ಉದ್ಯಮದಲ್ಲೂ ಸೋಂಕುಗಳೆತ ಸುರಂಗ
ಪ್ರವೇಶ ದ್ವಾರ-ಲೋಡಿಂಗ್-ಅನ್‌ಲೋಡಿಂಗ್ ಸ್ಥಳದಲ್ಲಿ ಅಳವಡಿಕೆ
Team Udayavani, Apr 13, 2020, 11:29 AM IST
ಹುಬ್ಬಳ್ಳಿ: ರಾಯಾಪುರದ ಹೊಸಮನಿ ಇಂಡಸ್ಟ್ರೀಸ್ ಕಂಪನಿಯ ಪ್ರವೇಶ ದ್ವಾರ ಮತ್ತು ಲೋಡಿಂಗ್/ಅನ್‌ಲೋಡಿಂಗ್ ಸ್ಥಳದಲ್ಲಿ ನಿರ್ಮಿಸಲಾದ ಸೋಂಕುಗಳೆತ ಸುರಂಗ
ಹುಬ್ಬಳ್ಳಿ: ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಉದ್ಯಮಿಯೊಬ್ಬರು ಸ್ವಂತ ಖರ್ಚಿನಲ್ಲಿ ಎರಡು ಸೋಂಕು ಕಳೆಯುವ ಸುರಂಗಗಳನ್ನು ಅಳವಡಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಧಾರವಾಡ ಸಮೀಪದ ರಾಯಪುರ ವಸಾಹತು ಪ್ರದೇಶದಲ್ಲಿರುವ ಚನ್ನು ಹೊಸಮನಿ ಮಾಲಿಕತ್ವದ ಹೊಸಮನಿ ಇಂಡಸ್ಟ್ರೀಸ್ ಕಂಪೆನಿಯ ಪ್ರವೇಶ ದ್ವಾರ ಮತ್ತು ಲೋಡಿಂಗ್/ಅನ್‌ಲೋಡಿಂಗ್ ಮಾಡುವ ಸ್ಥಳದಲ್ಲಿ ಸೋಂಕುಗಳೆತ ಸುರಂಗ (ಡಿಸ್‌ಇನ್ಫೆಕ್ಷನ್ ಟನ್ನೆಲ್) ನಿರ್ಮಿಸಿದ್ದಾರೆ. ಅಕ್ಕಿ, ಅರಿಷಿಣ ಪುಡಿ, ಖಾರದ ಪುಡಿ, ಸೋಯಾ ಚಂಗ್ಸ್, ಚಹಾಪುಡಿಯಂತಹ ಅಗತ್ಯ ದಿನಸಿ ಸಾಮಗ್ರಿಗಳ ಪ್ಯಾಕಿಂಗ್ ಇಂಡಸ್ಟ್ರೀಸ್ ಆಗಿರುವ ಈ ಕಂಪನಿಯಲ್ಲಿ ತಲಾ 60 ಸಾವಿರ ರೂ. ವೆಚ್ಚದಲ್ಲಿ ಎರಡು ಸೋಂಕುಗಳೆತ ಸುರಂಗಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಹೈಪ್ರಶರ್‌ವುಳ್ಳ ಫಾಗರ್ಸ್, 1ಅಶ್ವಶಕ್ತಿಯ ಪಂಪ್ ಅಳವಡಿಸಲಾಗಿದೆ. ನಿರಂತರ ನೀರು ಸರಬರಾಜಿಗೋಸ್ಕರ ಸುರಂಗದ ಪಕ್ಕದಲ್ಲೇ 1ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.
ಸುರಂಗದ 4 ಅಡಿ ಅಂತರದಲ್ಲಿ ವ್ಯಕ್ತಿಗಳು ಬಂದಾಗ ಸೆನ್ಸಾರ್ ಮೂಲಕ ಕಾರ್ಯ ಆರಂಭವಾಗುತ್ತದೆ. ಸುರಂಗದೊಳಗೆ ಪ್ರವೇಶಿಸುತ್ತಿದ್ದಂತೆ ಶೇ.1ರ ಸೋಡಿಯಂ ಹೈಪೋಕ್ಲೋರೈಟ್ ಮಿಶ್ರಿತ ದ್ರಾವಣ ಸಿಂಪಡಣೆಯಾಗುತ್ತದೆ. ಕಂಪೆನಿಯಲ್ಲಿ ಸುಮಾರು 110 ಜನ ಸಿಬ್ಬಂದಿ ಇದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಾಗೂ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡಬಾರದೆಂಬ ಉದ್ದೇಶದಿಂದ ಅವಶ್ಯವುಳ್ಳ ಶೇ.40 ಕೆಲಸಗಾರರನ್ನು ಮಾತ್ರ ಬಳಸುತ್ತಿದ್ದು, ಅವರೆಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಕಾರ್ಮಿಕರು, ಸಿಬ್ಬಂದಿ ಹಿತ ಹಾಗೂ ಪ್ಯಾಕಿಂಗ್‌ನಲ್ಲಿ ಯಾವುದೇ ಲೋಪ ಆಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಸೋಂಕು ನಿವಾರಣೆಗೆ ಸಹಕಾರಿ ಆಗಲಿದೆ.
ನಮ್ಮ ಫ್ಯಾಕ್ಟರಿಯಲ್ಲಿ ಎಲ್ಲ ಬಗೆಯ ಅಕ್ಕಿ ಸೇರಿದಂತೆ ಅಗತ್ಯ ದಿನಸಿ ವಸ್ತುಗಳನ್ನು ಸಂಸ್ಕರಣೆ ಮಾಡಿ ಪ್ಯಾಕಿಂಗ್ ಮಾಡಲಾಗುತ್ತಿದೆ. ಕೊರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಕಂಪೆನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ-ಕಾರ್ಮಿಕರ ಆರೋಗ್ಯ ಹಿತದೃಷ್ಟಿಯಿಂದ ಸೋಂಕುಗಳೆತ ಸುರಂಗ ನಿರ್ಮಿಸಲಾಗಿದೆ.
ಚನ್ನು ಹೊಸಮನಿ,
ಹೊಸಮನಿ ಇಂಡಸ್ಟ್ರೀಸ್ ಕಂಪನಿ ಮಾಲಕ
ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.