ಅನ್ಯಧರ್ಮದ ಯುವಕ-ಯುವತಿ ಮದುವೆ ಗದ್ದಲ
ಹಿಂದೂ ಸಂಘಟನೆಗಳ "ಲವ್ ಜಿಹಾದ್' ಆರೋಪ
Team Udayavani, Apr 7, 2022, 10:35 AM IST
ಹುಬ್ಬಳ್ಳಿ: ನಗರದ ಅನ್ಯ ಧರ್ಮಿಯ ಯುವಕ-ಯುವತಿ ಪ್ರೀತಿಸಿ ಮದುವೆಯಾಗಿದ್ದು, ಇದನ್ನು ಖಂಡಿಸಿ ಯುವತಿ ಕುಟುಂಬದವರು ಹಾಗೂ ಎಸ್‌ಎಸ್‌ಕೆ ಸಮಾಜದವರು ಬುಧವಾರ ಇಲ್ಲಿನ ಉಪನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಕೇಶ್ವಾಪುರದ ಯುವಕ ಹಾಗೂ ಉಣಕಲ್ಲನ ಯುವತಿ ಪರಸ್ಪರ ಪ್ರೀತಿಸಿ ಗದುಗಿನಲ್ಲಿ ರಿಜಿಸ್ಟರ್ ಮದುವೆ ಆಗಿದ್ದಾರೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಯುವತಿಯ ಕುಟುಂಬದವರು ಮತ್ತು ಅವರ ಸಮಾಜದವರು ಠಾಣೆ ಎದುರು ಜಮಾಯಿಸಿ, ಪ್ರೀತಿ ಹೆಸರಲ್ಲಿ ಲವ್ ಜಿಹಾದ್ ನಡೆಸಲಾಗಿದೆ. ಮತಾಂತರ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿ ಮಧ್ಯಾಹ್ನದಿಂದ ರಾತ್ರಿವರೆಗೂ ಠಾಣೆ ಎದುರು ಪ್ರತಿಭಟಿಸಿದರು. ಯುವತಿಯನ್ನು ಕರೆದುಕೊಂಡು ಬಂದು ತಮಗೆ ಒಪ್ಪಿಸಬೇಕು. ಇಲ್ಲವೇ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಸಮಾಜದ ಮುಖಂಡರು ಈ ಕುರಿತು ಹಲವು ಬಾರಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಯುವತಿ ತಮಗೆ ಒಪ್ಪಿಸುವ ಬಗ್ಗೆ ಪೊಲೀಸರು ಸ್ಪಷ್ಟ ಭರವಸೆ ನೀಡಬೇಕೆಂದು ಪಟ್ಟುಹಿಡಿದರು. ಆದರೆ ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಯುವಕ-ಯುವತಿಯ ಜನ್ಮದಿನಾಂಕದ ದಾಖಲೆಗಳನ್ನು ಪರಿಶೀಲಿಸಲಾಗುವುದು ಎಂದು ಸಮಜಾಯಿಸಿ ನೀಡಿದರೂ ಪ್ರತಿಭಟನಾಕಾರರು ಒಪ್ಪಲಿಲ್ಲ. ಕೊನೆಗೆ ಏ.7ರಂದು ಮಧ್ಯಾಹ್ನ 12 ಗಂಟೆಯೊಳಗೆ ಯುವತಿಯನ್ನು ಕರೆದುಕೊಂಡು ಬರುತ್ತೇವೆಂದು ಭರವಸೆ ಕೊಟ್ಟ ನಂತರ ಪ್ರತಿಭಟನೆ ಹಿಂಪಡೆದರು.
ರಾತ್ರಿ 8:30ರ ಸುಮಾರಿಗೆ ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದಾಗ ಮತ್ತೆ ಕೆಲವರು ಪ್ರತಿಭಟನೆಗೆ ಮುಂದಾದರು. ಪೊಲೀಸರು ಯುವತಿಯನ್ನು ಕರೆದುಕೊಂಡು ಬರುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆದರು. ಮಹಾನಗರ ಪೊಲೀಸ್ ಆಯುಕ್ತ ಲಾಭೂ ರಾಮ ಮತ್ತು ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಸ್ಥಿತಿ ನಿಭಾಯಿಸಿದರು. ಸಮಾಜದ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ಪ್ರತಿಭಟನೆಯಲ್ಲಿ ಎಸ್‌ಎಸ್‌ಕೆ ಚಿಂತನ-ಮಂಥನ ಸಮಿತಿಯ ಅಧ್ಯಕ್ಷ ಹನುಮಂತಸಾ ನಿರಂಜನ, ಎಸ್‌ಎಸ್ ಕೆ ಸಮಾಜದ ಧರ್ಮದರ್ಶಿ ನೀಲಕಂಠಸಾ ಜಡಿ, ನಾಗೇಶ ಕಲಬುìಗಿ, ವಿಶ್ವ ಹಿಂದೂ ಪರಿಷತ್ ಮುಖಂಡ ಶಿವಾನಂದ ಸತ್ತಿಗೇರಿ, ಸಂತೋಷ ಕಠಾರೆ, ವಿಶ್ವನಾಥ ಬೂದುರ, ಆಕಾಶ ಹುಬ್ಬಳ್ಳಿ, ಸುನಿಲ ಚಿಲ್ಲಾಳ, ಶೋಭಾ ನಾಕೋಡ, ಪವನ ಕಾಟವೆ, ರೇಣುಕಾ ಇರಕಲ್, ನೀತಾ ಮೇತ್ರಾಣಿ, ರಾಜೇಶ್ವರಿ ಜಡಿ, ಯಶೋಧಾ ತಾಂಬೆ ಮೊದಲಾದವರಿದ್ದರು.
ರಾಜ್ಯದಲ್ಲಿ ಲವ್ ಜಿಹಾದ್ ಮೂಲಕ ಹಿಂದೂ ಹುಡುಗಿಯರನ್ನು ಪ್ರೀತಿ-ಪ್ರೇಮದ ಹೆಸರಿನಲ್ಲಿ ಮತಾಂತರ ಮಾಡುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ನಗರದಲ್ಲಿ ಅಪ್ರಾಪೆ¤ಯನ್ನು ಅನ್ಯಧರ್ಮದ ಯುವಕ ಯುಗಾದಿಯಂದು ಕರೆದುಕೊಂಡು ಹೋಗಿ ಗದುಗಿನಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾನೆ. ಬೋಗಸ್ ದಾಖಲೆಗಳಿದ್ದರೂ ಅಲ್ಲಿನ ಅಧಿಕಾರಿ ಮದುವೆಗೆ ಅವಕಾಶ ನೀಡಿದ್ದಾರೆ. ಮೊದಲು ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು. ಇಲ್ಲಿನ ಪೊಲೀಸರು ಸಹಿತ ಯುವಕನಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಸ್ಥಳೀಯ ಶಾಸಕರು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಗಮನಕ್ಕೆ ಬಂದಿದೆ. ಪೊಲೀಸರು ಯಾರ ಒತ್ತಡಕ್ಕೂ ಮಣಿಯದೆ ತಾವೇ ಹೇಳಿದಂತೆ ಗುರುವಾರ ಮಧ್ಯಾಹ್ನ 12 ಗಂಟೆಯೊಳಗೆ ಯುವತಿಯನ್ನು ಕರೆದುಕೊಂಡು ನಮಗೆ ಒಪ್ಪಿಸಬೇಕು. ಇಲ್ಲವೇ ಸಾಂತ್ವನ ಕೇಂದ್ರಕ್ಕೆ ಕಳುಹಿಸಬೇಕು. ಇಲ್ಲವಾದರೆ ನಮ್ಮ ಹೋರಾಟದ ದಿಕ್ಕು ಬದಲಾಗುತ್ತದೆ. ಆಗ ಸಂಭವಿಸಬಹುದಾದ ಅನಾಹುತಗಳಿಗೆ ಪೊಲೀಸರೇ ಜವಾಬ್ದಾರರಾಗುತ್ತಾರೆ. ರಾಜ್ಯ ಸರ್ಕಾರ ಲವ್ ಜಿಹಾದ್ ತಡೆ ಕಾನೂನು ಜಾರಿಗೊಳಿಸಬೇಕು. ಇಲ್ಲವಾದರೆ ಬಿಜೆಪಿ ಶಾಸಕರ ಮನೆಯ ಮುಂದೆ ಧರಣಿ ನಡೆಸಲಾಗುವುದು. –ಪ್ರಮೋದ ಮುತಾಲಿಕ, ಶ್ರೀರಾಮ ಸೇನಾ ರಾಷ್ಟ್ರಾಧ್ಯಕ್ಷ
ಏ.2ರಂದು ಬೆಂಡಿಗೇರಿ ಠಾಣೆಯಲ್ಲಿ ಅಪ್ರಾಪ್ತೆ ಕಾಣೆ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಕುರಿತು ಕೂಡಲೇ ವಿಚಾರಣೆ ಮಾಡಿ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು. ಏ.4ರಂದು ಯುವಕ ಮತ್ತು ಯುವತಿ ಪತ್ತೆಯಾಗಿದ್ದಾರೆ. ಈಗ ಪಾಲಕರು ಅಪಹರಣ ಕುರಿತು ದೂರು ಕೊಟ್ಟಿದ್ದಾರೆ. ಇಲ್ಲಿಯವರೆಗೆ ದೊರೆತ ದಾಖಲೆಗಳ ಪ್ರಕಾರ ಇಬ್ಬರು ವಯಸ್ಕರಾಗಿದ್ದಾರೆ. ಪ್ರತಿಭಟನಾಕಾರರು ಮಾಡಿದ ಆರೋಪಗಳನ್ನು ಪರಿಶೀಲಿಸಲಾಗುವುದು. ವಿಚಾರಣೆ ಮುಗಿಯುವವರೆಗೆ ಎಲ್ಲರೂ ಸಹಕಾರ ನೀಡಬೇಕು. –ಸಾಹಿಲ ಬಾಗ್ಲಾ, ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.