ಹುಬ್ಬಳ್ಳಿ: ಕಸ ಎಸೆಯುವವರ ವಿರುದ್ಧ ದಂಡಾಸ್ತ್ರಕ್ಕೆ ವಿಕ್ರಂ ತಂಡ

ಪ್ರತಿಯೊಂದು ವಲಯಕ್ಕೂ ಈ ವಿಕ್ರಂ ವಿಸ್ತರಿಸುವ ಉದ್ದೇಶವನ್ನು ಪಾಲಿಕೆ ಹೊಂದಿದೆ

Team Udayavani, Jun 7, 2023, 6:23 PM IST

ಹುಬ್ಬಳ್ಳಿ: ಕಸ ಎಸೆಯುವವರ ವಿರುದ್ಧ ದಂಡಾಸ್ತ್ರಕ್ಕೆ ವಿಕ್ರಂ ತಂಡ

ಹುಬ್ಬಳ್ಳಿ: ಮಹಾನಗರದ ಸ್ವಚ್ಛತೆ ಹಾಗೂ ಕಸ ನಿರ್ವಹಣೆಗೆ ಪಾಲಿಕೆ ಹಲವು ಕಸರತ್ತು ಮಾಡುತ್ತಿದೆ. ಈಗಾಗಲೇ ಜನರಲ್ಲಿ ಜಾಗೃತಿ ಮೂಡಿಸುವ ಹಂತದಿಂದ ಒಂದು ಹೆಜ್ಜೆ ಮುಂದೆ ಹೋಗಿ ದಂಡ ವಸೂಲಿಗೆ ಕಾಲಿಟ್ಟಿದೆ. ಇದಕ್ಕಾಗಿ ಪ್ರತ್ಯೇಕವಾಗಿ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಎರಡು ತಂಡಗಳನ್ನು ರಚಿಸಿದ್ದು, ಎಲ್ಲೆಂದರಲ್ಲಿ ಕಸ ಬೀಸಾಡಿದರೆ ಆ ಸ್ಥಳಕ್ಕೆ “ವಿಕ್ರಂ’ ಬರಲಿದೆ.

ಸ್ವಚ್ಛ ನಗರಕ್ಕಾಗಿ ಪಾಲಿಕೆ ಹಲವು ಯೋಜನೆ ಜಾರಿಗೆ ತಂದು ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದೆ. ಕಸ ಚೆಲ್ಲುವ ಸ್ಥಳಗಳನ್ನು ಸ್ವಚ್ಛ ಗೊಳಿಸಿ ಅಲ್ಲಿ ರಂಗೋಲಿ ಹಾಕಿ ಕಸ ಹಾಕದಂತೆ ಮನವಿ ಮಾಡಲಾಯಿತು. ಕೆಲವೊಂದು ಕಡೆ ರಂಗೋಲಿ ಹಾಕಿದರೂ ಪೌರ ಕಾರ್ಮಿಕರ ಕಾವಲು ಹಾಕಲಾಯಿತು. ಪುನರಾವರ್ತನೆಯಾಗುವ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ದಂಡ ಹಾಕಲಾಯಿತು. ಕಸ ಹಾಕಿದವರಿಂದಲೇ ಆ ಕಸ ಎತ್ತಿಸುವ ಪ್ರಯೋಗವೂ ನಡೆಯಿತು. ಇಂತಹ ಹಲವು ಕಸರತ್ತು ಮಾಡಿದರೂ ಪಾಲಿಕೆ ಅಧಿಕಾರಿಗಳು ನಿರೀಕ್ಷಿಸಿದ ಮಟ್ಟಿಗೆ ಫಲ ನೀಡಿಲ್ಲ. ಹೀಗಾಗಿ ಅನಿವಾರ್ಯವಾಗಿ ದಂಡವೇ ಅಂತಿಮ ಮದ್ದು ಎನ್ನುವ ಕಾರಣಕ್ಕೆ ತಂಡಗಳನ್ನು ರಚಿಸಲಾಗಿದೆ. ಪೊಲೀಸ್‌ ಗಸ್ತು ವಾಹನದಂತೆ ಈ ವಾಹನ ಕೆಲ ಪ್ರದೇಶಗಳಲ್ಲಿ ಸಂಚರಿಸಲಿದ್ದು, ಕಸ ಹಾಕುವವರ ಮೇಲೆ ನಿಗಾ ವಹಿಸಲಿದೆ. ಇದು ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿದೆ.

ಸ್ಥಳಕ್ಕೆ ವಿಕ್ರಂ ತಂಡ: ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳಿಗೆ ಹೊಸದಾಗಿ ಎರಡು ಬೊಲೆರೊ ವಾಹನಗಳನ್ನು ಖರೀದಿಸಿದ್ದು, ಇಷ್ಟರಲ್ಲೇ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ತಂಡಗಳು
ಮೊದಲೇ ಗುರುತಿಸಿದ ಪ್ರದೇಶಗಳಲ್ಲಿ ಗಸ್ತು ತಿರುಗಲಿದೆ. ವಾಹನಕ್ಕೆ ಜಿಪಿಎಸ್‌, ವಾಕಿಟಾಕಿ ಸೇರಿದಂತೆ ಪ್ರತಿಯೊಂದು ಸೌಲಭ್ಯ ಕಲ್ಪಿಸಲಾಗಿದೆ.

ಪ್ರತಿಯೊಂದು ತಂಡದಲ್ಲಿ ಓರ್ವ ಆರೋಗ್ಯ ನಿರೀಕ್ಷಕರು ಹಾಗೂ ಅವರೊಂದಿಗೆ ಒಂದಿಷ್ಟು ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಆಟೋ ಟಿಪ್ಪರ್‌ಗಳಿಗೆ ಕಸ ನೀಡದೆ ರಸ್ತೆ ಸೇರಿದಂತೆ ಬೇಕಾಬಿಟ್ಟಿಯಾಗಿ ಕಸ ಹಾಕುವವರನ್ನು ಗುರುತಿಸಿ ದಂಡ ವಿಧಿಸುವ ಕೆಲಸ ಈ ತಂಡ ಮಾಡಲಿದೆ. ಈಗಾಗಲೇ ಕೆಲವೊಂದು ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಹಾಕಲಾಗಿದೆ. ಅಂತಹ ಕಡೆಗಳಲ್ಲಿ ದೃಶ್ಯಗಳ ಆಧಾರದ ಮೇಲೆ ಕಸ ಹಾಕುವವರನ್ನು ಗುರುತಿಸಿ ದಂಡ ವಸೂಲಿ ಮಾಡಲಿದೆ. ಈಗಾಗಲೇ ಜಾಗೃತಿ, ಮನವಿ, ದಂಡ ಹಾಕಿದರೂ ಇಂದಿಗೂ ಕಸ ಚೆಲ್ಲುವ ಸ್ಥಳಗಳನ್ನು ಗುರುತಿಸಲಾಗಿದ್ದು, ಅಂತಹ ಸ್ಥಳಗಳ ಮೇಲೆ ಹೆಚ್ಚಿನ ನಿಗಾ ವಹಿಸಲಿದೆ. ಮೊದಲ ಹಂತವಾಗಿ ಮಾರುಕಟ್ಟೆ ಪ್ರದೇಶಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಇಲ್ಲಿನ ಸಾಧಕ-ಬಾಧಕ ಅಧ್ಯಯನ ನಡೆಸಿ ಪ್ರತಿಯೊಂದು ವಲಯಕ್ಕೂ ಈ ವಿಕ್ರಂ ವಿಸ್ತರಿಸುವ ಉದ್ದೇಶವನ್ನು ಪಾಲಿಕೆ ಹೊಂದಿದೆ.

ಆರಂಭ ಶೂರತ್ವ ಆಗದಿರಲಿ ಪಾಲಿಕೆಯ ಯೋಜನೆಗಳು ಆರಂಭಕ್ಕೆ ಸೀಮಿತ ಎನ್ನುವ ಭಾವನೆ ಜನರಲ್ಲಿ ಮೂಡಿದೆ. ಯೋಜನೆ ರೂಪಿಸುವುದು, ಅನುಷ್ಠಾನ, ಖರೀದಿಗೆ ತೋರಿದ ಆಸಕ್ತಿ ದೀರ್ಘಾವಧಿಗೆ ಇರುವುದಿಲ್ಲ. 60 ಕೋಟಿ ರೂ. ಖರ್ಚು ಮಾಡಿ ಕಸ ನಿರ್ವಹಣೆಗೆ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ ಪ್ರಾಥಮಿಕ ಹಂತದಲ್ಲಿ ಕಸ ವಿಂಗಡಣೆಯಾಗುತ್ತಿಲ್ಲ. ಒಣ ಹಾಗೂ
ಹಸಿ ಕಸ ವಿಂಗಡಿಸಿ ನೀಡಿದರೆ ಪೌರ ಕಾರ್ಮಿಕರು ಒಂದೇ ಕಂಟೇನರ್‌ಗೆ ಮಿಶ್ರ ಮಾಡುತ್ತಿದ್ದು, ಕೆಲವೆಡೆ ಮೊದಲೇ ಮಿಶ್ರಣ ಮಾಡಿ ಕೊಡುತ್ತಿದ್ದಾರೆ. ಇದರ ಬಗ್ಗೆ ಪಾಲಿಕೆಯ ಆರಂಭದ ಶೂರತ್ವ ಈಗಿಲ್ಲ. ಇನ್ನೂ ಬ್ಲಾಕ್‌ಸ್ಪಾಟ್‌ಗಳ ಬಗ್ಗೆ ತೋರಿದ ಆಸಕ್ತಿ ಇಂದು ಕಾಣುತ್ತಿಲ್ಲ. ನಿರಂತರವಾಗಿ ಕೇವಲ ಆಟೋ ಟಿಪ್ಪರ್‌ಗಳ ಮೂಲಕ ಜಾಗೃತಿ ಸಂದೇಶಗಳು ಬಿತ್ತರವಾಗುತ್ತಿವೆ ಬಿಟ್ಟರೆ ನಿಯಮ ಉಲ್ಲಂಘಿಸುವವರ ಮೇಲೆ ಯಾವುದೇ ಕ್ರಮವಿಲ್ಲ. ಒಣ ಹಾಗೂ ಹಸಿ ಕಸ ಮಿಶ್ರಣ ಮಾಡಿಕೊಂಡು ಬರುವ ಪೌರ ಕಾರ್ಮಿಕರ ಮೇಲೂ ನಿಗಾ ಇಲ್ಲದಂತಾಗಿದೆ. ಕೇವಲ ಪ್ರಯೋಗಗಳಿಗೆ ಜನರ ತೆರಿಗೆ ಹಣ ಬಳಸದೆ ನಿರಂತರ ಮುಂದುವರಿಸಿಕೊಂಡು ಹೋಗುವಂತಾಗಬೇಕು ಎನ್ನುವುದು ಜನತೆಗೆ ಆಗ್ರಹವಾಗಿದೆ.

ಬಹುಪಯೋಗಿ ವಿಕ್ರಂ
ಘನತ್ಯಾಜ್ಯ ವಿಲೇವಾರಿ ವಿಭಾಗದಡಿ ಈ ತಂಡಗಳು ಕಾರ್ಯನಿರ್ವಹಿಸಲಿವೆ. ಮಾರುಕಟ್ಟೆ ಪ್ರದೇಶಗಳಲ್ಲಿ ಸ್ವತ್ಛತೆಗೆ ಹಾಗೂ
ಪಾಲಿಕೆ ನಿಯಮಗಳ ಉಲ್ಲಂಘನೆ ತಡೆಗೆ ತಂಡ ಬಳಕೆಯಾಗಲಿದೆ. ಜತೆಗೆ ತುರ್ತು ಸಂದರ್ಭದಲ್ಲೂ ಬಳಕೆಯಾಗಲಿದೆ. ಮಳೆಗಾಲದ ಸಂದರ್ಭದಲ್ಲಿ ಏನಾದರೂ ಅವಘಡಗಳು ಸಂಭವಿಸಿದರೆ ಈ ವಾಹನದ ಮೂಲಕ ಕಾರ್ಮಿಕರು ಹಾಗೂ ಅಗತ್ಯ ಸಾಮಗ್ರಿಗಳನ್ನು ಸಾಗಿಸಲು ಬಳಕೆಯಾಗಲಿದೆ. ವಾಹನಕ್ಕೆ ಮೈಕ್‌ ಅಳವಡಿಸಿದ್ದು, ಪಾಲಿಕೆಯ ಪ್ರತಿಯೊಂದು ಸೂಚನೆ, ಜಾಗೃತಿ ಸಂದೇಶಗಳನ್ನು ಇದರ ಮೂಲಕ ನೀಡಲಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕರ ಬಾಕಿ ಉಳಿಸಿಕೊಂಡರೆ ವಸೂಲಿಗೆ ಅಂಥಹವರ ಮನೆ ಮುಂದೆಯೂ “ವಿಕ್ರಂ’ ನಿಲ್ಲಲಿ¨.

ಇದು ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿದೆ. ಮಹಾನಗರದ ಸ್ವತ್ಛತೆ ಕಾಪಾಡುವ ಉದ್ದೇಶದಿಂದ ವಿಕ್ರಂ ತಂಡ ಕಾರ್ಯನಿರ್ವಹಿಸಲಿದೆ. ಇದೊಂದು ಬಹುಪಯೋಗಿ ವಾಹನವಾಗಿದೆ. ಪಾಲಿಕೆಯ ಪ್ರತಿಯೊಂದು ಕಾರ್ಯಕ್ಕೆ ಮಹಾನಗರ ಜನತೆಯ ಸಹಕಾರ-ಸಹಭಾಗಿತ್ವ ಅಗತ್ಯ. ಸ್ವಯಂ ಪ್ರೇರಿತವಾಗಿ ಸ್ವಚ್ಛ ನಗರ ನಿರ್ಮಾಣದ ಮನಸ್ಸು ಮಾಡಬೇಕು. ಅದಕ್ಕೆ ಪೂರಕವಾಗಿ ಪಾಲಿಕೆ ಅಗತ್ಯ ಸಹಕಾರ ನೀಡಲಿದೆ. ಸಾಕಷ್ಟು ಜಾಗೃತಿ ನಂತರವೂ ನಿಯಮ ಪಾಲನೆ ಮಾಡದಿದ್ದರೆ ದಂಡ
ಅನಿವಾರ್ಯವಾಗಲಿದೆ.
*ಡಾ| ಬಿ.ಗೋಪಾಲಕೃಷ್ಣ, ಪಾಲಿಕೆ ಆಯುಕ್ತ

ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.