ಕೋವಿಡ್ ಹೊಡೆತಕ್ಕೆ ಮಳೆ-ಗಾಳಿ ಬರೆ
ಬಿರುಗಾಳಿಗೆ ಹಾಳಾದ ಪಪ್ಪಾಯಿ-ದ್ರಾಕ್ಷಿ| ಬೆಳೆ ಹಾನಿಗೆ ಸ್ಪಂದಿಸಲು ಸರ್ಕಾರಕ್ಕೆ ಒತ್ತಾಯ
Team Udayavani, Apr 20, 2020, 10:37 AM IST
ಅಫಜಲಪುರ: ಪಟ್ಟಣದ ಹೊರವಲಯದಲ್ಲಿ ಇರುವ ಶರಣು ತಾವರಖೇಡ ಅವರ ಹೊಲದಲ್ಲಿ ಬಿರುಗಾಳಿಗೆ ಪಪ್ಪಾಯಿ ಗಿಡಗಳು ನೆಲ ಕಚ್ಚಿವೆ.
ಅಫಜಲಪುರ: ಕೋವಿಡ್ ಕಾರಣದಿಂದ ಎಲ್ಲೆಡೆ ಲಾಕ್‌ಡೌನ್ ಘೋಷಣೆಯಾಗಿದ್ದು ಒಂದೆಡೆಯಾದರೆ ಬಿರುಗಾಳಿ ಸಹಿತ ಮಳೆ ಬಂದು ಪಪ್ಪಾಯಿ ಹಾಗೂ ದ್ರಾಕ್ಷಿ ಬೆಳೆ ಹಾಳಾಗಿದ್ದು ರೈತರಿಗೆ ಉಂಟಾದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪಟ್ಟಣದ ಹೊರವಲಯದಲ್ಲಿರುವ ರೈತ ಶರಣು ತಾವರಖೇಡ ಅವರಿಗೆ ಸೇರಿದ ಐದು ಎಕರೆ ಪಪ್ಪಾಯಿ ಬಿರುಗಾಳಿಗೆ ಮುರಿದು ಹಣ್ಣುಗಳೆಲ್ಲ ನೆಲದ ಪಾಲಾಗಿವೆ. ಇನ್ನೊಂದೆಡೆ ಪೀರಪ್ಪ ಮ್ಯಾಕೇರಿ ಅವರಿಗೆ ಸೇರಿದ ಎರಡು ಎಕರೆ ಜಮೀನಲ್ಲಿ ಬೆಳೆದ ದ್ರಾಕ್ಷಿ ಮಣ್ಣುಪಾಲಾಗಿದೆ. ಸಾಲ ಮಾಡಿ ಗೊಬ್ಬರ ಹಾಕಿ ಬೆಳೆಸಿದ್ದ ಪಪ್ಪಾಯಿ, ದ್ರಾಕ್ಷಿ ಕಟಾವಿಗೆ ಬಂದ ಸಮಯದಲ್ಲಿ ಬಿರುಗಾಳಿ ಹೊಡೆತಕ್ಕೆ ಸಿಲುಕಿನ ನೆಲಪಾಲಾಗಿದ್ದನ್ನು ಕಂಡು ರೈತರು ಕಣ್ಣೀರಿಟ್ಟಿದ್ದಾರೆ.
ಎಂದಿನಂತೆ ಮಾರುಕಟ್ಟೆ ವ್ಯವಸ್ಥೆ ಇದ್ದರೆ ಹಣ್ಣು ಮಾರಾಟ ಮಾಡಿ ಲಕ್ಷಾಂತರ ಲಾಭ ಪಡೆಯುವ ಆಸೆಯಲ್ಲಿದ್ದವರಿಗೆ ಈಗ ಮಾಡಿಕೊಂಡ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ ರೈತರ ಜೀವನ ಮೂರಾಬಟ್ಟೆ ಆಗಿದ್ದು, ಸಂಬಂಧಪಟ್ಟವರು ರೈತರ ಕಷ್ಟಕ್ಕೆ ಸ್ಪಂದಿಸಿ, ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Saif Ali Khan: ನಟ ಸೈಫ್ ಅಲಿಖಾನ್‌ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ
BJP: ತಾಕತ್ತಿದ್ರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ: ರೇಣುಕಾಚಾರ್ಯ
Viral IIT Baba; ಸನ್ಯಾಸ ತೊರೆದು ಮನೆಗೆ ಹಿಂದಿರುಗಬೇಕೆಂದು ಬಯಸಿದ ಹೆತ್ತವರು
ED ವಾದದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಟೀಕೆ;ನಾವು ಸಹಿಸುವುದಿಲ್ಲ
Aranthodu: ಗಂಡ-ಹೆಂಡತಿ ಜಗಳ; ಪತಿಯ ತಲೆಗೆ ಸೌಟಿನಿಂದ ಹೊಡೆದ ಪತ್ನಿ, ಚಿಮ್ಮಿದ ರಕ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.