![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Dec 23, 2021, 11:18 AM IST
ಕಲಬುರಗಿ: ಅಫಜಲಪುರ ತಾಲೂಕಿನ ಭೈರಾಮಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ನಂತರವೂ ಕಳೆದ 18 ವರ್ಷಗಳಿಂದ ಗಣಿತ ವಿಷಯ ಬೋಧಿಸುತ್ತಿರುವ ಯಶ್ವಂತರಾವ ಬಿರಾದಾರ ಅವರನ್ನು ಭೈರಾಮಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ವಿಎಸ್‌ಎಸ್‌ಎನ್) ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಹಣಮಂತರಾವ ಹಿರೇಗೌಡ ಭೈರಾಮಡಗಿ ಸನ್ಮಾನಿಸಿ, ನಿವೃತ್ತಿಯಾಗಿ 18 ವರ್ಷವಾದರೂ ಆಸಕ್ತಿಯಿಂದ ಮಕ್ಕಳಿಗೆ ಗಣಿತ ವಿಷಯ ಬೋಧಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು.
ಶಾಲೆಯಿಂದ ಒಮ್ಮೆಲೆ ಆರು ಶಿಕ್ಷಕರು ವರ್ಗಾವಣೆ ಆಗಿದ್ದಾರೆ. ಅಲ್ಲದೇ ಈ ಶಾಲೆಯಲ್ಲಿ ಗಣಿತ ಶಿಕ್ಷಕರಿಲ್ಲ. ಇದನ್ನು ಅರಿತು ಬೋಧನೆ ಮಾಡುತ್ತಿದ್ದೇನೆ ಎಂದು ಸತ್ಕಾರ ಸ್ವೀಕರಿಸಿದ ನಿವೃತ್ತ ಶಿಕ್ಷಕ ಯಶ್ವಂತರಾವ ಬಿರಾದಾರ ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಎಚ್.ಎಸ್. ಹಿರೇಮಠ, ಸಂಘದ ಕಾರ್ಯನಿರ್ವಹಣಾಧಿಕಾರಿ ಶರಣಗೌಡ ಪಾಟೀಲ, ಸಂಘದ ಉಪಾಧ್ಯಕ್ಷ ಸಿದ್ಧಪ್ಪ ಮಾಪಣ್ಣ, ನಿರ್ದೆಶಕರಾದ ದತ್ತಪ್ಪ ಜೋಗದ, ಲಕ್ಷ್ಮೀಪುತ್ರ ಜವಳಿ, ಈರಣ್ಣ ಬಿರಾದಾರ, ವಿಜಯಕುಮಾರ ಗುತ್ತೇದಾರ, ಮಲ್ಲಿನಾಥ ನಾಗೋಜಿ, ತುಕಾರಾಮ ಯಳಸಂಗಿ, ಸಂಗಮನಾಥ ಬಿರಾದಾರ, ಸಹಾಯಕ ಕಾರ್ಯದರ್ಶಿ ಸಂಜೀವಕುಮಾರ ಬಿರಾದಾರ, ಶಿವುಗೌಡ ಪೊಲೀಸ್ ಪಾಟೀಲ, ವಿಶ್ವನಾಥ ಪಾಟೀಲ, ಕಲ್ಯಾಣಪ್ಪ ದಂಡೋತಿ ಮುಂತಾದವರಿದ್ದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.