40 ಸಾವಿರ ಸಸಿ ನೆಟ್ಟು ಪೋಷಿಸಿದ ಉದ್ಯೋಗ ಖಾತ್ರಿ ಕಾರ್ಮಿಕರು

ಬೀಜ ಬಿತ್ತುವುದರಿಂದ ಹಿಡಿದು ಪ್ರತಿ ಕೆಲಸವನ್ನು ಮನರೇಗಾ ಕೂಲಿ ಕಾರ್ಮಿಕರು ಮಾಡಿದ್ದಾರೆ.

Team Udayavani, Feb 17, 2021, 4:54 PM IST

40 ಸಾವಿರ ಸಸಿ ನೆಟ್ಟು ಪೋಷಿಸಿದ ಉದ್ಯೋಗ ಖಾತ್ರಿ ಕಾರ್ಮಿಕರು

ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಕೂಲಿ ಕಾರ್ಮಿಕರು, ಬಡ ವರ್ಗದ ಜನರಿಗೆ ಉದ್ಯೋಗ
ನೀಡುವುದಲ್ಲದೇ, ಹಸಿರೀಕರಣಕ್ಕೂ ವರದಾನವಾಗಿದೆ. ತಾಲೂಕಿನ ಹೊನ್ನ ಕಿರಣಗಿ ಗ್ರಾಮ ಪಂಚಾಯಿತಿಯೊಂದರಲ್ಲೇ ಸುಮಾರು 40 ಸಾವಿರ ಸಸಿಗಳನ್ನು ನೆಟ್ಟು ಮರಗಳನ್ನಾಗಿ ಬೆಳೆಸಿ “ಮನರೇಗಾ’ ಪೋಷಿಸುತ್ತಿದೆ.

ನಗರ ಪ್ರದೇಶದಿಂದ 25 ಕಿಲೋ ಮೀಟರ್‌ ದೂರದ ಹೊನ್ನ ಕಿರಣಗಿ, ಫಿರೋಜಾಬಾದ್‌, ದಿನಸಿಣ್ಣೂರ ವ್ಯಾಪ್ತಿಯಲ್ಲಿ ಉಷ್ಣ ವಿದ್ಯುತ್‌ ಸ್ಥಾವರ ಘಟಕ ಸ್ಥಾಪನೆಗಾಗಿ 1,600 ಎಕರೆ ಭೂಮಿ ಗುರುತಿಸಲಾಗಿದೆ. ಈ ಘಟಕದ ವ್ಯಾಪ್ತಿಯ 21 ಕಿ.ಮೀ ಸುತ್ತಳತೆಯಲ್ಲಿ 2016ರಲ್ಲಿ ಮನರೇಗಾ ಕೂಲಿ ಕಾರ್ಮಿಕರ ಮೂಲಕ ಬೇವು, ಮಾವು, ಹುಣಸಿ, ಬಸವನಪಾದ, ಆಕಾಶ ಮಲ್ಲಿಗೆ, ನೇರಳೆ, ಬಿದರು ಅರಳಿ, ಹೊಂಗೆ ಹೇಗೆ ವಿವಿಧ ಬಗೆ ಸಸಿಗಳನ್ನು ನೆಡಲಾಗಿದೆ. ಈಗ ಅವು 15 ಅಡಿಗೂ ಹೆಚ್ಚು ಎತ್ತರ ಬೆಳೆದಿದ್ದು, ಅವುಗಳನ್ನು ಘೋಷಿಸುವ ಕೆಲಸ ಮನರೇಗಾದಡಿಯಲ್ಲೇ ಭರದಿಂದ ನಡೆಯುತ್ತಿದೆ.

ನಾಲ್ಕು ತಿಂಗಳು ನಿರಂತರ ಕೆಲಸ:
ಹಸಿರೀಕರಣವನ್ನು ಮನರೇಗಾ ಯೋಜನೆಯಲ್ಲೂ ಮಾಡಬಹುದು ಎನ್ನುವ ಪರಿಕಲ್ಪನೆ ತುಂಬಿದವರು ಐಎಎಸ್‌ ಅಧಿಕಾರಿ ಅನಿರುದ್ಧ ಶ್ರವಣ್‌. ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಅವರು ಈ ಉದ್ದೇಶಿತ ಉಷ್ಣ ವಿದ್ಯುತ್‌ ಸ್ಥಾವರ ಘಟಕ ಪ್ರದೇಶದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಇಡೀ ಭೂಮಿ ಸರ್ಕಾರದ ಸ್ವಾಧೀನದಲ್ಲಿದ್ದು, ಯಾವುದೇ ಕಾಮಗಾರಿ ಆರಂಭವಾಗದ ಕಾರಣ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಕಾಂಪೌಂಡ್‌ ಪ್ರದೇಶಕ್ಕೆ ಹೊಂದಿಕೊಂಡು ಮೂರು ಸಾಲುಗಳಲ್ಲಿ ಸಸಿ ನೆಡಲಾಗಿದೆ. ಅರಣ್ಯ ಇಲಾಖೆಯಿಂದ ಮೊದಲು 15 ಸಾವಿರ ಸಸಿ ಪಡೆದು ನೆಡಲಾಗಿದೆ. ಅಲ್ಲದೇ, ಪ್ರತಿ ಐದು ಮೀಟರ್‌ ಅಂತರದಲ್ಲಿ 30 ಸಾವಿರದಷ್ಟು ಬೀಜ ಬಿತ್ತಲಾಗಿದೆ. ಶೇ.80ರಷ್ಟು ಸಸಿಗಳು ಬೆಳೆದಿವೆ. ಸಸಿಗಳಿಗಾಗಿ ಗುಂಡಿ ತೋಡುವುದು ಮತ್ತು ಸಸಿಗಳನ್ನು ನೆಡುವುದು, ಬೀಜ ಬಿತ್ತುವುದರಿಂದ ಹಿಡಿದು ಪ್ರತಿ ಕೆಲಸವನ್ನು ಮನರೇಗಾ ಕೂಲಿ ಕಾರ್ಮಿಕರು ಮಾಡಿದ್ದಾರೆ. 2016ರಿಂದ ಇದುವರೆಗೆ
ವರ್ಷದ ನಾಲ್ಕು ತಿಂಗಳು ಹಸಿರೀಕರಣದಲ್ಲೇ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ.

ಇಂಗು ಗುಂಡಿ ನಿರ್ಮಾಣ: ಹಸಿರೀಕರಣ ಕಾರ್ಯ ಆರಂಭವಾದ ವರ್ಷದಲ್ಲೇ ಮಳೆರಾಯ ಕೈಕೊಟ್ಟಿದ್ದ. ಸತತ ಮೂರು ವರ್ಷ ಬರ ಬಿದ್ದು, ಅಷ್ಟಾಗಿ ಸೌಂದರ್ಯ ಮೈದಳೆದಿರಲಿಲ್ಲ. ಆದರೆ, ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಈಗ ಮರಗಳಲ್ಲಿ ಜೀವ ಕಳೆ ತುಂಬಿದೆ. ಇವುಗಳನ್ನು ನಿರಂತರವಾಗಿ ಪೋಷಿಸಬೇಕೆಂದು ಉದ್ದೇಶಿಸಿದ್ದ ಈಗ ಇಂಗು ಗುಂಡಿಗಳು ಮತ್ತು ಬದುಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ.

21 ಕಿ.ಮೀ ವ್ಯಾಪ್ತಿಯಲ್ಲಿರುವ ಮರಗಳ ಮೂರು ಸಾಲಿನ ಮಧ್ಯೆ ಇಂಗು ಗುಂಡಿ ಮತ್ತು ಬದು ನಿರ್ಮಿಸಲಾಗುತ್ತಿದೆ. ನಿತ್ಯ 700ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಇಂಗು ಗುಂಡಿ, ಬದುಗಳಿಂದ ನೀರು ಸಂಗ್ರಹವಾಗಲಿದೆ. ಇದರಿಂದ ಬೆಳೆದು ನಿಂತಿರುವ ಮರಗಳು ಪೋಷಣೆ ಕಾರ್ಯ ಮಾಡಲಾಗುತ್ತಿದೆ. ಹಸಿರೀಕರಣ, ಅಂತರ್ಜಲ ವೃದ್ಧಿ, ಮರ-ಗಿಡಗಳ ಬೆಳಸುವ ಕೆಲಸಕ್ಕೂ ಮನರೇಗಾವನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು ಎನ್ನುವುದುನ್ನು ಇದು
ನಿರೂಪಿಸಿವಂತಿದೆ.

ವಿದ್ಯಾವಂತರಿಗೂ “ಮನರೇಗಾ’ ಸೈ
“ಮನರೇಗಾ’ ಯೋಜನೆ ವಿದ್ಯಾವಂತರ ಕೈಯನ್ನು ಹಿಡಿದಿದೆ. ಹೊನ್ನ ಕಿರಣಗಿಯಲ್ಲಿ ನಡೆಯುತ್ತಿರುವ ಇಂಗು ಗುಂಡಿ ಮತ್ತು ಬದುಗಳ ನಿರ್ಮಾಣ ಕಾರ್ಯದ ಕೂಲಿ ಕಾರ್ಮಿಕರಲ್ಲಿ 35 ವಿದ್ಯಾವಂತರು ಸೇರಿದ್ದಾರೆ. ಬಿಎ, ಪಿಯುಸಿ, ಐಟಿಐ, ಎಸ್ಸೆಸ್ಸೆಲ್ಸಿ ಓದಿರುವ ಯುವಕ-ಯುವತಿಯರು ಗುದ್ದಲಿ, ಬುಟ್ಟಿ
ಹಿಡಿದು ಬೆವರು ಸುರಿಸುತ್ತಿದ್ದಾರೆ.

ಓದು ಮುಗಿದ ಬಳಿಕ ದೊಡ್ಡ ಪಟ್ಟಣಗಳಿಗೆ ಹೋಗುವ ಮನಸ್ಸು ಆಗಲಿಲ್ಲ. ಊರಲ್ಲೇ ಏನಾದರೂ ಮಾಡಿದರೆ ಆಯ್ತು ಎಂದು ಉಳಿದುಕೊಂಡಿದ್ದೆವು. ಕಳೆದ ಐದು ವರ್ಷಗಳಿಂದ ಮನರೇಗಾ ಕೂಲಿಯೇ ಕೈ ಹಿಡಿದಿದೆ ಎನ್ನುತ್ತಾರೆ ಬಿಎ ಪದವೀಧರ ಸಂತೋಷ ಕುಮಾರ ಮತ್ತು ಪಿಯುಸಿ ಓದಿರುವ ಶರಬುಲಿಂಗ.

ನಾನು ಪಿಯುಸಿ ವಿಜ್ಞಾನ ವಿಷಯದಲ್ಲಿ ಶೇ.61ರಷ್ಟು ಅಂಕದೊಂದಿಗೆ ತೇರ್ಗಡೆ ಹೊಂದಿದ್ದೇನೆ. ನನ್ನ ಪತಿ ಸಂತೋಷಕುಮಾರ ಪಿಯುಸಿ ಮತ್ತು ಐಟಿಐ ಮುಗಿಸಿದ್ದಾರೆ. ಇಬ್ಬರೂ “ಮನರೇಗಾ’ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದೇವೆ. ಬೆವರು ಸುರಿಸಿ ದುಡಿದು ತಿನ್ನಲು ನಮಗೆ ಯಾವುದೇ ಹಿಂಜರಿಕೆ ಇಲ್ಲ.
ಗೊರಮ್ಮ, ಹೊನ್ನ ಕಿರಣಗಿ

ಬೆಳೆದು ನಿಂತ ಮರಗಳನ್ನು ಪೋಷಿಸುವ ನಿಟ್ಟಿನಲ್ಲಿ ಇಂಗು ಗುಂಡಿ ಮತ್ತು ಬದು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 700ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಪ್ರತಿ 20 ಕೂಲಿ ಕಾರ್ಮಿಕರಿಗೆ ಒಬ್ಬ ಕಾಯಕ ಬಂಧು ನೇಮಿಸಲಾಗಿದೆ. ಕಾಯಕ ಬಂಧುಗಳು ಇಂಗು ಗುಂಡಿ, ಬದು ಗುರುತಿಸಿ ನಂತರ ಎಲ್ಲರಂತೆ ಅವರು ದುಡಿಯಲಿದ್ದಾರೆ.
ಸದಾನಂದ, ಕ್ಷೇತ್ರ ಸಹಾಯಕ, ಮನರೇಗಾ

ಮನರೇಗಾ ಯೋಜನೆ ಗ್ರಾಮೀಣ ಭಾಗದ ಕೃಷಿ ಕೂಲಿ ಕಾರ್ಮಿಕರ ವಲಸೆ ತಡೆಯಲು ಸಹಕಾರಿಯಾಗಿದೆ. ಹೊನ್ನ ಕಿರಣಗಿ ಗ್ರಾ.ಪಂನಡಿ ಅತಿ ಹೆಚ್ಚು ಜನರು ಇದರ ಪ್ರಯೋಜನ ಪಡೆದಿದ್ದಾರೆ. ಹಸಿರೀಕರಣ ಕಾರ್ಯವೊಂದಕ್ಕೆ ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಮಾನವ ದಿನಗಳ ಸೃಜನೆಯಾಗಿದೆ.
ಚಂದ್ರಕಾಂತ ಜೀವಣಗಿ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ

*ರಂಗಪ್ಪ ಗಧಾರ

ಟಾಪ್ ನ್ಯೂಸ್

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು

Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು

Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ… ಆಯುಕ್ತರ ಪಿಎ ಸೇರಿ ಐವರ ಬಂಧನ

Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ

Sachin Panchal Case: Sankranti shock for accused including Raju Kapanura

Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್

Police firing on drug trafficker in Kalaburagi

Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.