ರಾಷ್ಟ್ರದಲ್ಲಿ ದೇವರನ್ನು ಕಾಣುತ್ತಿದ್ದ ಪೇಜಾವರ ಶ್ರೀ

ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳಲ್ಲಿ ದೇವ ಭಕ್ತಿ ದೇಶ ಭಕ್ತಿ ಬೇರೆ ಆಗಿರಲಿಲ್ಲ.

Team Udayavani, Nov 25, 2021, 5:22 PM IST

ರಾಷ್ಟ್ರದಲ್ಲಿ ದೇವರನ್ನು ಕಾಣುತ್ತಿದ್ದ ಪೇಜಾವರ ಶ್ರೀ

ಹುಬ್ಬಳ್ಳಿ: ಉಡುಪಿಯ ಪೇಜಾವರಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ದೇವರನ್ನು ರಾಷ್ಟ್ರದಲ್ಲಿ ಕಾಣುತ್ತಿದ್ದರು. ಹೀಗಾಗಿ ಅವರು ಹೋದಲ್ಲೆಲ್ಲ ರಾಷ್ಟ್ರ ದೇವೋಭವ ಎಂಬ ಉಪದೇಶ ಸಾರುತ್ತಿದ್ದರು ಎಂದು ಶ್ರೀ ಆದೋಕ್ಷಜ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಹೇಳಿದರು.

ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಮಂದಿರದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಳ ಹುಬ್ಬಳ್ಳಿ ಶಾಖೆ ಹಾಗೂ ದಕ್ಷಿಣ ದ್ರಾವಿಡ ಬ್ರಾಹ್ಮಣ ಸಮಾಜ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪದ್ಮವಿಭೂಷಣ ಪುರಸ್ಕೃತ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರಿಗೆ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳಲ್ಲಿ ದೇವ ಭಕ್ತಿ ದೇಶ ಭಕ್ತಿ ಬೇರೆ ಆಗಿರಲಿಲ್ಲ. ಹೀಗಾಗಿ ಅವರು ರಾಷ್ಟ್ರ ದೇವೋಭವ ಎಂಬ ಘೋಷಣೆ ಮಾಡಿದ್ದರು ಎಂದು ಹೇಳಿದರು.

ನಮ್ಮ ಸೇವೆ ಕೇವಲ ಗುಡಿ-ಗುಂಡಾರಗಳಲ್ಲಿ ಪೂಜೆ ಮಾಡಿದರೆ ಸಾಲದು. ನಮ್ಮ ಸೇವೆ ಪರಿಪೂರ್ಣವಾಗಬೇಕಾದರೆ ಸಮಾಜದಲ್ಲಿ ತಿರುಗಾಡಬೇಕು. ಎಲ್ಲರಲ್ಲೂ ಭಗವಂತನನ್ನು ಆರಾಧನೆ ಮಾಡಬೇಕು.ಯಾರಿಗೂ ಕೂಡ ಹಿಂಸೆ ಆಗದಂತೆ ಸಮಾಜದಲ್ಲಿ ಬದುಕಬೇಕು. ಎಲ್ಲರೂ ಸಂತೋಷ, ಸುಖದಿಂದ ಇರಬೇಕು. ಅಂದಾಗ ಮಾತ್ರ ಅಂತಹ ಸಮಾಜದಲ್ಲಿ ಸುಖ-ಶಾಂತಿ ನೆಲೆಸಲು ಸಾಧ್ಯವೆಂದು ಶ್ರೀಗಳು ಸಮಾಜದ ಎಲ್ಲರೊಂದಿಗೆ ಬೆರೆತು ಅವರಲ್ಲಿ ಶ್ರೀಕೃಷ್ಣನನ್ನು ಕಂಡರು. ಜೀವನ ಸವೆದರು. ಅಂತಹ ಗುರುಗಳನ್ನು ಪಡೆದ ನಾವೇ ಧನ್ಯರು ಎಂದರು.

ನಮ್ಮಲ್ಲಿ ಮುಖ್ಯವಾಗಿ ಬೇಕಿದ್ದು ದೇಶ ಮತ್ತು ದೇವ ಭಕ್ತಿ. ಆದರೆ ಇಂದು ದೇವ ಮತ್ತು ದೇಶ ಭಕ್ತಿಯಿಲ್ಲ. ಕೇವಲ ದೇಹ ಭಕ್ತಿಯಿದ್ದು, ಎಲ್ಲವೂ ನನಗೆ ಬೇಕು ಎಂಬುದಾಗಿದೆ. ಶ್ರೀಗಳು ದೇಶದುದ್ದಗಲಕ್ಕೂ ಸಂಚರಿಸಿ ಸಂಘಟನೆ ಮಾಡಿ ಸಮಾಜಕ್ಕೆ ಜವಾಬ್ದಾರಿ ಕೊಟ್ಟು ನಿಭಾಯಿಸಿದರು. ಭಾರತ ಸರಕಾರ ಉಡುಪಿ ಪೇಜಾವರಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳಿಗೆ ಅವರ ವ್ಯಕ್ತಿಗತ ಗುಣ ಗುರುತಿಸಿ ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದೆ ವಿನಃ ಯಾವುದೋ ಒಂದು ರಂಗದಲ್ಲಿ ಮಾಡಿದ ಸಾಧನೆಗಲ್ಲ ಎಂದರು.

ಶ್ರೀಕೃಷ್ಣ ಸಂಪಗಾಂವಕರ ಸ್ವಾಮೀಜಿ ಮಾತನಾಡಿ, ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಯತಿಗಳು ಸಮಾಜದಲ್ಲಿ ಹೇಗಿರಬೇಕೆಂಬುದನ್ನು ತಮ್ಮ ಕೃತಿಗಳ ಮೂಲಕ ಮಾಡಿ ತೋರಿಸಿದರು. ಶ್ರೀಗಳು ಎಂದೂ ತಮಗಾಗಿ ಬದುಕಲಿಲ್ಲ. ಸಮಾಜದ ಸೇವೆಯಲ್ಲೆ ತಮ್ಮ ಜೀವನ ಕಳೆದರು. ಮಾದರಿ ಸಂತರಾಗಿ ಬಾಳಿದರು ಎಂದರು.

ಧಾರವಾಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಮಾತನಾಡಿ, ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ತಮ್ಮ ಜೀವನ ಪೂರ್ತಿ ಧಾರ್ಮಿಕ, ಸಾಮಾಜಿಕ ಕಾರ್ಯ ಮಾಡಿದರು. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿದರು ಎಂದರು. ರಾಘವೇಂದ್ರ ಎಡನೀರು ಮಾತನಾಡಿದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಗೋವಿಂದ ಜೋಶಿ, ಶ್ರೀಕಾಂತ ಕೆಮೂ¤ರ, ಎ.ಸಿ. ಗೋಪಾಲ, ವಿನಾಯಕ ಆಕಳವಾಡಿ, ಗೋಪಾಲ ಜೋಶಿ, ಕೃಷ್ಣರಾಜ ಕೆಮೂ¤ರ, ಶ್ರೀಪಾದ ಸಿಂಗನಮಲ್ಲಿ, ಅನಂತಪದ್ಮನಾಭ ಐತಾಳ, ಗುರುರಾಜ ಬಾಗಲಕೋಟ, ಡಾ|ವಿ.ಜಿ. ನಾಡಗೌಡ, ಪಂ|ಸತ್ಯಮೂರ್ತಿ ಆಚಾರ, ವಸಂತ ನಾಡಜೋಶಿ, ಶಂಕರ ಪಾಟೀಲ, ರಾಘವೇಂದ್ರ ನಂಜನಗೂಡ, ಗೋಪಾಲ ಕುಲಕರ್ಣಿ, ಶ್ರೀಧರ ವಿ.ಎನ್‌., ಮನೋಹರ ಪರ್ವತಿ ಮೊದಲಾದವರಿದ್ದರು.

ಗೀತಾ ಸೋಮೇಶ್ವರ ಪ್ರಾರ್ಥಿಸಿದರು. ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಬದರಿ ಆಚಾರ್ಯ ನಿರೂಪಿಸಿದರು. ಅನಂತರಾಜ ಭಟ್‌ ವಂದಿಸಿದರು. ಸಮಾರಂಭಕ್ಕೂ ಮೊದಲು ದೇಶಪಾಂಡೆ ನಗರದ ಬಾಳಿಗಾ ಕ್ರಾಸ್‌ನಿಂದ ಶ್ರೀಕೃಷ್ಣ ಮಂದಿರವರೆಗೆ ಪದ್ಮ ವಿಭೂಷಣ ಪ್ರಶಸ್ತಿಯೊಂದಿಗೆ ಶೋಭಾಯಾತ್ರೆ ನಡೆಯಿತು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.