ಉತ್ತಮ ಜೀವನಶೈಲಿಯಿಂದ ಆರೋಗ್ಯ ಕಾಯ್ದುಕೊಳ್ಳಿ
ಜೀವನ ಶೈಲಿ ಅಳವಡಿಸಿಕೊಂಡು ಆರೋಗ್ಯದಿಂದ ಮತ್ತು ಸಂತಸದಿಂದ ಜೀವನ ಸಾಗಿಸೋಣ
Team Udayavani, Mar 19, 2022, 6:14 PM IST
ಧಾರವಾಡ: ಇಲ್ಲಿನ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ನೆಪ್ರೊಲಜಿ ವಿಭಾಗದಿಂದ ಮೂತ್ರಪಿಂಡ ಆರೋಗ್ಯ ಕುರಿತು ಅಗತ್ಯ ಜಾಗೃತಿ ಮೂಡಿಸುವ ಧ್ಯೇಯದೊಂದಿಗೆ ವಿಶ್ವ ಕಿಡ್ನಿ ದಿನ ಆಚರಿಸಲಾಯಿತು.
ಎಸ್‌ಡಿಎಂ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ನಿರಂಜನಕುಮಾರ ಮಾತನಾಡಿ, ಮೂತ್ರಪಿಂಡ ಕಸಿ ಮಾಡುವುದರಲ್ಲಿ ಅನೇಕ ವಿಭಾಗದವರು ಒಟ್ಟುಗೂಡಿಕೊಂಡು ಮಾಡುವ ಕೆಲಸ ಸಾಹಸಮ ಯವಾಗಿದೆ. ಈ ಶ್ರಮದಲ್ಲಿ ಭಾಗಿಯಾಗಿರುವ ಎಲ್ಲರ ಕಾರ್ಯಶ್ಲಾಘನೀಯ. ಯಾವಾಗಲೂ ಒಳ್ಳೆಯ ಕೆಲಸಕ್ಕೆ ವಿಶ್ವವಿದ್ಯಾಲಯ ಬದ್ಧವಾಗಿರುತ್ತದೆ ಎಂದರು.
ನೆಪ್ರೊಲಜಿ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸುವುದರ ಮೂಲಕ ಮತ್ತು ಡಿಎಂ/ಎಂಸಿಎಚ್ ಕೋರ್ಸ್ ಗಳನ್ನು ಆರಂಭಿಸುವುದರ ಮೂಲಕ ಈ ವಿಭಾಗವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು. ಉತ್ತಮ ಜೀವನಕ್ಕಾಗಿ ಒಳ್ಳೆಯ ಜೀವನ ಶೈಲಿ ಅಳವಡಿಸಿಕೊಂಡು ಆರೋಗ್ಯದಿಂದ ಮತ್ತು ಸಂತಸದಿಂದ ಜೀವನ ಸಾಗಿಸೋಣ ಎಂದು ಹೇಳಿದರು.
ನೆಪ್ರೊಲಜಿ ವಿಭಾಗದ ಮುಖ್ಯಸ್ಥೆ ಡಾ| ಅಕ್ಕಮಹಾದೇವಿ ಮಾತನಾಡಿ, ವಿಭಾಗವು ಮೊದಲು 5 ಡಯಾಲಿಸಿಸ್ ಯಂತ್ರಗಳಿಂದ ಆರಂಭವಾಗಿದ್ದು ಪ್ರಸುತ್ತ 34 ಯಂತ್ರಗಳನ್ನು ಒಳಗೊಂಡಿದೆ. ಇದರಿಂದ ಉತ್ತರ ಕರ್ನಾಟಕ ಭಾಗದವರಿಗೆ ಹೆಚ್ಚು ಉಪಯುಕ್ತವಾಗಿದೆ ಎಂದರು.
ವಿಭಾಗದ ಅಭಿವೃದ್ಧಿಗೆ ಸಹಕರಿಸಿದ ಉಪ ಕುಲಪತಿಗಳಾದ ಡಾ|ನಿರಂಜನಕುಮಾರ ಅವರನ್ನು ಸನ್ಮಾನಿಸಲಾಯಿತು. ನೆಪ್ರೊಲಜಿ ವಿಭಾಗದ ಪ್ರಾಧ್ಯಪಕ ಡಾ| ಮಹೇಶ್ ಬೆನ್ನಿಕಲ್ ಅವರು ಕಿಡ್ನಿ ಸಮಸ್ಯೆಗಳ ಬಗ್ಗೆ ಮತ್ತು ಅದರ ನಿವಾರಣೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಸಿದರು. ನೆಪ್ರೊಲಜಿ ವಿಭಾಗದವರು ತಯಾರಿಸಿದ “ಕಿಡ್ನಿ ಸಮಸ್ಯೆಗಳು ಮತ್ತು ಮುನ್ನೆಚ್ಚರಿಕಾ ಕ್ರಮಗಳು’ ಎಂಬ ಕೈಪಿಡಿಯನ್ನು ಡಾ| ಎಸ್. ಕೆ. ಜೋಶಿ ಬಿಡುಗಡೆಗೊಳಿಸಿದರು. ಲೆಫ್ಟಿನೆಂಟ್ ಕರ್ನಲ್ ಯು.ಎಸ್. ದಿನೇಶ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ| ರತ್ನಮಾಲಾ ದೇಸಾಯಿ, ಹಿರಿಯ ಎಲುಬು ಕೀಲು ತಜ್ಞ
ಡಾ| ಚಿದೇಂದ್ರ ಶೆಟ್ಟರ, ವೈದ್ಯಕೀಯ ಅಧೀಕ್ಷಕರಾದ ಡಾ| ಕಿರಣ ಹೆಗಡೆ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.