ಎಸ್‌ಎಸ್‌ಕೆ ಸಮಾಜ ರಾಜ್ಯಮಟ್ಟದ ಚಿಂತನ-ಮಂಥನ ಸಭೆ
Team Udayavani, Jul 11, 2022, 6:12 PM IST
ಹುಬ್ಬಳ್ಳಿ: ಎಸ್‌ಎಸ್‌ಕೆ ಸಮಾಜ ಚಿಂತನ- ಮಂಥನ ಸಮಿತಿ ಕರ್ನಾಟಕ ವತಿಯಿಂದ ಕೇಶ್ವಾಪುರ ಕುಸುಗಲ್ಲ ರಸ್ತೆ ಶಬರಿ ನಗರದ ಎಸ್ ಎಸ್‌ಕೆ ಹಾಲ್‌ನಲ್ಲಿ ಸಮಾಜದ ಗೋತ್ರಾವಳಿ/ ವಂಶಾವಳಿಯ ಮಹತ್ವ ಹಾಗೂ ಸಮಾಜದ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಸರಕಾರಿ ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ರಾಜ್ಯಮಟ್ಟದ ಚಿಂತನ-ಮಂಥನ ಸಭೆ ಶನಿವಾರ ನಡೆಯಿತು.
ಜ್ಯೋತಿಷ್ಯ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಶ್ರೀ ಭಾರತೀಶಾಚಾರ್ಯ ಹಾಗೂ ಆಯುರ್ವೇದ ವೈದ್ಯ ರಾಜು ದಾವಿ ಮಾತನಾಡಿ, ಶಾಸ್ತ್ರದಲ್ಲಿ ಸ್ವಗೋತ್ರದಲ್ಲಿ ವಿವಾಹ ನಿಷಿದ್ಧ. ಆದರೂ ಸ್ವಗೋತ್ರದಲ್ಲಿ ಮದುವೆಯಾದರೆ ಹುಟ್ಟುವ ಮಕ್ಕಳು ವಿಕಲಾಂಗರಾಗಿ ಹುಟ್ಟುತ್ತಾರೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇದರಿಂದ ಹಲವಾರು ರೋಗಗಳು ಬರುವ ಸಾಧ್ಯತೆ ಬಹಳ. ಯಾರು ಸ್ವಗೋತ್ರದಲ್ಲಿ ವಿವಾಹವಾಗುವ ದುಸ್ಸಾಹಸ ಮಾಡಿ ತಮ್ಮ ಪೀಳಿಗೆ ಕಷ್ಟಕ್ಕೆ ನೂಕಬೇಡಿ ಎಂದರು.
ಸಮಿತಿ ಪ್ರಮುಖ ಹನುಮಂತಸಾ ನಿರಂಜನ, ಸರಕಾರದ ದಾಖಲಾತಿಯಲ್ಲಿ ನಮ್ಮ ಸಮಾಜ ಒಬಿಸಿ 2ಎ ವರ್ಗದಲ್ಲಿದೆ. ಈಗಾಗಲೇ ನಾವು ಈ ವರ್ಗದಲ್ಲಿ ಸುಮಾರು 26 ಸಮಾಜದವರಿದ್ದು, ಈಗ ಕರ್ನಾಟಕದ ಬಹುದೊಡ್ಡ ಸಮಾಜದವರು ಸಹ ಒಬಿಸಿ 2ಎ ವರ್ಗದಲ್ಲಿ ಬರಲು ಹೋರಾಟ ಮಾಡುತ್ತಿದ್ದಾರೆ. ಆದ್ದರಿಂದ ನಾವು ನಮ್ಮ ಸಮಾಜವನ್ನು ಎಸ್‌ಸಿ/ ಎಸ್‌ಟಿ ಅಥವಾ 1ಎ ಇವುಗಳಲ್ಲಿ ಯಾವ ವರ್ಗದಲ್ಲಿ ಸೇರಿಸಿದರೆ ಅನುಕೂಲವಾಗುವುದು ಎಂಬ ಅಧ್ಯಯನಕ್ಕಾಗಿ ರಾಜ್ಯಮಟ್ಟದ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.
ಬಾಲಯೋಗಿನಿ ಮಹಾತಪಸ್ವಿ ಜಯಶ್ರೀ ಮಾತಾಜೀ, ಅಖಂಡ ಬ್ರಹ್ಮಚಾರಿತಾರಾನಾಥ ಮಹಾರಾಜರು, ಡಿ.ಸಿ. ಬಾಕಳೆ ಸಾನ್ನಿಧ್ಯ ವಹಿಸಿದ್ದರು. ಟಿ.ಎಂ. ಮೆಹರವಾಡೆ ಅಧ್ಯಕ್ಷತೆ ವಹಿಸಿದ್ದರು.
ಪ್ರಕಾಶಸಾ ಚೌವ್ಹಾಣ ಹಾಗೂ ಚತುಭುìಜಸಾ ಚೌವ್ಹಾಣ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪ್ರಮುಖರಾದ ವಿಠ್ಠಲ ಲದವಾ, ಕೃಷ್ಣಮೂರ್ತಿ ರಂಗ್ರೇಜ, ಎ.ಟಿ. ಪವಾರ, ಸುನೀಲ ವಾಳ್ವೆàಕರ, ಶ್ರೀಕಾಂತ ಹಬೀಬ, ಮಂಜುನಾಥ ಮಿಸ್ಕಿನ, ಅಭಿಷೇಕ ನಿರಂಜನ, ಸಾಗರ ಪವಾರ, ಹರೀಶ ಜರತಾರಘರ, ವಿನಾಯಕ ಕಬಾಡೆ, ಶಂಕರ ಪೂಜಾರಿ ಇನ್ನಿತರರಿದ್ದರು.
ಸರಳಾ ಬಾಂಢಗೆ, ರಾಜಶ್ರೀ ಜಡಿ, ನೀತು ಮೇತ್ರಾಣಿ ನಿರೂಪಿಸಿದರು. ಹೀರಾ ಸೋಳಂಕಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.