ಪೊಲೀಸ್-ಜನರು ಮಾಹಿತಿ ಕಾರ್ಯಾಗಾರ
112 ನಂಬರಿಗೆ ಪೋನ್ ಮಾಡಿ ಪೊಲೀಸ್ ಇಲಾಖೆಯ ಸಹಕಾರ ಪಡೆದುಕೊಳ್ಳಿ.
Team Udayavani, Nov 6, 2021, 7:18 PM IST
ಶಿರಸಿ: ತಾಲೂಕಿನ ಬಂಡಲ ಗ್ರಾಪಂ ಸಭಾ ಭವನದಲ್ಲಿ ಭಾರತ ಸ್ವಾತಂತ್ರೊÂàತ್ಸವದ ಅಮೃತ ಮಹೋತ್ಸವ ಅಂಗವಾಗಿ ಪ್ಯಾನ್‌ಇಂಡಿಯಾ ಅವೇರನೆಸ್ ಹಾಗೂ ಔಟ್ ರಿಚ್ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ಪೊಲೀಸ್ ಮತ್ತು ಜನಸಾಮಾನ್ಯರು ಎಂಬ ಮಾಹಿತಿ ಕಾರ್ಯಾಗಾರದಲ್ಲಿ ಗ್ರಾಮೀಣ ಭಾಗದ ಜನರು ಅನೇಕ ಸಂಶಯ, ಪ್ರಶ್ನೆ ಕೇಳಿ ಮಾಹಿತಿ ಪಡೆದುಕೊಂಡರು.
ಫೇಸ್‌ಬುಕ್‌ನಲ್ಲಿ ಡುಪ್ಲಿಕೇಟ್ ಅಕೌಂಟ್ ಮಾಡಿ ದುಡ್ಡು ಕೇಳುತ್ತಾರೆ. ಅಂತವರ ವಿರುದ್ಧ ಕಾನೂನು ಏನು ಹೇಳುತ್ತೆ? ಪೊಲೀಸರು ಖಾಸಗಿ ವ್ಯಕ್ತಿ ಮನೆ ಒಳಗೆ ಏಕಾಎಕಿಯಾಗಿ ಪ್ರವೇಶ ಮಾಡಬಹುದೋ? ಸಂಶಯದ ಆಧಾರದ ಮೇಲೆ ಯಾವುದೋ ವ್ಯಕ್ತಿಗೆ ಪೊಲೀಸರು ಹೊಡೆಯಬಹುದೋ? ಹೆಲ್ಮೇಟ್ ಧರಿಸಿ, ದಾಖಲೆ ಇಲ್ಲದಿದ್ದರೆ ಯಾವ ಅಧಿಕಾರಿ ದಂಡ ಹಾಕಬಹುದು? ಪೊಲೀಸರು ತನಿಖೆ ನೆಪದಲ್ಲಿ ಬೂಟ್ ಹಾಕಿ ಮನೆ ಒಳಗೆ ಬರಬಹುದೊ? ಹೀಗೆ ಮುಂತಾದ ಪ್ರಶ್ನೆಗಳನ್ನು ಗ್ರಾಮಸ್ಥರು ಪೊಲೀಸ್ ಅಧಿಕಾರಿಗಳಿಗೆ ನೇರಾ ನೇರ ಕೇಳಿದರು.
ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದ ಪೊಲೀಸರು, ಸುಳ್ಳು ಫೇಸ್‌ಬುಕ್ ಖಾತೆ ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿ ಬರುವ ಸಂದೇಶಕ್ಕೆ ನಂಬಿ ಮೋಸಕ್ಕೆ ಒಳಗಾಗದಿರಿ. ಇಂತಹ ಸಂದರ್ಭದಲ್ಲಿ 112 ನಂಬರಿಗೆ ಪೋನ್ ಮಾಡಿ ಪೊಲೀಸ್ ಇಲಾಖೆಯ ಸಹಕಾರ ಪಡೆದುಕೊಳ್ಳಿ. ಇತ್ತೀಚೆಗೆ ಸೈಬರ್ ಕ್ರೈಮ್ ಪ್ರಕರಣ ಹೆಚ್ಚುತ್ತಿರುವುದು ಆಘಾತಕರ. ಅನ್ಯಾಯಕ್ಕೆ ಒಳಗಾದಾಗ ನೇರವಾಗಿ ಪೊಲೀಸ್ ಠಾಣೆಗೆ ಸಂಪರ್ಕ ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಠಾಣಾಧಿಕಾರಿ ಈರಿಯ್ಯ ಡಿ.ಎಸ್. ಹೇಳಿದರು.
ವಕೀಲ ರವೀಂದ್ರ ನಾಯ್ಕ, ದೇಶದ ಸಂವಿಧಾನದಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸುವವರೆಗೂ ಅಪರಾಧಿಯ ಸ್ವತಂತ್ರತೆ ಮತ್ತು ಮೂಲಭೂತ ಹಕ್ಕಿನಿಂದ ವಂಚಿಸಲು ಸಾಧ್ಯವಿಲ್ಲ. ಮಾನವ ಹಕ್ಕು ಉಲ್ಲಂಘನೆಗೆ ಅವಕಾಶವಿಲ್ಲ. ಪೊಲೀಸ್ ಇಲಾಖೆಯ ಕರ್ತವ್ಯ ಜನಪರ ವಾಗಿರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ಸುಮಂಗಲ ನಾಯ್ಕ, ಮಹಿಳೆಯರ ಮೇಲೆ ದೌರ್ಜನ್ಯ ನಿಯಂತ್ರಿಸಲು ಪ್ರಬಲವಾದ ಕಾನೂನು ಇದ್ದಾಗಲೂ ಪೂರ್ಣ ಪ್ರಮಾಣದ ನ್ಯಾಯ ಒದಗಿಸಲು ಪೊಲೀಸ್ ಇಲಾಖೆ ಸಹಕರಿಸಬೇಕು ಎಂದರು.
ಪಿಡಿಒ ಪವಿತ್ರ ನಿರ್ವಹಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ತಿಮ್ಮ ಮರಾಠಿ, ಮಂಜುನಾಥ ಗೌಡ, ಸುಮನಾ ಚೆನ್ನಯ್ಯ ಇದ್ದರು. ಗ್ರಾಮಸ್ಥರ ಪರವಾಗಿ ಕೃಷ್ಣ ಮರಾಠಿ, ಗಜಾನನ ಹೆಗಡೆ, ಸುಮನಾ ಚೆನ್ನಯ್ಯ, ರಘುಪತಿ ಮರಾಠಿ, ಸುನಂಧ ಡಿ. ಮರಾಠಿ ಮುಂತಾದವರು ಪ್ರಶ್ನಾವಳಿಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
MUST WATCH
ಹೊಸ ಸೇರ್ಪಡೆ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.