ಬೆಂಬಲಿಗರಿಗೆ ಪಟ್ಟ ಕಟ್ಟಲು ನಾಯಕರ ಕಸರತ್ತು

ಶಿಸ್ತಿನ ಪಕ್ಷದಲ್ಲೂ ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲ-ಸಂಕೀರ್ಣ ಸ್ಥಿತಿ; ಕೊನೆ ಘಳಿಗೆವರೆಗೂ ಒತ್ತಡದ ಸನ್ನಿವೇಶ

Team Udayavani, Jul 12, 2022, 12:59 PM IST

9

ಹುಬ್ಬಳ್ಳಿ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಹು-ಧಾ ಮಹಾನಗರ ಪಾಲಿಕೆಯಲ್ಲಿ ತಮ್ಮದೇ ಪ್ರಭಾವ ಬೀರಲು, ಪ್ರಮುಖ ಸ್ಥಾನಗಳನ್ನು ತಮ್ಮ ಬೆಂಬಲಿಗರಿಗೆ ದೊರಕಿಸಲು ಶಾಸಕರು ಪಟ್ಟು ಹಿಡಿಯುತ್ತಿರುವುದು ಬಿಜೆಪಿಯವರಿಗೆ ತಲೆನೋವಾಗಿ ಪರಿಣಮಿಸತೊಡಗಿದೆ. ಪಾಲಿಕೆ ಮಹಾಪೌರ, ಉಪ ಮಹಾಪೌರ, ಸ್ಥಾಯಿ ಸಮಿತಿಗಳ ಅಧ್ಯಕ್ಷರ ನೇಮಕ ವಿಚಾರದಲ್ಲಿ ಗೊಂದಲಗಳ ನಿವಾರಣೆ, ಮನವೊಲಿಕೆಗೆ ಬಿಜೆಪಿ ಮುಖಂಡರು ಬೆವರಿಳಿಸಬೇಕಾಗಿದೆ.

ಮಹಾನಗರ ಪಾಲಿಕೆ, ಜಿಲ್ಲಾಮಟ್ಟದಲ್ಲಿ ಪಕ್ಷ ಇಲ್ಲವೆ ಸರಕಾರ ಮಟ್ಟದ ಆಯ್ಕೆಗಳೇ ಇರಲಿ, ಬಿಜೆಪಿ ತನ್ನದೇ ಶಿಸ್ತು ಪಾಲಿಸಿಕೊಂಡು ಬಂದಿದೆ. ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಕೆಲವೊಂದು ಹೆಸರು ಶಿಫಾರಸು ಮಾಡುವುದು, ಕೋರ್‌ ಕಮಿಟಿ ಸಭೆಯಲ್ಲಿ ಯಾರಿಗೆ ಅವಕಾಶ ನೀಡಬೇಕೆಂಬುದಕ್ಕೆ ಅಂತಿಮ ಮುದ್ರೆಯೊತ್ತುವ ಮೂಲಕ ಆಯ್ಕೆಗಳು ಗೊತ್ತು ಗೊತ್ತಿಲ್ಲದ ರೀತಿಯಲ್ಲಿ ಸರಳ ಹಾಗೂ ಸುಲಭವಾಗುವಂತೆ ಮಾಡುವುದು ಬಿಜೆಪಿಯ ವಿಶೇಷವಾಗಿತ್ತು. ಆದರೆ, ಇದೀಗ ಆ ಪಕ್ಷದಲ್ಲಿಯೂ ಆಯ್ಕೆ ಸರಳತೆ ಬದಲು ಗೊಂದಲ-ಸಂಕೀರ್ಣ, ಕೊನೆ ಗಳಿಗೆವರೆಗೂ ಒತ್ತಡದ ಸ್ಥಿತಿ ನಿರ್ಮಾಣವಾಗುತ್ತಿದೆ.

ಶಾಸಕರ ಒತ್ತಡ?: ಅವಳಿನಗರ ವ್ಯಾಪ್ತಿಯಲ್ಲಿ ಬಿಜೆಪಿಯ ಮೂವರು ಶಾಸಕರು, ಒಬ್ಬರು ಸಂಸದರು ಇದ್ದಾರೆ. ಮಹಾನಗರ ಪಾಲಿಕೆ, ಪಕ್ಷದ ಜಿಲ್ಲಾಧ್ಯಕ್ಷರು ಸೇರಿದಂತೆ ವಿವಿಧ ನೇಮಕಗಳು ಬಿಜೆಪಿಯಲ್ಲಿ ಸುಲಭವಾಗುತ್ತಿದ್ದವು. ಆದರೆ, ಇತ್ತೀಚೆಗಿನ ಕೆಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಬಿಜೆಪಿಯಲ್ಲಿ ಆಯ್ಕೆ ಸುಲಭ-ಸರಳದ ಬದಲು ಸಂಕೀರ್ಣಗೊಳ್ಳುತ್ತಿದೆ, ಪೈಪೋಟಿ ಹೆಚ್ಚುತ್ತಿದೆ. ಆಯ್ಕೆ ವಿಚಾರದಲ್ಲಿ ನಾಯಕರು ಕೊನೆ ಕ್ಷಣದವರೆಗೂ ಸಭೆ-ಸಂವಾದ, ಮನವೊಲಿಕೆ ಕಾರ್ಯ ಮಾಡಬೇಕಾಗಿದೆ. ಇನ್ನು ಕೆಲವರು ಇನ್ನೇನು ತಮಗೆ ಅವಕಾಶ ಸಿಕ್ಕಿತು ಎಂದು ರಾತ್ರಿ ಹೆಮ್ಮೆಯಿಂದ ಇರುವುದರೊಳಗೆ ಬೆಳಗ್ಗೆ ನಿರ್ಧಾರ ಬದಲಾಗಿರುತ್ತದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಶಾಸಕರು, ಸಂಸದರು ತಮ್ಮದೇ ಬೆಂಬಲಿಗರನ್ನು ಪಟ್ಟಕ್ಕೆ ತರುವ ನಿಟ್ಟಿನಲ್ಲಿ ಒತ್ತಡ ಹಾಕುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಮ್ಮದೇ ಬೆಂಬಲಿಗರು ಪಾಲಿಕೆಯಲ್ಲಿ ಪ್ರಮುಖ ಸ್ಥಾನದಲ್ಲಿರಬೇಕೆಂಬ ಬಯಕೆ ಬಿಜೆಪಿ ಶಾಸಕರದ್ದಾಗಿದ್ದು, ಅದಕ್ಕಾಗಿ ಕೊನೆ ಗಳಿಗೆವರೆಗೂ ಒತ್ತಡ ತರುವ ಯತ್ನಕ್ಕೆ ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ನಗರ ಯೋಜನೆ ಸಮಿತಿಗೆ ಹೆಚ್ಚಿದ ಒತ್ತಡ: ಮಹಾನಗರ ಪಾಲಿಕೆಯಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಿದಿರುವ ಬಿಜೆಪಿ ಮಹಾಪೌರ-ಉಪ ಮಹಾಪೌರ ಸ್ಥಾನದ ಆಯ್ಕೆ ವಿಚಾರದಲ್ಲಿ ಕೊನೆ ಕ್ಷಣದವರೆಗೂ ಯಾರೆಂಬ ಸ್ಪಷ್ಟತೆ ಇಲ್ಲದೆ ನಾಯಕರು ಪ್ರಯತ್ನಿಸಬೇಕಾದ ಸನ್ನಿವೇಶ ಇದೇ ಮೊದಲು ಎಂಬುದನ್ನು ಬಿಜೆಪಿ ಅನೇಕರು ಒಪ್ಪಿಕೊಳ್ಳುತ್ತಿದ್ದಾರೆ. ಮಹಾಪೌರ ಸ್ಥಾನಕ್ಕೆ ವಿಜಯಾನಂದ ಶೆಟ್ಟಿ, ಈರೇಶ ಅಂಚಟಗೇರಿ, ವೀರಣ್ಣ ಸವಡಿ, ಶಿವು ಮೆಣಸಿನಕಾಯಿ ಹೆಸರು ಪ್ರಮುಖವಾಗಿ ಕೇಳಿಬಂದಿದ್ದವು. ಧಾರವಾಡ ಪ್ರತ್ಯೇಕ ಪಾಲಿಕೆ ಕೂಗು ಶಮನ ನಿಟ್ಟಿನಲ್ಲಿ ಈ ಬಾರಿ ಧಾರವಾಡಕ್ಕೆ ಮಹಾಪೌರ ಸ್ಥಾನ ನೀಡಬೇಕೆಂಬ ಸ್ಪಷ್ಟ ನಿರ್ಧಾರವನ್ನು ಬಿಜೆಪಿ ನಾಯಕರು ಕೈಗೊಂಡಿದ್ದರು. ಮಹಾಪೌರ ಆಯ್ಕೆ ಚುನಾವಣೆ ಹಿಂದಿನ ರಾತ್ರಿ ನಡೆದ ಕೋರ್‌ ಕಮಿಟಿ ಸಭೆಯಲ್ಲೂ ಸ್ಪಷ್ಟ ತೀರ್ಮಾನಕ್ಕೆ ಸಾಧ್ಯವಾಗದೆ ನಾಯಕರು ಚುನಾವಣೆಯ ದಿನ ಬೆಳಗ್ಗೆ ಮತ್ತೆ ಸಭೆ ಸೇರಿ ಅಂತಿಮ ತೀರ್ಮಾನ ಕೈಗೊಳ್ಳಬೇಕಾಗಿತ್ತು. ತೀವ್ರ ಪೈಪೋಟಿ ನಡುವೆ ಮಹಾಪೌರರ ಗೌನ್‌ ಧರಿಸುವ ಅದೃಷ್ಟ ಈರೇಶ ಅಂಚಟಗೇರಿ ಅವರಿಗೆ ಒಲಿದಿತ್ತು. ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಮಾ ಮುಕುಂದ ಅವರಿಗೆ ಉಪ ಮಹಾಪೌರ ಸ್ಥಾನ ಲಭಿಸಿತ್ತು.

ಸ್ಥಾಯಿ ಸಮಿತಿಗಳಿಗೆ ಆಯ್ಕೆ ವಿಚಾರದಲ್ಲೂ ಬಿಜೆಪಿಯಲ್ಲಿನ ವಿದ್ಯಮಾನ ಹಿಂದಿಗಿಂತ ಭಿನ್ನವಾಗಿರಲಿಲ್ಲ. ಪಕ್ಷದ ಶಾಸಕರು ತಮ್ಮದೇ ಬೆಂಬಲಿ ಪಾಲಿಕೆ ಸದಸ್ಯರಿಗೆ ಪಟ್ಟ ಕಟ್ಟುವ ಪೈಪೋಟಿಗಿಳಿದಿದ್ದರು ಎನ್ನಲಾಗುತ್ತಿದೆ. ಪಾಲಿಕೆಯ 4 ಸ್ಥಾಯಿ ಸಮಿತಿಗಳಲ್ಲಿ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಪೈಪೋಟಿ ಹೆಚ್ಚಿತ್ತಲ್ಲದೆ, ಕೊನೆ ಗಳಿಗೆವರೆಗೂ ಬಿಜೆಪಿ ಮುಖಂಡರು ಸಭೆ ನಡೆಸುವ, ಬೆವರಿಳಿಸುವ ಕಾರ್ಯ ಮಾಡಬೇಕಾಗಿ ಬಂದಿತು. ಅದು ಎಷ್ಟರ ಮಟ್ಟಿಗೆ ಎಂದರೆ ಸ್ಥಾಯಿ ಸಮಿತಿಗಳ ಸದಸ್ಯರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಗೆ ಇನ್ನು 10 ನಿಮಿಷ ಇದೆ ಎನ್ನುವಾಗಲೇ ಕೆಲ ತೀರ್ಮಾನ ಕೈಗೊಂಡು ನಾಮಪತ್ರ ಸಲ್ಲಿಕೆ ಮಾಡಿಸಬೇಕಾಗಿ ಬಂದಿತು.

ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಧಾರವಾಡದ ವಿಜಯಾನಂದ ಶೆಟ್ಟಿ ಹಾಗೂ ಹುಬ್ಬಳ್ಳಿಯ ಮಲ್ಲಿಕಾರ್ಜುನ ಗುಂಡೂರ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಧಾರವಾಡಕ್ಕೆ ಮಹಾಪೌರ ಸ್ಥಾನ ನೀಡಿದ್ದರಿಂದ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಹುಬ್ಬಳ್ಳಿಗೆ ನೀಡಬೇಕು ಎಂಬ ಒತ್ತಡ ಅನೇಕರದ್ದಾಗಿತ್ತು. ಮಲ್ಲಿಕಾರ್ಜುನ ಗುಂಡೂರು ಅವಕಾಶ ಪಡೆಯಲು ಸಾಕಷ್ಟು ಯತ್ನಿಸಿದ್ದರು.

ಮಹಾಪೌರ ಕಚೇರಿ-ಉಪಮಹಾಪೌರರ ಕಚೇರಿಯಲ್ಲಿ ನಡೆದ ಸಭೆಗಳಲ್ಲಿ ಬಿಜೆಪಿ ಮುಖಂಡರು, ಮಹಾಪೌರ, ಉಪ ಮಹಾಪೌರ, ಸಭಾನಾಯಕ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಹಾಗೂ ಮುಖಂಡರು ಆ ಕಡೆ ಒಮ್ಮೆ, ಈ ಕಡೆ ಒಮ್ಮೆ ಎಂದು ಓಡಾಡುತ್ತಿದ್ದರು. ಗುಸು ಗುಸು ಮಾತಿಗಿಳಿದಿದ್ದರು. ಅಂತಿಮವಾಗಿ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಮಲ್ಲಿಕಾರ್ಜುನ ಗುಂಡೂರು ಹಾಗೂ ವಿಜಯಾನಂದ ಶೆಟ್ಟಿ ಅವರಲ್ಲಿ ವಿಜಯಾನಂದ ಶೆಟ್ಟಿ ಅವರನ್ನೇ ಅಂತಿಮಗೊಳಿಸಲಾಗಿತ್ತು.

ಮಹಾಪೌರ ಸ್ಥಾನ ಧಾರವಾಡಕ್ಕೆ ನೀಡಿದ್ದರೂ ಅವರು ಪ್ರತಿನಿಧಿಸುವ ವಾರ್ಡ್‌ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತಿದ್ದು, ಉಪ ಮಹಾಪೌರ ಸ್ಥಾನ, ಪಾಲಿಕೆ ಸಭಾನಾಯಕ ಸ್ಥಾನ ಪಡೆದ ಸದಸ್ಯರ ವಾರ್ಡ್‌ಗಳು ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಹುಡಾ ಅಧ್ಯಕ್ಷರು ಸಹ ಇದೇ ಕ್ಷೇತ್ರ ವ್ಯಾಪ್ತಿಯವರಾಗಿದ್ದಾರೆ. ಆದರೆ, ಹು-ಧಾ ಪಶ್ಚಿಮ ಕ್ಷೇತ್ರ ಹಾಗೂ ಪೂರ್ವ ಕ್ಷೇತ್ರಗಳಿಗೆ ಆದ್ಯತೆ ದೊರೆತಿಲ್ಲ ಎಂಬ ಕೊರಗು ನೀಗಿಸುವ ನಿಟ್ಟಿನಲ್ಲಿ ಪಾಲಿಕೆಯಲ್ಲಿ ಎರಡು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳನ್ನು ಈ ಎರಡು ಕ್ಷೇತ್ರಗಳಿಗೆ ನೀಡಲು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿವು ಮೆಣಸಿನಕಾಯಿ ಅವರಿಗೆ ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ದೊರೆಯುವುದು ಬಹುತೇಕ ಖಚಿತವಾಗಿದ್ದು, ತೀವ್ರ ಪೈಪೋಟಿಗೆ ಸಿಲುಕಿದ್ದ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಜಯಾನಂದ ಶೆಟ್ಟಿ ಅವರಿಗೆ ದೊರೆಯುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.

ಕೈನಲ್ಲೂ ಪೈಪೋಟಿ ಮಹಾನಗರ ಪಾಲಿಕೆಯಲ್ಲಿ ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್‌ನಲ್ಲೂ ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕಾಗಿ ಪೈಪೋಟಿ ತೀವ್ರಗೊಂಡಿತ್ತು. ಬೆಳಗ್ಗೆ 8-9 ಗಂಟೆಯಿಂದಲೇ ಆರಂಭವಾದ ಚರ್ಚೆ ನಾಮಪತ್ರ ಸಲ್ಲಿಕೆಗೆ 10 ನಿಮಿಷ ಇದೆ ಎನ್ನುವವರೆಗೂ ಯಾರನ್ನು ಸೇರಿಸಬೇಕು ಎಂಬ ಗೊಂದಲ, ಪೈಪೋಟಿ ತೀವ್ರವಾಗಿತ್ತು. ನಾಲ್ಕು ಸ್ಥಾಯಿ ಸಮಿತಿಗಳಲ್ಲಿ ಪ್ರತಿ ಸಮಿತಿಗೆ ಕಾಂಗ್ರೆಸ್‌ನಿಂದ ಮೂವರು ಸದಸ್ಯರಿಗೆ ಅವಕಾಶ ಇತ್ತು. ಒಟ್ಟು 33 ಸದಸ್ಯ ಬಲದ ಕಾಂಗ್ರೆಸ್‌ನಲ್ಲಿ ಒಟ್ಟು 12 ಸದಸ್ಯರಿಗೆ ಅವಕಾಶ ದೊರೆತಿದ್ದು, ಅದಕ್ಕಾಗಿಯೇ ಅನೇಕರು ಪೈಪೋಟಿ, ತಮ್ಮದೇ ಒತ್ತಡಕ್ಕೆ ಮುಂದಾಗಿದ್ದರು ಎನ್ನಲಾಗಿದೆ.

-ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

KLE Technological University: Awarded Honorary Doctorate to Murugesh Nirani

KLE Technological University: ಮುರುಗೇಶ್‌ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.