ಆಯುಷ್‌ ವೈದ್ಯರ ಬಗ್ಗೆ ರಾಜ್ಯ ಸರ್ಕಾರದ ಅನಾದರ..

ಸಮರ್ಪಕ ವೇತನ, ಸೇವಾಭದ್ರತೆ ನೀಡದೆ ಅನಾಥರನ್ನಾಗಿಸುವ ಯತ್ನ ಎಂದು ವೈದ್ಯರ ಅಳಲು

Team Udayavani, Oct 23, 2022, 3:43 PM IST

16

ಹುಬ್ಬಳ್ಳಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದ್ದ ಕಡೆ ಹಾಗೂ ಹೆಚ್ಚುವರಿಯಾಗಿ 686 ಆಯಷ್‌ ವೈದ್ಯರನ್ನು ಗುತ್ತಿಗೆಯಾಧಾರದಲ್ಲಿ ನೇಮಿಸಿದ್ದ ಸರ್ಕಾರ, ಸುಮಾರು 15 ವರ್ಷ ಅವರ ಸೇವೆ ಪಡೆಯುವುದಲ್ಲದೇ ಅವರಿಗೆ ಸಮರ್ಪಕ ವೇತನ, ಸೇವಾಭದ್ರತೆ ನೀಡದೆ ಅನಾಥರನ್ನಾಗಿಸುವ ಯತ್ನಕ್ಕೆ ಮುಂದಾಗಿದೆ.

ಒಂದು ಕಡೆ ಕೇಂದ್ರ ಸರ್ಕಾರ ಭಾರತೀಯ ವೈದ್ಯ ಪದ್ಧತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಳ್ಳುತ್ತಿದ್ದರೆ, ಇನ್ನೊಂದು ಕಡೆ ರಾಜ್ಯ ಸರ್ಕಾರ ಸರಿಸುಮಾರು ಒಂದೂವರೆ ದಶಕಗಳಿಂದ ವಿವಿಧ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಿಂದ ಆಯುಷ್‌ ವೈದ್ಯರ ಸೇವೆ ಪಡೆಯುತ್ತಿದ್ದರೂ, ನಮಗೆ ಸೇವಾ ಭದ್ರತೆ ಯಾಗಲಿ, ಸಮರ್ಪಕ ವೇತನವಾಗಲಿ, ವಿವಿಧ ಸೌಲಭ್ಯಗಳನ್ನಾಗಲಿ ನೀಡುತ್ತಿಲ್ಲ ಎಂಬ ಅಳಲು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಲುತ್ತಿರುವ ಆಯುಷ್‌ ವೈದ್ಯರದ್ದಾಗಿದೆ.

ಕೆಲಸಕ್ಕಿರಲಿ ಸೌಲಭ್ಯ ಬೇಡ: ಕೇಂದ್ರ ಸರ್ಕಾರ ಪ್ರಾಯೋಜಿತ ರಾಷ್ಟ್ರೀಯ ಆರೋಗ್ಯ ಅಭಿಯಾನ ದಡಿ ರಾಜ್ಯದಲ್ಲಿ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಇಲ್ಲದ ಕಡೆ ಹಾಗೂ ವೈದ್ಯರು ಇದ್ದ ಕಡೆಗಳಲ್ಲಿ ಹೆಚ್ಚುವರಿ ವೈದ್ಯರು ಎಂದು ಬಿಎಎಂಎಸ್‌, ಬಿಎಚ್‌ಎಂಎಸ್‌ ಪದವಿ ಪಡೆದ ಆಯುಷ್‌ ವೈದ್ಯರನ್ನು ಅವರ ಅರ್ಹತೆ ಹಾಗೂ ಮೀಸಲಾತಿ ಅಡಿಯಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು 2008ರಲ್ಲಿ ಎನ್‌ಆರ್‌ ಎಚ್‌ಎಂ(ಇದೀಗ ಎನ್‌ಎಚ್‌ಎಂ ಆಗಿದೆ) ಅಡಿಯಲ್ಲಿ ನೇಮಕ ಮಾಡಿದ್ದರು.

2008ರಲ್ಲಿ ಇವರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದಾಗ ವೈದ್ಯರಿಗೆ ಕೇವಲ 6 ಸಾವಿರ ರೂ. ಮಾಸಿಕ ವೇತನ ನೀಡಲಾಗುತ್ತಿತ್ತು. 2016-17ರಲ್ಲಿ ಕೇಂದ್ರ ಸರ್ಕಾರ ಆಯುಷ್‌ ವೈದ್ಯರಿಗೆ ಕನಿಷ್ಠ 25 ಸಾವಿರ ರೂ. ವೇತನ ನೀಡ ಬೇಕೆಂದು ಸೂಚಿಸಿದ್ದರೂ ಇಂದಿಗೂ ಆಯುಷ್‌ ವೈದ್ಯರಿಗೆ ಕನಿಷ್ಠ ವೇತನ ದೊರೆಯುತ್ತಿಲ್ಲ. ಪ್ರಸ್ತುತ ಮಾಸಿಕ 23 ಸಾವಿರ ರೂ. ವೇತನ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಸಮಾನ ಕೆಲಸಕ್ಕೆ ಸಮಾನ ವೇತನ ಎಂದು ಹೇಳುತ್ತಿದೆಯಾದರೂ ಎನ್‌ಎಚ್‌ಎಂ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು 14-15 ವರ್ಷ ಸೇವೆ ಸಲ್ಲಿಸಿದರೂ ಆಯುಷ್‌ ವೈದ್ಯರಿಗೆ ಸಮಾನ ವೇತನವಿರಲಿ, ಕನಿಷ್ಠ ವೇತನ-ಸೌಲಭ್ಯಗಳು ಇಲ್ಲದಂತಾಗಿದೆ.

ರಾಜ್ಯ ಸರ್ಕಾರ 2020ರಲ್ಲಿ ವೈದ್ಯರ ವೇತನ ಪರಿಷ್ಕರಿಸಿ ಆದೇಶ ಹೊರಡಿಸಿತ್ತು. ಎಂಬಿಬಿಎಸ್‌ ವೈದ್ಯರಿಗೆ ಮಾಸಿಕ 60 ಸಾವಿರ ರೂ.ವರೆಗೆ ಹಾಗೂ ಎನ್‌ ಎಚ್‌ಎಂ ಹೊರತುಪಡಿಸಿ ಆಯುಷ್‌ ವೈದ್ಯ ರಿಗೆ ಮಾಸಿಕ 45 ಸಾವಿರ ರೂ.ಗಳ ವೇತನ ಪರಿಷ್ಕರಿಸಲಾಗಿದೆ. ಪರಿಷ್ಕೃತ ಭಾಗ್ಯ ಮಾತ್ರ 15 ವರ್ಷಗಳಿಂದ ಎನ್‌ಎಚ್‌ಎಂ ಅಡಿ ಸೇವೆ ಸಲ್ಲಿಸುತ್ತಿರುವ ಆಯುಷ್‌ ವೈದ್ಯರಿಗೆ ದೊರೆತಿಲ್ಲ.

ಎಂಬಿಬಿಎಸ್‌ ಹಾಗೂ ಸರ್ಕಾರದಿಂದ ನೇಮಕಗೊಂಡ ಆಯುಷ್‌ ವೈದ್ಯರೊಂದಿಗೆ ಸರಿಸಮಾನ ವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ವೇತನ ಮತ್ತು ಸೌಲಭ್ಯ, ಸೇವಾ ಸೌಲಭ್ಯಗಳಲ್ಲಿ ವ್ಯತ್ಯಾಸವಿದೆ. ಜತೆಯಲ್ಲಿದ್ದುಕೊಂಡೇ ಅವರಷ್ಟೇ ಸೇವೆ ನೀಡಿದರೂ, ಹೇಳಿಕೊಳ್ಳುವುದಕ್ಕೆ ವೈದ್ಯರು ಆದರೆ, ಅದೇ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರರಿಗೆ ಇರು ವಷ್ಟು ವೇತನ ಪಡೆದು ಬದುಕಬೇಕಾದ ಸ್ಥಿತಿ ಆಯುಷ್ಯ ವೈದ್ಯರದ್ದಾಗಿದೆ.

ಕಾರ್ಮಿಕ ಇಲಾಖೆ ಅಧಿಸೂಚನೆಯಂತೆ ಆಯುಷ್‌ ವೈದ್ಯರಿಗೆ ಕನಿಷ್ಠ 40 ಸಾವಿರ ರೂ. ವೇತನ ನೀಡಬೇಕೆಂದು 2017ರಲ್ಲಿಯೇ ಸೂಚಿಸಿ ದ್ದರೂ ಇದುವರೆಗೂ ಅದು ಅನುಷ್ಠಾನಗೊಂಡಿಲ್ಲ. ರಾಜ್ಯ ಸರ್ಕಾರ 2020ರಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆಯುಷ್‌ ವೈದ್ಯರ ವೇತನ ಮಾಸಿಕ 40 ಸಾವಿರ ರೂ.ಗಳಿಗೆ ಹೆಚ್ಚಿಸಲಿದ್ದು, ಅದಕ್ಕೆ ವಾರ್ಷಿಕ 16 ಕೋಟಿ ರೂ. ವ್ಯಯವಾಗಲಿದೆ ಎಂದು ತಿಳಿಸಿದೆ. ಅಷ್ಟೇ ಅಲ್ಲ, ಇದೇ ವರ್ಷ ಮಾರ್ಚ್‌ನಲ್ಲಿ ನಡೆದ ಅಧಿವೇಶನದಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ನರ್ಸಿಂಗ್‌ ಹೋಂಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಆಧಾರಿತ ಆಯುಷ್‌ ವೈದ್ಯರಿಗೆ ಮಾಸಿಕ 40 ಸಾವಿರ ರೂ.ವೇತನ ನಿಗದಿಪಡಿಸಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿಕೆ ನೀಡಿದ್ದರೂ ಈ ದಿನದವರೆಗೂ ಆಯುಷ್‌ ವೈದ್ಯರು ಪಡೆಯುತ್ತಿರುವ ಮಾಸಿಕ 23 ಸಾವಿರ ರೂ. ವೇತನದಲ್ಲಿ ಒಂದು ರೂಪಾಯಿಯೂ ಹೆಚ್ಚಳವಾಗಿಲ್ಲ.

2008ರಿಂದಲೇ ಸೇವೆ ಸಲ್ಲಿಸುತ್ತಿರುವ ಸುಮಾರು 686 ಆಯುಷ್‌ ವೈದ್ಯರಿಗೆ ಇಂದಿಗೂ ಸೇವಾಭದ್ರತೆಯ ಯಾವ ಭರವಸೆಯೂ ಇಲ್ಲ.

ಎನ್‌ಎಚ್‌ಎಂ ಯೋಜನೆಯಡಿಯಲ್ಲಿಯೇ ನೇಮಕಗೊಂಡು ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ನೆರೆಯ ಗೋವಾ, ಆಂಧ್ರಪ್ರದೇಶ, ಮಧ್ಯಪ್ರದೇಶ ಇನ್ನಿತರೆ ಕಡೆಗಳಲ್ಲಿ 50-80 ಸಾವಿರ ರೂ.ಗಳವರೆಗೆ ವೇತನ ನೀಡಲಾಗುತ್ತದೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಮಾಸಿಕ 23 ಸಾವಿರ ರೂ. ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಕರ್ನಾಟಕ ಆಯುಷ್‌ ವೈದ್ಯಾಧಿಕಾರಿಗಳ ಸಂಘದ ಡಾ|ಸುರೇ ಶಾಚಾರ್ಯ ಹಾಗೂ ಡಾ| ಮಹಾವೀರ ಹಾವೇರಿ ಅವರ ಪಶ್ನೆಯಾಗಿದೆ.

ವೈದ್ಯರು ಇಲ್ಲದ ಸಂದರ್ಭದಲ್ಲಿ ಸರ್ಕಾರ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಗುತ್ತಿಗೆಯಡಿ ನೇಮಿಸಿಕೊಂಡು ಕಳೆದ 15 ವರ್ಷಗಳಿಂದ ಸೇವೆ ಪಡೆದಿದೆ. ಆಡಳಿತಾತ್ಮಕ ವಿಷಯಗಳನ್ನು ಹೊರತು ಪಡಿಸಿ ಉಳಿದೆಲ್ಲ ಸೇವೆಗಳನ್ನು ಸಮಾನವಾಗಿ ನೀಡಿದ್ದೇವೆ. ಕೋವಿಡ್‌ ಸಂದರ್ಭದಲ್ಲೂ ಸೇವೆ ಸಲ್ಲಿಸಿದ್ದು, ಸೇವಾ ಭದ್ರತೆಯೂ ಇಲ್ಲ, ಸಮರ್ಪಕ ವೇತನವೂ ಇಲ್ಲವೆಂದರೆ ಹೇಗೆ. ಮಾಸಿಕ ವೇತನವನ್ನು 23 ಸಾವಿರ ರೂ.ನಿಂದ 60 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ●ಡಾ|ಸಿ.ದೇವಿಪ್ರಸಾದ, ಅಧ್ಯಕ್ಷರು, ಕರ್ನಾಟಕ ಆಯುಷ್‌ ವೈದ್ಯಾಧಿಕಾರಿಗಳ ಸಂಘ

-ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Bid for 2036 Olympics: Official application from India to IOC

Olympics; 2036ರ ಒಲಿಂಪಿಕ್ಸ್‌ಗೆ ಬಿಡ್‌: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ

R.Ashok

Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್‌ ರಾಜೀನಾಮೆಗೆ ಬಿಜೆಪಿ ಪಟ್ಟು

Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ

Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ

LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!

LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!

ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !

ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !

Supreme Court upheld the validity of the UP Madarsa Act

Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ

ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

BJP ಡಬಲ್‌ ಗೇಮ್‌; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು

BJP ಡಬಲ್‌ ಗೇಮ್‌; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು

Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್

Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್

siddaramaiah

Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Bid for 2036 Olympics: Official application from India to IOC

Olympics; 2036ರ ಒಲಿಂಪಿಕ್ಸ್‌ಗೆ ಬಿಡ್‌: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ

R.Ashok

Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್‌ ರಾಜೀನಾಮೆಗೆ ಬಿಜೆಪಿ ಪಟ್ಟು

Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ

Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ

LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!

LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.