ಬಳ್ಳಾರಿ-ಗದಗ ಭಾಗದಲ್ಲಿ ಸುರಕ್ಷತೆ ಪರಿಶೀಲನೆ

ಬಳ್ಳಾರಿ, ಹೊಸಪೇಟೆ, ಮುನಿರಾಬಾದ್‌, ಗದಗ ರೈಲ್ವೆ ನಿಲ್ದಾಣ ತಪಾಸಣೆ

Team Udayavani, Mar 15, 2022, 3:01 PM IST

14

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಅವರು ಸೋಮವಾರ ಹುಬ್ಬಳ್ಳಿ ವಿಭಾಗದ ಬಳ್ಳಾರಿ-ಗದಗ ಭಾಗದಲ್ಲಿ ರೈಲುಗಳ ಕಾರ್ಯಾಚರಣೆಯಲ್ಲಿ ಸುರಕ್ಷತೆಗೆ ಸಂಬಂಧಿಸಿದ ಅಂಶಗಳ ಪರಿಶೀಲನೆ ಮಾಡಿದರು. ಬಳ್ಳಾರಿ, ಹೊಸಪೇಟೆ, ಮುನಿರಾಬಾದ್‌, ಗದಗ ನಿಲ್ದಾಣಗಳ ತಪಾಸಣೆ ನಡೆಸಿ ವಿಭಾಗದ ಕಾರ್ಯಕ್ಷಮತೆ ಪರಿಶೀಲಿಸಿದರು.

ರೈಲು ನಿಲ್ದಾಣಗಳ ಕಾರ್ಯಾಚರಣೆ, ನಿಲ್ದಾಣಗಳು ಮತ್ತು ವಸತಿ ಗೃಹಗಳ ನೈರ್ಮಲ್ಯ, ನೀರು ಸರಬರಾಜು, ನಿರೀಕ್ಷಣಾ ಕೊಠಡಿಗಳು, ಟಿಕೆಟ್‌ ಬುಕಿಂಗ್‌ ಕಚೇರಿಗಳು, ರನ್ನಿಂಗ್‌ ರೂಮ್‌, ಆರೋಗ್ಯ ಘಟಕಗಳು, ರೂಟ್‌ ರಿಲೇ ಇಂಟರ್‌ಲಾಕಿಂಗ್‌ ಕ್ಯಾಬಿನ್‌ ಗಳು, ಲಘು ಉಪಹಾರ ಗೃಹಗಳು ಹಾಗೂ ವಸತಿಗೃಹಗಳ ತಪಾಸಣೆ ಕೈಗೊಂಡರು.

ಬಳ್ಳಾರಿ, ಹೊಸಪೇಟೆ, ಮುನಿರಾಬಾದ್‌ ಮತ್ತು ಗದಗ ಯಾರ್ಡ್‌ಗಳಲ್ಲಿ ಪಾಯಿಂಟ್ಸ್‌ ಮತ್ತು ಕ್ರಾಸಿಂಗ್ಸ್‌ ಪರಿಶೀಲನೆ, ದರೋಜಿ ಮತ್ತು ಪಾಪಿನಾಯಕನಹಳ್ಳಿ ನಡುವೆ ಇಂಟರ್‌ ಲಾಕ್ಡ್ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 98-90, ಪಾಪಿನಾಯಕನಹಳ್ಳಿ ಮತ್ತು ಕಾರಿಗನೂರು ನಡುವೆ ಕರ್ವ್‌ ಸಂಖ್ಯೆ 9 ಮತ್ತು ಕಿರು ಸೇತುವೆ ಸಂಖ್ಯೆ 155, ಹೊಸಪೇಟೆ ಮತ್ತು ಮುನಿರಾಬಾದ್‌ ನಿಲ್ದಾಣಗಳ ನಡುವೆ ದೊಡ್ಡ ಸೇತುವೆ ಸಂಖ್ಯೆ 104 (ತುಂಗಭದ್ರಾ ಸೇತುವೆ) ಮತ್ತು ಕರ್ವ್‌ ಸಂಖ್ಯೆ 68 ಹಾಗೂ ಬಳ್ಳಾರಿ ಮತ್ತು ಮುನಿರಾಬಾದ್‌ ನಿಲ್ದಾಣಗಳಲ್ಲಿ ಸ್ಟೇಷನ್‌ ಮಾಸ್ಟರ್‌ ಪ್ಯಾನೆಲ್‌ ಕೊಠಡಿಗಳನ್ನು ಪರಿಶೀಲಿಸಲಾಯಿತು.

ಬಯಲುವೊಡ್ಡಿಗೇರಿ ಮತ್ತು ಪಾಪಿನಾಯಕನಹಳ್ಳಿ ನಡುವೆ ಗ್ಯಾಂಗ್‌ ಸಂಖ್ಯೆ 3ರ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು. ಹುಬ್ಬಳ್ಳಿ ವಿಭಾಗದ ಕಾರ್ಮಿಕ ಶಾಖೆ ಹೊರ ತಂದ ಎಲೆಕ್ಟ್ರಾನಿಕ್‌ ಎಚ್‌ಆರ್‌ಎಂಎಸ್‌ ಕೈಪಿಡಿ ಬಿಡುಗಡೆಗೊಳಿಸಿದರು.

ಬಳ್ಳಾರಿ-ದರೋಜಿ ನಿಲ್ದಾಣಗಳ ನಡುವೆ ಪ್ರತಿ ಗಂಟೆಗೆ 110 ಕಿ.ಮೀ. ವೇಗದಲ್ಲಿ ವೇಗ ಪರೀಕ್ಷೆ ನಡೆಸಲಾಯಿತು. ಈ ತಪಾಸಣೆ ಸಂದರ್ಭದಲ್ಲಿ ಕಿಶೋರ ಅವರು ಬಳ್ಳಾರಿಯಲ್ಲಿ 1.8 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಸೌಕರ್ಯಗಳಿಂದ ಸುಸಜ್ಜಿತವಾಗಿ ನಿರ್ಮಿಸಲಾದ 12 ಘಟಕಗಳ ನೂತನ ವಸತಿ ಗೃಹವನ್ನು ಸಿಬ್ಬಂದಿಗೆ ಸಮರ್ಪಿಸಿದರು.ಸಿಬ್ಬಂದಿ ಯೋಗಕ್ಷೇಮ ವಿಚಾರಿಸಿದರು.

ಬಳ್ಳಾರಿ ನಿಲ್ದಾಣದಲ್ಲಿ ಹೊಸದಾಗಿ ಅಭಿವೃದ್ಧಿ ಪಡಿಸಲಾದ ಉದ್ಯಾನವನದಲ್ಲಿ ಸೆಲಿ ಪಾಯಿಂಟ್‌ ಉದ್ಘಾಟಿಸಿದರು. ವಾಲಿಬಾಲ್‌ ಕೋರ್ಟ್‌, ಕೊಳ, ಒಳಚರಂಡಿ, ನೀರು ಸಂಸ್ಕರಣಾ ಘಟಕ, ಬುಕಿಂಗ್‌ ಕಾರ್ಯಾಲಯದಲ್ಲಿ ಡಿಜಿಟಲ್‌ ರಿಜಿಸ್ಟರ್‌, ಸ್ಮಾರ್ಟ್‌ ಕ್ಯೂಆರ್‌ ಕೋಡ್‌ ಆಧಾರಿತ ಗುರುತಿನ ಪತ್ರಗಳನ್ನು ಸಮರ್ಪಿಸಿದರು.

ಬಳ್ಳಾರಿ ನಿಲ್ದಾಣದಲ್ಲಿ ಗ್ಯಾಂಗ್‌ ಟೂಲ್‌ ರೂಮ್‌ ಉದ್ಘಾಟಿಸಿದರು.ಆರ್‌ಪಿಎಫ್‌ ಬರಾಕ್‌ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಇಲ್ಲಿನ ಆರೋಗ್ಯ ಘಟಕದಲ್ಲಿ ಇಲಾಖೆಗಳ ಪ್ರಧಾನ ಮುಖ್ಯಸ್ಥರಿಂದ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

ಹೊಸಪೇಟೆಯಲ್ಲಿ ಪಾರ್ಕಿಂಗ್‌ ಲಾಟ್‌, ರೈಲ್ವೆ ಕಾಲೋನಿ ಮತ್ತು ರುಟಿನ್‌ ಓವರ್‌ ಹಾಲಿಂಗ್‌ ಶೆಡ್‌ಗಳನ್ನು ಪರಿಶೀಲಿಸಿದರು. ಆರ್‌ಒಎಚ್‌ ಶೆಡ್‌ನ‌ಲ್ಲಿ ವಿಶ್ವೇಶ್ವರಯ್ಯ ಉದ್ಯಾನವನ ಉದ್ಘಾಟಿಸಿದರು. ಮುನಿರಾಬಾದ್‌ ನಿಲ್ದಾಣ ಪರಿಶೀಲಿಸಿದರು. ಗದಗ ನಿಲ್ದಾಣದಲ್ಲಿ ವೀಡಿಯೋ ಕಣ್ಗಾವಲು ವ್ಯವಸ್ಥೆ ಉದ್ಘಾಟಿಸಿದರು. ರೈಲ್ವೆ ಕಾಲೋನಿಯಲ್ಲಿ ಮಕ್ಕಳ ಉದ್ಯಾನವನ, ಬ್ಯಾಡ್ಮಿಂಟನ್‌ ಕೋರ್ಟ್‌ ಉದ್ಘಾಟಿಸಿದರು. ಆರ್‌ಪಿಎಫ್‌ ಬರಾಕ್‌ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ಉತ್ತಮವಾಗಿ ಕಾರ್ಯ ನಿರ್ವಹಿಸಿದ ಸಿಬ್ಬಂದಿಗೆ ಜಿಎಂ ಕಿಶೋರ ಅವರು ನಗದು ಬಹುಮಾನ ಘೋಷಿಸಿದರು.

ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ, ಪ್ರಧಾನ ಮುಖ್ಯ ಅಭಿಯಂತರ ಎಸ್‌.ಪಿ.ಎಸ್‌. ಗುಪ್ತ, ಪ್ರಧಾನ ಮುಖ್ಯ ಯಾಂತ್ರಿಕ ಅಭಿಯಂತರ ಸುಬ್ಬರಾವ್‌, ಪ್ರಧಾನ ಮುಖ್ಯ ಪರಿಚಾಲನಾ ವ್ಯವಸ್ಥಾಪಕ ಹರಿಶಂಕರ ವರ್ಮಾ, ಪ್ರಧಾನ ಮುಖ್ಯ ಎಲೆಕ್ಟ್ರಿಕಲ್‌ ಇಂಜಿನಿಯರ್‌ ಜೈಪಾಲ ಸಿಂಗ, ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಎ.ಎಸ್‌. ರಾವ್‌, ಪ್ರಧಾನ ಮುಖ್ಯ ಸಂಕೇತ ಮತ್ತು ದೂರಸಂಪರ್ಕ ಅಭಿಯಂತರ ಪಿ. ರಾಜಶೇಖರ, ಪ್ರಧಾನ ಮುಖ್ಯ ಸಾಮಗ್ರಿ ವ್ಯವಸ್ಥಾಪಕ ರಜನೀಶ ಗುಪ್ತ, ಪ್ರಧಾನ ಮುಖ್ಯ ಭದ್ರತಾ ಆಯುಕ್ತ ಅಲೋಕ ಕುಮಾರ, ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಅಲೋಕ ತಿವಾರಿ, ಪ್ರಧಾನ ಮುಖ್ಯ ಕಾರ್ಮಿಕ ಅಧಿಕಾರಿ ಅಲೋಕ ಕುಮಾರ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು, ಹುಬ್ಬಳ್ಳಿ ವಿಭಾಗದ ಶಾಖಾ ಮುಖ್ಯಸ್ಥರು, ಮೊದಲಾದವರಿದ್ದರು.

ಟಾಪ್ ನ್ಯೂಸ್

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.