ಅರ್ಧಕ್ಕೆ ನಿಂತ ಕಟ್ಟಡಗಳ ಕಾಮಗಾರಿ
ಕೋವಿಡ್ ಕೊಳ್ಳಿ | ಕೃಷಿಯತ್ತ ಮುಖ ಮಾಡಿದ ಹಳ್ಳಿಗಳ ಜನರು | ಕುಟುಂಬಗಳು ಸಂಕಷ್ಟದಲ್ಲಿ
Team Udayavani, Apr 12, 2020, 7:06 PM IST
ಹುಬ್ಬಳ್ಳಿ: ಲಾಕ್‌ಡೌನ್ ಬಿಸಿ ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸ್ತಬ್ಧಗೊಳಿಸಿದೆ. ಇದೇ ಕಾಮಗಾರಿಗಳನ್ನು ನಂಬಿಕೊಂಡಿದ್ದ ಸಾವಿರಾರು ದಿನಗೂಲಿ ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿದೆ.
ನಗರದಲ್ಲಿ ಮನೆ, ಅಪಾರ್ಟ್‌ಮೆಂಟ್, ಣಿಜ್ಯ ಮಳಿಗೆ ಇನ್ನಿತರ ಕಟ್ಟಡ ಕಾಮಗಾರಿಗಳಿಗೆ ನಿತ್ಯವೂ ಸಾವಿರಾರು ದಿನಗೂಲಿ ಕಾರ್ಮಿಕರು ಬಳಕೆಯಾಗುತ್ತಿದ್ದರು. ಬೇರೆ ಜಿಲ್ಲೆಗಳಿಂದ ವಲಸೆ ಬಂದವರು, ಜಿಲ್ಲೆಯ ಸುತ್ತಮುತ್ತಲ ಗ್ರಾಮಗಳ ಜನರಿಗೂ ಕಟ್ಟಡ ಕಾಮಗಾರಿ ಮಹತ್ವದ ಆಸರೆಯಾಗಿತ್ತು. ಕೊರೊನಾದಿಂದ ಈ ಎಲ್ಲ ಕಾಮಗಾರಿಗಳು ಬಹುತೇಕ ಸ್ತಬ್ಧಗೊಂಡಿದೆ. ಇದು ಕೇವಲ ಕಾರ್ಮಿಕರಿಗಷ್ಟೇ ಅಲ್ಲದೆ, ಕಟ್ಟಡಕ್ಕೆ ಪೂರಕವಾದ ಹಲವು ಉದ್ಯಮ-ವ್ಯಾಪಾರಗಳ ಮೇಲೂ ಪರಿಣಾಮ ಬೀರಿದೆ. ಕಟ್ಟಡ ಕಾಮಗಾರಿಗೆ ಬಳಕೆಯಾಗುವ ಸಿಮೆಂಟ್, ಇಟ್ಟಂಗಿ, ಮರಳು, ಜಲ್ಲಿ, ಕಬ್ಬಿಣ ಎಲ್ಲ ವಹಿವಾಟು ಬಂದ್ ಆಗಿದೆ. ಅದೆಷ್ಟೋ ಕಟ್ಟಡಗಳ ಕಾಮಗಾರಿ ಅರ್ಧಕ್ಕೆ ನಿಲ್ಲುವಂತಾಗಿದೆ.
ಉದ್ಯೋಗ ಬಂದ್: ಪ್ರತಿದಿನ ಸಾವಿರಾರು ಜನರು ಉದ್ಯೋಗ ಅರಸಿ ವಿವಿಧೆಯಿಂದ ನಗರಕ್ಕೆ ಆಗಮಿಸುತ್ತಿದ್ದರು. ಕೆಲವರು ಕೆಲಸದ ಕಾರಣಕ್ಕೆ ಇಲ್ಲಿಗೆ ವಲಸೆ ಬಂದು ನೆಲೆಸಿದ್ದರು. ಇದೀಗ ಕಟ್ಟಡ ಕಾಮಗಾರಿಯೇ ಇಲ್ಲವಾಗಿ ಸಾವಿರಾರು ಕಾರ್ಮಿಕರ ಆದಾಯಕ್ಕೆ ಕಲ್ಲು ಬಿದ್ದಂತಾಗಿದೆ. ಜತೆಗೆ ಹೊಟೇಲ್, ಕಿರಾಣಿ, ಬಟ್ಟೆ ಅಂಗಡಿ, ಔಷಧಿ ಅಂಗಡಿ, ಎಪಿಎಂಸಿ, ಕೋರಿಯರ್ ಇನ್ನಿತರ ಕಡೆಗಳಲ್ಲಿ ಉದ್ಯೋಗದಲ್ಲಿದ್ದ ಜನರಿಗೂ ಇದೀಗ ಕೆಲಸವಿಲ್ಲದ ದಿನಗಳು ಕಾಡತೊಡಗಿವೆ.
ಬಿಕೋ ಎನ್ನುತ್ತಿವೆ ರಸ್ತೆ-ವೃತ್ತಗಳು: ನಗರದ ಎಲ್ಲ ರಸ್ತೆಗಳು ಹಾಗೂ ಪ್ರಮುಖ ವೃತ್ತಗಳು ಕೊರೊನಾ ಕಾರಣದಿಂದ ಜನರಿಲ್ಲದೆ ಬಿಕೋ ಎನ್ನುತ್ತಿವೆ. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದು ರೈಲ್ವೆ ನಿಲ್ದಾಣ ಹಾಗೂ ರೈಲ್ವೆ ಸ್ಟೇಶನ್ ರಸ್ತೆ, ಹಳೇ ಬಸ್ ನಿಲ್ದಾಣ, ಕೊಪ್ಪಿಕರ ರಸ್ತೆ, ದುರ್ಗದ ಬಯಲು, ಹಳೇ ಹುಬ್ಬಳ್ಳಿ ಭಾಗ ಎಲ್ಲವೂ ನಿರ್ಜನ ಪ್ರದೇಶಗಳಂತಾಗಿವೆ. ಬಸ್ -ರೈಲು ಸಂಚಾರವಿಲ್ಲದೆ ನಗರಗಳಿಗೆ ಬರಲು ಸಾಧ್ಯವಾಗದೆ, ಹುಬ್ಬಳ್ಳಿ ಸುತ್ತಮುತ್ತಲಿನ ಹಳ್ಳಿಗಳ ಜನರು ಕೃಷಿಯತ್ತ ಮುಖ ಮಾಡಿದ್ದಾರೆ.
ಕೊರೊನಾ ನಗರದಲ್ಲಿ ನಡೆಯಬೇಕಿದ್ದ ಮದುವೆ, ಗೃಹ ಪ್ರವೇಶ ಸೇರಿದಂತೆ ಎಲ್ಲ ಶುಭ ಕಾರ್ಯಗಳು ಮುಂದೂಡುವಂತೆ ಮಾಡಿದೆ. ಬಸವ ಜಯಂತಿಯಂದು ಗೃಹ ಪ್ರವೇಶ ಮಾಡಬೇಕೆಂದುಕೊಂಡಿದ್ದೆವು. ಆದರೆ ಕೊರೊನಾದಿಂದ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇನ್ನು ಕೆಲಸ ಸಂಪೂರ್ಣವಾಗಲು ಸಾಧ್ಯವಿಲ್ಲ.
ಭಾರತಿ, ಎಚ್. ಮನೆಯ ಮಾಲಿಕರು
ನಗರದಲ್ಲಿ ಸಾವಿರಾರು ಕಟ್ಟಡಗಳ ಕಾಮಗಾರಿಗಳು ಅರ್ಧಕ್ಕೆ ನಿಂತು ಬಿಟ್ಟಿವೆ. ಲಾಕ್‌ಡೌನ್‌ನಿಂದ ಕಟ್ಟಡ ಸಾಮಗ್ರಿಗಳು ಸಿಗುತ್ತಿಲ್ಲ. ಕಾರ್ಮಿಕರು ಬರುತ್ತಿಲ್ಲ. ಇದರಿಂದ ಅನೇಕ ಕಟ್ಟಡಗಳ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸುವಂತಾಗಿದೆ.
ರಾಜು ಕೇಶಣ್ಣವರ, ಇಂಜನಿಯರ್
ನಗರದಲ್ಲಿ ಎಲ್ಲ ಕೆಲಸಗಳು ಅರ್ಧಕ್ಕೆ ನಿಲ್ಲಿಸಲಾಗಿದೆ. ಲಾಕ್ ಡೌನ್‌ನಿಂದ ಕಾರ್ಮಿಕರು ಬರುತ್ತಿಲ್ಲ, ಕಟ್ಟಡ ಮಾಲಿಕರು ಸಹ ಆಗಮಿಸುತ್ತಿಲ್ಲ. ಇದರಿಂದ ಕಟ್ಟಡ ಕಾಮಗಾರಿಗಳು ಹಾಗೇ ಉಳಿದಿದ್ದು, ಕೊರೊನಾ ವೈರಸ್ ಎಲ್ಲರ ನೆಮ್ಮದಿ ಹಾಳು ಮಾಡಿದೆ.
ಭೀಮಸಿ, ಕಟ್ಟಡ ನಿರ್ಮಾಣ ಮೇಸ್ತ್ರಿ
ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Dharwad: ಕಟಾವಿವೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ… ಕಂಗಾಲಾದ ರೈತರು
MUDA Case: ಸಿಎಂ ಸಿದ್ದು ಮುಡಾ ಹಗರಣ… ಜ.27ಕ್ಕೆ ಮುಂದೂಡಿದ ಧಾರವಾಡ ಹೈಕೋರ್ಟ್
Hubballi–Dharwad; 45 ಅಪರಾಧಿಗಳು ಬೇರೆ ಬೇರೆ ಜಿಲ್ಲೆಗಳಿಗೆ 6 ತಿಂಗಳ ಕಾಲ ಗಡಿಪಾರು
ಇಂದಿನಿಂದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ
MUST WATCH
ಹೊಸ ಸೇರ್ಪಡೆ
Ranji Trophy: ಭಾರತ ಕ್ರಿಕೆಟ್ ಘಟಾನುಘಟಿಗಳೆಲ್ಲಾ ರಣಜಿ ಕಣಕ್ಕೆ?
Bigg Boss: ಟಾಸ್ಕ್ ಮೂಲಕ ನಡೆಯಿತು ಮಿಡ್ ವೀಕ್ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್
Gundlupete: ಮಾರಾಟದ ಉದ್ದೇಶದಿಂದ ಗಾಂಜಾ ಗಿಡ ಬೆಳೆದವನ ಬಂಧನ
Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ
Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.