ಉತ್ತಮ ಉದ್ಯೋಗಿ – ಉದ್ಯಮಿಗಳ ನೀಡಿದ “ಐಬಿಎಂಆರ್ ವಿದ್ಯಾಸಂಸ್ಥೆ”
ಶಿಸ್ತು ಗುಣಮಟ್ಟದ ಕಲಿಕೆಯೊಂದಿಗೆ ವಿದ್ಯಾರ್ಥಿಗಳು, ಪಾಲಕರ ಮೆಚ್ಚುಗೆಗೂ ಪಾತ್ರವಾಗಿದೆ
Team Udayavani, Feb 7, 2023, 10:34 AM IST
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಎಂಬಿಎ ಶಿಕ್ಷಣಕ್ಕೆ ಹೊಸತನ ನೀಡಿದ, ವಿಶಿಷ್ಟ ಕಲಿಕೆಗೆ ಒತ್ತು ನೀಡಿದ ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡುವಂತೆ ಮಾಡಿದ ಕೀರ್ತಿ ಐಬಿಎಂಆರ್ ಕಾಲೇಜಿಗೆ ಸಲ್ಲುತ್ತದೆ.
ಕೌಶಲ, ಸಂಶೋಧನೆ, ಉದ್ಯಮಕ್ಕೆ ಪೂರಕ ಹಾಗೂ ಗುಣಮಟ್ಟದ ಮಾನವ ಸಂಪನ್ಮೂಲ ರೂಪಿಸುವ ಮೂಲಕ ನಾಡಿಗೆ ಉತ್ತಮ ಉದ್ಯೋಗಿ ಹಾಗೂ ಉದ್ಯಮಿಗಳನ್ನು ನೀಡಿರುವ ಖ್ಯಾತಿ ಇನ್ ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಆ್ಯಂಡ್ ರಿಸರ್ಚ್ (ಐಬಿಎಂಆರ್) ವಿದ್ಯಾಸಂಸ್ಥೆಯಾಗಿದೆ. ಜಾಗತಿಕ ಮಟ್ಟದ ಪೈಪೋಟಿ ಯುಗ, ಬದಲಾಗುತ್ತಿರುವ ಸ್ಥಿತಿಗೆ ಪೂರಕವಾಗಿ ವಿಶ್ವಗುಣಮಟ್ಟಕ್ಕೆ ತಕ್ಕುದಾದ ಮಾನವ ಸಂಪನ್ಮೂಲ ಅಗತ್ಯ ಎಂಬುದು ಉದ್ಯಮ ವಲಯದ ನಿರೀಕ್ಷೆ, ಬೇಡಿಕೆಯಾಗಿದೆ. ಇದಕ್ಕೆ ತಕ್ಕಂತೆ ಅಂತಾರಾಷ್ಟ್ರೀಯ ಗುಣಮಟ್ಟದ ಕಲಿಕೆ, ವಿದ್ಯಾರ್ಥಿಗಳ ಮನದೊಳಗೆ ಸ್ಪರ್ಧಾತ್ಮಕ ಮನೋಭಾವ, ಪರಿಶ್ರಮ, ಬದ್ಧತೆ, ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಛಲ ಮೂಡಿಸುವ, ಮನನ ಮಾಡುವ ಕಾರ್ಯದಲ್ಲಿ ತೊಡಗಿದ ಕೆಲವೇ ಕೆಲವು ಸಂಸ್ಥೆಗಳಲ್ಲಿ ಐಬಿಎಂಆರ್ ಒಂದಾಗಿದೆ.
ಬೇರೆ ಕಡೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಅದರಲ್ಲೂ ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣದಲ್ಲಿ ಹೆಚ್ಚಿನ ಸೌಲಭ್ಯ, ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಇಲ್ಲ ಎಂಬ ಅನಿಸಿಕೆಗಳನ್ನು ಸುಳ್ಳಾಗಿಸುವ, ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸಮಾನವಾದ, ಕಲಿಕೆ, ಹೊಸತನ ಮೈಗೂಡಿಸಿಕೊಳ್ಳುವಿಕೆಯೊಂದಿಗೆ ಗಮನ ಸೆಳೆಯುವ ಕಾರ್ಯವನ್ನು ಐಬಿಎಂಆರ್ ಮಾಡುತ್ತಿದೆ.
ಶಿಸ್ತು ಗುಣಮಟ್ಟದ ಕಲಿಕೆಯೊಂದಿಗೆ ವಿದ್ಯಾರ್ಥಿಗಳು, ಪಾಲಕರ ಮೆಚ್ಚುಗೆಗೂ ಪಾತ್ರವಾಗಿದೆ. ವಿಶೇಷ ಕಲಿಕಾ ಅಭಿವೃದ್ಧಿ, ಸೆಂಟರ್ ಆಫ್ ಎಕ್ಸ್ ಲೆನ್ಸ್, ಮಹಿಳಾ ಸಬಲೀಕರಣದಂತಹ ಹಲವು ವಿಷಯಗಳ ಬಗ್ಗೆ ವಿಶೇಷ ರೀತಿಯಲ್ಲಿ ವಿದ್ಯಾರ್ಥಿಗಳ ಮನಕ್ಕೆ ವಿಚಾರ ಮುಟ್ಟಿಸುವ, ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ನೀಡುವ ಕಾಯಕದಲ್ಲಿ ತೊಡಗಿದೆ.ಕೇಂದ್ರ ಸರಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ, ದೇಸಿಯತೆ, ಕೌಶಲಯುತ ಮಾನವ ಸಂಪನ್ಮೂಲ ತಯಾರಿಕೆ, ವಿದ್ಯಾರ್ಥಿಯ ಆಸಕ್ತಿಗೆ ಅನುಗುಣವಾಗಿ ಬಹು ಆಯ್ಕೆಯೊಂದಿಗೆ ವ್ಯಾಸಂಗ ಮುಂದುವರಿಸುವ ಹಲವು ಅವಕಾಶ, ಸಂಶೋಧನೆಗೆ ಒತ್ತು, ವೃತ್ತಿ ಪರತೆ ಕಲಿಕೆಯಲ್ಲಿ ಕಲಿಕೆಯಲ್ಲಿ ಹೊಸತನಕ್ಕೆ ಒತ್ತು ನೀಡಿದೆ. ಕೇಂದ್ರ ಸರಕಾರ ಹೊಸ ಚಿಂತನೆಯನ್ನು ತ್ವರಿತವಾಗಿ ಅನ್ವಯಿಸಿಕೊಳ್ಳುವತ್ತ ಮಹತ್ವದ ಹೆಜ್ಜೆ ಇರಿಸುವ ಕಾರ್ಯವನ್ನು ಐಬಿಎಂಆರ್ ಮಾಡಿದೆ.
ಇನ್‌ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಆ್ಯಂಡ್ ರಿಸರ್ಚ್(ಐಬಿಎಂಆರ್) ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಉನ್ನತ ಶಿಕ್ಷಣದ ವಿದ್ಯಾರ್ಜನೆ ನೀಡುವ ಮೂಲಕ ರಾಷ್ಟ್ರೀಯ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣದೊಂದಿಗೆ ಸ್ವ-ಉದ್ಯೋಗ ಹಾಗೂ ಉದ್ಯೋಗದಾತರನ್ನಾಗಿ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ.
ಐಬಿಎಂಆರ್ ಹುಬ್ಬಳ್ಳಿಯಲ್ಲಿ ವಿದ್ಯಾಸಂಸ್ಥೆ ಹೊಂದಿರುವುದಲ್ಲದೆ ಬೆಂಗಳೂರು, ಗುರುಗಾಂವ್ ಮತ್ತು ಅಹ್ಮದಾಬಾದ್‌ನಲ್ಲಿ ವಿಶಿಷ್ಟ ಕಲಿಕಾ ಸಂಸ್ಥೆಗಳನ್ನು ಆರಂಭಿಸಿದೆ. ರಾಷ್ಟ್ರೀಯ ಶಿಕ್ಷಣ ಕ್ರಾಂತಿಗೆ ಅನುಗುಣವಾಗಿ 2019ರಲ್ಲಿ ಪೂರ್ವ ನಿಯೋಜಿತ ಶಿಕ್ಷಣ 4.0 ಆರಂಭಿಸಿತ್ತು. ಇದೀಗ ನೂತನ ಶಿಕ್ಷಣ ನೀತಿ(ಎನ್‌ಇಪಿ)ಅಡಿಯಲ್ಲಿ 5.0 ಕಲಿಕಾ ರೂಪರೇಷಗಳನ್ನು ಹಮ್ಮಿಕೊಂಡಿದೆ. ರಾಷ್ಟ್ರೀಯ ಮಟ್ಟದ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಆನ್‌ಲೈನ್ ಮುಖಾಂತರ ಪ್ರವೇಶ ಪರೀಕ್ಷೆ ನಡೆಸುತ್ತಿದೆ. ವಿದ್ಯಾರ್ಥಿಗಳಿಗೆ ವಿಶೇಷ ಶಿಷ್ಯವೇತನ ನೀಡುತ್ತಿದೆ. ಸ್ವ ಉದ್ಯೋಗ/ ವ್ಯಾಪಾರ ಆರಂಭಿಸುವ ವಿದ್ಯಾರ್ಥಿಗಳಿಗೆ I Invent Work ವತಿಯಿಂದ ಆಸಕ್ತ ವಿದ್ಯಾರ್ಥಿಗಳಿಗೆ ನುರಿತ ತಜ್ಞರಿಂದ ಪ್ರೇರಣೆ ಮತ್ತು ಪ್ರೋತ್ಸಾಹ ಒದಗಿಸುತ್ತಿದೆ. 2021ರಲ್ಲಿ ಐಬಿಎಂಆರ್ Center of Excelence ಅನ್ನು ಆರಂಭ ಮಾಡಿದ್ದು, ಇದರ ಅಡಿಯಲ್ಲಿ ವಿಶೇಷ ಕಲಿಕಾ ಅಭಿವೃದ್ಧಿ(Special Education Development), ಮಾನವ ಸಂಪನ್ಮೂಲ ಅಭಿವೃದ್ಧಿ (Man Power Development), ಉದ್ಯೋಗ ಮತ್ತು ತರಬೇತಿ ಸೌಲಭ್ಯಗಳು (Job and Training Opportunities), ಮಹಿಳಾ ಸಬಲೀಕರಣ (Woman Empowerment) ಮತ್ತು ಆರ್ಥಿಕ ವಿಷಯಗಳ ಶೋಧನೆಗಳ (Economic Subjects Research) ಬಗ್ಗೆ ವಿಶೇಷ ಸೌಲಭ್ಯಗಳನ್ನು ಪರಿಣಿತರಿಂದ ನೀಡುತ್ತಿದೆ. ಪ್ರಸಕ್ತ ವರ್ಷ ಮಹಾವಿದ್ಯಾಲಯದಲ್ಲಿ ಸುಮಾರು ಹನ್ನೊಂದು Center of Excelence ಆರಂಭಿಸಿದೆ.
ಇಂದಿನ ಪೈಪೋಟಿ ಯುಗದಲ್ಲಿ ಸಾಂಪ್ರದಾಯಿಕ ರೀತಿಯ ಕಲಿಕೆ, ಪದವಿ ಪಡೆದರೆ ಸಾಲದು, ಬದಲಾದ ಸ್ಥಿತಿಗೆ ತಕ್ಕಂತೆ ಬದಲಾವಣೆಗೆ ಸಜ್ಜಾಗಬೇಕೆಂಬ ದೃಷ್ಟಿಕೋನದಡಿ ಸುಮಾರು 11 ಸೆಂಟರ್ ಆಫ್ ಎಕ್ಸ್‌ಲೆನ್ಸ್ ಆರಂಭಿಸಿದ ವಿರಳ ಶಿಕ್ಷಣ ಸಂಸ್ಥೆಗಳಲ್ಲಿ ಅಗ್ರಗಣ್ಯ ರೂಪದಲ್ಲಿ ಗೋಚರಿಸುತ್ತಿದೆ. ಐಬಿಎಂಆರ್‌ನ TCS ಅಯೋನ್ ಐಡಿಯಾ ಸಂಸ್ಥೆಯು ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಒಂದು ಸಾವಿರ ಗಣಕಯಂತ್ರವುಳ್ಳ
ಆನ್‌ಲೈನ್ ಪರೀಕ್ಷಾ ಕೇಂದ್ರ ಆರಂಭಿಸಿದ್ದು, ಇಲ್ಲಿಯವರೆಗೆ ಅಂದಾಜು 5ಲಕ್ಷ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದಿದ್ದಾರೆ. ಪ್ರತಿಷ್ಠಿತ ಐಐM ಸಂಸ್ಥೆಯ ಮಾದರಿಯಲ್ಲಿ ಐಬಿಎಂಆರ್ ಮಹಾವಿದ್ಯಾಲಯದಲ್ಲಿ ವಿಶೇಷ ಕಾರ್ಯಾಗಾರ, ಕೌಶಲ ತರಬೇತಿ, ಸಂಶೋಧನೆಗೆ ಉತ್ತೇಜಿಸಲು ಐಬಿಎಂಆರ್ ಸಂಶೋಧನಾ ಕೇಂದ್ರ ಸ್ಥಾಪಿಸಿದೆ ಹಾಗೂ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಪ್ರೋತ್ಸಾಹ ನೀಡುತ್ತಿದೆ.
ಪ್ರಗತಿಯ ಪಥದಲ್ಲಿ ತನ್ನದೆಯಾದ ಛಾಪು ಮೂಡಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳಾದ ಫ್ರಾನ್ಸ್ ದೇಶದ ಜಿನೇಬಲ್, ಸ್ಟರ್ಲಿಂಗ್, ಮಲೇಷಿಯಾ, ನೈಜರೀಯಾ ಮುಂತಾದ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ವಿದ್ಯಾರ್ಥಿಗಳನ್ನು ಕ್ರೀಡೆಗೆ ಪ್ರೋತ್ಸಾಹಿಸಿ ಅವರಿಗೆ ನುರಿತ ತರಬೇತುದಾರರಿಂದ ತರಬೇತಿ ಕೊಡಿಸುತ್ತಿದೆ. ಪ್ರಸಕ್ತ ವರ್ಷ 2022-23ನೇ ಸಾಲಿನಲ್ಲಿ ಒಟ್ಟು 12 ವಿದ್ಯಾರ್ಥಿಗಳು ಐಬಿಎಂಆರ್ ನಿಂದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಅಂತರ್ ವಿಶ್ವವಿದ್ಯಾಲಯಗಳ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ತೋರಿದ್ದಾರೆ. ಐಬಿಎಂಆರ್ ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಲು ಮತ್ತು ವಿವಿಧ ದೂರ ಶಿಕ್ಷಣದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲು NBA ಮಾನ್ಯತೆ ಮತ್ತು ಕರ್ನಾಟಕ ದೂರ ಶಿಕ್ಷಣ ಪ್ರಾಧಿಕಾರದ ಪ್ರಯೋಜನ ಪಡೆದು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಸಂಶೋಧನಾ ಕೇಂದ್ರ ಸ್ಥಾಪಿಸಲು ಕಾರ್ಯತಂತ್ರ ರೂಪಿಸಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಐಬಿಎಂಆರ್‌ನ ಅಧೀನಕ್ಕೊಳಪಟ್ಟ ವಿವಿಧ ತಾಂತ್ರಿಕ ಶಿಕ್ಷಣ ಕಾಲೇಜ್ (Diploma College) ಅನ್ನು 2008ರಲ್ಲಿ ಶೇರೆವಾಡ ಗ್ರಾಮದಲ್ಲಿ ಆರಂಭಿಸಿದೆ. ಇಲ್ಲಿಯವರೆಗೆ ಸುಮಾರು 5000 ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗುವುದಲ್ಲದೆ ನಾಡು-ದೇಶಕ್ಕೆ ಕೌಶಲಯುತ ಮಾನವ ಸಂಪನ್ಮೂಲ ನೀಡಿದ ಕೀರ್ತಿ ಐಬಿಎಂಆರ್‌ದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.