![1-lok-sabha](https://www.udayavani.com/wp-content/uploads/2024/12/1-lok-sabha-415x241.jpg)
ಕಲಿಕೆ-ಪರೀಕ್ಷೆಯಲ್ಲಿ ಆಮೂಲಾಗ್ರ ಸುಧಾರಣೆ
ಪದವಿ ಪಡೆದ ವಿದ್ಯಾರ್ಥಿಗಳು ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡಲು ಮುಂದಾಗಬೇಕು.
Team Udayavani, May 2, 2022, 5:21 PM IST
![ಕಲಿಕೆ-ಪರೀಕ್ಷೆಯಲ್ಲಿ ಆಮೂಲಾಗ್ರ ಸುಧಾರಣೆ](https://www.udayavani.com/wp-content/uploads/2022/05/Education-620x251.jpg)
ಹುಬ್ಬಳ್ಳಿ: ಎಂಜಿನಿಯರಿಂಗ್ ಶಿಕ್ಷಣದಲ್ಲಿ ಆಮೂಲಾಗ್ರ ಸುಧಾರಣೆ, ಕೌಶಲಯುತ ಪದವೀಧರರ ರೂಪನೆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಇಂಡಕ್ಷನ್ ಪ್ರೋಗ್ರಾಂ ಹಾಗೂ
ಪರೀಕ್ಷೆ ಸುಧಾರಣೆ ಕ್ರಮ ಕೈಗೊಳ್ಳಲಾಗಿದೆ. 21ನೇ ಶತಮಾನದ ತಂತ್ರಜ್ಞಾನಾಧಾರಿತ ಹಾಗೂ ಉದ್ಯಮಕ್ಕೆ ಪೂರಕ ಪಠ್ಯ ರಚನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಖೀಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು(ಎಸಿಟಿಇ) ಚೇರ್ಮನ್ನ್ ಡಾ| ಅನಿಲ ಸಹಸ್ರಬುದ್ಧೆ ಹೇಳಿದರು.
ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ 2 ಮತ್ತು 3ನೇ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಸಾಕಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಎಸಿಟಿಇ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಇದರ ಅನುಷ್ಠಾನಕ್ಕೆ ಕೆಎಲ್‌ಇ ತಾಂತ್ರಿಕ ವಿವಿ ನೋಡಲ್ ಏಜೆನ್ಸಿಯಾಗಿದೆ.
ಈಗಾಗಲೇ ಹಲವು ಕಾರ್ಯಾಗಾರ ಕೈಗೊಳ್ಳಲಾಗಿದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಪಠ್ಯ ಪರಿಷ್ಕರಣೆ ಆಗುತ್ತಿದ್ದು, ಕೆಲ ಸ್ವಾಯತ್ತ ಕಾಲೇಜುಗಳೂ ತಮ್ಮದೇ ಪಠ್ಯವನ್ನು ಹೊಂದುತ್ತಿವೆ. ಇಂದಿನ ಅವಶ್ಯಕತೆಯ ತಂತ್ರಜ್ಞಾನಾಧಾರಿತವಾಗಿ ಪಠ್ಯ ರಚನೆಗೆ ಒತ್ತು ನೀಡಲಾಗುತ್ತಿದೆ ಎಂದರು.
ಮೌಲ್ಯಯುತ ಹಾಗೂ ಕೌಶಲಯುತ ಎಂಜಿನಿಯರಿಂಗ್ ಪದವೀಧರರನ್ನು ರೂಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮೂರು ವಾರಗಳ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಉತ್ತಮ ನಾಗರಿಕನಾಗುವುದು, ಮೌಲ್ಯಾಧಾರಿತ ಚಿಂತನೆ, ಸಂಪರ್ಕ, ನೈತಿಕತೆ, ಸಮಗ್ರತೆ, ಉತ್ತಮ ಸಂವಹನದಂತಹ ಅಂಶಗಳ ಮೇಲೆ ಮನನ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಆರು ತಿಂಗಳು ಕೈಗಾರಿಕಾ ಭೇಟಿ, ವಿದ್ಯಾರ್ಥಿಗಳ ಚಿಂತನೆಗಳ ಪ್ರಯೋಗಕ್ಕೆ 24/7 ಪ್ರಯೋಗಾಲಯವನ್ನು ಕೆಲ ಕಾಲೇಜುಗಳು ಮಾಡುತ್ತಿವೆ. ಜತೆಗೆ ಅಟಲ್ ಅಕಾಡೆಮಿಯಿಂದ ಬೋಧಕರಿಗೂ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಉನ್ನತ ಶಿಕ್ಷಣಕ್ಕೆ ಭಾರತ ವಿಶ್ವಕ್ಕೆ ಮಾದರಿಯಾಗಿತ್ತು. ಗುರುಕುಲ ಪದ್ಧತಿ ಶಿಕ್ಷಣ ತನ್ನದೇ ಮಹತ್ವ ಹೊಂದಿತ್ತು. ನಲಂದಾ, ತಕ್ಷಶಿಲೆ ಸೇರಿದಂತೆ 17 ವಿಶ್ವವಿದ್ಯಾಲಯಗಳೂ ಭಾರತದಲ್ಲೇ ಇದ್ದವು. ಉನ್ನತ ಶಿಕ್ಷಣಕ್ಕೆ ವಿಶ್ವಕ್ಕೆ ಮಾರ್ಗದರ್ಶಿಯಾಗಿದ್ದ ಭಾರತ ಇಂದು ವಿಶ್ವದ ಅತ್ಯುತ್ತಮ 100 ವಿವಿಗಳಲ್ಲಿ ಒಂದು ಮಾತ್ರ ಸ್ಥಾನ ಪಡೆಯುವಂತಾಗಿದೆ. ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ಅವಶ್ಯವಾಗಿದೆ.
ಕೃತಕ ಬುದ್ಧಿಮತ್ತೆ, ಮಿಶನ್ ಲರ್ನಿಂಗ್, 3ಡಿ ಇವೆಲ್ಲವೂ ಭವಿಷ್ಯದಲ್ಲಿ ಉದ್ಯೋಗ ಕೌಶಲಕ್ಕೆ ಸಹಕಾರಿ ಆಗಲಿವೆ. ಕೃತಕ ಬುದ್ಧಿಮತ್ತೆಯನ್ನು ಮಾಧ್ಯಮಿಕ ಶಾಲೆ ಹಂತದಿಂದಲೇ ಪರಿಚಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ಶಿಕ್ಷಣ ಕಲಿಕೆ ನಿಂತಿರಲಿಲ್ಲ. ಆನ್‌ಲೈನ್ ಮೂಲಕ ಕಲಿಕೆ ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿ ಯುಟ್ಯೂಬ್, ಆನ್‌ಲೈನ್ ಮೂಲಕ ಕಲಿಯಬಹುದಾಗಿದೆ. ನಾನು ಇದೇ ಬಿವಿಬಿ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಕಲಿತ ಕಾಲೇಜು ಮರೆಯಬಾರದು. ಪದವಿ ಪಡೆದ ವಿದ್ಯಾರ್ಥಿಗಳು ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡಲು ಮುಂದಾಗಬೇಕು. ಭಾರತ ವಿಶ್ವಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಹೇಳಿದರು.
ಸುಸ್ಥಿರ ಬದುಕಿಗೆ ಆದ್ಯತೆ: ಕೆಎಲ್‌ಇ ತಾಂತ್ರಿಕ ವಿವಿ ನೀಡಿದ ಮೊದಲ ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಪದ್ಮಭೂಷಣ ಬಾಬಾಸಾಹೇಬ ಕಲ್ಯಾಣಿ, ನೀವೆಲ್ಲ ಭವಿಷ್ಯದ ತಂತ್ರಜ್ಞರು ಅಥವಾ ಉದ್ಯಮಿಗಳಾಗಿದ್ದೀರಿ. ಹೊಸ ಸವಾಲುಗಳ ಜತೆಗೆ ಹೊಸ ಅವಕಾಶಗಳು ಇವೆ. ತಂತ್ರಜ್ಞಾನ ವಿಕಸನ ಜತೆಗೆ ಭವಿಷ್ಯದ ಸಮಾಜ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಶೇ.30 ತಂತ್ರಜ್ಞಾನಧಾರಿತ ಮಾನವಸಂಪನ್ಮೂಲ ತಂತ್ರಜ್ಞಾನದ ನಾಯಕತ್ವ ವಹಿಸಿದ್ದು, ವಿಶ್ವದ ವಿವಿಧ ಕಂಪೆನಿಗಳ ಸಿಇಒಗಳಲ್ಲಿ ಬಹುತೇಕರು ಭಾರತೀಯ ಮೂಲದವರಾಗಿದ್ದಾರೆ.
ದೇಶದ 1.3 ಬಿಲಿಯನ್ ಜನರಿಗೆ ಡಿಜಿಟಲ್ ಸೌಲಭ್ಯ ವರ್ಗಾವಣೆ, 5ಜಿ, ಐಒಟಿ, ಸ್ವಚ್ಛವಾದ ಇಂಧನ ಕ್ಷೇತ್ರಗಳ ಮೇಲೆ ಹೂಡಿಕೆ ಮಾಡಲಾಗುತ್ತಿದೆ. ನವೋದ್ಯಮಕ್ಕೆ ಪೂರಕ ವಾತಾವರಣ ನಿಟ್ಟಿನಲ್ಲಿ ವಿಶ್ವದಲ್ಲಿಯೇ ಭಾರತ ಮಾದರಿಯಾಗಿದೆ. ಆತ್ಮನಿರ್ಭರ ಭಾರತ ಮಹತ್ವದ ಬದಲಾವಣೆ ತಂದಿದ್ದು, ಭವಿಷ್ಯದಲ್ಲಿ ವಿಶ್ವದಲ್ಲಿ ಭಾರತ ತಂತ್ರಜ್ಞಾನದ ನಾಯಕತ್ವ ವಹಿಸಲಿದೆ ಎಂದರು. ವಿವಿ ಕುಲಾಧಿಪತಿ ಡಾ| ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿದ್ದರು. ಇನ್ಫೋಸಿಸ್
ಪ್ರತಿಷ್ಠಾನದ ಚೇರ್ಮನ್ ಡಾ| ಸುಧಾಮೂರ್ತಿ, ಕುಲಪತಿ ಡಾ| ಅಶೋಕ ಶೆಟ್ಟರ ಇನ್ನಿತರರಿದ್ದರು.
ಟಾಪ್ ನ್ಯೂಸ್
![1-lok-sabha](https://www.udayavani.com/wp-content/uploads/2024/12/1-lok-sabha-415x241.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Battery theft at Dharwad District Collector’s Office](https://www.udayavani.com/wp-content/uploads/2024/12/dc-2-150x87.jpg)
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
![ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ](https://www.udayavani.com/wp-content/uploads/2024/12/eshwarappa-150x78.jpg)
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
![13-](https://www.udayavani.com/wp-content/uploads/2024/12/13-1-3-150x90.jpg)
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
![AV-Bellad](https://www.udayavani.com/wp-content/uploads/2024/12/AV-Bellad-150x90.jpg)
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
![Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ](https://www.udayavani.com/wp-content/uploads/2024/12/hub-150x86.jpg)
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![1-lok-sabha](https://www.udayavani.com/wp-content/uploads/2024/12/1-lok-sabha-150x87.jpg)
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
![CT Ravi](https://www.udayavani.com/wp-content/uploads/2024/12/CT-Ravi-1-150x97.jpg)
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
![Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು](https://www.udayavani.com/wp-content/uploads/2024/12/10-23-150x90.jpg)
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
![dhankar (2)](https://www.udayavani.com/wp-content/uploads/2024/12/dhankar-2-1-150x91.jpg)
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
![Yakshagana Tenku](https://www.udayavani.com/wp-content/uploads/2024/12/Yakshagana-Tenku-150x99.jpg)
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.