ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌


Team Udayavani, Jan 2, 2025, 2:10 PM IST

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

■ ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಜನರಲ್ಲಿ ಬೈಸಿಕಲ್‌ ಬಳಕೆಗೆ ಉತ್ತೇಜನ ನೀಡಲು ಹಾಗೂ ಸಾರ್ವಜನಿಕ ಬಳಕೆಗಾಗಿ ಸುಮಾರು 8.5 ಕೋಟಿ ರೂ.ವೆಚ್ಚದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಕಳೆದೆರಡು ವರ್ಷಗಳಿಂದ ಚಾಲನೆಯಲ್ಲಿರುವ “ಸವಾರಿ’ ಪಬ್ಲಿಕ್‌ ಬೈಸಿಕಲ್‌ ಸಿಸ್ಟಮ್‌ ಬಳಕೆದಾರರನ್ನು ಆಕರ್ಷಿಸಲು ಹೊಸ ವರ್ಷದ ವಿಶೇಷ ಯೋಜನೆ ಜಾರಿ ಮಾಡಿದೆ.

ಬೈಸಿಕಲ್‌ ಬಳಕೆದಾರರು ಆರಂಭದ ಒಂದು ತಾಸು ಉಚಿತವಾಗಿ ಬೈಸಿಕಲ್‌ ಸವಾರಿ ಮಾಡಬಹುದು. ಈ ಯೋಜನೆ ಜನವರಿ 1ರಿಂದ ಜಾರಿಯಾಗಿದೆ. ಪಬ್ಲಿಕ್‌ ಬೈಸಿಕಲ್‌ ಸಿಸ್ಟಮ್‌ ಉಸ್ತುವಾರಿ ಹಾಗೂ ನಿರ್ವಹಣೆ ನೋಡಿಕೊಳ್ಳುತ್ತಿರುವ ಟ್ರಿನಿಟಿ ಟೆಕ್ನಾಲಜೀಸ್‌ ಮತ್ತು ಸಾಫ್ಟ್‌ವೇರ್‌ ಸೋಲೋಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಎಲ್ಲ 34 ಡಾಕಿಂಗ್‌ ಸ್ಟೇಷನ್‌ಗಳಲ್ಲಿ ಬಳಕೆದಾರರಿಗೆ ಅಂಟಿಸಿದ್ದು, ನಾಳೆ ಬೆಳಿಗ್ಗೆಯಿಂದಲೇ ಈ ಹೊಸ ಪ್ರಯತ್ನ ಆರಂಭವಾಗುವುದು ಎಂದು ಮುಖ್ಯಸ್ಥ ರಜನೀಶ್‌ ಗಂಜ್ಯಾಳ “ಉದಯವಾಣಿ’ಗೆ ತಿಳಿಸಿದ್ದಾರೆ.

ಸವಾರಿ ಬೈಸಿಕಲ್‌ ಸವಾರಿ ಯೋಜನೆ ಸೆಪ್ಟೆಂಬರ್‌ 2022ರಿಂದ ಪ್ರಾರಂಭಗೊಂಡ ಪಿಬಿಎಸ್‌ ಈವರೆಗೆ ಸುಮಾರು 50 ಸಾವಿರಕ್ಕೂ ಹೆಚ್ಚು ರೈಡ್‌ಗಳನ್ನು ವರದಿ ಮಾಡಿದೆ. ಸುಮಾರು 2900ಕ್ಕೂ ಹೆಚ್ಚು ಬಳಕೆದಾರರು ರೆಜಿಸ್ಟ್ರೇಷನ್‌ ಮಾಡಿಸಿದ್ದಾರೆ.
ಸವಾರಿ ಯೋಜನೆ 3ನೇ ವರ್ಷದಲ್ಲಿ ಪದಾರ್ಪಣೆ ಮಾಡುತ್ತಿರುವ ಬೈಸಿಕಲ್‌ ಸೇವೆ ಹೆಚ್ಚಿನ ಬಳಕೆದಾರರಿಗೆ ಆಕರ್ಷಿಸುವ ನಿಟ್ಟಿನಲ್ಲಿ ಬಳಕೆದಾರರಿಗೆ ಒಂದು ತಾಸು ಉಚಿತ ರೈಡ್‌ ಕೊಡುವ ಆಫರ್‌ ನೀಡಲಾಗುತ್ತಿದೆ. ಇದರಿಂದ ಹೆಚ್ಚಿನ ಹೊಸ ಬೈಸಿಕಲ್‌ ಬಳಕೆದಾರರು ರೆಜಿಸ್ಟ್ರೇಷನ್‌ ಮಾಡಿಸುವ ನಿರೀಕ್ಷೆ ಹೊಂದಲಾಗಿದೆ.

ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ವಿವಿಧ ಪ್ರಮೋಷನ್‌ ಕಾರ್ಯಕ್ರಮಗಳನ್ನು ಮಾಡಿದ್ದು, ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಇನ್ನುಳಿದವುಗಳನ್ನು ಆಯೋಜಿಸಲಾಗಿತ್ತು. ಈಗ ಇನ್ನೂ ಹೆಚ್ಚಿನ ಜನರಿಗೆ ಆಕರ್ಷಿಸುವ ಪ್ರಯತ್ನ ನಮ್ಮದಾಗಿದೆ ಎಂದರು. ನಗರದ ವಿವಿಧ ಸ್ಥಳಗಳಲ್ಲಿ 34 ಬೈಸಿಕಲ್‌ ನಿಲ್ದಾಣಗಳನ್ನು ಮಾಡಿದ್ದು, 340 ಬೈಸಿಕಲ್‌ಗ‌ಳನ್ನು ಆಮದು ಮಾಡಿಕೊಂಡಿದ್ದು, ಅದರಲ್ಲಿ ಹಲವಾರು ಎಲೆಕ್ಟ್ರಿಕ್‌ ಮಾದರಿ ಹೊಂದಿದೆ. ಈ ಬೈಸಿಕಲ್‌ ಕಾರ್ಯಾಚರಣೆಯನ್ನು ಟ್ರಿನಿಟಿ ಟೆಕ್ನಾಲಜೀಸ್‌ ಸಾಫ್ಟ್ ವೇರ್‌ ಸೊಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ನಡೆಸುತ್ತಿದ್ದು, ಅದರ ನಿರ್ವಹಣೆ ಮಾಡುತ್ತಿದೆ. ಕೆಲವು ಬೈಸಿಕಲ್‌ ನಿಲ್ದಾಣಗಳಲ್ಲಿ ಸದಸ್ಯರು ಹಾಗೂ ಸಂಚಾರಿಗಳ ಕೊರತೆ ಎದ್ದು ಕಾಣುತ್ತಿದ್ದು, ಅಂತಹ ನಿಲ್ದಾಣಗಳನ್ನು ಬದಲಾಯಿಸುವ ಅಥವಾ ಬೇರೆಡೆ ಸ್ಥಳಾಂತರಿಸುವ ಚಿಂತನೆ ನಡೆದಿದೆ.

ಬೈಸಿಕಲ್‌ ಸವಾರರು ಉಚಿತ ಸವಾರಿ ಪಡೆಯಲು ಬಳಕೆದಾರರು ಮಾನ್ಯವಾದ ಗುರುತಿನ ಪುರಾವೆಯೊಂದಿಗೆ ಅದರದೇ ಆದ ಪ್ಲಾಟ್‌ ಫಾರ್ಮ್ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ನಿಯಮಿತ ಸುಂಕದ ರಚನೆ ಒಂದು ಗಂಟೆಗಿಂತ ಹೆಚ್ಚಿನ
ಸವಾರಿಗಾಗಿ ಸ್ಥಳದಲ್ಲಿರುತ್ತದೆ. ಬೈಸಿಕಲ್‌ ಟ್ರ್ಯಾಕಿಂಗ್‌ ಮತ್ತು ಸ್ವಯಂಚಾಲಿತ ಲಾಕಿಂಗ್‌ ವ್ಯವಸ್ಥೆ ಹೊಂದಿದ್ದು, ಸ್ಮಾರ್ಟ್‌ ತಂತ್ರಜ್ಞಾನ ಬಳಸಲಾಗಿದೆ. ಸುರಕ್ಷಿತ ಮತ್ತು ಪರಿಣಾಮಕಾರಿ ಬೈಸಿಕಲ್‌ ನಿರ್ವಹಣೆ ಜಾರಿ ಮಾಡಲಾಗಿದೆ.

ಪ್ರತಿ ಬೈಸಿಕಲ್‌ ನಿಲ್ದಾಣಗಳು ಸಿಸಿ ಕ್ಯಾಮರಾ ಕಣ್ಗಾವಲು ಹೊಂದಿದೆ. ಸವಾರರ ಸುರಕ್ಷತೆ ಮತ್ತು ಸೂಕ್ತ ವ್ಯವಸ್ಥೆ ನೀಡಲು ಬೈಸಿಕಲ್‌ಗ‌ಳು ನಿಯಮಿತ ನಿರ್ವಹಣೆ ತಪಾಸಣೆಗೆ ಮಾಡಿಸಲಾಗುತ್ತಿದೆ. ಬೈಸಿಕಲ್‌ ಒಂದು ಗಂಟೆ ಉಚಿತ ಸೇವೆಯಿಂದ ಸದಸ್ಯರಿಗೆ ಪ್ರೋತ್ಸಾಹ, ಹೊಸ ಸದಸ್ಯರ ಆಕರ್ಷಿಸುವ ನೀರಿಕ್ಷೆ ನಮ್ಮದಾಗಿದೆ. ಜತೆಗೆ ಹೆಚ್ಚಿನ ಬೈಸಿಕಲ್‌ ನಿಲ್ದಾಣಗಳನ್ನು ಮಾಡುವ ಚಿಂತನೆ ನಡೆದಿವೆ ಎಂದು ರಜನೀಶ ಗಂಜ್ಯಾಳ ತಿಳಿಸಿದ್ದಾರೆ.

ಬೈಸಿಕಲ್‌ ಬಳಕೆ ಉತ್ತೇಜಿಸಲು ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಆಯೋಜಿಸಿ ಈಗ “ಸವಾರಿ’ ಪಿಬಿಎಸ್‌ನ ಮೂರನೇ ವರ್ಷದ ಸಂಭ್ರಮಾಚರಣೆ ನಿಮಿತ್ತ ಪ್ರತಿದಿನ ಒಂದು ಗಂಟೆ ಉಚಿತ ಸವಾರಿಯ ವಿಶೇಷ ಯೋಜನೆ ಯೊಂದಿಗೆ ನೋಂದಣಿ ಹೆಚ್ಚಿಸಲು ನಿರ್ಧರಿಸಿದ್ದೇವೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ನೋಂದಣಿ ಮತ್ತು ಹೆಚ್ಚಿನ ಸೈಕಲ್‌ ಸವಾರ ನಿರೀಕ್ಷೆ ಹೊಂದಿದ್ದೇವೆ.
ರಜನೀಶ ಗಂಜ್ಯಾಳ,
ಟ್ರಿನಿಟಿ ಟೆಕ್ನಾಲಜೀಸ್‌ ಮತ್ತು ಸಾಫ್ಟ್‌ವೇರ್‌
ಸೊಲ್ಯೂಷನ್ಸ್‌ ಪ್ರೈವೇಟ್‌ ಮುಖ್ಯಸ್ಥ.

ಟಾಪ್ ನ್ಯೂಸ್

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ

Hunasu-Accident

ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ

yatnal–waqf

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

KSRTC

Ticket Price Hike: ನಾಲ್ಕು ನಿಗಮಗಳ ಬಸ್‌ ಪ್ರಯಾಣ ದರ ಇಂದು ಮಧ್ಯರಾತ್ರಿಯಿಂದಲೇ ಹೆಚ್ಚಳ

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Hubballi

Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

Hubballi: ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ… ಆರೋಪಿ ಕಾಲಿಗೆ ಗುಂಡೇಟು

Hubballi: ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ… ಆರೋಪಿ ಕಾಲಿಗೆ ಗುಂಡೇಟು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ

puttige-6-

Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ

train-track

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

1-ksde

CPCRI; ಅಡಿಕೆ ಉತ್ಪನ್ನ ಬಗ್ಗೆ ಸಂಶೋಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.