ಹುಬ್ಬಳ್ಳಿ: ಹಸಿದವರ ಅನ್ನ ಜೋಳಿಗೆ ಉದ್ಘಾಟನೆ

ಕರಿಯಪ್ಪ ಅವರು ಟ್ರಸ್ಟ್‌ ಮಾಡಿಕೊಂಡು ಅತ್ಯುತ್ತಮ ಕಾರ್ಯ ಮಾಡುತ್ತಿದ್ದಾರೆ.

Team Udayavani, Jul 10, 2023, 6:13 PM IST

ಹುಬ್ಬಳ್ಳಿ: ಹಸಿದವರ ಅನ್ನ ಜೋಳಿಗೆ ಉದ್ಘಾಟನೆ

ಹುಬ್ಬಳ್ಳಿ: ಹಸಿವಿನಿಂದ ನರಳುತ್ತಿರುವವರಿಗೆ ಕರಿಯಪ್ಪ ಶಿರಹಟ್ಟಿ ತನ್ನ ಸಂಸ್ಥೆ ಮೂಲಕ ಅನ್ನ ನೀಡುತ್ತಿರುವುದು ಸಣ್ಣ ಕೆಲಸವಲ್ಲ. ದುಡಿಮೆ ಒಂದಿಷ್ಟು ಪಾಲನ್ನು ನಿರ್ಗತಿಕರ ಹಸಿವು ನೀಗಿಸಲು ಖರ್ಚು ಮಾಡುತ್ತಿರುವುದು ಅವರ ದೊಡ್ಡ ಗುಣ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.

ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆ ವತಿಯಿಂದ “ಹಸಿದವರ ಅನ್ನ ಜೋಳಿಗೆ’ ಉದ್ಘಾಟನೆ ಹಾಗೂ ಪ್ರಚಾರಾರ್ಥಕ್ಕಾಗಿ ನಿರ್ಮಿಸಿರುವ ವೆಬ್‌ ಸೈಟ್‌ ಹಾಗೂ ಪ್ರಚಾರದ ವಾಹನಗಳಿಗೆ ಚಾಲನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜದ ಸೇವೆ ಮಾಡುವ ಅರ್ಹತೆ ಹಾಗೂ ಸಾಮರ್ಥ್ಯ ಸಾಕಷ್ಟು ಜನರಿಗೆ ಇರುತ್ತದೆ. ಆದರೆ ಸೇವೆ ಮಾಡುವ ಅವಕಾಶ ಸಿಗುವುದು ಕೆಲವರಿಗೆ ಮಾತ್ರ ಅಂತಹವರ ಸಾಲಿನಲ್ಲಿ ಕರಿಯಪ್ಪ ದಂಪತಿ ನಿಲ್ಲುತ್ತಾರೆ. ಇಂತಹ ಕಾರ್ಯ ಶ್ಲಾಘನೀಯಕ್ಕಿಂತ ದೊಡ್ಡದು. ಅವರ ಬಳಿ ಲಕ್ಷಾಂತರ ರೂಪಾಯಿಗಳಿಲ್ಲ. ಸಾಧಾರಣ ವ್ಯಕ್ತಿಯಾದರೂ ಅಸಾಧಾರಣ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು. ಸ್ವಾರ್ಥ ಬಿಟ್ಟು ಸೇವೆ ಮಾಡುವ ಅವರ ಕಾರ್ಯಕ್ಕೆ ಮಹಾನಗರ ಪಾಲಿಕೆ, ಶಾಸಕರು, ಸಮಾಜ ಗುರುತಿಸಿ ಕೈಲಾಗುವ ಸಹಾಯ ಮಾಡಬೇಕು ಎಂದರು. ಪಾಲಿಕೆ ಮೇಯರ್‌ ವೀಣಾ ಬರದ್ವಾಡ ಅವರು ಹಸಿದವರ ಅನ್ನ ಜೋಳಿಗೆಗೆ ಚಾಲನೆ ನೀಡಿ, ಕರಿಯಪ್ಪ ಅವರು ಟ್ರಸ್ಟ್‌ ಮಾಡಿಕೊಂಡು ಅತ್ಯುತ್ತಮ ಕಾರ್ಯ ಮಾಡುತ್ತಿದ್ದಾರೆ.

ಪ್ರಜ್ಞಾವಂತರು ಇಂತಹ ಕಾರ್ಯಕ್ಕೆ ಕೈ ಜೋಡಿಸಬೇಕಿದೆ. ಪಾಲಿಕೆಯಿಂದ ಸಹಕಾರ ನೀಡಲಾಗುವುದು ಎಂದರು. ಪ್ರಚಾರದ ವೆಬ್‌ಸೈಟ್‌ ಉದ್ಘಾಟಿಸಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಪೌರ ಕಾರ್ಮಿಕನ ಮಗನಾಗಿರುವ ಕರಿಯಪ್ಪ ಇಂತಹ
ಮಹತ್ವದ ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಮೆಚ್ಚುವಂತಹ ಕಾರ್ಯ. ದೊಡ್ಡ ದೊಡ್ಡ ಕಾರ್ಯಕ್ರಮದಲ್ಲಿ ಅನ್ನವನ್ನು
ಕೆಡಿಸಲಾಗುತ್ತಿದೆ. ದಿನನಿತ್ಯ ಎಲ್ಲ ಕಡೆ ಇಂತಹ ಘಟನೆಯನ್ನು ಕಾಣುತ್ತೇವೆ. ಈ ರೀತಿ ಬೇಕಾಬಿಟ್ಟಿ ಅನ್ನವನ್ನು ಕೆಡಿಸದೆ ಹಸಿದವರಿಗೆ ಮುಟ್ಟಿಸುವ ಕಾರ್ಯ ಮೆಚ್ಚುವಂತದ್ದು. ಸಮಾಜ ಕೂಡ ಅವರೊಂದಿಗೆ ನಿಲ್ಲಬೇಕು. ಕರಿಯಪ್ಪ ಅವರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಮಾಜಿ ಸಂಸದ ಐ.ಜಿ.ಸನದಿ, ಡಾ| ಆನಂದ ಪಾಂಡುರಂಗಿ, ದಾನಿಗಳಾದ ಚಂದ್ರಶೇಖರ ಅಮಿನಗಡ, ನಾಗರತ್ನ ಅಮ್ಮಿನಗಡ, ಚನ್ನಬಸಪ್ಪ ಧಾರವಾಡಶೆಟ್ಟರ, ಟ್ರಸ್ಟ್‌ನ ಕರಿಯಪ್ಪ ಶಿರಹಟ್ಟಿ, ವೆಂಕಟೇಶ ಇದ್ದರು.

ಟಾಪ್ ನ್ಯೂಸ್

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

KLE Technological University: Awarded Honorary Doctorate to Murugesh Nirani

KLE Technological University: ಮುರುಗೇಶ್‌ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.