ಹುಬ್ಬಳ್ಳಿ: “ವಿವಿ ಮಾಡುವಷ್ಟು ಕೆಲಸ ಡಾ|ಹಳಕಟ್ಟಿಯೊಬ್ಬರೇ ಮಾಡಿದ್ದಾರೆ’
ಸಮಾಜ ಪರಿವರ್ತನೆಗೆ ವಚನಗಳ ಮೂಲಕ ಮಾರ್ಗದರ್ಶನ ಮಾಡಿದ್ದಾರೆ
Team Udayavani, Jul 6, 2023, 10:28 AM IST
ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆ ಮುರಾರ್ಜಿ ನಗರ ಬಸವ ಕೇಂದ್ರದ ವಿ.ಎಂ. ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ಖ್ಯಾತ ಸಂಶೋಧಕ, ವಚನ ಸಾಹಿತ್ಯದ ಪಿತಾಮಹ ಡಾ|ಫಕೀರಪ್ಪ ಗುರುಬಸಪ್ಪ ಹಳಕಟ್ಟಿ (ಡಾ. ಫ.ಗು. ಹಳಕಟ್ಟಿ) ಮತ್ತು ಶರಣ ಹಡಪದ ಅಪ್ಪಣ್ಣನವರ ಜಯಂತಿ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಮತ್ತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗೋಕುಲ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಫ್.ಬಿ. ಸೊರಟೂರ ಮಾತನಾಡಿ, ಡಾ| ಫ.ಗು. ಹಳಕಟ್ಟಿ ಅವರು
ವಚನ ಸಾಹಿತ್ಯ ಸಂರಕ್ಷಣೆಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದರು. ಜೀವನದಲ್ಲಿ ಎಷ್ಟೇ ಕಷ್ಟ, ನೋವು ಅನುಭವಿಸಿದರೂ ವಚನ ಸಂರಕ್ಷಣೆ ಕಾರ್ಯ ಬಿಡಲಿಲ್ಲ. ವಿಶ್ವವಿದ್ಯಾಲಯ ಮಾಡುವಷ್ಟು ಕೆಲಸವನ್ನು ಡಾ|ಫ.ಗು. ಹಳಕಟ್ಟಿ ಅವರೊಬ್ಬರೇ ಮಾಡಿದ್ದಾರೆ ಎಂದರು.
ಧಾರವಾಡ ವಿದ್ಯಾರಣ್ಯ ಹೈಸ್ಕೂಲ್ ಶಿಕ್ಷಕ ಸಂಗಮೇಶ ಹಡಪದ ಮಾತನಾಡಿ, ಶರಣ ಹಡಪದ ಅಪ್ಪಣ್ಣನವರು ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಅಪಾರ ಸೇವೆ ಮಾಡಿದ್ದಾರೆ. ಅವರ ವಚನಗಳಲ್ಲಿ ಅಲಕ್ಷಿತ ಸಮಾಜಕ್ಕೆ ಆಗುವ
ಅನ್ಯಾಯವನ್ನು ನೇರ, ನಿಷ್ಟುರ ಮಾತುಗಳಲ್ಲಿ ಖಂಡಿಸಿದ್ದಾರೆ. ಸಮಾಜ ಪರಿವರ್ತನೆಗೆ ವಚನಗಳ ಮೂಲಕ ಮಾರ್ಗದರ್ಶನ ಮಾಡಿದ್ದಾರೆ ಎಂದರು.
ಎಸ್.ವಿ. ಕೊಟಗಿ, ಶಿವಯೋಗಿ ಮುರ್ಖಂಡೆ, ಎಂ.ಬಿ. ಕಟ್ಟಿ, ಮುರುಗೇಶ ಗಂಗಲ್, ಮೃತ್ಯುಂಜಯ ಮರೋಳ, ನಿಜಗುಣಿ ಹಳ್ಳಾಳ,
ಉಮಾ ಹುಲಿಕಂತಿಮಠ, ನೀಲಗಂಗಾ ಹಳ್ಳಾಳ, ಮಧು ಕಂಠಿ, ಮಾಲಾ ರಮೇಶ, ನೇಹಾ ಕಂಠಿ, ಚೈತ್ರಾ, ಶಾರದಾ ಮುರ್ಖಂಡೆ, ಐ.ಬಿ. ಪಾಟೀಲ, ಪ್ರಕಾಶ ಪಾಟೀಲ, ಪ್ರಭು ಶೆಟ್ಟರ, ವಿಜಯಲಕ್ಷ್ಮೀ ಗಂಗಲ್, ಎಂ.ಪಿ. ಕುಂಬಾರ, ಈರಣ್ಣ ಏಕಬೋಟೆ, ಎಸ್.ಯು. ಕರೇಗೌಡರ, ಈಶ್ವರಿ ಬೆಸ್ತ, ಕಲ್ಲಪ್ಪ, ಗಿರಿಜಾ ಹಳ್ಳಾಳ, ಜಯಶ್ರೀ ಹಿರೇಮಠ ಮೊದಲಾದವರಿದ್ದರು.
ಬಸವ ಕೇಂದ್ರದ ಅಧ್ಯಕ್ಷ ಪ್ರೊ|ಜಿ.ಬಿ. ಹಳ್ಳಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ|ಪ್ರಕಾಶ ಮುನ್ನೋಳಿ ಸ್ವಾಗತಿಸಿದರು. ಬಸವ ಪರಿಸರ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಡಾ|ಸುರೇಶ ಹೊರಕೇರಿ ನಿರೂಪಿಸಿದರು. ಪ್ರಭು ಅಂಗಡಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.