ಅಗ್ನಿಪಥಗೆ ವಿರೋಧ; ಕೈ ಕಾರ್ಯಕರ್ತರ ಬಂಧನ
Team Udayavani, Jun 21, 2022, 9:47 AM IST
ಕಲಬುರಗಿ: ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಅಗ್ನಿಪಥ್ ಯೋಜನೆಯನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿ ಸೋಮವಾರ ಯುವ ಕಾಂಗ್ರೆಸ್ ಕಾರ್ಯಕರ್ತರು ರೈಲು ನಿಲ್ದಾಣಕ್ಕೆ ನುಗ್ಗಿ ರೈಲು ರೋಕೋ ಮಾಡಲು ಮುಂದಾಗಿದ್ದವರನ್ನು ಪೊಲೀಸರ ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಿವಾನಂದ ಹೊನಗುಂಟಿ ಮಾತನಾಡಿ, ಮೋದಿ ಸರಕಾರ ಸೇನೆ ಸೇರುವ ಯುವಕರ ಕನಸನ್ನು ಭಗ್ನಗೊಳಿಸುತ್ತಿದೆ. ಸೇನೆ ಸೇರುವ ಯುವಕರು ನಾಲ್ಕು ವರ್ಷಗಳ ನಂತರ ನಿವೃತ್ತಿ ಹೊಂದಲಿದ್ದಾರೆ. 4 ವರ್ಷಗಳ ಬಳಿಕ ನಿವೃತ್ತ ಯುವಕರು ಬೇರೆ ಕೆಲಸಗಳಿಗೆ ಹೋಗುವ ಅವಕಾಶ ಇದೆ ಎಂದು ಸರಕಾರ ಹೇಳುತ್ತಿದೆ. ವಾಸ್ತವದಲ್ಲಿ ಮೂರು ಸೇವೆಗಳಿಂದ 55 ಸಾವಿರಕ್ಕೂ ಹೆಚ್ಚು ನುರಿತ ಜವಾನರು ನಿವೃತ್ತರಾಗಿದ್ದಾರೆ. ನಿವೃತ್ತಿಯ ನಂತರ ಕೇವಲ 1 ಅಥವಾ ಶೇ.2ರಷ್ಟು ಮಾತ್ರ ಮತ್ತೂಂದು ಕೆಲಸದಲ್ಲಿ ಮರು ಸ್ಥಾಪಿಸಲಾಗುತ್ತಿದೆ. ಹೀಗಿರುವಾಗ ಅಗ್ನಿವೀರ್ ಮತ್ತೊಂದು ಕೆಲಸಕ್ಕೆ ಸೇರುತ್ತಾರೆ ಎಂಬುದಕ್ಕೆ ಗ್ಯಾರಂಟಿ ಏನು ಎಂದು ಪ್ರಶ್ನಿಸಿದರು. ಆದ್ದರಿಂದ ಕೂಡಲೇ ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಈರಣ್ಣ ಜಳಕಿ, ಅಮರ್ ಶಿರ್ವಾಲ್ ,ಪರಶುರಾಮ ನಟೇಕರ್, ಶಕೀಲ್ ಸರಡಗಿ, ಕಾರ್ತಿಕ ನಾಟೇಕರ್, ಅಶೋಕ್, ಗೀತಾ ಮುದುಗಲ್ ,ಶ್ವೇತಾ ಬಳಿಚಕ್ರ, ಮಂಜುಳಾ ಪಾಟೀಲ್, ಸವಿತಾ ಕಾಂಬಳೆ, ಫಿರೋಜ್ ಆನಂದ್, ರಮೇಶ್, ಪಿಂಟು ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.