ಹುಬ್ಬಳ್ಳಿ: ಮಹಿಳಾ ನಿಲಯದಲ್ಲಿ ಮೊಳಗಿದ ಮಂಗಲ ವಾದ್ಯ
ಹಿರಿಯರ ಸಮ್ಮುಖದಲ್ಲಿ ಎರಡು ಜೋಡಿಗಳು ಹೊಸ ಬಾಳಿಗೆ ಪಾದಾರ್ಪಣೆ ಮಾಡಿದರು.
Team Udayavani, Jun 29, 2023, 6:00 PM IST
ಹುಬ್ಬಳ್ಳಿ: ಮನೆಯವರಿಂದ ದೂರವಾಗಿ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಯುವತಿಯರಿಬ್ಬರು ವೈವಾಹಿಕ ಜೀವನಕ್ಕೆ
ಕಾಲಿಟ್ಟರು. ನಿಲಯದ ಅಧಿಕಾರಿಗಳು, ರೋಟರಿ ಕ್ಲಬ್‌ನ ಸದಸ್ಯರು ಕುಟುಂಬಸ್ಥರ ಸ್ಥಾನದಲ್ಲಿ ನಿಂತು ವಧುಗಳನ್ನು ಧಾರೆ
ಎರೆದುಕೊಟ್ಟರು.
ಬುಧವಾರ ಇಂತಹ ಅಪರೂಪದ ವಿವಾಹಕ್ಕೆ ಸಾಕ್ಷಿಯಾಗಿದ್ದು ಇಲ್ಲಿನ ಪತ್ರಕರ್ತರ ನಗರದಲ್ಲಿರುವ ಸರಕಾರಿ ರಾಜ್ಯ ಮಹಿಳಾ ನಿಲಯ. ಇಲ್ಲಿ ಆಶ್ರಯ ಪಡೆದಿದ್ದ ತನು ಹಾಗೂ ಆರತಿ ನವ ಜೀವನಕ್ಕೆ ಕಾಲಿಟ್ಟರು. ಅನಾಥರಾಗಿ ಬೆಳೆದ ಇಬ್ಬರ ಪಾಲಿಗೆ ಮಹಿಳಾ ನಿಲಯ ಹಾಗೂ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿಯ ಸದಸ್ಯರು ಕುಟುಂಬಸ್ಥರ ಸ್ಥಾನದಲ್ಲಿ ನಿಂತು ಮದುವೆ
ಕಾರ್ಯ ನಡೆಸಿಕೊಟ್ಟರು. ಮಹಿಳಾ ನಿಲಯದಲ್ಲಿ ಸಂಭ್ರಮ ಮಾಡಿತ್ತು. ಹಿಂದೂ ಸಮುದಾಯದ ಸಂಪ್ರದಾಯ ಪ್ರಕಾರ
ಸಕಲ ಶಾಸ್ತ್ರೋಕ್ತವಾಗಿ ಮದುವೆ ಕಾರ್ಯ ನೆರವೇರಿಸಲಾಯಿತು.
ಬೆಳಗಾವಿಯ ಸುಳೆಬಾವಿಯ ಮಂಜುನಾಥ ಉಪರಿ ಅವರು ತನು ಅವರನ್ನು ವರಿಸಿದರು. ಇನ್ನು ಸವದತ್ತಿಯ ಯಲ್ಲಪ್ಪ ಇಂಚಲ ಅವರು ಆರತಿ ಅವರಿಗೆ ಜೀವನ ನೀಡಿದರು. ಹಿರಿಯರ ಸಮ್ಮುಖದಲ್ಲಿ ಎರಡು ಜೋಡಿಗಳು ಹೊಸ ಬಾಳಿಗೆ ಪಾದಾರ್ಪಣೆ ಮಾಡಿದರು. ಮಂಜುನಾಥ ಉಪರಿ ಅವರು ನೇಕಾರಿಕೆ ಉದ್ಯಮ ಮಾಡುತ್ತಿದ್ದು, ಯಲ್ಲಪ್ಪ ಅವರು ಟ್ಯಾಕ್ಸಿ ಏಜೆನ್ಸಿ ನಡೆಸುತ್ತಿದ್ದಾರೆ.
ಮಹಿಳಾ ನಿಲಯದ ಅಧೀಕ್ಷಕಿ ಶಾರದಾ ನಾಡಗೌಡ ಮಾತನಾಡಿ, 18 ರಿಂದ 85 ವರ್ಷನವರು 60ಕ್ಕೂ ಹೆಚ್ಚು ಮಹಿಳೆಯರು
ನಿಲಯದಲ್ಲಿ ಆಶ್ರಯ ಪಡೆದಿದ್ದಾರೆ. ಇವರಿಗೆ ಪುನರ್ವಸತಿ, ಶಿಕ್ಷಣ, ಉದ್ಯೋಗ ಹಾಗೂ ಮದುವೆ ಮಾಡಿಕೊಡಲಾಗುತ್ತದೆ.
ಮದುವೆಯಾದ ಮಹಿಳೆಯರಿಗೆ ಸರ್ಕಾರದಿಂದ 20 ಸಾವಿರ ಪ್ರೋತ್ಸಾಹ ಧನ ಬರುತ್ತದೆ. ಅದನ್ನು ಬ್ಯಾಂಕ್‌ನಲ್ಲಿ ಯುವತಿ ಹಾಗೂ ನಿಲಯದ ಅಧೀಕ್ಷಕರ ಹೆಸರಿನಲ್ಲಿ ಎಫ್‌ಡಿ ಇಡಲಾಗುವುದು. ಮೂರು ವರ್ಷದ ಬಳಿಕ ಆ ಹಣವನ್ನು ಯುವತಿಯರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಅಧ್ಯಕ್ಷ ಜಿತೇಶ ಪಾಂಚಾಲ ಮಾತನಾಡಿ, ಸರಕಾರಿ ರಾಜ್ಯ ಮಹಿಳಾ ನಿಲಯಕ್ಕೆ ಅಗತ್ಯ ವಸ್ತುಗಳನ್ನು ನೀಡುವ ಉದ್ದೇಶವಿತ್ತು. ಈ ಕಾರಣಕ್ಕಾಗಿ ನಿಲಯಕ್ಕೆ ಆಗಮಿಸಿ ಸಂದರ್ಭದಲ್ಲಿ ಇಲ್ಲಿನ ಮದುವೆ ಇರುವುದು
ಗೊತ್ತಾಗಿತ್ತು. ಹೀಗಾಗಿ ಕ್ಲಬ್ ವತಿಯಿಂದ ಮದುವೆಗೆ ಬೇಕಾದ ಅಲ್ಪ ನೆರವು ಮಾಡಿದ್ದೇವೆ. ಎರಡೂ ಜೋಡಿಯ ಹೊಸ ಜೀವನಕ್ಕೆ ಕಾಲಿಟ್ಟ ಕ್ಷಣಕ್ಕೆ ಸಾಕ್ಷಿಯಾಗಿದ್ದು ನಮ್ಮ ಪುಣ್ಯ ಎಂದರು. ವಿವಾಹ ಸಮಾರಂಭದಲ್ಲಿ ರೋಟರಿ ಕ್ಲಬ್ ಸಂವಹನ ಸೇವಾ ನಿರ್ದೇಶಕ ರಿಯಾಜ್ ಬಸರಿ, ಕ್ಲಬ್ ನಿರ್ದೇಶಕ ಹೇಮಾಲ ಶಾ, ಕಾರ್ಯದರ್ಶಿ ಡಿ. ಮೋಹಿತ, ಉದ್ಯಮಿ ಎಂ.ವಿ. ಕರಮರಿ
ಸೇರಿದಂತೆ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.