ಗಡಿಕೇಶ್ವಾರ: 2ಕೋಟಿ ವೆಚ್ಚದಲ್ಲಿ 850 ಟಿನ್ ಶೆಡ್
Team Udayavani, May 6, 2022, 1:04 PM IST
ಕಾಳಗಿ: ಮೇಲಿಂದ ಮೇಲೆ ಉಂಟಾಗುತ್ತಿದ್ದ ಭೂಕಂಪದಿಂದ ತತ್ತರಿಸಿದ್ದ ಗಡಿಕೇಶ್ವಾರ ಗ್ರಾಮಸ್ಥರ ಶೆಡ್ ನಿರ್ಮಾಣದ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿದೆ ಎಂದು ಚಿಂಚೋಳಿ ತಹಶೀಲ್ದಾರ್ ಅಂಜುಮ್ ತಬಸ್ಸುಮ್ ಹೇಳಿದರು.
ಗಡಿಕೇಶ್ವಾರ ಗ್ರಾಮದಲ್ಲಿ ಅಂದಾಜು ಎರಡು ಕೋಟಿ ರೂ. ಮೊತ್ತದಲ್ಲಿ 850 ಶೆಡ್ ಗಳ ನಿರ್ಮಾಣಕ್ಕೆ ಗುರುವಾರ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸದಾಕಾಲ ತಮ್ಮೊಂದಿಗಿದೆ. ಯಾವುದೇ ಕಾರಣಕ್ಕೂ ಭಯಪಡುವ ಅವಶ್ಯಕತೆಯಿಲ್ಲ ಎಂದರು.
ಭೂಕಂಪದ ಸದ್ದು ಕೇಳಿದಾಗಲೊಮ್ಮೆ ಕಲಬುರಗಿ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಎಲ್ಲ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಊಟ, ವಸತಿ ಸೇರಿದಂತೆ ಪ್ರತಿಯೊಂದು ಬೇಡಿಕೆಯನ್ನು ಈಡೇರಿಸಲಾಗಿದೆ. ಈಗ ಟಿನ್ ಶೆಡ್‌ಗಳ ನಿರ್ಮಾಣಕ್ಕೂ ಚಾಲನೆ ನೀಡಿದ್ದೇವೆ ಎಂದು ಹೇಳಿದರು.
ಗಡಿಕೇಶ್ವಾರ ಗ್ರಾಮಸ್ಥರ ಧೈರ್ಯ, ಸಹನೆ, ತಾಳ್ಮೆ ಅಗಾಧವಾದದ್ದು. ಗ್ರಾಮಸ್ಥರ ಸಹನೆ, ಸಹಕಾರದಿಂದಲೇ ಎಲ್ಲ ಕೆಲಸವಾಗಲು ಸಾಧ್ಯವಾಗಿದೆ. ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗುವುದರಿಂದ ಟಿನ್ ಶೆಡ್ ಗುತ್ತಿಗೆದಾರರು ತಿಂಗಳೊಳಗಾಗಿ ಎಲ್ಲ ಕೆಲಸ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಇದೇ ವೇಳೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ನಿರ್ಮಿಸುತ್ತಿರುವ ಒಂದು ಕೋಟಿ 50 ಲಕ್ಷ ರೂ. ಮೊತ್ತದ ವಸತಿಗೃಹ ನಿರ್ಮಾಣ ಕಾಮಗಾರಿಗಡ ಅಡಿಗಲ್ಲು ನೆರವೇರಿಸಲಾಯಿತು. ಲೋಕೋಪಯೋಗಿ ಎಇಇ ಸಿದ್ರಾಮ್ ದಂಡಗುಲಕರ್, ಗ್ರಾಪಂ ಉಪಾಧ್ಯಕ್ಷ ಜಿಸಾನ್ ಅಲಿ ಪಟ್ಟೇದಾರ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ ದೇಸಾಯಿ, ಶರಣು ಕೋರವಾರ, ಚಂದ್ರು, ಬಡಗಾನ್, ಅಫಜಲ್ ಮಿಯ್ಯ, ಪ್ರಮುಖರಾದ ರೇವಣಸಿದ್ಧಪ್ಪ ಅರಣಕಲ್, ಜಾವೀದಮಿಯ್ಯ ಪಟ್ಟೇದಾರ, ಮೃತ್ಯುಂಜಯಸ್ವಾಮಿ, ಮಂಗಳಮೂರ್ತಿ, ವಿಶ್ವನಾಥ ಬಳಿ, ಧನಶೆಟ್ಟಿ ರೆಮ್ಮಣ್ಣಿ, ಗೌಸಪಟೇಲ್ ಇನಾಂದಾರ, ಪ್ರಭುಲಿಂಗ ಮಂತಾ, ಸಂತೋಷ ಬಳಿ ಮತ್ತಿತರರು ಇದ್ದರು. ಪ್ರಕಾಶ ರಂಗನೂರ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು
Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.