ಇನ್ನೂ ಆರಂಭವಾಗಿಲ್ಲ ಆಧಾರ ಸೇವಾ ಕೇಂದ್ರ

Team Udayavani, Aug 14, 2021, 5:38 PM IST

ಇನ್ನೂ ಆರಂಭವಾಗಿಲ್ಲ ಆಧಾರ ಸೇವಾ ಕೇಂದ್ರ

ಆಳಂದ: ಕಳೆದ ಎರಡು ತಿಂಗಳಿಂದಲೂ ಹೋಬಳಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ ಸೇವಾ ಕೇಂದ್ರಗಳ ಸೇವಾ ಕಾರ್ಯ ಸ್ಥಗಿತವಾಗಿದ್ದರಿಂದ ಆಧಾರ ಕಾರ್ಡ್‌ ತಿದ್ದುಪಡಿ, ಅಪ್‌ಡೇಟ್‌ಗಾಗಿ ಸಾರ್ವಜನಿಕರು ಪಟ್ಟಣದ ಖಾಸಗಿ ಸೇವಾ ಕೇಂದ್ರಗಳ ಎದುರು ದಿನವಿಡಿ ಸರತಿಸಾಲಿನಲ್ಲಿ ನಿಲ್ಲುವಂತಾಗಿದೆ.

ಕಂದಾಯ ಇಲಾಖೆ ಸ್ವಾಧಿಧೀನದ ಹೋಬಳಿ ಕೇಂದ್ರ ಆಳಂದ, ಖಜೂರಿ, ನಿಂಬರ್ಗಾ, ಮಾದನಹಿಪ್ಪರಗಾ, ನರೋಣಾ ನಾಡ ಕಚೇರಿಗಳಲ್ಲಿ ಆಧಾರ ಸೇವಾ ಕೇಂದ್ರಗಳು ಕಳೆದ ಎರಡು ತಿಂಗಳಿಂದ ಕಾರ್ಯನಿರ್ವಹಿಸುತ್ತಿಲ್ಲ.

ಸಕಾಲಕ್ಕೆ ಆಧಾರ ಸರಿಪಡಿಸದೇ ಇರುವುದು ಸರ್ಕಾರಿ ಸೌಲಭ್ಯ ಸೇರಿದಂತೆ ಇನ್ನುಳಿದ ಕೆಲಸಕ್ಕೆ ಅಡಚಣಿ ಎದುರಾಗಿದೆ. ನಮ್ಮನ್ನು ಸೌಲಭ್ಯಗಳಿಂದ ವಂಚಿತವನ್ನಾಗಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಸದ್ಯ ಬ್ಯಾಂಕ್‌ ಖಾತೆ ತೆರೆಯಲು, ರೇಷನ್‌ ಕಾರ್ಡ್‌ಗೆ ಹೊಂದಾಣಿಕೆ ಸೇರಿದಂತೆ ಅಗತ್ಯ ದಾಖಲೆ ಪಡೆಯಲು, ಸರ್ಕಾರಿ ವ್ಯವಹಾರಕ್ಕೆ ಆಧಾರ ಕಾರ್ಡ್‌ ಕಡ್ಡಾಯವಾಗಿ ಕೇಳಲಾಗುತ್ತಿದೆ. ಆದರೆ, ಸಾರ್ವಜನಿಕರಿಗೆ ಸಕಾಲಕ್ಕೆ ಸರಿಪಡಿಸಿದ ಆಧಾರ ಕಾರ್ಡ್‌ ಸಲ್ಲಿಕೆ ವಿಳಂಬ ಆಗುತ್ತಿದೆ. ಹೀಗಿದ್ದರೂ ಸಾರ್ವಜನಿಕರು ತಮ್ಮ ಆಧಾರ ಕಾರ್ಡ್‌ ಸರಿಪಡಿಸಿಕೊಳ್ಳಲು ಮುಂದಾಗಿ ಆಧಾರ ಸೇವಾ ಕೇಂದ್ರಗಳಿಗೆ ಹೋದರೆ ಕಳೆದ ಎರಡು ತಿಂಗಳಿಂದಲೂ ಸೇವಾ ಕಾರ್ಯ ನಡೆಯದೇ ಇರುವುದರಿಂದ ಬೇಸತ್ತು ಪರವಾನಗಿ ಪಡೆದ ಖಾಸಗಿ ಸೇವಾ ಕೇಂದ್ರಗಳ ಮೊರೆ ಹೋಗಿ, ದಿನವಿಡಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಸದ್ಯ ಪಟ್ಟಣದ ಎಸ್‌ಬಿಐ ಶಾಖೆಯಲ್ಲಿ ಆಧಾರ ಸೇವಾ ಕೇಂದ್ರ ಹೊರತುಪಡಿಸಿ ನಾಡ ಕಚೇರಿ ಸೇರಿದಂತೆ ಇನ್ನುಳಿದ ಖಾಸಗಿ ಸೇವಾ ಕೇಂದ್ರಗಳಿಗೂ ಸರ್ಕಾರ ತಡೆ ನೀಡಿದ್ದರಿಂದ ಸದ್ಯ ಪಟ್ಟಣದ ಏಕೈಕ ಸೇವಾ ಕೇಂದ್ರವಾಗಿ ಎಸ್‌ಬಿಐ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಎಲ್ಲ ಭಾಗಗಳಿಂದ ಜನ ಬರುತ್ತಿರುವುದರಿಂದ ದಟ್ಟಣೆ ಉಂಟಾಗಿದೆ. ಅಲ್ಲದೇ ಸರ್ವರ್‌ನ ತಾಂತ್ರಿಕ ಅಡೆತಡೆಯಿಂದ ದಿನಕ್ಕೆ 20 ಕಾರ್ಡ್‌ಗಳನ್ನು ಮಾತ್ರ ಸರಿಪಡಿಸಿಕೊಡಲು ಸಾಧ್ಯವಿದೆ
ಎನ್ನುತ್ತಾರೆ ಸೇವಾಕೇಂದ್ರದ ಸಿಬ್ಬಂದಿ.

ಬ್ಯಾಂಕ್‌ ಖಾತೆ, ರೇಷನ್‌ ಕಾರ್ಡ್‌, ಮಾಸಾಶನ, ಜಮೀನು ಸರ್ವೇ, ಮಕ್ಕಳ ಶಿಷ್ಯ ವೇತನ ಪಡೆಯಲು ವಿದ್ಯಾರ್ಥಿಗಳಿಂದ ಹಿಡಿದು ಪ್ರತಿಯೊಬ್ಬ ನಾಗರಿಕರಿಗೂ ಆಧಾರ ಕಾರ್ಡ್‌ ಎಲ್ಲದಕ್ಕೂ ಆಧಾರ ಸ್ತಂಭವಾಗಿದೆ. ಆದರೆ ಜನರಿಗೆ ಸಕಾಲಕ್ಕೆ ಮಾರ್ಪಡಿತ ಆಧಾರ ಕಾರ್ಡ್‌ ನೀಡುವ ಸೇವಾ ಕೇಂದ್ರಗಳೇ ಬಾಗಿಲು ಮುಚ್ಚಿದ್ದು, ಜನತೆ ಪರದಾಡುವಂತೆ ಆಗಿದೆ.

ಮೂಲಗಳ ಪ್ರಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಆಧಾರ ನೋಂದಣಿ ಕೈಗೊಳ್ಳುವ ಕುರಿತು ಗ್ರಾಪಂ ಸಿಬ್ಬಂದಿಗೆ ತರಬೇತಿ ನೀಡಿ ಆಧಾರ ತಿದ್ದುಪಡಿಗೆ ಅವಕಾಶ ನೀಡಲಾಗುವುದು ಎಂದು ಒಂದು ತಿಂಗಳ ಹಿಂದೆಯೇ ಸರ್ಕಾರ ಆದೇಶ ನೀಡಿತ್ತು. ಆದರೆ ಈ ಕಾರ್ಯ ಇನ್ನೂ ಚಾಲ್ತಿಗೆ ಬಂದಿಲ್ಲ.

ನಿಂಬರ್ಗಾ ನಾಡಕಚೇರಿಯಲ್ಲಿನ ಆಧಾರ ನೋಂದಣಿ ಕೇಂದ್ರದಲ್ಲಿ ಸುಮಾರು ಎರಡು ತಿಂಗಳಿಂದಲೂ ಯಾವುದೇ ಕೆಲಸ-ಕಾರ್ಯ ನಡೆಯುತ್ತಿಲ್ಲ. ಖಾಸಗಿ ಕೇಂದ್ರಕ್ಕೆ ಅನುಮತಿ ನೀಡಿಲ್ಲ. ಹೀಗೆ ಸಾರ್ವಜನಿಕರು ಕಲಬುರಗಿ ಸೇರಿದಂತೆ ಇನ್ನುಳಿದ ಕಡೆ ಹೋಗಿ ಹೆಚ್ಚಿನ ಹಣ ನೀಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ನಾಡಕಚೇರಿಯಲ್ಲಿ ಇನ್‌ವರ್ಟರ್‌ ಇಲ್ಲ. ವಿದ್ಯುತ್‌ ಕಡಿತವಾದರೆ ಕೆಲಸ ಬಂದ್‌ ಆಗಿ ಜನರು ದಿನವಿಡಿ ಸರಣಿಯಲ್ಲೇ ನಿಲ್ಲುವಂತಾಗಿದೆ. ಅನೇಕರ ಆಧಾರ ಕಾರ್ಡ್‌ಗೆ ಮೊಬೈಲ್‌ ಸಂಖ್ಯೆ ಹೊಂದಾಣಿಕೆ ವಿಳಂಬವಾಗಿದೆ. ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಹಣ ಬರುತ್ತಿಲ್ಲ. ಕಾರ್ಮಿಕರ ಕಾರ್ಡ್‌ ಹೊಸದಾಗಿ ಮಾಡಿಕೊಳ್ಳುವರಿಗೆ ಆಧಾರಗೆ ಮೊಬೈಲ್‌ ಸಂಖ್ಯೆ ಬೇಕು. ಆದರೆ ಸೇವಾ ಕೇಂದ್ರ ಮುಚ್ಚಿದ್ದರಿಂದ ಜನಸಾಮಾನ್ಯರಿಗೆ ಸರ್ಕಾಲಕ್ಕೆ ಮಾರ್ಪಡಿತ ಆಧಾರ ಸಿಗದೇ ತೊಂದರೆ ಪಡುವಂತೆ ಆಗಿದೆ.
ಬಸವರಾಜ ಯಳಸಂಗಿ, ಕರವೇ ಅಧ್ಯಕ್ಷ, ನಿಂಬರಗಾ

ಆಳಂದ, ನರೋಣಾ, ಮಾದನಹಿಪ್ಪರಗಾ ನಾಡಕಚೇರಿಯಲ್ಲಿ ಸೇವಾ ಕೇಂದ್ರದ ಹಳೆಯ ಸಿಬ್ಬಂದಿ ತೆಗೆದು ಹೊಸಬರ ನೇಮಕ ಮಾಡಿದ್ದರಿಂದ ಕಾರ್ಯ ಕೈಗೊಳ್ಳಲು ವಿಳಂಬವಾಗಿದೆ. ಖಜೂರಿ ಮತ್ತು ನಿಂಬರ್ಗಾದಲ್ಲಿ ತೊಂದರೆಯಿಲ್ಲ. ಶೀಘ್ರವೇ ಕಾರ್ಯ ಆರಂಭಿಸಲಾಗುವುದು.
ಯಲ್ಲಪ್ಪ ಸುಬೇದಾರ, ತಹಶೀಲ್ದಾರ್‌

*ಮಹಾದೇವ ವಡಗಾಂವ

ಟಾಪ್ ನ್ಯೂಸ್

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

2-kalburgi

Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.