ವಿಶ್ವದರ್ಜೆ ಗುಣಮಟ್ಟ; ಧಾರವಾಡ ಮಾವು ಬ್ರ್ಯಾಂಡ್ ಗೆ ಪಣ

ಮೂರು ವರ್ಷದ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ.

Team Udayavani, Jan 19, 2022, 5:22 PM IST

ವಿಶ್ವದರ್ಜೆ ಗುಣಮಟ್ಟ; ಧಾರವಾಡ ಮಾವು ಬ್ರ್ಯಾಂಡ್ ಗೆ ಪಣ

ಹುಬ್ಬಳ್ಳಿ: ವಿಶ್ವದರ್ಜೆ ಗುಣಮಟ್ಟದ ಮಾವಿನ ಹಣ್ಣು ಬೆಳೆದರೂ ರೈತರಿಗೆ ಸಿಹಿ ದೊರೆಯದಾಗಿದೆ. ಮತ್ತೊಂದು ಕಡೆ ಕೇಂದ್ರ ಸರಕಾರ “ಒಂದು ಜಿಲ್ಲೆ ಒಂದು ಉತ್ಪನ್ನ’ ಘೋಷಣೆಯಡಿ ಜಿಲ್ಲೆಗೆ ಮಾವು ಉತ್ಪನ್ನ ದೊರೆತರೂ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ ಎಂಬ ಮಾಹಿತಿ ಸಮರ್ಪಕವಾಗಿ ದೊರೆಯದಾಗಿದೆ.

ಬೆಳೆ ನಿರ್ವಹಣೆ, ಕೊಯ್ಲು, ಕೊಯ್ಲೋತ್ತರ ನಿರ್ವಹಣೆ, ಮೌಲ್ಯವರ್ಧನೆ, ಮಾರಾಟ ತಂತ್ರಜ್ಞಾನ ಮಾಹಿತಿ ಸೇರಿದಂತೆ ಒಂದೇ ಬ್ರ್ಯಾಂಡ್ ನ‌ಡಿ ಮಾವು ಮಾರಾಟ-ರಫ್ತು ಉದ್ದೇಶದೊಂದಿಗೆ ಜಿಲ್ಲೆಯಲ್ಲಿ ಸಹಕಾರಿ ತತ್ವ ಹಾಗೂ ಸಾಮೂಹಿಕ ನಾಯಕತ್ವದಡಿ “ಮಾವು ಬೆಳೆಗಾರರ ಬಳಗ’ ಅಸ್ತಿತ್ವಕ್ಕೆ ಬಂದಿದೆ.

ಜಿಲ್ಲೆಯಲ್ಲಿ ಸುಮಾರು 8,445 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ವಾರ್ಷಿಕ ಸರಾಸರಿ 77,458 ಮೆಟ್ರಿಕ್‌ ಟನ್‌ ಉತ್ಪಾದನೆಯಾಗುತ್ತದೆ. ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನದಡಿ ಜಿಲ್ಲೆಗೆ ಮಾವಿನ ಹಣ್ಣಿಗೆ ಸ್ಥಾನ ನೀಡಿದ್ದರೂ ಬೆಳೆಗಾರರ ಬದುಕಿನಲ್ಲಿ ಮಹತ್ತರ ಬದಲಾವಣೆ ಕಂಡಿಲ್ಲ. ಇದಕ್ಕೆ ಕಾರಣ ರೈತರಿಗೆ ಸಮರ್ಪಕ ಮಾಹಿತಿ ಇಲ್ಲದಿರುವುದು, ಬೆಳೆಗಾರರಿಗೆ ಮಾರುಕಟ್ಟೆ ಸೂಕ್ತ ಸೌಲಭ್ಯ ದೊರೆಯದೇ ಇರುವುದಾಗಿದೆ.

ಸಂಘಟನೆಆಶಯವೇನು?:ರೈತರಲ್ಲಿನ ಸಂಘಟನೆ-ಮಾಹಿತಿ ಕೊರತೆ‌, ವೈಜ್ಞಾನಿಕ ನಿರ್ವಹಣೆ, ಕೊಯ್ಲು, ಮಾರಾಟಸೌಲಭ್ಯ ಲಭ್ಯವಾಗದಿರುವುದು, ಕೀಟ-ರೋಗ ಬಾಧೆ, ಫಸಲು ಸಂಗ್ರಹ, ರಫ್ತು, ಮೌಲ್ಯವರ್ಧನೆ ಮಾಹಿತಿ ಇಲ್ಲದಿರುವಿಕೆ, ಹವಾಮಾನ ವೈಪರಿತ್ಯ ಇನ್ನಿತರ ಕಾರಣಗಳಿಂದ ಅನೇಕ ರೈತರು ಮಾವು ಬೆಳೆಯಿಂದ ಗೋಡಂಬಿ ಇನ್ನಿತರ ಬೆಳೆಗಳಿಗೆ ವಲಸೆ ಆರಂಭಿಸಿದ್ದಾಗಿದೆ. ಮಾವು ಬೆಳೆಗಾರರಲ್ಲಿ ವಿಶ್ವಾಸ ಹೆಚ್ಚಿಸಲು, ಬೆಳೆ ನಿರ್ವಹಣೆ, ಪರಿಕರಗಳ ಲಭ್ಯತೆ, ಕೊಯ್ಲು, ಕೊಯ್ಲೋತ್ತರ ನಿರ್ವಹಣೆ, ಮಾರುಕಟ್ಟೆ ಇನ್ನಿತರ ವಿಷಯಗಳ ತಂತ್ರಜ್ಞಾನ ಮಾಹಿತಿ ಒದಗಿಸಲು, ಸಣ್ಣ ಮಾವು ಬೆಳೆಗಾರನಿಗೂ ಪ್ರಯೋಜನ ದೊರೆಯುವಂತೆ ಮಾಡುವ ಆಶಯವನ್ನು ಬಳಗ ಹೊಂದಿದೆ.

ಮಾವಿಗೆ ಹೇಳಿಮಾಡಿಸಿದ ತಾಣ
ಮಾವು ಬೆಳೆಗೆ ಧಾರವಾಡಹಾಗೂಹಾವೇರಿ ಜಿಲ್ಲೆ ಹೇಳಿ ಮಾಡಿದ ತಾಣ. ಇಲ್ಲಿನ ಭೂಮಿ, ಹವಾಮಾನ, ನೀರಿನ ಲಭ್ಯತೆ ಎಲ್ಲವೂಹೇಳಿ ಮಾಡಿಸಿದಂತಿದೆ. ವಿವಿಧ ತಳಿಯ ಮಾವು ಬೆಳೆದರೂ ಅಲ್ಫಾನ್ಸೊ ಪಾರುಪತ್ಯ ಹೊಂದಿದೆ. ಇಲ್ಲಿನ ಮಾವಿಗೆ ಅಮೆರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ಉತ್ತಮ ಬೇಡಿಕೆಯೂ ಇದೆ. ಆದರೆ, ಇದರ ಪ್ರಯೋಜನ ಮಾತ್ರ ರೈತರಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ.ಕೆಲವೇ ಕೆಲವರ ಪಾಲಾಗುತ್ತಿದೆ.

100ಕ್ಕೂ ಅಧಿಕ ಸದಸ್ಯರು
ಬಳಗದಲ್ಲಿ ಈಗಾಗಲೇ ಸುಮಾರು 100ಕ್ಕೂ ಅಧಿಕ ರೈತರಿದ್ದು, ಮೂರ್‍ನಾಲ್ಕು ಸಭೆಗಳಾಗಿವೆ. ರೈತರು ತಮ್ಮಲ್ಲಿನ ಶಂಕೆ, ಅನಿಸಿಕೆ, ಬೇಡಿಕೆ ಇನ್ನಿತರ ಮಾಹಿತಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.ಕೊರತೆಗಳನ್ನು ಪಟ್ಟಿ ಮಾಡಿದ್ದಾರೆ. ತೋಟಗಾರಿಕಾ ವಿವಿ, ಧಾರವಾಡಕೃಷಿ ವಿವಿ ತಜ್ಞರನ್ನು ಆಹ್ವಾನಿಸಿ ರೈತರಿಗೆ ಮಾಹಿತಿ ಒದಗಿಸಲಾಗಿದೆ. ಸಾಧಕ ಮಾವು ರೈತರೊಂದಿಗೆ ಸಂವಾದಕೈಗೊಳ್ಳಲಾಗುತ್ತಿದ್ದು, ಕೊಪ್ಪಳ ಜಿಲ್ಲೆ ಸಾಧಕ ರೈತರೊಬ್ಬರು ಆಗಮಿಸಿ ಅನುಭವ ಹಂಚಿಕೊಂಡಿದ್ದಾರೆ. ಬಳಗದಲ್ಲಿ “ಪದಾಧಿಕಾರ ಪಟ್ಟ’ ಕಲ್ಪನೆ ಮಾಯವಾಗಿ ಸಾಮೂಹಿಕ ನಾಯಕತ್ವ ಚಿಂತನೆ ಬಲಗೊಳ್ಳತೊಡಗಿದೆ. ಸಂಘಟನೆ ಏನಾದೀತು ಎಂಬ ನಿರುತ್ಸಾಹ, ಶಂಕೆ, ಸಂಶಯ, ಅನುಮಾನಗಳು ದೂರವಾಗಿ ರೈತರೇ ಸ್ವತಃ ತಮ್ಮಹೊಲಕ್ಕೆ ಆಹ್ವಾನಿಸಿ ಅಲ್ಲಿ ಸಭೆ ನಡೆಸುವ, ಬಂದವರಿಗೆ ಭೋಜನ ವ್ಯವಸ್ಥೆಯನ್ನು ಸ್ವಯಂ ಪ್ರೇರಣೆಯಿಂದ ಮಾಡುವಷ್ಟು ಸಂಘಟನೆ ಪರಿಪಕ್ವವಾಗುತ್ತಿದೆ.

ಒಂದೇ ಬ್ರ್ಯಾಂಡ್ ನ‌ಡಿ ಮಾರಾಟಕ್ಕೆ ಚಿಂತನೆ
10 ಮಾವಿನ ಗಿಡಹೊಂದಿದ ರೈತನಿಂದಹಿಡಿದು 3-5 ಸಾವಿರ ಗಿಡಗಳನ್ನು ಹೊಂದಿದ ರೈತರೆಲ್ಲರೂ ಒಂದೇ ವೇದಿಕೆಯಡಿ ಸೇರಬೇಕು. ಸಹಕಾರ ತತ್ವದಡಿ ಮಾಹಿತಿ ವಿನಿಮಯ, ಬೆಳೆ ಅಭಿವೃದ್ಧಿ, ಮಾರಾಟ ವ್ಯವಸ್ಥೆಗೆ ಮುಂದಾಗಬೇಕೆಂಬ ಚಿಂತನೆ ಬಲಗೊಳ್ಳತೊಡಗಿದೆ. ಮುಂದಿನ ದಿನಗಳಲ್ಲಿ ಧಾರವಾಡ ಪೇಢೆಹೇಗೆ ತನ್ನದೇ ಬ್ರ್ಯಾಂಡ್ ಪಡೆದುಕೊಂಡಿದೆಯೋ ಅದೇ ರೀತಿ ಧಾರವಾಡದ ಮಾವಿನಹಣ್ಣನ್ನು ಸಹ ಒಂದೇ ಬ್ರ್ಯಾಂಡ್ ನ‌ಡಿ ಜನಪ್ರಿಯಗೊಳಿಸಿ ಮಾರಾಟ ಮಾಡುವ ಚಿಂತನೆಗಳು ಗರಿಗೆದರತೊಡಗಿದ್ದು, ಮೂರು ವರ್ಷದ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಾವುಖರೀದಿದಾರರ ಸಭೆ ನಡೆಸಲು, ರಾಜ್ಯ-ಕೇಂದ್ರ ಸರಕಾರದ ನೆರವು, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಪ್ರಯೋಜನ ಪಡೆದು ವಿಶ್ವಮಟ್ಟದಲ್ಲಿ ಧಾರವಾಡ ಮಾವಿನ ಹಣ್ಣಿನ ರುಚಿ ಪಸರಿಸುವ ಉದ್ದೇಶಹೊಂದಲಾಗಿದೆ. ಹುಬ್ಬಳ್ಳಿಯಿಂದ ವಿಮಾನಕಾರ್ಗೋ ಆರಂಭವಾಗಿದೆ. ಅದೇ ರೀತಿ ಕೆಫೆಕ್‌ನ ಪೂರ್ವ ಶೈತ್ಯಾಗಾರ, ಮಾವಿನ ಸ್ವತ್ಛತೆಕಾರ್ಯಗಳು ಪುನಾರಂಭಗೊಳ್ಳುತ್ತಿದ್ದು, ಮಾವು ಬೆಳೆಗಾರರಲ್ಲಿ ಹಣ್ಣಿನ ರಫ್ತು ಚಿಂತನೆ ಗರಿಗೆದರುವಂತೆ ಮಾಡಿದೆ.

ಮಂಡಳಿ ಶಾಖೆಗೆ ಒತ್ತಾಯ
ಮಾವು ಬೆಳೆಗಾರರ ನೆರವಿಗಾಗಿ ರಾಜ್ಯ ಸರಕಾರ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ ಆರಂಭಿಸಿದ್ದು, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಉತ್ತರಕರ್ನಾಟಕದ ಮಾವು ಬೆಳೆಗಾರರು ಮಂಡಳಿ ನೆರವು ಪಡೆಯಲು ಬೆಂಗಳೂರಿಗೆ ಹೋಗಬೇಕಾಗಿದ್ದು, ಅದರ ಒಂದು ಶಾಖೆಯನ್ನು ಧಾರವಾಡದಲ್ಲಿ ಆರಂಭಿಸಿದರೆ ಉತ್ತರಕರ್ನಾಟಕದ ಮಾವು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂಬ ಬೇಡಿಕೆ ಬಲವಾಗಿದೆ. ಇದಕ್ಕೆ ಧ್ವನಿಯಾಗಿ ನೂತನವಾಗಿ
ಅಸ್ತಿತ್ವಕ್ಕೆ ಬಂದಿರುವ ಮಾವು ಬೆಳೆಗಾರರ ಬಳಗ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ , ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಶಂಕರ ಪಾಟೀಲ ಮುನೇಕೊಪ್ಪ ಅವರಿಗೆ ಮನವಿ ಮಾಡಿದೆ. ತೋಟಗಾರಿಕಾ ಸಚಿವರೊಂದಿಗೆ ಚರ್ಚಿಸಿ ತಕ್ಷಣಕ್ಕೆ ಕ್ರಮಕೈಗೊಳ್ಳಲುಯತ್ನಿಸುವುದಾಗಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭರವಸೆ ನೀಡಿದ್ದಾರೆ.

ಧಾರವಾಡ,ಹಾವೇರಿಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಾವು ಬೆಳೆ ಪ್ರಮುಖವಾಗಿದೆ. ಅದರಲ್ಲೂ ಧಾರವಾಡ ಉತ್ಕೃಷ್ಟ ಅಲ್ಫಾನ್ಸೊ ಮಾವು ಬೆಳೆಗೆಹೆಸರುವಾಸಿ. ಮಾವು ಬೆಳೆಗಾರರು ಸಂಗ್ರಹ, ಮಾರಾಟ ಇನ್ನಿತರ ಸಮಸ್ಯೆ ಅನುಭವಿಸುತ್ತಿದ್ದು, ಪರಿಹಾರ-ನೆರವಿಗೆ ಬೆಂಗಳೂರಿನಲ್ಲಿರುವ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿಯನ್ನು ಆಶ್ರಯಿಸಬೇಕಾಗಿದೆ. ಈ ಭಾಗದ ಬೆಳೆಗಾರರ ಅನುಕೂಲಕ್ಕೆ ಮಂಡಳಿ ಶಾಖೆ ಧಾರವಾಡದಲ್ಲಿ ಆರಂಭವಾಗಬೇಕು. ಈ ನಿಟ್ಟಿನಲ್ಲಿ ಸಿಎಂ ತಕ್ಷಣಕ್ರಮಕೈಗೊಳ್ಳಲಿ.
ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ

ನೀರು ಬಳಕೆದಾರರು ಹಾಗೂ ಸವಳು-ಜವಳು ಸಮಸ್ಯೆ ಪರಿಹಾರಕ್ಕೆ ರೈತರನ್ನು ಸಂಘಟಿಸಿದ ಅನುಭವದ ಆಧಾರದಲ್ಲಿ ಧಾರವಾಡದಲ್ಲಿ ಮಾವು ಬೆಳೆಗಾರ
ಸಂಘಟನೆಗೆ ಅಗತ್ಯ ಸಲಹೆಗಳನ್ನು ನೀಡಿದ್ದೇನೆ. ರೈತರಿಗೆವೈಜ್ಞಾನಿಕ ಹಾಗೂ ತಂತ್ರಜ್ಞಾನ ಮಾಹಿತಿ ದೊರೆಯಬೇಕು. ದತ್ತಾಂಶ ಸಂಗ್ರಹವಾಗಬೇಕು. ಒಂದೇ ಬ್ರ್ಯಾಂಡ್ ನ‌ಡಿ ಮಾವುಮಾರಾಟ ಆಗುವಂತಾಗಬೇಕೆಂಬನಿಟ್ಟಿನಲ್ಲಿ ರೈತರು ಸಾಮೂಹಿಕ ನಾಯಕತ್ವದಡಿಸಂಘಟನೆ ರೂಪಿಸಿಕೊಂಡು ಮಹತ್ವದ ಹೆಜ್ಜೆ ಇರಿಸಿದ್ದಾರೆ.
ಡಾ| ರಾಜೇಂದ್ರ ಪೊದ್ದಾರ, ನಿರ್ದೇಶಕ, ವಾಲ್ಮಿ

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ

ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.