ನೀರು ಬಿಟ್ಟಿದ್ದಕ್ಕೆ ರೈತರ ಆಕ್ರೋಶ
ಬ್ಯಾರೇಜ್ ಬಳಿ ಸೇರಿದ 70 ರೈತರು-ಪ್ರತಿಭಟನೆ ಎಚ್ಚರಿಕೆ
Team Udayavani, May 2, 2020, 10:52 AM IST
ಅಫಜಲಪುರ: ಚಿನಮಳ್ಳಿ ಗ್ರಾಮದ ಬ್ಯಾರೇಜ್ ಬಳಿ ರೈತರು ಮತ್ತು ಅಧಿಕಾರಿಗಳ ನಡುವೆ ಚರ್ಚೆ ನಡೆಯಿತು
ಅಫಜಲಪುರ: ಚಿನಮಳ್ಳಿ ಬ್ಯಾರೇಜ್ ನಿಂದ ಕಲಬರುಗಿ ಜಿಲ್ಲೆಗೆ ನೀರು ಸರಬರಾಜಾಗುವ ಸರಡಗಿ ಬ್ಯಾರೇಜ್ ಗೆ 0.1 ಟಿಎಂಸಿ ನೀರು ಹರಿ ಬಿಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ 70 ರೈತರು ಚಿನಮಳ್ಳಿ ಬ್ಯಾರೇಜ್ ಬಳಿ ಸಾಮಾಜಿಕ ಅಂತರ ಕಾಪಾಡಿಕೊಂಡು ಒಂದೆಡೆ ಸೇರಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಯುವ ಶಕ್ತಿ ಸಂಘದ ಜಿಲ್ಲಾಧ್ಯಕ್ಷ ಅಯ್ಯನಗೌಡ ಪಾಟೀಲ, ಚಿನಮಳ್ಳಿ ಬ್ಯಾರೇಜ್ ಕೇವಲ 0.71 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಸದ್ಯ ಬ್ಯಾರೇಜ್‌ನಲ್ಲಿ 0.25 ಪ್ರಮಾಣದಷ್ಟು ನೀರಿದೆ. ಹೀಗಿದ್ದು ಚಿನಮಳ್ಳಿ ಬ್ಯಾರೇಜ್‌ನಿಂದ ನೀರು ಹರಿಬಿಟ್ಟಿದ್ದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಚಿನಮಳ್ಳಿಗಿಂತ ಮೇಲಿರುವ ಗಾಣಗಾಪುರ, ಘತ್ತರಗಾ, ಸೊನ್ನ ಬ್ಯಾರೇಜ್‌ಗಳಿಂದ ನೀರು ಹರಿಸಬೇಕಾಗಿತ್ತು. ಇದರಲ್ಲಿ ಮರಳು ಮಾಫಿಯಾದವರ ಕೈವಾಡವಿದೆ. ಅಲ್ಲದೇ ಅಫಜಲಪುರ ಹಾಗೂ ಜೇವರ್ಗಿ ಶಾಸಕರ ನಿರ್ಲಕ್ಷ್ಯವೂ ಇದೆ ಎಂದು ಆರೋಪಿಸಿದ ಅವರು, ಮತ್ತೆ ಚಿನಮಳ್ಳಿ ಬ್ಯಾರೇಜ್‌ನಿಂದ ನೀರು ಹರಿಬಿಟ್ಟರೇ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಈ ವೇಳೆ ಮಾತನಾಡಿದ ಕೆಬಿಜಿಎನ್ ಎಲ್ ಎಇಇ ಎಸ್.ವೈ. ಛಲವಾದಿ, ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕಲಬುರಗಿ ನಗರಕ್ಕೆ ಕುಡಿಯುವ ನೀರು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಎಇಗಳಾದ ಎ.ಆರ್. ಕುಂಬಾರ, ಉಮೇಶ, ಸತ್ಯಾಗೋಳ, ಕರ್ನಾಟಕ ನೀರು ಸರಬರಾಜು ಎಇ ಅಬ್ದುಲ್ ಬಾಸಿತ್, ನೆಲೊಗಿ ಪಿಎಸ್‌ಐ ಮಲ್ಲಣ್ಣ ಯಲಗೋಡ, ರೈತರಾದ ಬಸವರಾಜ
ಕಟ್ಟಿಮನಿ, ಮಲ್ಲಿಕಾರ್ಜುನ ಚಕ್ರ, ಸುನೀಲ, ಪರಪ್ಪ ಮ್ಯಾಕೇರಿ, ಆನಂದ ಪಾಟೀಲ, ಸಂಜು ಕುಲಕರ್ಣಿ, ಅರ್ಜುನ ಭೋವಿ, ಭೀಮರಾಯ ಪೂಜಾರಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ
Ticket price hike: ಬಿಜೆಪಿ ಕೋಪ : ಜನರ ಕ್ಷಮೆ ಕೇಳಿ ಪ್ರತಿಭಟನೆ!
Mangaluru; ಸದ್ಯ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಇಲ್ಲ
Kasaragod:ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; 10 ಮಂದಿಗೆ ಅವಳಿ ಜೀವಾವಧಿ ಸಜೆ
Bus ಪ್ರಯಾಣ ದರ ಏರಿಕೆ; ಮೊದಲು ಉದ್ದೇಶ ಅರಿಯಲಿ: ಖಾದರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.