ಕಬ್ಬು ಕಟಾವಿಗೆ ಜಿಲ್ಲಾಡಳಿತ ನೂತನ ಕ್ರಮ: ಗುರುಕರ್
Team Udayavani, Mar 19, 2022, 10:07 AM IST
ಕಲಬುರಗಿ: ಮುಂದಿನ ವರ್ಷದಿಂದ ದಿನಾಂಕವಾರು, ಗ್ರಾಮವಾರು ಆಯಾ ದಿನದಂದೇ ಗ್ರಾಮಗಳ ಕಬ್ಬು ಕಟಾವು ಆಗಲು ವ್ಯವಸ್ಥೆಯೊಂದನ್ನು ಜಿಲ್ಲೆಯಲ್ಲಿ ಕಾರ್ಯಾನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ತಿಳಿಸಿದರು.
ಜಿಲ್ಲೆಯ ಭೂಸನೂರಿನ ಎನ್‌ಎಸ್ ಎಲ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ರೈತರ ಕಟಾವು ಆಗದೇ ಉಳಿದಿರುವ ಕಬ್ಬನ್ನು ಇವತ್ತಿನಿಂದಲೇ ದಿನಾಂಕವಾರು ಕಟಾವು ಆಗುವ ಗ್ರಾಮಗಳ ಪಟ್ಟಿ ಯೊಂದನ್ನು ಶುಕ್ರವಾರ ಬಿಡುಗಡೆ ಮಾಡಿ, ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬರುವ ಏಪ್ರಿಲ್ 10ರ ಒಳಗೆ ಕಟಾವು ಆಗದೇ ಉಳಿದಿರುವ 4239 ಎಕರೆ ಕಬ್ಬನ್ನು ಸಂಪೂರ್ಣ ಕಟಾವು ಮಾಡಲಾಗುವುದು ಎಂದರು.
ಆ್ಯಪ್ ಬಿಡುಗಡೆ
ಮುಂದಿನ ವರ್ಷದಿಂದ ಜಿಲ್ಲೆಯ ರೇಣುಕಾ, ಕೆಪಿಆರ್ ಹಾಗೂ ಉಗಾರ್ ಸಕ್ಕರೆ ಕಾರ್ಖಾನೆಯಿಂದಲೂ ಯಾವ ದಿನಾಂಕದಂದು ಯಾವ ಗ್ರಾಮದ ಕಬ್ಬು ಕಟಾವು ಎನ್ನುವ ಪಟ್ಟಿ ರೂಪಿಸಲಾಗುವುದು. ಇದರಲ್ಲಿ ಬಹಳ ವ್ಯತ್ಯಾಸವಾದರೆ, ರೈತರ ಶೋಷಣೆಯಾದಲ್ಲಿ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಿಂದೇಟು ಹಾಕದು ಎಂದು ಎಚ್ಚರಿಕೆ ನೀಡಿದರು.
ಪ್ರಮುಖವಾಗಿ ಕಬ್ಬು ಕಟಾವು ಆಗುವ ಕುರಿತು, ಜತೆಗೆ ಕಬ್ಬು ಕಟಾವು ಆಗದೇ ಇದ್ದಲ್ಲಿ ದೂರು ದಾಖಲಿಸಲು ಅನುಕೂಲವಾಗುವಂತೆ ಆ್ಯಪ್‌ವೊಂದನ್ನು ರೂಪಿಸಲಾಗುವುದು. ಒಟ್ಟಾರೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಿದೆ ಎಂದು ವಿವರಿಸಿದರು.
ಸರ್ಕಾರಕ್ಕೆ ವರದಿ
ಕಬ್ಬು ಕಟಾವು ಆಗದೇ ಇದ್ದುದರಿಂದ ಜತೆಗೆ ಕಬ್ಬು ಒಣಗುತ್ತಿರುವುದರಿಂದ ಕೆಲವೆಡೆ ಆಕಸ್ಮಿಕವಾಗಿ ಕಬ್ಬಿಗೆ ಬೆಂಕಿ ತಗುಲಿ ನಷ್ಟ ವಾಗಿದೆ. ಇನ್ನು ಕೆಲವೆಡೆ ಕಬ್ಬು ಕಟಾವು ಆಗದೇ ಇರುವುದರಿಂದ ರೈತರು ನೊಂದು ಕಬ್ಬಿಗೆ ಬೆಂಕಿ ಹಚ್ಚಿರುವ ಘಟನೆಗಳು ನಡೆದಿವೆ. ಇವುಗಳ ಕುರಿತು ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು ಎಂದು ತಿಳಿಸಿದರು.
ಕಬ್ಬು ಪೂರೈಸಿದ ರೈತರಿಗೆ ಹಣ ಪಾವತಿಸಲು ಮೀನಾಮೇಷ ಎಣಿಸುತ್ತಿದ್ದ ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿತ್ತು. ಶೇ. 43ರಷ್ಟು ಇದ್ದ ಬಿಲ್ ಪಾವತಿ ಪ್ರಮಾಣ ಈಗ ಶೇ. 87ರಷ್ಟು ಪ್ರತಿಶತವಾಗಿದೆ ಎಂದು ಹೆಚ್ಚುವರಿ ಜಿಲ್ಲಾಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದರು.
ಪಿಂಚಣಿಗೆ ಸಹಾಯವಾಣಿ
ನಿವೃತ್ತಿ ನೌಕರರಿಗೆ ಸಕಾಲಕ್ಕೆ ಪಿಂಚಣಿ ದೊರಕಲು ಕ್ರಮ ಕೈಗೊಳ್ಳಲಾಗುತ್ತಿದ್ದು, ದೂರುಗಳನ್ನು ಸ್ವೀಕರಿಸಿ ತಕ್ಷಣ ಸ್ಪಂದಿಸಲು ಸಹಾಯವಾಣಿ ತೆರೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ತಿಳಿಸಿದರು.
ನಿವೃತ್ತ ನೌಕರರಿಗೆ ಸರಳವಾಗಿ ಪಿಂಚಣಿ ತಲುಪದಿರುವ ಕುರಿತು ನಿವೃತ್ತ ನೌಕರರಿಂದ ಆಕ್ಷೇಪ ವ್ಯಕ್ತವಾಗುತ್ತಿರುವುದನ್ನು ಮನಗಂಡು ಟೋಲ್ ಫ್ರೀ ವ್ಯವಸ್ಥೆ ವ್ಯವಸ್ಥೆಯನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದರು.
ಕಟಾವಾಗದೇ ಉಳಿದ ಕಬ್ಬಿನ ವಿಸ್ತೀರ್ಣ
ನಿಂಬರ್ಗಾ ವಿಭಾಗದಲ್ಲಿ 550 ಎಕರೆ, ಆಳಂದ ವಿಭಾಗದಲ್ಲಿ 410 ಎಕರೆ, ಕಲಬುರಗಿ ವಿಭಾಗದಲ್ಲಿ 1205 ಎಕರೆ, ಚೌಡಾಪುರ ವಿಭಾಗದಲ್ಲಿ 1458 ಎಕರೆ, ಅಫಜಲಪುರ ವಿಭಾಗದಲ್ಲಿ 184 ಎಕರೆ, ಕರಜಗಿ ವಿಭಾಗದಲ್ಲಿ 130 ಎಕರೆ, ಕಡಗಂಚಿ ವಿಭಾಗದಲ್ಲಿ 302 ಸೇರಿ ಒಟ್ಟು 4239 ಎಕರೆ ಪ್ರದೇಶಗಳಿಂದ ಅಂದಾಜು 1,24,768 ಮೆಟ್ರಿಕ್ ಟನ್ ಬಾಕಿ ಕಬ್ಬು ಕಟಾವು ಮಾಡಲು ಸಮಯ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ತಿಳಿಸಿದರು.
ಕಬ್ಬಿನ ಬಿಲ್ ಪಾವತಿ ವಿವರ
2021-22ನೇ ಸಾಲಿಗೆ ಎನ್‌ಎಸ್‌ಎಲ್ ಕಾರ್ಖಾನೆಯು 6,594 ರೈತರಿಂದ 8,27,737 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 24,128.53 ಲಕ್ಷ ರೂ. ಮೊತ್ತದ ಪೈಕಿ 19,348.45 ಲಕ್ಷ ರೂ. (ಶೇ.80.18ರಷ್ಟು) ರೈತರಿಗೆ ಪಾವತಿಸಿದ್ದು, 4,780.08 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ನಾನು ಅಧಿಕಾರ ವಹಿಸಿದಾಗ ಪಾವತಿ ಪ್ರಮಾಣ ಶೇ.38 ಇತ್ತು, ಇದೀಗ ಅದು 80.18 ತಲುಪಿದೆ ಎಂದರು.
ಅಫಜಲಪುರ ತಾಲೂಕಿನ ಹವಳಗಾದ ರೇಣುಕಾ ಶುಗರ್ ಕಾರ್ಖಾನೆಯು 11,250 ರೈತರಿಂದ 11,73,010 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 34,765.67 ಲಕ್ಷ ರೂ. ಮೊತ್ತದ ಪೈಕಿ 30,442.36 ಲಕ್ಷ ರೂ. (ಶೇ.87.56) ಪಾವತಿಸಿದ್ದು, 4,323.31 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ಅದೇ ರೀತಿ ಯಡ್ರಾಮಿ ತಾಲೂಕಿನ ಮಳ್ಳಿ ಉಗಾರ್ ಶುಗರ್ ಕಾರ್ಖಾನೆಯು 4,36,550 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 13,573.34 ಲಕ್ಷ ರೂ. ಮೊತ್ತದ ಪೈಕಿ 8,920.463 ಲಕ್ಷ ರೂ. (ಶೇ.65.73) ಪಾವತಿಸಿದ್ದು, 4,651.877 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ.
ಕಬ್ಬು ಕಟಾವು ಆಗದೇ ಹೊಲದಲ್ಲಿ ಒಣಗುತ್ತಿರು ವುದನ್ನು, ರೈತರು ನಿರಾಸೆಯಾಗಿ ಬೆಂಕಿ ಹಚ್ಚುತ್ತಿರುವುದನ್ನು ತಪ್ಪಿಸಲು, ಜತೆಗೆ ಸಕಾಲಕ್ಕೆ ಕ್ರಮಾನುಸಾರ ಕಬ್ಬು ಕಟಾವು ಆಗಲು ಜಿಲ್ಲಾಡಳಿತದಿಂದ ನೂತನ ಕ್ರಮ ಕೈಗೊಳ್ಳಲಾಗುತ್ತಿದೆ. -ಯಶವಂತ ಗುರುಕರ್, ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.