ಪ್ರಯಾಣಿಕರು-ಸರಕು ಸಾಗಣೆಯಲ್ಲಿ ನೈಋತ್ಯ ರೈಲ್ವೆ ಮಹತ್ವದ ಪಾತ್ರ
Team Udayavani, Jan 27, 2021, 2:44 PM IST
ಹುಬ್ಬಳ್ಳಿ: ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲೂ ನೈಋತ್ಯ ರೈಲ್ವೆ ವಲಯ 268 ಶ್ರಮಿಕ ರೈಲುಗಳ ಮೂಲಕ ಅಂದಾಜು 3.91 ಲಕ್ಷ ಜನರನ್ನು ಅವರವರ ರಾಜ್ಯಗಳಿಗೆ ತಲುಪಿಸುವ ಹಾಗೂ 279 ಸರಕು ಸಾಗಣೆ ರೈಲುಗಳ ಮೂಲಕ 56 ಸಾವಿರ ಟನ್ ಅತ್ಯವಶಕ ಸಾಮಗ್ರಿ ಸಾಗಣೆ ಮಾಡಿದೆ ಎಂದು ವಲಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಹೇಳಿದರು.
ಗದಗ ರಸ್ತೆಯಲ್ಲಿರುವ ನೈಋತ್ಯ ರೈಲ್ವೆ ವಲಯ ಪ್ರಧಾನ ಕಚೇರಿ ರೈಲು ಸೌಧದಲ್ಲಿ 72ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಲಾಕ್‌ಡೌನ್ ಸಂದರ್ಭದಲ್ಲಿ ಐಆರ್ ಸಿಟಿಸಿಯಿಂದ ಸುಮಾರು 2.56 ಲಕ್ಷ ಊಟಗಳನ್ನು ವಿತರಣೆ ಮಾಡಲಾಗಿತ್ತು. ರೈಲು ಬೋಗಿಗಳನ್ನು ಐಸೋಲೇಶನ್
ವಾಡ್‌ಗಳಾಗಿ ಪರಿವರ್ತಿಸಿ ಕೋವಿಡ್ -19 ನಿರ್ವಹಣೆಗೆ ಸಮಗ್ರ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕೊರೊನಾ ವಾರಿಯರ್‌ಗೆ ಅಗತ್ಯವಾದ ಮಾಸ್ಕ್ ಇನ್ನಿತರೆ ವಸ್ತುಗಳನ್ನು ಸಿಬ್ಬಂದಿ ತಯಾರಿಸಿ ನೀಡಿದ್ದರು ಎಂದರು. ಪ್ರಸಕ್ತ ಸಾಲಿನಲ್ಲಿ 96 ಕಿಮೀ ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿದೆ. 110 ಕಿಮೀ ವಿದ್ಯುತೀಕರಣ ಪೂರ್ಣಗೊಂಡಿದೆ. 90 ದಿನಗಳಲ್ಲಿ ಲೋಂಡಾದಲ್ಲಿ ಅತೀ ಎತ್ತರದ ಸಬ್‌ವೇ ನಿರ್ಮಾಣ ಲಿಮ್ಕಾ ದಾಖಲೆಗೆ ಕಾರಣವಾಗಿದೆ.
ಇದನ್ನೂ ಓದಿ:ಗ್ಯಾಂಗ್‌ಸ್ಟರ್ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಶಾನ್ವಿ ಶ್ರೀವಾಸ್ತವ್
ಐತಿಹಾಸಿಕ ರೈಲ್ವೆ ಮ್ಯೂಸಿಯಂ ಉದ್ಘಾಟನೆ ಮೈಲುಗಲ್ಲಾಗಿದೆ. 113 ವರ್ಷದ ಹಿಂದಿನ ದೇವರಗುಡಿಹಾಳ ಕೆರೆ ಅಭಿವೃದ್ಧಿ, ಹಸಿರು ಕಾರಿಡಾರ್ ಅಡಿಯಲ್ಲಿ 50 ಉದ್ಯಾನಗಳನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದು ವಿವರಿಸಿದರು.
ಆರ್‌ಪಿಎಫ್, ಶ್ವಾನ ದಳದಿಂದ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ.ಮಿಶ್ರಾ, ಹಿರಿಯ ಅ ಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.