ರಾಜ್ಯಕ್ಕೆ ಟಾಟಾ ಸೆಮಿ ಕಂಡಕ್ಟರ್ ಸೆಳೆಯಲು ಬೇಕಿದೆ ಇಚ್ಛಾಶಕ್ತಿ

ತೆಲಂಗಾಣ-ತಮಿಳುನಾಡಿನಿಂದ ಇದೆ ಪೈಪೋಟಿ

Team Udayavani, Apr 25, 2022, 10:06 AM IST

4

ಹುಬ್ಬಳ್ಳಿ: ಟಾಟಾ ಕಂಪೆನಿ ಸೆಮಿಕಂಡಕ್ಟರ್‌ ಅಸೆಂಬ್ಲಿ ಮತ್ತು ಪರೀಕ್ಷೆ ಯುನಿಟ್‌ ನ್ನು ಸ್ಥಾಪಿಸಲು ಮುಂದಾಗಿದ್ದು, ಕರ್ನಾಟಕದ ಸೇರಿದಂತೆ ದಕ್ಷಿಣದ ಮೂರು ರಾಜ್ಯಗಳಲ್ಲಿ ಆಸಕ್ತಿ ಹೊಂದಿದೆ. ರಾಜ್ಯಕ್ಕೆ ಇದನ್ನು ಆಕರ್ಷಿಸುವ ನಿಟ್ಟಿನಲ್ಲಿ ಸರಕಾರ ಆಸಕ್ತಿ ತೋರಬೇಕಾಗಿದ್ದು, ಇತರೆ ಎರಡು ರಾಜ್ಯಗಳ ಪೈಪೋಟಿಯನ್ನು ಮೆಟ್ಟಿ ನಿಂತು ಕಂಪೆನಿ ಇಲ್ಲಿಯೇ ನೆಲೆಗೊಳ್ಳುವ ನಿಟ್ಟಿನಲ್ಲಿ ಆಕರ್ಷಣಿಯ ಕ್ರಮಗಳಿಗೆ ಮುಂದಾಗಬೇಕಾಗಿದೆ.

ಸಾಫ್ಟ್‌ವೇರ್‌ನಲ್ಲಿ ಟಿಸಿಎಸ್‌ ಮೂಲಕ ತನ್ನದೇ ಖ್ಯಾತಿ ಹೊಂದಿರುವ ಟಾಟಾ ಕಂಪೆನಿ ಹಾರ್ಡ್‌ವೇರ್‌ ಉತ್ಪನ್ನಗಳತ್ತ ಆಸಕ್ತಿ ತೋರಿದ್ದು, ಇದರ ಭಾಗವಾಗಿ ಸೆಮಿಕಂಡಕ್ಟರ್‌ ಘಟಕ ಆರಂಭಕ್ಕೆ ಮುಂದಾಗಿದೆ. ಇದಕ್ಕಾಗಿ ದಕ್ಷಿಣದ ಮೂರು ರಾಜ್ಯಗಳಲ್ಲಿ ಯಾವುದಾದರು ಒಂದು ರಾಜ್ಯದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಂಪೆನಿ ಕರ್ನಾಟಕ, ತೆಲಂಗಾಣ ಹಾಗೂ ತಮಿಳುನಾಡು ಸರಕಾರಗಳೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ಆಶಯವಾದ ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯಡಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಿಸಿಕೊಂಡು, ವಿವಿಧ ಉತ್ಪನ್ನಗಳಿಗೆ ಅಗತ್ಯವಾಗಿರುವ ಸೆಮಿಕಂಡಕ್ಟರ್‌ ಚಿಪ್‌ಗ್ಳ ಉತ್ಪಾದನೆಗೆ ಮುಂದಾಗಿದೆ. ಸೆಮಿಕಂಡಕ್ಟರ್‌ ಚಿಪ್‌ ಗಳ ವಿಚಾರದಲ್ಲಿ ಭಾರತ ಚೀನಾ ಸೇರಿದಂತೆ ಕೆಲ ದೇಶಗಳ ಮೇಲೆ ಅವಲಂಬನೆಯಾಗಿದ್ದು, ಅದರ ಬದಲು ಇದರ ವಿಚಾರದಲ್ಲಿ ಆತ್ಮನಿರ್ಭರತೆ ಹೊಂದಬೇಕೆಂಬುದು ಕೇಂದ್ರ ಸರಕಾರದ ನಿಲುವಾಗಿದೆ. ಅದಕ್ಕೆ ಪೂರಕವಾದ ಕ್ರಮಗಳು ನಡೆಯುತ್ತಿವೆ.

300 ಮಿಲಿಯನ್‌ ಡಾಲರ್‌ ಹೂಡಿಕೆ? ಟಾಟಾ ಕಂಪೆನಿ ಸೆಮಿಕಂಡಕ್ಟರ್‌ ಅಸೆಂಬ್ಲಿ ಮತ್ತು ಪರೀಕ್ಷೆ ಯುನಿಟ್‌ ಆರಂಭಕ್ಕೆ ಅದಕ್ಕೆ ಪೂರಕವಾದ ಉದ್ಯಮಕ್ಕಾಗಿ ಸುಮಾರು 300 ಮಿಲಿಯನ್‌ ಡಾಲರ್‌ ನಷ್ಟು ಹಣ ಹೂಡಿಕೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದರ ಅಡಿಯಲ್ಲಿ ಸೆಮಿಕಂಡಕ್ಟರ್‌ ಅಸೆಂಬ್ಲಿ, ಟೆಸ್ಟ್‌ ಯುನಿಟ್‌, ಪ್ಯಾಕೇಜಿಂಗ್‌, ಸಿಲಿಕಾನ್‌ ವೆಫರ್, ಸೆಮಿಕಂಡಕ್ಟರ್‌ ಚಿಪ್‌ಗ್ಳನ್ನು ತಯಾರಿಸಲು ಯೋಜಿಸಲಾಗಿದೆ.

ಸೆಮಿಕಂಡಕ್ಟರ್‌ ಅಸೆಂಬ್ಲಿ ಮತ್ತು ಪರೀಕ್ಷೆ ಯುನಿಟ್‌ ಆರಂಭವಾದರೆ ಸುಮಾರು ನಾಲ್ಕು ಸಾವಿರ ಜನರಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದ್ದು, ಇದರಿಂದ ಪರೋಕ್ಷವಾಗಿ ಇನ್ನಷ್ಟು ಉದ್ಯೋಗ ಸೃಷ್ಟಿಯ ಜತೆಗೆ ಆರ್ಥಿಕ ಬೆಳವಣಿಗೆ, ಪೂರಕ ಉದ್ಯಮಗಳ ಆಕರ್ಷಣೆಗೆ ಸಹಕಾರಿ ಆಗಲಿದೆ. ಸೆಮಿಕಂಡಕ್ಟರ್‌ ಚಿಪ್‌ ತಯಾರಿಕೆ ನಿಟ್ಟಿನಲ್ಲಿ ರಾಜ್ಯ ವಿಶ್ವದ ಗಮನ ಸೆಳೆಯುವ ಸಾಧ್ಯತೆ ಇದೆ.

ಆಕರ್ಷಣೆ ಇಚ್ಛಾಶಕ್ತಿ ಅವಶ್ಯ: ಟಾಟಾ ಕಂಪೆನಿಯವರು ಸೆಮಿಕಂಡಕ್ಟರ್‌ ಅಸೆಂಬ್ಲಿ ಮತ್ತು ಪರೀಕ್ಷೆ ಯುನಿಟ್‌ ಸ್ಥಾಪನೆ ನಿಟ್ಟಿನಲ್ಲಿ ಕರ್ನಾಟಕ, ತೆಲಂಗಾಣ, ತಮಿಳುನಾಡು ರಾಜ್ಯ ಸರಕಾರಗಳೊಂದಿಗೆ ಮಾತುಕತೆ ನಡೆಸಿದ್ದು, ಯಾವ ರಾಜ್ಯದಲ್ಲಿ ನೆಲೆಗೊಳ್ಳುವುದು ಎಂಬುದನ್ನು ಇನ್ನು ಖಚಿತ ಪಡಿಸಿಲ್ಲ ಎನ್ನಲಾಗುತ್ತಿದೆ.

ಘಟಕ ಆರಂಭಕ್ಕೆ ಭೂಮಿ, ಮೂಲಭೂತ ಸೌಕರ್ಯ, ರಿಯಾಯಿತಿ, ಸಬ್ಸಿಡಿ, ಉದ್ಯಮಸ್ನೇಹಿ ಹಾಗೂ ಶಾಂತಿಯುತ ವಾತಾವರಣದ ಸ್ಪಷ್ಟ ಭರವಸೆ ಎಲ್ಲಿ ದೊರೆಯುತ್ತದೆಯೋ ಅಲ್ಲಿ ಸಾಮಾನ್ಯವಾಗಿ ಉದ್ಯಮ ವಲಯ ನೆಲೆಗೊಳ್ಳಲು ಇಚ್ಛಿಸುತ್ತವೆ. ಇದೀಗ ಟಾಟಾ ಕಂಪೆನಿಯೂ ಮೂರು ರಾಜ್ಯಗಳೊಂದಿಗೆ ಚರ್ಚಿಸಿದ್ದು, ಎಲ್ಲಿ ತನಗೆ ಹೆಚ್ಚಿನ ಸೌಲಭ್ಯ ದೊರೆಯುತ್ತದೆಯೋ ಅಲ್ಲಿ ಉದ್ಯಮ ಆರಂಭಿಸಲು ಮುಂದಾಗಲಿದೆ.

ಉದ್ಯಮಗಳನ್ನು ಸೆಳೆಯುವ ನಿಟ್ಟಿನಲ್ಲಿ ಈ ಹಿಂದೆ ಅವಿಭಜಿತ ಆಂಧ್ರಪ್ರದೇಶ ಆಕ್ರಮಣಕಾರಿ ನೀತಿ ಅನುಸರಿಸುವ ಮೂಲಕ ಉದ್ಯಮಗಳನ್ನು ತನ್ನತ್ತ ಸೆಳೆಯುತ್ತಿತ್ತು. ಆಂಧ್ರದಿಂದ ಪ್ರತ್ಯೇಕಗೊಂಡ ತೆಲಂಗಾಣ ರಾಜ್ಯ ಇದೀಗ ಅದೇ ಆಕ್ರಮಕಾರಿ ನೀತಿಗೆ ಮುಂದಾಗಿದ್ದು, ಉದ್ಯಮಗಳನ್ನು ಆಷರ್ಕಿಸುವ ನಿಟ್ಟಿನಲ್ಲಿ ವಿವಿಧ ಸೌಲಭ್ಯ, ರಿಯಾಯ್ತಿಗಳನ್ನು ನೀಡತೊಡಗಿದೆ. ತಮಿಳುನಾಡು ಸಹ ತನ್ನದೇ ನಿಟ್ಟಿನಲ್ಲಿ ಉದ್ಯಮಗಳ ಆಕರ್ಷಣೆಗೆ ಮುಂದಾಗಿದ್ದು, ಇತ್ತೀಚೆಗೆ ಹೊಸೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಉದ್ಯಮ ಹೂಡಿಕೆ ಆಕರ್ಷಣೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇರಿಸುವ ಮೂಲಕ ಗಮನ ಸೆಳೆಯುತ್ತಿದೆ.

ಉದ್ಯಮಸ್ನೇಹಿ, ಉದ್ಯಮಿಗಳ ನೆಚ್ಚಿನ ತಾಣ ಕರ್ನಾಟಕ, ವಿದೇಶಿ ನೇರ ಹೂಡಿಕೆಯಲ್ಲಿ ದೇಶದಲ್ಲೇ ನಂಬರ್‌ ಒನ್‌ ಸ್ಥಾನದಲ್ಲಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದೇವೆ. ಆದರೆ, ನಿರೀಕ್ಷಿತ ಪ್ರಮಾಣ ಉದ್ಯಮಗಳ ಆಗಮನ ಆಗುತ್ತಿಲ್ಲ. ಇನ್ವೆಸ್ಟ್‌ ಕರ್ನಾಟಕ, ಜಾಗತಿಕ ಹೂಡಿಕೆದಾರರ ಸಮಾವೇಶಗಳನ್ನು ಮಾಡಿದರೂ ಒಪ್ಪಂದಕ್ಕೆ ಸಹಿ ಹಾಕಿದ ಅದೆಷ್ಟೋ ಕಂಪೆನಿಗಳು ಇನ್ನು ರಾಜ್ಯ ಕಡೆ ಮುಖ ಮಾಡಿಲ್ಲ. ನೂತನ ಕೈಗಾರಿಕಾ ನೀತಿ(2020-25)ಬೆಂಗಳೂರು ಹೊರತಾದ ಪ್ರದೇಶದಲ್ಲಿ ಉದ್ಯಮಕ್ಕೆ ಉತ್ತೇಜನ ಎಂದಿದ್ದರೂ ನಿರೀಕ್ಷಿತ ಫಲ ಸಿಕ್ಕಿಲ್ಲ. 2009-10ರ ಸುಮಾರಿಗೆ ಬಿಜೆಪಿ ಸರಕಾರದ ಹೊಸತನದಲ್ಲಿ ನ್ಯಾನೋ ಕಾರು ತಯಾರಿಕಾ ಘಟಕ ಹುಬ್ಬಳ್ಳಿ-ಧಾರವಾಡಕ್ಕೆ ಇನ್ನೇನು ಬಂದೇ ಬಿಟ್ಟಿತು ಎಂಬ ಅಬ್ಬರ ತೋರಿ ಬಂದಿತ್ತು. ಉದ್ಯಮದಲ್ಲಿ ದೊಡ್ಡ ನೆಗೆತ ಕಂಡಿದೆ ಎಂದೇ ಬಿಂಬಿಸಲಾಗಿತ್ತು. ಆದರೆ, ಭೂಮಿ ಲಭ್ಯತೆ ಇನ್ನಿತರ ಕಾರಣದಿಂದ ಅದು ಬರಲೇ ಇಲ್ಲ. ಇದಾದ ನಂತರ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಹಿರೋ ಮೋಟಾರ್ ಹುಬ್ಬಳ್ಳಿ-ಧಾರವಾಡಕ್ಕೆ ಬರಲಿದೆ ಈ ನಿಟ್ಟಿನಲ್ಲಿ ಮಹತ್ವದ ಮಾತುಕತೆಗಳು ಆಗಿವೆ ಎಂದು ಹೇಳಲಾಗಿತ್ತಾದರೂ, ಅದು ಕೂಡ ಬರಲೇ ಇಲ್ಲ. ಇದೀಗ ರಾಜ್ಯಕ್ಕೆ ಟಾಟಾ ಸೆಮಿಕಂಡಕ್ಟರ್‌ ಅಸೆಂಬ್ಲಿ ಮತ್ತು ಪರೀಕ್ಷಾ ಯುನಿಟ್‌ ಆರಂಭದ ಚರ್ಚೆ ನಡೆದಿದ್ದು, ರಾಜ್ಯ ಸರಕಾರ ಪೈಪೋಟಿಯಲ್ಲಿರುವ ಎರಡು ರಾಜ್ಯಗಳಗಿಂತ ಒಂದು ಹೆಜ್ಜೆ ಮುಂದೆ ಹೋಗುವ ಮೂಲಕ ಕಂಪೆನಿಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಇತ್ಛಶಕ್ತಿ ಪ್ರದರ್ಶಿಸಬೇಕಿದೆ. ಇದರಿಂದ ರಾಜ್ಯದಲ್ಲಿ ಉದ್ಯಮದ ನೆಗೆತ ಜತೆಗೆ ಉದ್ಯೋವಕಾಶ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ದೊರೆಯಲಿದೆ.

ಟಾಟಾ ಸೆಮಿಕಂಡಕ್ಟರ್‌ ಅಸೆಂಬ್ಲಿ ಮತ್ತು ಪರೀಕ್ಷೆ ಯುನಿಟ್‌ ಸ್ಥಾಪನೆಗೆ ಕಂಪೆನಿ ರಾಜ್ಯ ಸರಕಾರದೊಂದಿಗೆ ಚರ್ಚಿಸಿದೆ. ನಮ್ಮ ರಾಜ್ಯವಲ್ಲದೆ ನೆರೆಯ ತೆಲಂಗಾಣ, ತಮಿಳುನಾಡು ಜತೆಗೂ ಚರ್ಚಿಸಿದೆ. ರಾಜ್ಯದಲ್ಲಿ ಉದ್ಯಮ ಸ್ನೇಹಿ ವಾತಾವರಣ ಇದ್ದು, ಟಾಟಾ ಸೆಮಿಕಂಡಕ್ಟರ್‌ ರಾಜ್ಯದಲ್ಲಿ ನೆಲೆಗೊಳ್ಳುವ ಕುರಿತು ಆಶಾಭಾವನೆ ಹೊಂದಿದ್ದೇವೆ. –ಮುರುಗೇಶ ನಿರಾಣಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ      

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.