32 ತಾಸಲ್ಲಿ ಸಾವಿರ ಕೆಜಿ ಮಂಡಿಗೆ ತಯಾರಿ!

ಒಮ್ಮೆಲೆ ಹದಿನೈದು ಸಾವಿರಕ್ಕೂ ಅಧಿಕ ಜನರಿಗೆ ಮಂಡಿಗೆ ಬಡಿಸಿದ ಕೀರ್ತಿ

Team Udayavani, Mar 21, 2022, 11:35 AM IST

7

ಹುಬ್ಬಳ್ಳಿ: ವಿದ್ಯಾನಗರ ಕುಮಾರವ್ಯಾಸ ನಗರದ “ಸೀತಾರಾಮ ಕ್ಯಾಟರಿಂಗ್‌’ನ ಕೇಶವಾಚಾರ್ಯ ಭಾವಿಕಟ್ಟಿ ನೇತೃತ್ವದ ತಂಡ ಮಂಡಿಗೆ ತಯಾರಿಕೆಯಲ್ಲಿ ಭೇಷ್‌ ಎನಿಸಿಕೊಂಡಿದೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡದ ಉತ್ತರಾದಿ ಮಠದಲ್ಲಿ ಈಚೆಗೆ ನಡೆದ “ಶ್ರೀಮನ್ಯಾಯಸುಧಾಮಂಗಲ’ ಕಾರ್ಯಕ್ರಮದಲ್ಲಿ 32 ತಾಸುಗಳಲ್ಲಿ ಸುಮಾರು ಒಂದು ಸಾವಿರ ಕೆಜಿ ಮಂಡಿಗೆ ತಯಾರಿಸಿ ಮೆಚ್ಚುಗೆಗೆ ಪಾತ್ರವಾಗಿದೆ.

ಸುಮಾರು ಹದಿನೈದು ಜನರ ತಂಡ ಹನ್ನೆರಡು ಒಲೆಗಳಲ್ಲಿ ಒಂದು ಸಾವಿರ ಕೆಜಿ ಮಂಡಿಗೆ ತಯಾರಿಸಿದೆ. ಇದಕ್ಕೆ 400 ಕೆಜಿ ಸಕ್ಕರೆ, 700 ಕೆಜಿ ಮಂಡಿಗೆ ಹಿಟ್ಟು, 150 ಕೆಜಿ ತುಪ್ಪ, 70 ಕೆಜಿ ಅಕ್ಕಿ ಹಿಟ್ಟು ಇನ್ನಿತರೆ ಪದಾರ್ಥ ಬಳಸಿದ್ದು, ಸುಮಾರು 15 ಸಾವಿರಕ್ಕೂ ಅಧಿಕ ಜನರು ಮಂಡಿಗೆ ಸವಿದಿದ್ದಾರಂತೆ.

ಕಳೆದ 18-20 ವರ್ಷಗಳಿಂದ ಮಂಡಿಗೆ ತಯಾರಿಸುವ ಕಾಯಕದಲ್ಲಿ ತೊಡಗಿರುವ ಭಾವಿಕಟ್ಟಿ ಅವರು ತಯಾರಿಸಿದ ಮಂಡಿಗೆ ನಾಡಿನ ವಿವಿಧೆಡೆ ತನ್ನದೇ ಖ್ಯಾತಿ ಪಡೆದಿದೆ. ಉಡುಪಿಯ ಅಷ್ಟಮಠಗಳ ಶ್ರೀಗಳು ಸಹ ಇವರ ಮಂಡಿಗೆಗೆ ಮಾರುಹೋಗಿದ್ದಾರೆ. ಪೇಜಾವರ ಶ್ರೀಗಳ ಶಿಷ್ಯರಾದ ಕೇಶವಾಚಾರ್ಯರು ಅವರಿಗೂ ಸಹ ಮಂಡಿಗೆ ಉಣಬಡಿಸಿದ್ದಾರೆ.

ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರು ದೈವಾಧೀನ ನಂತರದಲ್ಲಿ ನಡೆದ ಸ್ಮರಣೆ ಕಾರ್ಯಕ್ರಮದಲ್ಲಿ ಸುಮಾರು 500 ಕೆಜಿ ಮಂಡಿಗೆ, ಮಳಖೇಡದ ಶ್ರೀಜಯತೀರ್ಥರ ಸನ್ನಿಧಾನದಲ್ಲಿ ಒಂದು ಸಾವಿರ ಕೆಜಿ, ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಸನ್ನಿಧಾನದಲ್ಲಿ 500 ಕೆಜಿ ಹಾಗೂ ಮಾದನೂರ ವಿಷ್ಣುತೀಥ ಮಠದಲ್ಲಿ 300 ಕೆಜಿ ಸಿದ್ಧಪಡಿಸಿದ್ದಾರೆ.

ಪ್ರಮೋದ ಕುಲಕರ್ಣಿ, ಮಯೂರ ಸಿದ್ದಾಪುರ ಹಾಗೂ ಅವರ ಕೈಯಡಿಯಲ್ಲಿ ಅನಿರುದ್ಧ, ಬದರಿ, ರಾಘವೇಂದ್ರ, ಕೃಷ್ಣಾ ಜೋಶಿ ಸೇರಿದಂತೆ ಸುಮಾರು 15 ಜನರ ತಂಡ ಹೊಂದಿದ್ದಾರೆ. ಕೇಶವಾಚಾರ್ಯ ಭಾವಿಕಟ್ಟಿ ಅವರ ಸಹೋದರ ಮಾವನವರಾದ ರಾಘವೇಂದ್ರ ಆಚಾರ್ಯ, ಗೋಪಾಲಾಚಾರ್ಯ ಅವರಲ್ಲಿ ಮಂಡಿಗೆ ಮಾಡುವ ವಿಧಾನ ಕಲಿತಿರುವ ವೆಂಕಟೇಶಾಚಾರ್ಯ ಅವರು ಸಹ ಮಂಡಿಗೆ ತಯಾರಿಸುವಲ್ಲಿ ತಮ್ಮದೇ ಖ್ಯಾತಿ ಪಡೆದಿದ್ದಾರೆ.

ಚಿಕ್ಕವನಿದ್ದಾಗಲೇ ಮಾವನವರಿಂದ ಮಂಡಿಗೆ ಮಾಡುವುದನ್ನು ಕಲಿತು ಉಡುಪಿಯ ಅಷ್ಟ ಮಠಗಳು ಸೇರಿದಂತೆ ನಾಡಿನ ವಿವಿಧೆಡೆ ನಡೆದ ಸಮಾರಂಭಗಳಲ್ಲಿ ಮಂಡಿಗೆ ಸಿದ್ಧಪಡಿಸಿದ್ದೇನೆ. ನಾವು ನೀಡುವ ಸೇವೆ, ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ಇದೆ. ಅದು ನಮಗೆ ಶ್ರೀ ರಕ್ಷೆಯಾಗಿದೆ.

ಕೇಶವಾಚಾರ್ಯ ಭಾವಿಕಟ್ಟಿ, ಮಂಡಿಗೆ ತಯಾರಕರು

– ಬಸವರಾಜ ಹೂಗಾರ

ಟಾಪ್ ನ್ಯೂಸ್

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Why is there a hesitation to name the M. Chinnaswamy stand after Shantha Rangaswamy? What is the controversy?

M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬಂದಿ

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.