ಮದ್ಯಪಾನ ನಿರ್ಮೂಲನೆಯೇ ನಮ್ಮ ಉದ್ದೇಶ
ಮೌನ ತಪಸ್ವಿ ಶ್ರೀ ಜಡೆಯೊಡೆಯ ಶಾಂತಲಿಂಗ ಸ್ವಾಮಿಗಳ ಯುಗಾದಿ-ಅಷ್ಟ ದಶಮಾನೋತ್ಸವ ಸಮಾರಂಭ
Team Udayavani, Apr 4, 2022, 11:59 AM IST
ಹುಬ್ಬಳ್ಳಿ: ಮದ್ಯಪಾನದಿಂದ ಬಹಳಷ್ಟು ಸಂಸಾರಗಳು ಬೀದಿಪಾಲಾಗಿವೆ, ಆಗುತ್ತಲೇ ಇವೆ. ಇದನ್ನು ನಿರ್ಮೂಲನೆ ಮಾಡುವುದೇ ನಮ್ಮ ಉದ್ದೇಶ ಎಂದು ಶ್ರೀ ಜಡೆಯ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಸರ್ ಸಿದ್ದಪ್ಪ ಕಂಬಳಿ ರಸ್ತೆಯ ಬುಳ್ಳಾ ಪ್ರೆಸ್ ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೌನ ತಪಸ್ವಿ ಶ್ರೀ ಜಡೆಯೊಡೆಯ ಶಾಂತಲಿಂಗ ಸ್ವಾಮಿಗಳ ಯುಗಾದಿ ಮತ್ತು ಅಷ್ಟ ದಶಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮದ್ಯಪಾನದಿಂದ ಶರೀರ, ಸಂಸಾರ ಹಾಳಾಗುವುದರ ಜೊತೆಗೆ ಹಣ, ಮರ್ಯಾದೆ ಹೋಗುತ್ತದೆ. ಎಲ್ಲ ರೀತಿಯಿಂದಲೂ ಹಾನಿಯಾಗಿದೆ. ಇದನ್ನು ಸಾಧ್ಯವಾದಷ್ಟು ದೂರ ಮಾಡಬೇಕು. ಸರಕಾರ ಈ ಬಗ್ಗೆ ಯೋಚಿಸಬೇಕು. ನಾವು ಮಾಡುವ ಯಾವುದೇ ಕೆಲಸದ ಉದ್ದೇಶ ಒಳ್ಳೆಯದಾಗಿರಬೇಕು. ಅಂದಾಗ ಮಾತ್ರ ಯಶಸ್ಸು ದೊರೆಯುತ್ತದೆ ಎಂದರು.
ಮಾಜಿ ಸಿಎಂ ಜಗದೀಶ ಶೆಟ್ಟರ ಮಾತನಾಡಿ, ಭಾರತದಲ್ಲಿ ಸಾಮರಸ್ಯ ವಾತಾವರಣ ಇರುವುದರಿಂದಲೇ ವಿಶ್ವದಲ್ಲಿ ತನ್ನದೆಯಾದ ವೈಶಿಷ್ಟ್ಯತೆ ಹೊಂದಿದೆ. ಇದಕ್ಕೆಲ್ಲ ನಮ್ಮಲ್ಲಿಯ ಧಾರ್ಮಿಕತೆ, ಸಂಸ್ಕೃತಿ ಪರಂಪರೆಯೇ ಮೂಲ ಕಾರಣ. ಸಾಮರಸ್ಯದಿಂದ ಬದುಕುವುದು ಆಗಬೇಕಾದರೆ ದುದನಿಯ ಜಡೆಯ ಶ್ರೀಗಳಂಥವರ ಆಶೀರ್ವಾದ ಮುಖ್ಯ. ಅವರ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜಡೆ ಹಿರೇಮಠದ ಘನ ಬಸವ ಅಮರೇಶ್ವರ ಶಿವಾಚಾರ್ಯರು ಮಾತನಾಡಿ, ರಾಜ್ಯದಲ್ಲಿ ಸ್ವಾಮಿಗಳು ಹೆಚ್ಚಾಗಿದ್ದಾರೆ. ಆದರೆ ಸಂತರು, ಮಹಾಂತರು, ಸಾಧಕರು ಸಿಗುವುದು ಬಹಳ ಅಪರೂಪ. ಅಂಥವರಲ್ಲಿ ಜಡೆಯ ಶಾಂತಲಿಂಗ ಶ್ರೀಗಳು ಅಗ್ರಗಣ್ಯರಾಗಿದ್ದಾರೆ. ಮಹಾತ್ಮರು, ಸಂತರಿಗೆ ಕಷ್ಟಗಳು ತಪ್ಪಿಲ್ಲ. ಅದನ್ನು ಗೆದ್ದು ಬಂದವರೇ ಯೋಗಿಗಳು ಎಂದರು.
ಗೊಗ್ಗೆಹಳ್ಳಿಯ ಪಂಚಸಂಸ್ಥಾನ ಮಠದ ಶ್ರೀ ಸಂಗಮೇಶ್ವರ ಶಿವಾಚಾರ್ಯರು, ಮೂಡಿಯ ಸದಾಶಿವ ಸ್ವಾಮೀಜಿ, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿದರು.
ಶಾಸಕ ಶ್ರೀನಿವಾಸ ಮಾನೆ, ವಿಆರ್‌ಎಲ್ ಸಮೂಹ ಸಂಸ್ಥೆ ಚೇರ್ಮೆನ್ ಡಾ| ವಿಜಯ ಸಂಕೇಶ್ವರ, ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಅಣ್ಣಿಗೇರಿಯ ಆರ್.ಎ. ದೇಸಾಯಿ, ಮಲ್ಲಿಕಾರ್ಜುನ ಸಾವಕಾರ, ವೀರಣ್ಣ ಮಳಗಿ, ಬುಳ್ಳಾ ಕುಟುಂಬದ ಸದಸ್ಯರು ಮೊದಲಾದವರಿದ್ದರು.
ಯುಗಾದಿಗೆ ಒಮ್ಮೆ ಮಾತ್ರ ಮಾತನಾಡುವ ಮೌನತಪಸ್ವಿ ಶ್ರೀಗಳ ಆಶೀರ್ವಚನ ಕೇಳಲು ಬೆಂಗಳೂರು, ಕಲಬುರಗಿ, ಸೊಲ್ಲಾಪುರ, ದುದನಿ, ವಿಜಯಪುರ, ಬಾಗಲಕೋಟೆ, ಗದಗ, ಶ್ಯಾಗೋಟಿ, ಹುಬ್ಬಳ್ಳಿ-ಧಾರವಾಡ ಹಾಗೂ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಪಿ.ಡಿ. ಶಿರೂರ ಪ್ರಾಸ್ತಾವಿಕ ಮಾತನಾಡಿದರು.
ಎಲ್ಲ ಧರ್ಮಗಳ ಗುರಿ ಒಂದೇ ಆಗಿದೆ. ಅವರವರ ಆಚರಣೆಯ ಮಾರ್ಗ ಬೇರೆ ಬೇರೆ ಆಗಿದೆ. ಅವರ ಧರ್ಮ ಅವರಿಗೆ ಶ್ರೇಷ್ಠ. ಅವರಿಗೆ ಅನುಕೂಲವಾಗುವ ದಾರಿಯಲ್ಲಿ ಅವರು ಹೋಗುತ್ತಾರೆ. ಆದರೆ ನಿಮ್ಮ ಗುರುಗಳು ಹೇಳಿದ ಮಾರ್ಗ ಮಾತ್ರ ಬಿಡಬೇಡಿ. –ಶ್ರೀ ಜಡೆಯ ಶಾಂತಲಿಂಗ ಸ್ವಾಮೀಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.