಾರಣ ಡಿಜಿಸಿಎದಿಂದ ಅನುಮತಿ ದೊರೆಯುವುದೊಂದೇ ಬಾಕಿ ಉಳಿದಿದೆ ಎಂದು ಮೂಲಗಳು ತಿಳಿಸಿವೆ.
ಮೇ 1ರಿಂದ ಮಂಗಳೂರು, 3ರಿಂದ ಮೈಸೂರಗೆ ನೇರ ವಿಮಾನ: ಇಂಡಿಗೋ ಕಂಪನಿ ಈಗಾಗಲೇ ಹುಬ್ಬಳ್ಳಿಯಿಂದ ಮುಂಬಯಿ, ಚೆನ್ನೈ, ಬೆಂಗಳೂರು, ಹೈದರಾಬಾದ್‌ಗೆ ವಿಮಾನಯಾನ ಸೇವೆ ಕಲ್ಪಿಸಿದ್ದು, ಮೇ 1ರಿಂದ ಮಂಗಳೂರಿಗೆ ವಾರದಲ್ಲಿ ನಾಲ್ಕು ದಿನ ಹಾಗೂ ಮೇ 3ರಿಂದ ಮೈಸೂರಿಗೆ ವಾರದಲ್ಲಿ ಮೂರು ದಿನ ತನ್ನ ಎಟಿಆರ್ ನೇರ ವಿಮಾನಯಾನ ಸೇವೆ ಕೂಡ ಆರಂಭಿಸುತ್ತಿದೆ. ಆ ನಿಟ್ಟಿನಲ್ಲಿ ಆನ್‌ಲೈನ್ ಬುಕ್ಕಿಂಗ್ ಸಹ ಆರಂಭಿಸಿದೆ.
ಮೇ 1ರಿಂದ ಹುಬ್ಬಳ್ಳಿ-ಮಂಗಳೂರು ವಿಮಾನವು (6ಇ 7189) ಪ್ರತಿ ರವಿವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರ ಸಂಜೆ 5:15 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 6:15 ಗಂಟೆಗೆ ಮಂಗಳೂರಿಗೆ ತಲುಪಲಿದೆ. ಮಂಗಳೂರು-ಹುಬ್ಬಳ್ಳಿ ವಿಮಾನವು (6ಇ 7191) ಸಂಜೆ 6:35 ಗಂಟೆಗೆ ಮಂಗಳೂರಿನಿಂದ ಹೊರಟು 7:40 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಆರಂಭಿಕವಾಗಿ ಪ್ರಯಾಣ ದರ ಪ್ರತಿಯೊಬ್ಬರಿಗೆ 1,999ರೂ. ಆಗಿದೆ.
ಮೇ 3ರಿಂದ ಹುಬ್ಬಳ್ಳಿ-ಮೈಸೂರು ವಿಮಾನವು (6ಇ 7189) ಪ್ರತಿ ಮಂಗಳವಾರ, ಗುರುವಾರ ಹಾಗೂ ಶನಿವಾರ ಸಂಜೆ 4:55 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 6:05 ಗಂಟೆಗೆ ಮೈಸೂರು ತಲುಪಲಿದೆ. ಮೈಸೂರು-ಹುಬ್ಬಳ್ಳಿ ವಿಮಾನವು (6ಇ 7191) ಸಂಜೆ 6:25 ಗಂಟೆಗೆ ಮೈಸೂರಿನಿಂದ ಹೊರಟು 7:40 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಈ ಸೇವೆಯಿಂದ ಪ್ರವಾಸೋಧ್ಯಮಕ್ಕೆ ಹೆಚ್ಚು ಆದ್ಯತೆ ನೀಡಿದಂತಾಗಿದೆ.
ಇಂದಿನಿಂದ ಹೈದರಾಬಾದ್‌ಗೆ ನೇರ ವಿಮಾನ ಆರಂಭ: ಏ.27ರಿಂದ ಹುಬ್ಬಳ್ಳಿಯಿಂದ ಹೈದರಾಬಾದ್ ಗೆ ವಾರದ ಏಳು ದಿನಗಳಂದು ಎಟಿಆರ್ ನೇರ ವಿಮಾನಯಾನ ಮತ್ತೆ ಆರಂಭಿಸಿದ್ದು, ಹುಬ್ಬಳ್ಳಿ- ಹೈದರಾಬಾದ್ ವಿಮಾನವು (6ಇ 7416) ಪ್ರತಿದಿನ ಬೆಳಗ್ಗೆ 8:00 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 9:10 ಗಂಟೆಗೆ ಹೈದರಾಬಾದ್ ತಲುಪಲಿದೆ. ಅದೇ ರೀತಿ ಹೈದರಾಬಾದ್-ಹುಬ್ಬಳ್ಳಿ ವಿಮಾನವು (6ಇ 7417) ಪ್ರತಿದಿನ ಬೆಳಗ್ಗೆ 9:40 ಗಂಟೆಗೆ ಹೈದರಾಬಾದ್‌ನಿಂದ ಹೊರಟು 11:00 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.
ಮೊದಲ ದಿನವಾದ ಬುಧವಾರ ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ 40 ಜನರು ಪ್ರಯಾಣಿಸಿದರು ಹಾಗೂ ಹೈದರಾಬಾದ್‌ನಿಂದ ಹುಬ್ಬಳ್ಳಿಗೆ 44 ಜನರು ಆಗಮಿಸಿದರು. ಹುಬ್ಬಳ್ಳಿಯಿಂದ ಇನ್ನಿತರೆ ನಗರಗಳಿಗೆ ವಿಮಾನಯಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದರಿಂದ ಹಾಗೂ ಅಹ್ಮದಾಬಾದ್, ಗೋವಾ, ಕೊಚ್ಚಿ, ಕಣ್ಣೂರು ಸೇರಿದಂತೆ ಇನ್ನುಳಿದ ಪ್ರದೇಶಗಳಿಗೂ ವಿಮಾನಯಾನ ಸೇವೆಯ ಬೇಡಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪನಿ ತನ್ನ ವಿಮಾನಯಾನ ಸೇವೆಯನ್ನು ದೇಶದ ಇನ್ನಿತರೆ ಪ್ರಮುಖ ನಗರಗಳಿಗೆ ವಿಸ್ತರಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಅಹ್ಮದಾಬಾದ್‌ಗೆ ಮತ್ತೆ ಯಾನ ಆರಂಭ?
ಇಂಡಿಗೋ ಕಂಪನಿ ಕೆಲ ಕಾರಣಾಂತರಗಳಿಂದ ಹುಬ್ಬಳ್ಳಿಯಿಂದ ಅಹ್ಮದಾಬಾದ್‌ಗೆ ಒದಗಿಸುತ್ತಿದ್ದ ವಿಮಾನಯಾನ ಸೇವೆ ಸ್ಥಗಿತಗೊಳಿಸಿತ್ತು. ಈಗ ಮರು ಆರಂಭಿಸಲು ವಿಮಾನಯಾನ ಸಚಿವಾಲಯಕ್ಕೆ ಈ ಮಾರ್ಗದ ಪ್ರಸ್ತಾವನೆ ಸಹ ಸಲ್ಲಿಸಿದ್ದು, ಅನುಮತಿಗಾಗಿ ಕಾಯುತ್ತಿದೆ. ಅಹ್ಮದಾಬಾದ್‌ನಲ್ಲಿ ರನ್‌ವೇ ಕಾಮಗಾರಿ ನಡೆಯುತ್ತಿದ್ದು, ಕಂಪನಿ ಹುಬ್ಬಳ್ಳಿಯಿಂದ ಅಹ್ಮದಾಬಾದ್‌ಗೆ ಬೆಳಗಿನ ಸಮಯದಲ್ಲಿ ತನ್ನ ವಿಮಾನಯಾನ ಸೇವೆ ಒದಗಿಸಲು ಯೋಜಿಸಿದೆ. ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರು ಅಹ್ಮದಾಬಾದ್‌ಗೆ ಹೋಗಿ ಬರಲು, ಇಲ್ಲವೇ ಅಹ್ಮದಾಬಾದ್‌ನಿಂದ ದೇಶ-ವಿದೇಶಗಳಿಗೆ ತೆರಳಲು ಅನುಕೂಲವಾಗುತ್ತದೆ ಎಂದು ಯೋಚಿಸಿದೆ. ಅದು ಪೂರ್ಣಗೊಂಡ ಬಳಿಕ ತನ್ನ ವಿಮಾನಯಾನ ಸೇವೆ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಕರ್ನಾಟಕ ಭಾಗದ ಜನರು ಹುಬ್ಬಳ್ಳಿಯಿಂದ ದೇಶದ ರಾಜಧಾನಿ ದೆಹಲಿಗೆ ಪ್ರಯಾಣಿಸಲು ವಿಮಾನಯಾನ ಆರಂಭಿಸಲು,ಅಹ್ಮದಾಬಾದ್‌ಗೆ ಪುನಃ ಆರಂಭಿಸಲು ಯೋಜಿಸಲಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಡಿಜಿಸಿಎದಿಂದ ಅನುಮತಿ ದೊರೆಯುವುದು ಬಾಕಿಯಿದೆ. ಅದೇ ರೀತಿ ಅಹ್ಮದಾಬಾದ್‌ನಲ್ಲಿ ರನ್‌ವೇ ಕಾಮಗಾರಿ ನಡೆದಿದ್ದು, ಅದು ಪೂರ್ಣಗೊಂಡು ಪರವಾನಗಿ ಸಿಕ್ಕ ಕೂಡಲೇ ಮತ್ತೆ ಆರಂಭಿಸಲಾಗುವುದು. -ಮನೋಜ ಪ್ರಭು, ಇಂಡಿಗೋ ಕಂಪನಿ ಉತ್ತರ ಕರ್ನಾಟಕ ಸೇಲ್ಸ್ ಇನ್‌ಚಾರ್ಜ್
-ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.