ಬೆಂಗೇರಿ ಸ್ಮಾರ್ಟ್ ಮಾರುಕಟ್ಟೆ ಉದ್ಘಾಟನೆಗೆ ಅಣಿ
ಸಂತೆ ನಡೆಸುವಂತಾಗಲು ಬೆಂಗೇರಿಯಲ್ಲಿನ ಖಾಲಿ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು
Team Udayavani, Dec 18, 2021, 5:10 PM IST
ಹುಬ್ಬಳ್ಳಿ: ಹಾಳು ಕೊಂಪೆಯಾಗಿದ್ದ ಜಾಗ ಇದೀಗ ಅತ್ಯಾಧುನಿಕ ಸ್ಪರ್ಶದೊಂದಿಗೆ ಸ್ಮಾರ್ಟ್ ಮಾರುಕಟ್ಟೆ ರೂಪ ಪಡೆದುಕೊಂಡಿದ್ದು, ಜನವರಿಯಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿದೆ. ಸುಮಾರು ಮೂರು ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಕೇಶ್ವಾಪುರ ಬೆಂಗೇರಿ ಮಾರುಕಟ್ಟೆಯಲ್ಲಿ ವಾರದ ಒಂದು ದಿನ ಅಂದರೆ ಪ್ರತಿ ಶನಿವಾರ ಸಂತೆ ನಡೆಯಲಿದ್ದು, ಸಂಜೆ ಚಾಟ್ ಸೆಂಟರ್, ಇನ್ನುಳಿದ ದಿನಗಳಲ್ಲಿ ಸಭೆ-ಸಮಾರಂಭಗಳಿಗೂ ವೇದಿಕೆಯಾಗಲಿದೆ.
ಹಿಂದೆ ವಾರಕ್ಕೊಮ್ಮೆ ಬಯಲು ಜಾಗದಲ್ಲಿ ಸಂತೆ ಮಾಡಲಾಗುತ್ತಿತ್ತು, ಇದೀಗ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ್ದು, ಆಧುನಿಕ ಸ್ವರೂಪ ಪಡೆದುಕೊಂಡಿದೆ. ಅಂತಿಮ ಸ್ಪರ್ಶ: ಕೇಶ್ವಾಪುರದಲ್ಲಿನ ಸುಳ್ಳ ರಸ್ತೆಯಲ್ಲಿಯೇ ಪ್ರತಿ ಶನಿವಾರ ನಡೆಯುತ್ತಿದ್ದ ಸಂತೆಯನ್ನು ಸಂಚಾರ ಅಸ್ತವ್ಯಸ್ತ ಕಾರಣಕ್ಕೆ ಹಾಗೂ ಸುಸಜ್ಜಿತ ರೀತಿಯಲ್ಲಿ ಸಂತೆ ನಡೆಸುವಂತಾಗಲು ಬೆಂಗೇರಿಯಲ್ಲಿನ ಖಾಲಿ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು. ಜಾಗ ಇದೆ ಎಂಬುದು ಬಿಟ್ಟರೆ ಬೇರೇನೂ ಸೌಲಭ್ಯ
ಅಲ್ಲಿರಲಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ಸಂತೆ ಜಾಗ ಅಭಿವೃದ್ಧಿ ಪಡಿಸುವ ಕಾಮಗಾರಿ ಕೈಗೊಳ್ಳಲಾಗಿದ್ದು, ಇದೀಗ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ. ಅಂತಿಮ ಸ್ಪರ್ಶ ನೀಡಲಾಗುತ್ತಿದೆ.
ಸಂತೆಗಾಗಿ ಮೀಸಲಿಟ್ಟ ಜಾಗದಲ್ಲಿ ಶನಿವಾರ ಸಂತೆ ನಡೆದರೆ, ಉಳಿದ ದಿನಗಳಲ್ಲಿಯೂ ಜಾಗದ ಸದ್ಬಳಕೆ ನಿಟ್ಟಿನಲ್ಲಿ ಬೆಳಗಿನ ವೇಳೆ ಯೋಗ-ಧ್ಯಾನ, ಸಂಜೆಯಾಗುತ್ತಿದ್ದಂತೆ ರಸ್ತೆ ಬದಿ ತಿಂಡಿ-ತಿನಿಸುಗಳ ಅಂಗಡಿ, ಚಾಟ್ ಸೆಂಟರ್, ಸಂಗೀತ ಕಾರ್ಯಕ್ರಮ, ಸಭೆ-ಸಮಾರಂಭಗಳು, ಫಲಪುಷ್ಪ ಪ್ರದರ್ಶನ ಸೇರಿದಂತೆ ಬಹುಪಯೋಗಕ್ಕೆ ಪೂರಕವಾಗಿ ಸಂತೆ ಮೈದಾನವನ್ನು ಅಭಿವೃದ್ಧಿ ಪಡಿಸಲಾಗಿದೆ.
7.6 ಕೋಟಿ ರೂ.ವೆಚ್ಚ: ಸ್ಮಾರ್ಟ್ ಸಿಟಿ ಯೋಜನೆಯಡಿ 7.6 ಕೋಟಿ ರೂ.ಗಳಲ್ಲಿ 12,700 ಚದರ ಮೀಟರ್ ಜಾಗದಲ್ಲಿ ಮಾರುಕಟ್ಟೆ ನಿರ್ಮಾಣ ಆಗಿದ್ದು, ಮಾರುಕಟ್ಟೆಯಲ್ಲಿ ಸುತ್ತಲು ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಅಂಗಡಿಗಳ ನಿರ್ಮಾಣ ಮಾಡಲಾಗಿದೆ. ಮಧ್ಯದಲ್ಲಿ ಸಂತೆಗೆ ಅವಕಾಶ ಕಲ್ಪಿಸುವ ಬಯಲು ಜಾಗ ಬಿಡಲಾಗಿದೆ. ಹಿಂಭಾಗದಲ್ಲಿ ಶೌಚಾಲಯ, ಕುಡಿಯಲು ನೀರಿನ ವ್ಯವಸ್ಥೆ, ಉತ್ತಮ ಪಾರ್ಕಿಂಗ್ ವ್ಯವಸ್ಥೆ, ಉದ್ಯಾನವನ, ವಿದ್ಯುತ್ ಸೌಲಭ್ಯ ಸೇರಿದಂತೆ ಉತ್ತಮ ಸೌಲಭ್ಯಗಳೊಂದಿಗೆ ಮಾರುಕಟ್ಟೆ ನಿರ್ಮಾಣಗೊಂಡಿದೆ.
ಕೇಶ್ವಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಭೆ-ಸಮಾರಂಭ, ಸಂಗೀತ ಕಾರ್ಯಕ್ರಮ, ಯಾವುದಾದರು ಪ್ರದರ್ಶನಕ್ಕೆ ಸರಿಯಾದ ಸ್ಥಳಾವಕಾಶವಿಲ್ಲದೆ ದುರ್ಗದ ಬಯಲು, ಇಂದಿರಾ ಗಾಜಿನ ಮನೆ, ನೆಹರು ಮೈದಾನ, ಸವಾಯಿ ಗಂಧರ್ವ ಕಲಾ ಭವನಕ್ಕೆ ಆಗಮಿಸಬೇಕಾಗಿತ್ತು. ಆದರೆ ಬೆಂಗೇರಿ ಸಂತೆ ಮಾರುಕಟ್ಟೆ ಜಾಗವೀಗ ಬಹುಪಯೋಗಿ ಜಾಗವಾಗಿ ಮಾರ್ಪಾಡುಗೊಂಡಿದೆ. ಬೆಂಗೇರಿ ಸಂತೆ ಮಾರುಕಟ್ಟೆಯನ್ನು ಎಸ್‌ಕೆಎಸ್ ಕಾರ್ಕಳ ಇನ್‌ಫ್ರಾ ಪ್ರೊಜೆಕ್ಟ್ ಸಂಸ್ಥೆ ಗುತ್ತಿಗೆ ಪಡೆದು ನಿರ್ಮಾಣ ಮಾಡಿದ್ದು, ಈಗಾಗಲೇ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳಿಸಿ ಅಂತಿಮ ರೂಪರೇಷೆ ನೀಡಲಾಗುತ್ತಿದೆ.
ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.