ಶೇ.50 ಶುಲ್ಕ ವಿನಾಯ್ತಿಗೆ ಖಾಸಗಿ ಆಸ್ಪತ್ರೆಗಳು ಮುಂದಾಗಲು ಸಲಹೆ
Team Udayavani, Apr 25, 2021, 5:18 PM IST
ಹುಬ್ಬಳ್ಳಿ: ಕೋವಿಡ್-19 ಸಂಕಷ್ಟ ಸ್ಥಿತಿಯಲ್ಲಿರಾಜ್ಯದ ಖಾಸಗಿ ಆಸ್ಪತ್ರೆಗಳವರುಚಿಕಿತ್ಸಾ ಶುಲ್ಕದಲ್ಲಿ ಶೇ. 50 ಕಡಿತಮಾಡುವುದರೊಂದಿಗೆ ಸಾಮಾಜಿಕಹೊಣೆಗಾರಿಕೆ ತೋರಬೇಕು ಎಂದು ಕೇಂದ್ರಸಂಸದೀಯ ವ್ಯವಹಾರಗಳು,ಕಲ್ಲಿದ್ದಲು ಮತ್ತು ಗಣಿಸಚಿವ ಪ್ರಹ್ಲಾದ ಜೋಶಿಅಭಿಪ್ರಾಯಪಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿಸಚಿವ ಎಂ.ಬಿ. ಪಾಟೀಲರುವಿಜಯಪುರದಲ್ಲಿನ ಬಿಎಲ್‌ಡಿವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿಕಡಿಮೆ ಶುಲ್ಕದಲ್ಲಿ ಚಿಕಿತ್ಸೆ ನೀಡುವುದಾಗಿಹೇಳುವ ಮೂಲಕ ಮಾದರಿಯಾಗಿದ್ದಾರೆ.ರಾಜ್ಯದ ಇತರೆ ಖಾಸಗಿ ಆಸ್ಪತ್ರೆಯವರುಶೇ.50ರಷ್ಟು ಕಡಿಮೆ ಶುಲ್ಕದಲ್ಲಿ ಚಿಕಿತ್ಸೆನೀಡಲು ಮುಂದಾಗಬೇಕು. ಈನಿಟ್ಟಿನಲ್ಲಿ ದೊಡ್ಡ ಆಸ್ಪತ್ರೆಗಳವರೊಂದಿಗೆಚರ್ಚಿಸುವುದಾಗಿ ತಿಳಿಸಿದರು.
ಕೋವಿಡ್-19 ಎರಡನೇ ಅಲೆನಿಯಂತ್ರಕ್ಕೆ ಪೂರಕವಾಗಿ ಕರ್ನಾಟಕಸೇರಿದಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸರಕಾರಅಗತ್ಯ ಸಹಾಯ ನೀಡುತ್ತಿದೆ. ಕರ್ನಾಟಕಕ್ಕೆಆಕ್ಸಿಜನ್ ಪ್ರಮಾಣ ಹೆಚ್ಚಿಸಲು ಕೇಂದ್ರಕ್ರಮ ಕೈಗೊಂಡಿದೆ. ರಾಜ್ಯದ ಆರೋಗ್ಯಮತ್ತು ಕುಟುಂಬ ಸಚಿವರು ತಮ್ಮೊಂದಿಗೆಚರ್ಚಿಸಿದ್ದು, ಕೇಂದ್ರದಿಂದ ಅಗತ್ಯವಿರುವಎಲ್ಲ ಸಹಾಯಕ್ಕೆ ಯತ್ನಿಸುವುದಾಗಿತಿಳಿಸಿದ್ದೇನೆ. ಬೆಂಗಳೂರಿನಲ್ಲಿ ಸೋಂಕಿತರಸಂಖ್ಯೆ ಮಿತಿಮೀರುತ್ತಿದೆ.
ಜನರುಸೋಂಕಿನ ಬಗ್ಗೆ ಭಯಭೀತರಾಗುವುದುಬೇಡ. ಜತೆಗೆ ರೆಮ್‌ಡಿಸಿವಿರ್‌ಲಸಿಕೆಯೊಂದೇ ಕೋವಿಡ್‌ಗೆ ಅಂತಿಮ ಪರಿಹಾರಎಂಬ ಮನೋಭಾವದಿಂದಹೊರಬರಬೇಕು ಎಂದರು.ಇದೊಂದು ಅನಿರೀಕ್ಷಿತಸ್ಥಿತಿ ಆಗಿದ್ದು, ಇದನ್ನುಎದುರಿಸಬೇಕಾಗಿದೆ. ತಜ್ಞಹಿರಿಯ ವೈದ್ಯರ ಪ್ರಕಾರ ಇದು ಗಂಭೀರಸ್ಥಿತಿಯದ್ದಾಗಿದ್ದು, ಜನರು ಕಡ್ಡಾಯವಾಗಿಮಾಸ್ಕ್ ಧರಿಸುವುದು, ಸಾಮಾಜಿಕ ಅಂತರಕಾಯ್ದುಕೊಳ್ಳಬೇಕಾಗಿದೆ. ಧಾರವಾಡಜಿಲ್ಲಾಡಳಿತ ಕೊರೊನಾ ಸೋಂಕಿತರಿಗೆನೆರವಾಗುವ ನಿಟ್ಟಿನಲ್ಲಿ 10 ವಿಶೇಷಆಂಬ್ಯುಲೆನ್ಸ್‌ಗಳ ಸೇವೆ ಆರಂಭಿಸಿರುವುದುಅತ್ಯುತ್ತಮ ಕ್ರಮವಾಗಿದೆ ಎಂದುಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶಶೆಟ್ಟರ, ಶಾಸಕ ಶಂಕರ ಪಾಟೀಲಮುನೇನಕೊಪ್ಪ, ಜಿಲ್ಲಾ ಧಿಕಾರಿ ನಿತೇಶಪಾಟೀಲ, ತಹಶೀಲ್ದಾರರಾದ ಶಶಿಧರಮಾಡ್ಯಾಳ, ಪ್ರಕಾಶ ನಾಶಿ ಇನ್ನಿತರರುಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.