ರಸ್ತೆ ಸೌಂದರ್ಯ ಹೆಚ್ಚಿಸಿದ ಬಂಗಾರದ ಹೂವು
ಳೀಯವಾಗಿ ಹಳದಿ ಗುಲ್‌ಮೋಹರ್ ಗಿಡಗಳೆಂದು ಕರೆಯಲಾಗುತ್ತದೆ.
Team Udayavani, Apr 18, 2022, 5:45 PM IST
ವಾಡಿ: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿ ಜನರ ಎದೆ ಚುರ್ ಎನ್ನುವಷ್ಟು ಬಿಸಿಲ ಧಗೆ ಬದುಕನ್ನೇ ಹೈರಾಣಾಗಿಸಿರುತ್ತದೆ. ರಸ್ತೆಗಳು ಕೆಂಡದ ಹಾಸಿಗೆಯಂತಾಗಿ ಪಾದಗಳಿಗೆ ಬರೆ ಎಳೆಯುತ್ತವೆ.
ಇಂತಹ ಖಡಕ್ ಬಿಸಿಲ ಪರಿಸರಕ್ಕೆ ಸವಾಲೊಡ್ಡುತ್ತಲೇ ಚಿಗೊರೊಡೆಯುವ ಈ ವಿದೇಶಿ ಮರಗಳು, ಹಸಿರೆಲೆ ಹೊತ್ತು ಬಂಗಾರ ಬಣ್ಣದ ಹೂಗಳ ರಾಶಿಯನ್ನು ರಸ್ತೆಗೆ ಚೆಲ್ಲಿ ಸೌಂದರ್ಯದಿಂದ ಬಳಕುತ್ತಿವೆ. ಹೂಗಳ ಹಾಸಿಗೆಯನ್ನೇ ಹಾಸಿ ತಂಪು ಬೀರಿ, ನೆರಳಿನ ಹೊದಿಕೆ ಹರಡುತ್ತಿವೆ.
ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಂಪನಿಯ ಕಾರ್ಮಿಕ ಕಾಲೋನಿಯಲ್ಲಿ ಹಳದಿ ಹೂ ಹೊತ್ತು ನಿಂತ ವಿದೇಶಿ ಮೂಲದ ನೂರಾರು “ಗುಲ್‌ಮೋಹರ್’ ಗಿಡಗಳು ಖಾಸಗಿ ರಸ್ತೆಗಳ ಸೌಂದರ್ಯ ಹೆಚ್ಚಿಸಿವೆ. ಬಂಗಾರ ಮತ್ತು ತಾಮ್ರ ಬಣ್ಣದ ಹೂ ಬಿಡುವ ಈ ಮರಗಳು ದಕ್ಷಿಣ ಏಶಿಯಾದ ಒಣ ಪ್ರದೇಶದಲ್ಲಿ ಕಂಡು ಬರುವ “ಪೆಲ್ಟೋಫೋರಂ ಪೆರೊಕಾರ್ಪಂ’ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತವೆ. ಸ್ಥಳೀಯವಾಗಿ ಹಳದಿ ಗುಲ್‌ಮೋಹರ್ ಗಿಡಗಳೆಂದು ಕರೆಯಲಾಗುತ್ತದೆ. ಈ ವಿದೇಶಿ ಮರಗಳನ್ನು ಸ್ವದೇಶಿ ರಸ್ತೆಗಳ ಸೌಂದರ್ಯಕ್ಕಾಗಿ ಬೆಳೆಸಲಾಗುತ್ತಿರುವುದು ವಿಶೇಷ.
ಬೀದಿಗಳಿಗೆ ಭಂಡಾರವನ್ನೇ ಹರಡಿದಂತೆ ಹಳದಿ ಹೂಗಳನ್ನು ಚೆಲ್ಲುವ ಅಂದ ಚೆಂದದ ಈ ಮರಗಳು ಸುಮಾರು 18 ರಿಂದ 25 ಮೀಟರ್ ಎತ್ತರಕ್ಕೆ ಬೆಳೆಯುತ್ತವೆ. ದ್ವಿದಳದ ಎಲೆಗಳು ಇದರಲ್ಲಿದ್ದು, ಪ್ರತಿ ದಳದಲ್ಲೂ 30ರಿಂದ 40 ಓವರ್ ಆಕಾರದ ಎಲೆಗಳಿವೆ. ಅವುಗಳೆಲ್ಲ ಅಚ್ಚ ಹಳದಿ ಬಣ್ಣದಿಂದ ಕೂಡಿವೆ.
ಗಿಡಕ್ಕೆ ಜೋತು ಬೀಳುವ ಹೂ ಗೊಂಚಲುಗಳು ನೋಡಲು ಅತ್ಯಾಕರ್ಷಕವಾಗಿ ಕಾಣುತ್ತವೆ. ಈ ಮನಮೋಹಕ ಹಳದಿ ಗುಲ್‌ಮೋಹರ್ ಗಿಡಗಳನ್ನು ಎಸಿಸಿ ಕಂಪನಿಯವರು 60 ವರ್ಷಗಳ ಹಿಂದೆ ಕಾರ್ಮಿಕರ ಕಾಲೋನಿಯ ಹಲವು ರಸ್ತೆಗಳ ಬದಿಯಲ್ಲಿ ನೆಟ್ಟಿದ್ದಾರೆ. ಈಗ ಇವು ಪ್ರತಿ ವರ್ಷ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರಸ್ತೆಗಳಿಗೆ ಬಂಗಾರಬ ಬಣ್ಣದ ರಾಶಿ ಹೂಗಳನ್ನು ಚೆಲ್ಲುವ ಕಾಯಕವನ್ನು ಮುಂದುವರಿಸಿವೆ.
ಸ್ವತ್ಛತೆಗಾಗಿ ನೇಮಿಸಲಾದ ಕಾರ್ಮಿಕರಿಗೆ ಹೂಗಳ ರಾಶಿಯನ್ನು ಗುಡ್ಡೆಹಾಕಿ ಶುಚಿ ಮಾಡುವುದೇ ನಿತ್ಯದ ಕೆಲಸವಾಗಿದೆ. ಪಟ್ಟಣದಾದ್ಯಂತ ಗಿಡ-ಮರಗಳ ಕೊರತೆ ಎದ್ದುಕಂಡರೆ, ಎಸಿಸಿಯ ಖಾಸಗಿ ಕಾಲೋನಿಯಲ್ಲಿ ಹೂ ಬಿಡುವ ಮರಗಳೇ ಕಣುRಕುಕ್ಕುತ್ತವೆ. ಸೂರ್ಯನಿಗೆ ಅಡ್ಡಲಾಗಿ ನಿಂತ ಸಾಲುಸಾಲು ಮರಗಳು ತಂಪಾದ ನೆರಳು ನೀಡುತ್ತಿವೆ. ಜತೆಗೆ ಸುಂದರವಾದ ಹೂವುಗಳನ್ನು ಬಿಟ್ಟು ರಸ್ತೆಯ ಸೌಂದರ್ಯ ಹೆಚ್ಚಿಸಿವೆ.
*ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.