ಆತ್ಮಹತ್ಯೆಗೆ ಯತ್ನಿಸಿದ್ದವನು ಪದ್ಮಶ್ರೀ ಪ್ರಶಸ್ತಿ ಮಟ್ಟಕ್ಕೆ ಬೆಳೆದೆ
ಶ್ರೀ ವಾಸವಿ ಆಸರೆ ಸೇವಾ ಸಂಸ್ಥೆ ವತಿಯಿಂದ ಜೋಗತಿ ಮಂಜಮ್ಮಗೆ ಸನ್ಮಾನ
Team Udayavani, Apr 4, 2022, 1:18 PM IST
ಹುಬ್ಬಳ್ಳಿ: ಈ ಜೀವನ ಸಾಕೆಂದು ಕೈ ಚೆಲ್ಲಿ ಒಂದು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿ, ಇನ್ನೊಂದು ಬಾರಿ ಚಿಂತಿಸಿ ಬದುಕಿ ಬಂದಿರುವ ನಾನು ಈಗ ಪದ್ಮಶ್ರೀ ಪ್ರಶಸ್ತಿ ಪಡೆಯುವಷ್ಟರ ಮಟ್ಟಕ್ಕೆ ಬೆಳೆದಿರುವುದು ಹೆಮ್ಮೆ ಮೂಡಿಸಿದೆ ಎಂದು ಪದ್ಮಶ್ರೀ ಪುರಸ್ಕೃತೆ ಜೋಗತಿ ಮಂಜಮ್ಮ ಹೇಳಿದರು.
ಕಂಚಗಾರಗಲ್ಲಿ ನಗರೇಶ್ವರ ದೇವಸ್ಥಾನದಲ್ಲಿ ಆರ್ಯ ವೈಶ್ಯ ಸಮಾಜದ ಶ್ರೀ ವಾಸವಿ ಆಸರೆ ಸೇವಾ ಸಂಸ್ಥೆ ವತಿಯಿಂದ ರವಿವಾರ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಚಿಕ್ಕವನಿದ್ದಾಗ ನನ್ನಲ್ಲಾದ ಬದಲಾವಣೆಗಳಿಂದ ಬಿ.ಮಂಜುನಾಥ ಎಂದಿದ್ದ ನಾನು ಜೋಗತಿ ಮಂಜಮ್ಮನಾದೆ ಎಂದರು.
ಕಳೆದ 25 ವರ್ಷಗಳ ಕೆಳಗೆ ಧಾರವಾಡ ಆಕಾಶವಾಣಿಗೆ ಬರುತ್ತಿದ್ದೆ. ಅಂದು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಮಲಗಿದ ಪಾದಗಳು ಇಂದು ಪಾದಪೂಜೆ ಮಾಡಿಸಿಕೊಳ್ಳುವಂತಾಗಿವೆ ಎಂದರೆ ನನ್ನನ್ನೇ ನಾನು ನಂಬಲು ಸಾಧ್ಯವಾಗುತ್ತಿಲ್ಲ. ಹಳೇಹುಬ್ಬಳ್ಳಿ ಹೆಗ್ಗೇರಿಯಲ್ಲಿರುವ ಯಲ್ಲಮ್ಮ ದೇವಸ್ಥಾನಕ್ಕೆ ನಾಟಕ ಮಾಡಲು ಬರುತ್ತಿದ್ದೆ. ಯಲ್ಲಮ್ಮನ ನಾಟಕದಲ್ಲಿ ರೇಣುಕಾ ದೇವಿ ಪಾತ್ರ ಮಾಡುತ್ತಿದ್ದೆ. ಒಗಟಿನ ಮೂಲಕ ಗಂಡನ ಹೆಸರು ಹೇಳುತ್ತಿದ್ದೆ. ನನಗೆ ಪದ್ಮಶ್ರೀ ಪ್ರಶಸ್ತಿ ಬಂದಿದೆ. ಅಕಾಡೆಮಿ ಅಧ್ಯಕ್ಷೆಯಾಗಿದ್ದವರ ಕಲೆಗೆ ಸಿಕ್ಕ ಬೆಲೆ ಇದಾಗಿದೆ. ನಮ್ಮನ್ನು ಬೆಳೆಸಿರುವುದು ಮಾಧ್ಯಮದವರು. ಎಲ್ಲೇ ಹೋದರೂ ನಮ್ಮನ್ನು ಮೇಲೇರಿಸಿದ್ದಾರೆ. ಪ್ರಶಸ್ತಿ ಸಿಗಲು ಅವರೂ ಕಾರಣ ಎಂದರು.
ನಮ್ಮ ತಂದೆ ತಾಯಿಗೆ ಒಟ್ಟು 21 ಜನ ಮಕ್ಕಳು, ಅದರಲ್ಲಿ 16 ಜನ ಮೃತರಾಗಿದ್ದಾರೆ. ಅದಕ್ಕೆ ತಾಯಿಯಾದವಳಿಗೆ ಎಷ್ಟು ಸಂಕಟವಾಗಿರುತ್ತದೆ ಎಂದು ನನಗೆ ಈಗ ತಿಳಿಯುತ್ತಿದೆ ಎಂದರು.
ನಾಗಮಣಿ ಬಾಗಲಕೋಟೆ, ಸೀತಾಲಕ್ಷ್ಮಿಶಿರೋಳ, ಮೋಹನರಾಜ ಇಲ್ಲೂರ, ವಿನಾಯಕ ಆಕಳವಾಡಿ, ಡಾ|ಜೀವಣ್ಣವರ, ರಾಜಶೇಖರ ಕಂಪ್ಲಿ, ಕುಮಾರಸ್ವಾಮಿ ಇನ್ನಿತರರಿದ್ದರು. ಸರಸ್ವತಿ ದೊಡ್ಡಮನಿ ಪ್ರಾರ್ಥಿಸಿದರು. ಗೀತಾ ಕಂಪ್ಲಿ ನಿರೂಪಿಸಿದರು.
ಅನುಕಂಪ ಬೇಡ, ಅವಕಾಶ ನೀಡಿ: ಮಕ್ಕಳಿಗೆ ಒತ್ತಡ ಹೇರಬೇಡಿ, ನಿಮ್ಮ ಮಕ್ಕಳಿಗೆ ಅವರಿಗೆ ಖುಷಿ ಇರುವುದರಲ್ಲಿ ಪ್ರೋತ್ಸಾಹಿಸಿ. ಕಲೆಯನ್ನು ಆರಾಧಿಸಿದ್ದಕ್ಕೆ ಕಲೆ ನನಗೆ ಬೆಲೆ ನೀಡಿದೆ. ನನ್ನ ಸಮುದಾಯವರಿಗೂ ಗೌರವ ನೀಡಿ. ನಿಮ್ಮ ಮನೆಯಲ್ಲಿ ಅಂತಹ ಮಕ್ಕಳು ಹುಟ್ಟಿದರೆ ಅವರನ್ನು ಹೊರ ಹಾಕಬೇಡಿ. ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡಿ. ನನ್ನ ಹೆಸರಲ್ಲಿ ಯಾವುದೇ ಸಂಘ, ಟ್ರಸ್ಟ್ ಯಾವುದೂ ಇಲ್ಲ. ಇತ್ತೀಚೆಗೆ ಒಂದು ಪ್ರತಿಷ್ಠಾನ ಮಾಡಿದ್ದಾರೆ. ನಮಗೆ ಅನುಕಂಪ ಬೇಡ, ಅವಕಾಶ ನೀಡಿ ಎಂದು ಪದ್ಮಶ್ರೀ ಪುರಸ್ಕೃತೆ ಜೋಗತಿ ಮಂಜಮ್ಮ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.