ವೃತ್ತಿ-ಪ್ರವೃತ್ತಿ ನಡುವೆ ಸಮತೋಲನ ಅವಶ್ಯ: ಕುಲಕರ್ಣಿ

ರಂಗಭೂಮಿ ಅದರಲ್ಲೂ ಬೀದಿನಾಟಕಗಳು ಕ್ಷೀಣಿಸುತ್ತಿವೆ. ಬೀದಿನಾಟಕಗಳು ಸರಕಾರದ, ಜನರ ಧ್ವನಿಯಾಗಿವೆ.

Team Udayavani, Apr 16, 2022, 5:00 PM IST

ವೃತ್ತಿ-ಪ್ರವೃತ್ತಿ ನಡುವೆ ಸಮತೋಲನ ಅವಶ್ಯ: ಕುಲಕರ್ಣಿ

ಹುಬ್ಬಳ್ಳಿ: ವೃತ್ತಿ ಮತ್ತು ಪ್ರವೃತ್ತಿ ನಡುವೆ ಸಮತೋಲನ ಅವಶ್ಯವಾಗಿದ್ದು, ಸುದ್ದಿ-ವಿದ್ಯಮಾನಗಳ ಧಾವಂತದಲ್ಲಿರುವ ಮಾಧ್ಯಮದವರಿಗೆ ಇದು ಹೆಚ್ಚು ಅನ್ವಯವಾಗುತ್ತದೆ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ಹಿರಿಯ ಪತ್ರಕರ್ತ ಡಾ| ಶಿವರಾಮ ಅಸುಂಡಿ ಅವರ “ಕೋಣನ ಮುಂದೆ ಕಿನ್ನರಿ ಮತ್ತೆರಡು ನಾಟಕ ಹಾಗೂ ಚಿತ್ರಂ ಭಾಳಾರೆ ವಿಚಿತ್ರಂ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮಾಧ್ಯದವರಿಗೆ ಅವರ ವೃತ್ತಿಯ ಜತೆಗೆ ಸಾಹಿತ್ಯ ರಚನೆ ಇನ್ನಿತರ ಪ್ರವೃತ್ತಿಗಳು ಇದ್ದರೆ ಅವುಗಳನ್ನು ಸರಿದೂಗಿಸಿಕೊಂಡು ಹೋಗಬೇಕಾಗಿದೆ ಎಂದರು.

ಪ್ರತಿಯೊಬ್ಬರಲ್ಲೂ ಸಂತ-ಸೈತಾನ ಇರುತ್ತಾನೆ. ಇದನ್ನು ಗುರುತಿಸುವ ಕೆಲಸ ಆಗಬೇಕು. ಇದಕ್ಕೆ ಸೃಜನಶೀಲ ಮನಸ್ಸು ಮುಖ್ಯ. ಇಂದಿನ ಸ್ಥಿತಿಯಲ್ಲಿ ಮಾತುಗಳೇ ಎಲ್ಲವನ್ನು ಆಳುತ್ತಿವೆ. ಅಂಕಣ ಬರಹ ಅವಸರದ ಬರಹ ಆಗುತ್ತಿವೆ. ಬರಹಗಾರರಿಗೆ ಭಾಷೆಯ ಸೊಗಡು ಅತ್ಯವಶ್ಯ. ಬರವಣಿಗೆಗೆ ಮುಂದಾಗುವವರು ಇದರ ಮೇಲೆ ಪ್ರಭುತ್ವ ಸಾಧಿಸಬೇಕಾಗುತ್ತದೆ. ಗಟ್ಟಿ ರೂಪದ ಅಂಕಣಗಳಿಗೆ ಇದು ಅವಶ್ಯ ಎಂದು ಹೇಳಿದರು.

ರಂಗಭೂಮಿ ಅದರಲ್ಲೂ ಬೀದಿನಾಟಕಗಳು ಕ್ಷೀಣಿಸುತ್ತಿವೆ. ಬೀದಿನಾಟಕಗಳು ಸರಕಾರದ, ಜನರ ಧ್ವನಿಯಾಗಿವೆ. ಅವುಗಳ ಮಹತ್ವ ಕುಗ್ಗುವಂತಾಗಬಾರದು. ರಂಗಭೂಮಿ ಕುರಿತಾಗಿ ಒಲವು ಹೆಚ್ಚಬೇಕು. ಶಿವರಾಮ ಅಸುಂಡಿ ಅವರನ್ನು ಹಲವು ವರ್ಷಗಳಿಂದಲೇ ಬಲ್ಲೆ. ಮಾಧ್ಯಮದಲ್ಲಿದ್ದುಕೊಂಡೇ ಸೃಜನಶೀಲ ಮನಸ್ಸಿನೊಂದಿಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ರಂಗಕರ್ಮಿಯಾದ ನನಗೆ ಅವರು ಬರೆದ ನಾಟಕಗಳು ಖುಷಿ ತರಿಸಿದೆ.ಕಲ್ಯಾಣ ಕರ್ನಾಟಕದ ಹಲವು ವಿಷಯಗಳನ್ನು ನಾಟಕದಲ್ಲಿ ತಂದಿದ್ದಾರೆ. ಅಲ್ಲಿನ ಭಾಷೆಯ ಸೊಗಡು ಮೂಡಿಸಿದ್ದಾರೆ ಎಂದರು.

ಕೋಣನ ಮುಂದೆ ಕಿನ್ನರಿ ಮತ್ತೆರಡು ನಾಟಕ ಕೃತಿ ಪರಿಚಯಿಸಿದ ಸಾಹಿತಿ ಮಹಾಂತಪ್ಪ ನಂದೂರ, ಮಾಧ್ಯಮದಲ್ಲಿದ್ದವರಿಗೆ ಸಾಹಿತ್ಯ ಬರಹದ ಬಿಕ್ಕಟ್ಟು ಇರುತ್ತದೆ. ಅದನ್ನು ಮೀರಿ ಶಿವರಾಮ ಅಸುಂಡಿ ಅವರು ನಾಟಕ ಕೃತಿ ರಚಿಸಿದ್ದಾರೆ. ನಾಟಕದಲ್ಲಿ ಹಲವು ಸೂಕ್ಷ್ಮ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಸಾಮಾಜಿಕ ಹಾಗೂ ಮಾನವೀಯ ಕಳಕಳಿ ತೋರಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಸ್ಥಾನಿಕ ಸಂಪಾದಕಿ ಎಸ್‌.ರಶ್ಮಿ ಚಿತ್ರಂ ಭಳಾರೆ ವಿಚಿತ್ರಂ ಕೃತಿ ಪರಿಚಯಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ಎಂ ಟ್ರಸ್ಟ್‌ ಕಾರ್ಯದರ್ಶಿ ಡಾ| ಎಂ. ಬೈರೇಗೌಡ, ಕೃತಿಕಾರ ಡಾ| ಶಿವರಾಮ ಅಸುಂಡಿ ವೇದಿಕೆಯಲ್ಲಿದ್ದರು. ಮಹೇಂದ್ರ ಚವ್ಹಾಣ ಸ್ವಾಗತಿಸಿದರು. ಸುಶೀಲೇಂದ್ರ ಕುಂದರಗಿ ನಿರೂಪಿಸಿದರು.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.