ಲಿಂ| ರಾಚೋಟೇಶ್ವರ ಸ್ವಾಮೀಜಿ ಪುಣ್ಯಾರಾಧನೆ
Team Udayavani, Nov 28, 2021, 11:49 AM IST
ಕುಂದಗೋಳ: ಲಿಂ| ರಾಚೋಟೇಶ್ವರ ಶ್ರೀಗಳು ಈ ಭಾಗದಲ್ಲಿ ಬಸವಾದಿ ಶರಣರ ತತ್ವಗಳನ್ನು ಜನರಿಗೆ ಬೋಧಿಸುವ ಮೂಲಕ ಲೋಕಕಲ್ಯಾಣಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಈ ಮಠದ ಶ್ರೇಯೋಭಿವೃದ್ಧಿಗಾಗಿ ಒಂದು ಲಕ್ಷ ರೂ. ನೀಡುವುದಾಗಿ ಚಿತ್ರದುರ್ಗದ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಕಮಡೊಳ್ಳಿಯಲ್ಲಿ ಶನಿವಾರ ಗುರುಲೋಚನೇಶ್ವರ ವಿರಕ್ತಮಠದ ಲಿಂ| ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಮೊದಲಿನ ಶ್ರೀಗಳಿಗೆ ಭಕ್ತರು ನೀಡಿದಸಹಕಾರವನ್ನು ಮಠದ ಉತ್ತರಾ ಧಿಕಾರಿಯಾಗಿರುವ ಶ್ರೀ ರಾಚೋಟೇಶ್ವರ ದೇವರು ಅವರಿಗೂ ನೀಡುವಂತೆ ಭಕ್ತರಿಗೆ ಹೇಳಿದರು. ಧಾರವಾಡದ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಈ ಮಠದ ಶ್ರೀಗಳು ಅಗಾಧ ಪಾಂಡಿತ್ಯ ಹೊಂದಿದ್ದು ತಮ್ಮ ಪ್ರವಚನದ ಮೂಲಕ ಅಜ್ಞಾನ ಹೋಗಲಾಡಿಸಿ ಭಕ್ತರಿಗೆ ಸನ್ಮಾರ್ಗ ನೀಡಿದ್ದಾರೆ ಎಂದರು.
ಶಿರಹಟ್ಟಿಯ ಶ್ರೀ ಫಕ್ಕೀರ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಮಠಗಳಿಗೆ ಭಕ್ತರೇ ಆಸ್ತಿಯಾಗಿದ್ದು ಲಿಂ| ಶ್ರೀಗಳು ಮಾಡಿರುವ ಕಾರ್ಯಗಳನ್ನು ನೆನೆದರು. ಶ್ರೀ ಶಿವಯೋಗಿ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ, ಶ್ರೀ ಬಸವಣ್ಣಜ್ಜನವರು, ಶ್ರೀ ಚನ್ನಬಸವ ದೇವರು, ಶ್ರೀ ಮಹಾಂತ ಸ್ವಾಮೀಜಿ, ಡಾ| ಸಿದ್ದರಾಮ ಶಿವಯೋಗಿಗಳು, ಮಹಾಂತ ಶ್ರೀಗಳು, ಮಾತೋಶ್ರೀ ಪ್ರಮೀಳಾ ತಾಯಿಯರು ಪಾಲ್ಗೊಂಡಿದ್ದರು. ಈರಣ್ಣ ಕೋಡಿ ಪ್ರಾಸ್ತಾವಿಕ ಮಾತನಾಡಿದರು.
ಚಂದ್ರಶೇಖರ ಜುಟ್ಟಲ ಸ್ವಾಗತಿಸಿದರು. ಶಿಕ್ಷಕ ಜಿ.ಸಿ. ಹಂಚಿನಾಳ ನಿರೂಪಿಸಿ, ವಂದಿಸಿದರು. ಇದಕ್ಕೂ ಮುನ್ನ 9ನೇ ಲಿಂ| ರಾಚೋಟೇಶ್ವರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಪೂಜೆ ವಿಧಿ-ವಿಧಾನಗಳು ಮುಂಜಾನೆ ನೆರವೇರಿದವು. ಮಠದ ಭಕ್ತರು ಗದ್ದುಗೆಗೆ ಹಣ್ಣು ಕಾಯಿ ಅರ್ಪಿಸಿ ನಮನ ಸಲ್ಲಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.