ಹೆಸ್ಕಾಂನಿಂದ ಫಟಾಫಟ್ ಟಿಸಿ ಬದಲಾವಣೆ
ದೂರು ನೀಡಿದ 24 ಗಂಟೆಯಲ್ಲಿ ಸ್ಪಂದನೆ
Team Udayavani, Apr 1, 2022, 11:29 AM IST
ಹುಬ್ಬಳ್ಳಿ: ಸುಟ್ಟ ಅಥವಾ ದುರಸ್ತಿಗೆ ಬಂದ ವಿದ್ಯುತ್ ಪರಿವರ್ತಕಗಳನ್ನು (ಟ್ರಾನ್ಸ್ ಫಾರ್ಮರ್) ಬದಲಾಯಿಸಲು ಹಿಂದೆ ದೊಡ್ಡ ಕಸರತ್ತುಗಳನ್ನೇ ಮಾಡಬೇಕಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ದುರಸ್ತಿಗಾಗಿ ದೂರು ನೀಡಿದ 24 ಗಂಟೆಯಲ್ಲಿ ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸುವ ಕಾರ್ಯ ನಡೆಯುತ್ತಿದೆ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ಈ ಕಾರ್ಯದಲ್ಲಿ ಶೇ.99.13 ಸಾಧನೆ ತೋರಿದೆ. ಸುಟ್ಟ ಅಥವಾ ದುರಸ್ತಿಗೆ ಬಂದ ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸಲು ಕೆಲವೊಮ್ಮೆ ವಾರಗಟ್ಟಲೆ ಹಿಡಿಯುತ್ತಿತ್ತು. ಇದಕ್ಕಾಗಿ ಹೆಸ್ಕಾಂ ಕಚೇರಿಗಳಿಗೆ ಜನರು, ರೈತರು ಅಲೆಯಬೇಕಿತ್ತು. ಕೆಲವೆಡೆ ಕೃತಕ ಅಭಾವ ಸೃಷ್ಟಿಸಿ ಇದಕ್ಕಾಗಿ ಲಾಬಿಯೇ ನಡೆಯುತ್ತಿತ್ತು. ಆದರೀಗ ಆ ಎಲ್ಲಾ ಅವ್ಯವಹಾರ ಹಾಗೂ ವಿಳಂಬಕ್ಕೆ ಕಡಿವಾಣ ಬಿದ್ದಿದೆ.
ಇಂಧನ ಸಚಿವ ವಿ.ಸುನೀಲಕುಮಾರ ಸೆಪ್ಟಂಬರ್ ತಿಂಗಳಲ್ಲಿ ಕೈಗೊಂಡ ದಿಟ್ಟ ನಿರ್ಧಾರದಿಂದ ವಿದ್ಯುತ್ ಪರಿವರ್ತಕಗಳ ಬದಲಾವಣೆ ಕಾರ್ಯ ದೊಡ್ಡದಲ್ಲ ಎಂಬುದು ಸಾಬೀತಾಗಿದೆ. ಹೆಸ್ಕಾಂ ಈ ಕಾರ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಟೋಲ್ ಫ್ರಿ ನಂಬರ್ ಅನ್ನು ಜನರಿಗೆ ನೀಡಿದೆ.
2022 ಜನವರಿ, ಫೆಬ್ರವರಿ, ಮಾರ್ಚ್ 3 ತಿಂಗಳಲ್ಲಿ 24 ಗಂಟೆಯಲ್ಲಿ ಪರಿವರ್ತಕ ಬದಲಾಯಿಸಿದ ಕಾರ್ಯದಲ್ಲಿ ಶೇ.99.13 ಸಾಧನೆ ಮಾಡಿದೆ. 24 ಗಂಟೆಯಲ್ಲಿ 7168 ಟಿಸಿ ಬದಲು: ಕಳೆದ ಮೂರು ತಿಂಗಳಲ್ಲಿ 7231 ಪರಿವರ್ತಕ ಬದಲಾವಣೆಗೆ ಕರೆ ಬಂದಿದ್ದು, ಅವುಗಳಲ್ಲಿ 24 ಗಂಟೆಯಲ್ಲಿ 7168 ಪರಿವರ್ತಗಳನ್ನು ಬದಲಾಯಿಸಲಾಗಿದೆ. ಉಳಿದ 63 ಪರಿವರ್ತಕಗಳ ಬದಲಾವಣೆಗೆ ರಸ್ತೆಯಿಲ್ಲದೆ, ವಾಹನಗಳು ಹೋಗದಂತಹ ತಾಂತ್ರಿಕ ಕಾರಣಗಳಿಂದ 48 ಹಾಗೂ 72 ಗಂಟೆಗಳಲ್ಲಿ ಬದಲಾಯಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ 2587 ಅತೀ ಹೆಚ್ಚು ಪರಿವರ್ತಕಗಳು ದುರಸ್ತಿಗೆ ಬಂದಿದ್ದು, ಅವುಗಳ ಪೈಕಿ 2531 ಪರಿವರ್ತಗಳನ್ನು 24 ಗಂಟೆಯಲ್ಲಿ ಬದಲಾಯಿಸಲಾಗಿದೆ. ಇಲ್ಲಿ ನೀರಾವರಿ ಪ್ರದೇಶ ಹೆಚ್ಚಿರುವ ಕಾರಣಕ್ಕೆ ಪಂಪ್‌ಸೆಟ್‌ಗಳ ಬಳಕೆ ಹೆಚ್ಚಿರುವುದು ದುರಸ್ತಿ ಅಥವಾ ಸುಟ್ಟು ಹೋಗುವ ಪ್ರಮಾಣ ಹೆಚ್ಚಿದೆ.
ವಿಜಯಪುರ ಜಿಲ್ಲೆಯಲ್ಲಿ ದುರಸ್ತಿಗೆ ಬಂದ 1289 ಪರಿವರ್ತಗಳ ಪೈಕಿ 1288ನ್ನು 24 ಗಂಟೆಯಲ್ಲಿ ಬದಲಾಯಿಸಲಾಗಿದೆ. ಉಳಿದಂತೆ ಹೆಸ್ಕಾಂ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಲ್ಲೂ ಶೇ.100 ಸಾಧನೆ ತೋರಿದೆ.
ಪರಿವರ್ತಕ ಬ್ಯಾಂಕ್: ಸಕಾಲದಲ್ಲಿ ಪರಿವರ್ತಕ ಬದಲಾವಣೆಗಾಗಿ ಟೋಲ್ ಫ್ರಿ ನಂಬರ್‌ಗೆ ಕರೆ ಮಾಡುತ್ತಿದ್ದಂತೆ ಯೂನಿಕ್ ಐಡಿ ನೀಡಲಾಗುತ್ತಿದೆ. 24 ಗಂಟೆಯಲ್ಲಿ ಪರಿವರ್ತಕ ಬದಲಾಯಿಸಲು ಅನುಕೂಲ ಆಗುವ ನಿಟ್ಟಿನಲ್ಲಿ ವಿಭಾಗ ಹಾಗೂ ಉಪ ವಿಭಾಗ ವ್ಯಾಪ್ತಿಯಲ್ಲಿ “ಪರಿವರ್ತಕ ಬ್ಯಾಂಕ್’ ಮಾಡಲಾಗಿದೆ. ಇದಕ್ಕಾಗಿ ಹೆಸ್ಕಾಂನ 121 ವಾಹನಗಳನ್ನು ಬಳಸಲಾಗುತ್ತಿದೆ. ಈ ಕಾರ್ಯಕ್ಕೆ ಹೆಚ್ಚುವರಿ ವಾಹನದ ಬೇಡಿಕೆಯಿದ್ದರೆ ಪಡೆಯಲು ಅನುಮೋದನೆ ಕೂಡ ನೀಡಲಾಗಿದೆ.
ಸೆಪ್ಟಂಬರ್ ತಿಂಗಳಲ್ಲಿ ಈ ಕಾರ್ಯಕ್ಕೆ ತೀವ್ರಗತಿಯ ಚಾಲನೆ ನೀಡಿದ ಪರಿಣಾಮ ಬೇಸಿಗೆ ವೇಳೆ ಅತಿಯಾದ ಒತ್ತಡದಿಂದ ವಿದ್ಯುತ್ ಪರಿವರ್ತಕಗಳು ದುರಸ್ತಿಗೆ ಬಂದರೆ ರೈತರಿಗೆ, ಜನರಿಗೆ ಅನಾನುಕೂಲವಾಗದಂತೆ ಅತ್ಯಂತ ಕಡಿಮೆ ಸಮಯದಲ್ಲಿ ಬದಲಾಯಿಸಲು ಸಾಧ್ಯವಾಗುವಂತಾಗಿದೆ.
51 ದುರಸ್ತಿ ಕೇಂದ್ರಗಳು: ಪರಿವರ್ತಕ ಬ್ಯಾಂಕ್‌ನೊಂದಿಗೆ ಅವುಗಳ ದುರಸ್ತಿಗೂ ಹೆಚ್ಚು ಒತ್ತು ನೀಡಲಾಗಿದೆ. ಸರ್ಕಾರದ ಎನ್‌ಜಿಇಎಫ್ 2 ಬೃಹತ್ ದುರಸ್ತಿ ಕೇಂದ್ರಗಳು ಸೇರಿದಂತೆ ಹೆಸ್ಕಾಂ ವ್ಯಾಪ್ತಿಯ 51 ಕಡೆಗಳಲ್ಲಿ ಕೇಂದ್ರಗಳನ್ನು ಗುರುತಿಸಿ ಅವುಗಳ ಮೂಲಕ ದುರಸ್ತಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಪ್ರತಿ ತಾಲೂಕಿಗೆ ಒಂದರಂತೆ ಈ ಕೇಂದ್ರಗಳಿವೆ. ಖಾಸಗಿ ಕೇಂದ್ರಗಳ ಮೂಲಕ ದುರಸ್ತಿಯಾದ ಪರಿವರ್ತಕಗಳನ್ನು ಹೆಸ್ಕಾಂನ ತಂತ್ರಜ್ಞರ ತಂಡ ಪರಿಶೀಲಿಸಿದ ನಂತರವಷ್ಟೇ ಬದಲಿಸಲು ಒಪ್ಪಿಗೆ ನೀಡಲಾಗುತ್ತಿದೆ. ಈ ಕಾರ್ಯದಿಂದ ಜನರು ಹೆಸ್ಕಾಂ ಕಚೇರಿಗಳಿಗೆ ಅಲೆಯುವುದೂ ತಪ್ಪಿದಂತಾಗಿದೆ.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು 24 ಗಂಟೆಯಲ್ಲಿ ವಿದ್ಯುತ್ ಪರಿವರ್ತಕಗಳ ಬದಲಾವಣೆ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಕಳೆದ ಮೂರು ತಿಂಗಳಲ್ಲಿ ಶೇ.99.13 ಸಾಧನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಯಾಗಲಿದೆ. ಇದಕ್ಕಾಗಿಯೇ ಪ್ರತ್ಯೇಕ ಟೋಲ್ ಫ್ರಿ ನಂಬರ್ ನೀಡಲಾಗಿದೆ. ಕರೆ ಬಂದ 24 ಗಂಟೆಯೊಳಗೆ ವಿಳಂಬಕ್ಕೆ ಯಾವುದೇ ಆಸ್ಪದವಿಲ್ಲದಂತೆ ಈ ಕಾರ್ಯ ನಡೆಯುತ್ತಿದೆ. ಶೇ.100 ಸಾಧನೆ ಮಾಡುವ ಗುರಿಯೊಂದಿಗೆ ಕೆಲಸ ನಡೆಯುತ್ತಿದೆ.
– ಡಿ.ಭಾರತಿ, ವ್ಯವಸ್ಥಾಪಕ ನಿರ್ದೇಶಕಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿದ್ಯುತ್ ಪರಿವರ್ತಕ ದುರಸ್ತಿಗೆ ಉಚಿತ ಟೋಲ್ ಫ್ರಿ ನಂಬರ್ 18004254754
-ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
ಕುರಿ ಕಾಯುತ್ತಲೇ ಹಾಡು ಕಲಿತ ಇಮಾಮಸಾಬಗೆ ರಾಜ್ಯೋತ್ಸವ ಪ್ರಶಸ್ತಿ ಗರಿ; ಡೊಳ್ಳಿನ ಭಾವೈಕ್ಯತೆ
ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್ ಅರೆಸ್ಟ್! ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.